ಓದು ಬಜಾರ್

ಓದಿ ಇಲ್ಲಾ ಓಡಿ…

ಬದುಕು ಬದಲಿಸಿದ… ಕನ್ನಡ ಮನಸ್ಸು…

baduku badalisida hale scooter


ಬದುಕು ಬದಲಿಸಿದ ಹಳೇ ಸ್ಕೂಟರ್

ಗಣೇಶ ಅಮೀನಗಡ

ಕರಾವಳಿ ನುಡಿಚಿತ್ರಗಳು

ಪ್ರಕಾಶಕರು:ಕನ್ನಡ ಸಂಘ ಕಾಂತಾವರ(ರಿ),

ಕಾಂತಾವರ-574129,

ಕಾರ್ಕಳ,ಉಡುಪಿ.

ಪತ್ರಿಕಾ ಬರಹಗಳಲ್ಲಿ ಇರಬೇಕಾದ ಕುತೂಹಲ, ವಸ್ತುವಿಗೆ ಒದಗಿಸಬೇಕಾದ ನ್ಯಾಯ, ಒಟ್ಟೂ ಸಂದರ್ಭದಲ್ಲಿ ಅದಕ್ಕೆ ಇರಬೇಕಾದ ವೈಶಿಷ್ಟ್ಯ ಕೊನೆಗೆ ಅದು ತೆರೆದುಕೊಡಬಹುದಾದ ಒಳನೋಟ ಎಲ್ಲವೂ ಇಲ್ಲಿ ಪ್ರಬಂಧ ಗುಣದಿಂದ ಮೇಳೈಸಿದ್ದರಿಂದ ಇಲ್ಲಿನ ಬರಹಗಳನ್ನು ನಾವು ಒಂದು ಒಳ್ಳೆಯ ಲಲಿತ ಪ್ರಬಂಧಗಳನ್ನು ಓದುವಷ್ಟೇ ಪ್ರೀತಿಯಿಂದ ಓದಬಹುದು.ಇವು ಸಂಜೆಯ ಸಂತೆಗೆ ನೇಯ್ದ ಮೂರು ಮೊಳದ ನೇಯ್ಗೆಯಲ್ಲ.

ಪತ್ರಿಕಾಧರ್ಮದ  ಶಿಸ್ತು,ನುಡಿಗಟ್ಟು. ಸ್ಥಿತಪ್ರಜ್ಞತೆ ಎಲ್ಲಾ ಡಾ. ಅಮೀನಗಡರ ಪಳಗಿದ ಲೇಖನಿಯಲ್ಲಿ ಇರುವುದರಿಂದ ಇವುಗಳನ್ನು ಕೇವಲ ಪತ್ರಿಕಾ ಲೇಖನಗಳೆಂದು ಬದಿಗಿಡುವ ಹಾಗಿಲ್ಲ.ಖಂಡಿತವಾಗಿಯೂ ಸಾಹಿತ್ಯ ಕೃತಿಯಾಗಿ ನೀವು ಒಪ್ಪಿಕೊಳ್ಳಬೇಕಾಗಿದೆ.

ಡಾ.ನಾ.ಮೊಗಸಾಲೆ

ಹಿನ್ನುಡಿಯಿಂದ

 

 

 

—————————————————————————————————-

Kannada Manassu

ಆಳ್ವಾಸ್ ನುಡಿಸಿರಿ  ಸಮ್ಮೇಳನ 2008 ಸಮಗ್ರ ವಾಙ್ಮಯ

ಕನ್ನಡ ಮನಸ್ಸು ಶಕ್ತಿ ಮತ್ತು ವ್ಯಾಪ್ತಿ

ಪ್ರಕಾಶಕರು:ಆಳ್ವಾಸ್ ಪ್ರಕಾಶನ,

ಮುಡುಬಿದಿರೆ,ದಕ್ಷಿಣ ಕನ್ನಡ

ಯಾವ ರಾಜಕೀಯ ವಾಸನೆಯೂ ಇಲ್ಲದೆ, ಯಾವುದೇ ಬಗೆಯ ಧಾರ್ಮಿಕ ಪ್ರಭಾವಕ್ಕೂ ಒಳಗಾಗದೆ ಆದಷ್ಟು ಋಜುಮಾರ್ಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ, ಸಮಯನಿಷ್ಟೆಯಿಂದ ಮೂರು ದಿನಗಳ ಕಾಲ ದೇಶೀಯ ಸೊಬಗಿನಿಂದ ನಡೆಯುವ ಕನ್ನಡ ನಾಡು ನುಡಿಯ ರಾಷ್ಟೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸಾಂಸ್ಕೃತಿಕ ಪ್ರಭಾವ ಎಂಥದೆಂಬುದು ಅನುಭವಿಸಿದಲ್ಲದೆ ಗೊತ್ತಾಗದು,

ವಿಶಾಲವಾದ ಶಕ್ತಿಶಾಲಿಯಾದ ಕನ್ನಡ ಮನಸ್ಸಿನ ಬಹುರೂಪೀ ಸಂಶೋಧನೆಯಲ್ಲಿ ತೊಡಗಿ,ಕನ್ನಡ ಭಾಷೆ,ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ಹೃತ್ ಪೂರ್ವಕವಾಗಿ, ಸರ್ವವ್ಯಾಪಕವಾಗಿ ಸಮನ್ವಯಿಸಿಕೊಳ್ಳುವ ಈ ಬಗೆಯ ಸಮ್ಮೇಳನ ಹೊಚ್ಚ ಹೊಸ ಆದರ್ಶವೊಂದನ್ನು ನಾಡಿನ ಜನತೆಯ ಮುಂದಿರಿಸಿದೆ.ಯುವ ಜನಾಂಗವನ್ನು ವಿದ್ಯಾರ್ಥಿ ಸಮುದಾಯವನ್ನು ಈ ಸಂಯೋಜನೆಯಲ್ಲಿ ತೊಡಗಿಸಿಕೊಂಡಿರುವುದಂತೂ ಅತ್ಯಂತ ಪ್ರಶಂಸನೀಯವಾದುದು.

ಕನ್ನಡ ನೆಲದಿಂದಲೇ ವಿಶ್ವಪ್ರಜ್ಞೆಗೆ ಸ್ಪಂದಿಸಬೇಕಾದ ಅಗತ್ಯವನ್ನು ಕಂಡು ಕಳೆದ ನಾಲ್ಕು ವರ್ಷಗಳಿಂದ ಅದನ್ನು ಯಶಸ್ವಿಯಾಗಿ ಕಾರ್ಯರೂಪದಲ್ಲಿ ತರುತ್ತಿರುವ ದೊಡ್ಡ ಮನಸಿನ ಡಾ.ಎಂ.ಮೋಹನ ಆಳ್ವಾ ಅವರನ್ನು ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಎಲ್ಲ ಸಂಸ್ಕೃತಿಪ್ರಿಯರನ್ನು ಎಷ್ಟು ಅಭಿನಂದಿಸಿದರೂ ಸಾಲದು.

ಚೆನ್ನವೀರ ಕಣವಿ

ಹಿನ್ನುಡಿಯಿಂದ

November 11, 2009 Posted by odubazar | ಬುಕ್ ಬಜಾರ್ | , , , | No Comments Yet

ನಾ.ದಾಮೋದರ ಶೆಟ್ಟಿಯವರ ಭರತವಾಕ್ಯ

ಸಿರಿವರ ಪ್ರಕಾಶನದಿಂದ ಪ್ರಕಟವಾಗಿರುವ ಎರಡು ಪುಸ್ತಕಗಳು

Bharatvakya -shankar pillai

ಜಿ.ಶಂಕರ್ ಪಿಳ್ಳೆ ಅವರ ಭರತವಾಕ್ಯ

ನಾ.ದಾಮೋದರ ಶೆಟ್ಟಿ

ನಾಟಕ ಅನುವಾದ

ಪ್ರಕಾಶಕರು:ಸಿರಿವರ ಪ್ರಕಾಶನ,ನಂ.37/ಬಿ,8ನೇ ಅಡ್ಡರಸ್ತೆ,

ಲಕ್ಷಿನಾರಾಯಣಪುರ,ಬೆಂಗಳೂರು-21.

tel: 9844109706

email: ravisirivara@gmail.com

 


ಮಿತ್ರರಾದ ನಾ.ದಾಮೋದರ ಶೆಟ್ಟಿಯವರು ಶಂಕರ ಪಿಳ್ಳೆಯವರ ಇಂಥ ಮುಖ್ಯ ನಾಟಕವನ್ನಿಲ್ಲಿ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ಅವರು ಮಲೆಯಾಳಿ ಭಾಷೆಯ ಇನ್ನೂ ಹಲವು ಕೃತಿಗಳನ್ನು ಈಗಾಗಲೇ ಕನ್ನಡಕ್ಕೆ ಅನುವಾದಿಸಿ ಅಂಥದೊಂದು ಪರಂಪರೆಯನ್ನೇ ಬೆಳೆಸಿದವರು.ಮಾತ್ರವಲ್ಲ, ಮಲೆಯಾಳಮ್  ನಿಂದ ನೇರವಾಗಿ ಕನ್ನಡಕ್ಕೆ—ಇಂಗ್ಲಿಷ್/ಹಿಂದಿಯ ಮಧ್ಯಸ್ಥಿಕೆಯಿಲ್ಲದೆ—ಅವರ ಭಾಷಾಂತರ ಕೆಲಸ ನಡೆದಿದೆ.ಹಾಗಾಗಿ ಅವರ ಕೆಲಸಕ್ಕಿರುವ ಮಹತ್ವವನ್ನು ನಾನು ಎತ್ತಿಹೇಳಬೇಕಾದ ಅಗತ್ಯವೇನೂ ಇಲ್ಲ. ಮುಂದೆಯೂ ಇಂಥ ಅರ್ಥಪೂರ್ಣ ‘ಸಂಸ್ಕೃತಿ-ಸಂಕರ’ದ ಕೆಲಸ ದಾಮೋದರ ಶೆಟ್ಟಿಯವರ ಸೂತ್ರದಾರತ್ವದಲ್ಲಿ ಜರುಗಲಿ ಎಂದಷ್ಟೇ ಆಶಿಸಿ ಅವರ ಈ ಪುಸ್ತಕಕ್ಕೆ ಸ್ವಾಗತ ಕೋರುತ್ತೇನೆ.

ಅಕ್ಷರ ಕೆ.ವಿ.

ಹಿನ್ನುಡಿಯಿಂದ

 


Tattiyolagina jeeva

ತಟ್ಟಿಯೊಳಗಿನ ಜೀವ

ನಾ.ದಾಮೋದರ ಶೆಟ್ಟಿ

ಕವನ ಸಂಕಲನ

ಪ್ರಕಾಶಕರು:ಸಿರಿವರ ಪ್ರಕಾಶನ

 

‘ತಟ್ಟಿಯೊಳಗಿನ ಜೀವ’ ಎಂಬ ಕವಿತೆಯಲ್ಲಿ ‘ವೇಷ’ ಕಳಚಿದ ಮೇಲೆ ಉಳಿಯುವುದೇನೆಂದು ಪರಿಶೀಲಿಸಿಕೊಳ್ಳುವ ಮನಸ್ಥಿತಿಯಿದೆ. ಇಲ್ಲಿಯ ನಾಯಕ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಅವನು ‘ತಟ್ಟಿರಾಯ’ನಾದೊಡನೆ ಅವನಿಗೆ ಬೇರೆ ಗತ್ತು, ಗಾಂಭೀರ್ಯ ಬಂದುಬಿಡುತ್ತದೆ. ಅವನ ಅಸ್ಮಿತೆಯೇ ಬದಲಾಗಿ ಹೋಗುತ್ತದೆ ‘ತಟ್ಟಿರಾಣಿ’ಯ ಸ್ಥಿತಿಯೂ ಅದೇ. ಇವರ ಮೆರವಣಿಗೆಯ ವೈಭವ, ಸುತ್ತಲ ಜನರ ಬೆರಗಿನ, ಪ್ರಶಂಸನೀಯ ಪ್ರತಿಕ್ರಿಯೆ ಇವೆಲ್ಲವನ್ನೂ ಕವಿತೆಯು ಅಧಿಕೃತವಾದ ವಿವರ- ವರ್ಣನೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ.

ಟಿ.ಪಿ.ಅಶೋಕ್

ಹಿನ್ನುಡಿಯಿಂದ

November 10, 2009 Posted by odubazar | ಬುಕ್ ಬಜಾರ್ | | No Comments Yet

ಹೊಸ ಪುಸ್ತಕಗಳು

hosatu hosatu1hosatu hosatu2

 

November 10, 2009 Posted by odubazar | ಬುಕ್ ಬಜಾರ್ | , | No Comments Yet

ವಿರಾಮ ಓದು

efcd

 

November 2, 2009 Posted by odubazar | Uncategorized | | No Comments Yet

ಈ ವಾರದ ಹೊಸ ಪುಸ್ತಕಗಳು

20091101s_003101001 (2)

November 2, 2009 Posted by odubazar | Uncategorized | | No Comments Yet