ಬೆಳಕಿನ ಬೆನ್ನು ಹತ್ತಿದ ಕಾವ್ಯ

ಇಂದಿನ ಜಗತ್ತಿಗೆ ಕಾವ್ಯದ ಅಗತ್ಯವಿಲ್ಲವೆಂದು ಮೇಲ್ನೋಟಕ್ಕೆ ತೋರುತ್ತದೆ. ಸಂಸೃತಿಯ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೆ, ಆಥರ್ಿಕ ಅಭಿವೃದ್ಧಿಯೊಂದನ್ನೇ ಗುರಿಯಾಗಿರಿಸಿಕೊಂಡುಬೆಳೆಯುತ್ತಿರುವ ಜಗತ್ತಿಗೆ ಕಾವ್ಯದ ಮಾರ್ದವತೆಯಿಂದ ಗದ್ಯದ ವೈಚಾರಿಕತೆಯೇ ಹೆಚ್ಚು ಇಷ್ಟ. ದೆಹಲಿಯಲ್ಲಿ ಓಡಾಡುತ್ತಿರುವ ನನಗೆ ಗದ್ಯ ಓದುವ ಜನ ಆಗಾಗ ಕಣ್ಣಿಗೆ ಬೀಳುತ್ತಾರೆ. ಆದರೆ ಪದ್ಯ ಓದುವವರನ್ನು ನಾನು ಎಲ್ಲಿಯೂ ಕಂಡಿಲ್ಲ.
ಹೀಗಿದ್ದರೂ ಅಲ್ಲಿ ಇಲ್ಲಿ ನಡೆಯುವ ಕವಿ ಸಮ್ಮೇಳನಗಳಲ್ಲಿ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ದೂರದರ್ಶನಗಳಲ್ಲಿ ಓದಲಾಗುವ ಕವಿತೆಗಳನ್ನು ಕೇಳಲು-ನೋಡಲು ಮನೆಮಂದಿಯೆಲ್ಲಾ ಹಾತೊರೆಯುತ್ತಿರುತ್ತಾರೆ. ಕವಿಗೆ ಸಿಗುವ ಸ್ಥಾನಮಾನ ಗದ್ಯ ಬರಹಗಾರನಿಗೆ ದೊರೆಯುತ್ತಿಲ್ಲ. ಹೀಗಾಗಿ ಗದ್ಯ ಬರಹಗಾರರೂ ಕೂಡಾ ಒಂದೆರಡು ಕವನ ಬರೆದೇ ಬರೆಯುತ್ತಾರೆ. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಆಧುನಿಕ ತಂತ್ರಜ್ಞಾನಿಗಳು ಕೂಡಾ ಆಗೀಗ ಕವನ ಬರೆಯುವ ಪದ್ಧತಿಗೆ ಬಲಿಯಾಗಿದ್ದಾರೆ. ಕವನಗಳು ಎಷ್ಟೇ ಕೆಟ್ಟವಿರಲಿ, ಅವನ್ನು ಬರೆಯುವವರೂ ಇದ್ದಾರೆ, ಖಾಸಗಿಯಾಗಿ ಓದುವವರೂ ಇದ್ದಾರೆ. ಈ ಚೋದ್ಯವು ಕಾವ್ಯವು ಆಧುನಿಕ ಜಗತ್ತಿಗೆ ಅಗತ್ಯ ಎಂಬ ಸತ್ಯವನ್ನು ಸಾರಿ ಹೇಳುತ್ತಿದೆ…..
-ಡಾ ಪುರುಷೋತ್ತಮ ಬಿಳಿಮಲೆ
ಮುನ್ನುಡಿಯ ಆರಂಭದ ಭಾಗ
ಕವಿತಾ ರೈ ವಿಮರ್ಶಾ ವಿವೇಕ
ನವ ವಿಸರ್ಗ
ಡಾ ಕವಿತಾ ರೈ
ವಿಮರ್ಶಾ ಲೇಖನಗಳ ಸಂಕಲನ
ಪ್ರಕಾಶಕರು: ಸೃಷ್ಟಿ ಪಬ್ಲಿಕೇಷನ್ಸ್

ಸಾಹಿತ್ಯ ಮತ್ತು ಸಮಾಜದ ನಡುವಣ ‘ಅನನ್ಯತೆ‘ಗಳನ್ನು ಪಾರಸ್ಪರಿಕ ಸಂಬಂಧವಾಗಿ ಗುರುತಿಸುವ ‘ನವ ವಿಸರ್ಗ‘ ವಿಮರ್ಶೆ ಯ ಉಪಕ್ರಮದಲ್ಲಿ ಹೊಸಬಗೆಯ ಲಯಗಳನ್ನು ಗುರುತಿಸಲು ತೊಡಗಿದೆ. ಕವಿತಾ ರೈ, ತಮ್ಮ ಬರಹದಲ್ಲಿ ತೋರಿಸುವ ವಿಮರ್ಶಾ ವಿವೇಕ, ಬದುಕಿನ ನೋಟದಲ್ಲಿ ಕಾಣುವ ದಿಟ್ಟತನ, ಸಾಮಾಜಿಕ ಬದಲಾವಣೆಗಳ ಹಿಂದಿರುವ ಪ್ರಭುತ್ವ ಮತ್ತು ಶಕ್ತಿಗಳನ್ನು ಇಲ್ಲಿಯ ಬರಹಗಳಲ್ಲಿ ನಾವು ಕಾಣಬಹುದು.
ಬದುಕಿನ ಲಯವು ಸಾಹಿತ್ಯದ ಒಳಲಯಗಳಲ್ಲಿ ಚರಿಸುವ ಸೂಕ್ಷ್ಮತೆಯನ್ನು ಕವಿತಾ ರೈಹಿಡಿಯುವ, ವಿಶ್ಲೇಷಿಸುವ ಮತ್ತು ವ್ಯಾಖ್ಯಾನಿಸುವ ಬಗೆಗಳು ‘ನವ ವಿಸರ್ಗ‘ಕ್ಕೆ ತಾಳ ಲಯವನ್ನು ಹೊಂದಿಸುತ್ತವೆ. ಇದು ಅವರಿಗೆ ಸಾಧ್ಯವಾಗಿರುವುದೇ ಸಮಾಜ ಮತ್ತು ಸಾಹಿತ್ಯದ ನಡುವಣ ಹೊಕ್ಕು ಬಳಕೆಗಳನ್ನು ತೀವ್ರವಾಗಿ ಶೋಧಿಸುವ ಪರಿಣಾಮವಾಗಿದೆ. ಕವಿತಾ ರೈ ಅವರ ಸೂಕ್ಷ್ಮ ಸಂವೇದನೆ ವಿಮರ್ಶೆ ಯ ಉದ್ದಕ್ಕೂ ಅಡ್ಡ ಹಾಸುಗಳಿಂದ ಇಲ್ಲಿಯ ಎಲ್ಲಾ ಲೇಖನಗಳಲ್ಲೂ ಚರಿಸುತ್ತದೆಂಬುದು ಒಂದು ವಿಶೇಷವೇ ಸರಿ.
-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಬೆನ್ನುಡಿಯಿಂದ
-
Archives
- November 2009 (6)
- October 2009 (2)
- September 2009 (1)
- July 2009 (1)
- June 2009 (1)
- May 2009 (1)
- April 2009 (4)
- March 2009 (10)
- February 2009 (13)
- January 2009 (9)
- December 2008 (7)
- November 2008 (17)
-
Categories
-
RSS
Entries RSS
Comments RSS
