ಓದು ಬಜಾರ್

ಓದಿ ಇಲ್ಲಾ ಓಡಿ…

ಎಷ್ಟೊಂದು ನಾಗೇಶ್ ಹೆಗಡೆ?

ಮೇ ಫ್ಲವರ್ ಮೀಡಿಯಾ ಹೌಸ್ ಹಮ್ಮಿಕೊಂಡಿದ್ದ ಫಿಶ್ ಮಾರ್ಕೆಟ್ ಗೆ ಈ ಬಾರಿಯ ಅತಿಥಿ ನಾಗೇಶ್ ಹೆಗಡೆ. ತಮ್ಮ ಕಳಕಳಿಯ ದನಿಯಲ್ಲಿ ಪರಿಸರದ ಲಾಭ ಯಾರಿಗೆ ಎಂದು ಬಣ್ಣಿಸಿದ ನಾಗೇಶ್ ಹೆಗಡೆ ಅವರ ವಿಶಿಷ್ಟ ಭಂಗಿಗಳು ಇಲ್ಲಿವೆ.
ಇನ್ನಷ್ಟು ಫೋಟೋಗಳು ಹಾಗೂ ವರದಿಗಳಿಗಾಗಿ ಭೇಟಿ ಕೊಡಿ: ಅವಧಿ 

ಮೇಫ್ಲವರ್ ಮೀಡಿಯಾ ಹೌಸ್ ಹಮ್ಮಿಕೊಂಡಿದ್ದ ‘ಫಿಶ್ ಮಾರ್ಕೆಟ್’ ಗೆ ಈ ಬಾರಿಯ ಅತಿಥಿ ನಾಗೇಶ್ ಹೆಗಡೆ. ತಮ್ಮ ಕಳಕಳಿಯ ದನಿಯಲ್ಲಿ ಪರಿಸರದ ಲಾಭ ಯಾರಿಗೆ ಎಂದು ಬಣ್ಣಿಸಿದ ನಾಗೇಶ್ ಹೆಗಡೆ ಅವರ ವಿಶಿಷ್ಟ ಭಂಗಿಗಳು ಇಲ್ಲಿವೆ.

ಇನ್ನಷ್ಟು ಫೋಟೋಗಳು ಹಾಗೂ ವರದಿಗಳಿಗಾಗಿ ಭೇಟಿ ಕೊಡಿ: ಅವಧಿ 

ಚಿತ್ರಗಳು: ಡಿ ಜಿ ಮಲ್ಲಿಕಾರ್ಜುನ್, ಸುಘೋಷ್ ಎಸ್ ನಿಗಳೆ 

IMG_8489

IMG_8502

IMG_8510

IMG_1609

IMG_8530

IMG_8520

IMG_8499

IMG_1607

June 2, 2009 Posted by odubazar | ಕ್ಲಿಕ್.., ಮೇಫ್ಲವರ್ | | 1 Comment

ಗುಜರಾತಿನ ಹೊಸ ದನಿ ದರ್ಶಿನಿ

ಗುಜರಾತಿನ ಹೊಸ ದನಿ ದರ್ಶಿನಿ ದಾದಾವಾಲಾ ಬೆಂಗಳೂರಿನಲ್ಲಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರವಾಸ ಅಧ್ಯಯನ ಯೋಜನೆಯ ಅಂಗವಾಗಿ ಇಲ್ಲಿದ್ದ ದರ್ಶಿನಿ ಮೇಫ್ಲವರ್ ಮೀಡಿಯಾ ಹೌಸ್ ನ ಅಂಗಳದಲ್ಲಿ ಜೋಗಿ ಎಚ್ ಎನ್ ಆರತಿ ಜೊತೆಗೂಡಿ ಕವಿತೆಗಳನ್ನು ವಾಚಿಸಿದರು. ಮಮತಾ ಸಾಗರ್ ದರ್ಶಿನಿ ಕವಿತೆಗಳನ್ನು ಕನ್ನಡಕ್ಕಿಳಿಸಿದರು

img_0592

img_0552 img_0613

img_0537

img_0562 img_0540

img_0550 img_0587

img_0598 img_0588

img_0618

March 26, 2009 Posted by odubazar | ಬುಕ್ ಬಜಾರ್, ಮೇಫ್ಲವರ್ | | 1 Comment

ಲಂಕೇಶ್ ನೆನಪುಗಳ ಹೊಳೆ

ಕಿ ರಂ ತಮ್ಮ ನೆನಪಿನ ಬುಟ್ಟಿಯಿಂದ ಲಂಕೇಶ್ ಅವರನ್ನು ಹೊರಗೆ ತೆಗೆದರು. ಮೇಫ್ಲವರ್ ಮೀಡಿಯಾ ಹೌಸ್ ನ ‘ಫಿಶ್ ಮಾರ್ಕೆಟ್’ ಕಾರ್ಯಕ್ರಮ ದಲ್ಲಿ ಸತತ ಒಂದೂವರೆ ಗಂಟೆಯ ಕಾಲ ಲಂಕೇಶ್ ನೆನಪುಗಳ ಹೊಳೆ ಹರಿಯಿತು. ಲಂಕೇಶ್ ನೆನಪುಗಳ ಜೊತೆಜೊತೆಗೇ ಕಿ ರಂ ಅವರು ನಡೆದು ಬಂದ ದಾರಿಯೂ ತೆರೆದುಕೊಳ್ಳುತ್ತಾ ಹೋಯಿತು.

ಇನ್ನಷ್ಟು ಫೋಟೋಗಳಿಗಾಗಿ ‘ಅವಧಿ’ ಗೆ ಭೇಟಿ ಕೊಡಿ-

ಫೋಟೋಗಳನ್ನು ಯಾರು, ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಕಾಪಿರೈಟ್ ಇಲ್ಲ. 

 

img_6996

img_6998

img_6975

img_6955

img_6956

img_6960

img_70561

img_6934

img_6940

img_6942

img_6980

img_6985

img_7079

img_7064

img_7060

img_7059

img_7072

img_7002

December 4, 2008 Posted by odubazar | ಮೇಫ್ಲವರ್ | | No Comments Yet

ಈ ಪುಸ್ತಕದ ಬಗ್ಗೆ ನನಗೂ ತುಂಬಾ ಪ್ರೀತಿ!

ಈ ಪುಸ್ತಕ ಅವರಿಗಿಷ್ಟ.

ಕಳೆದ ಶನಿವಾರ ನನ್ನ ಬಳಿ ಎರಡು ಆಯ್ಕೆಗಳಿದ್ದವು.
ಒಂದು : ಸ್ನೇಹಿತರ ಜೊತೆ ಉಪೇಂದ್ರನ ’ಬುದ್ಧಿವಂತ’ ಕ್ಕೆ ಹೋಗೋದು .
ಎರಡು : ಮೇ ಫ್ಲವರ್ ನ ’ಈ ಪುಸ್ತಕ ನಂಗಿಷ್ಟ ’ ಕಾರ್ಯಕ್ರಮಕ್ಕೆ ಹೋಗೋದು .
ನಾನು ’ಬುದ್ಧಿವಂತ’ಕ್ಕೆ ಹೋಗಿ ದಡ್ಡನಾಗದೆ ಮೇ ಫ್ಲವರ್ ಗೆ ಹೋಗಿ ಬುದ್ಧಿವಂತನಾದೆ!

’ಈ ಪುಸ್ತಕ ನಂಗಿಷ್ಟ’ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು .ಸಾಹಿತ್ಯಿಕ ವಲಯಕ್ಕೆ ಸಂಬಂದ ಪಟ್ಟ ಬಹಳಷ್ಟು ಜನ ತಮಗೆ ಇಷ್ಟವಾದ ಪುಸ್ತಕದ ಬಗ್ಗೆ ಮಾತಾಡೋದಕ್ಕೆ ಅಂತ ’ಈ ಪುಸ್ತಕ ನಂಗಿಷ್ಟ ’ ಕಾರ್ಯಕ್ರಮ ಆಯೋಜಿಸಿತ್ತು ’ಮೇ ಫ್ಲವರ್’.

ಕಾರ್ಯಕ್ರಮ ಶುರುವಾಗೋದಕ್ಕೆ ಅರ್ಧ ಗಂಟೆ ಮೊದಲೇ ಹೋಗಿದ್ದೆ ನಾನು.ಹೇಗೂ ಗೊತ್ತಿತ್ತು ಮೇ ಫ್ಲವರ್ ನಲ್ಲಿ ಟೈಂ ಪಾಸ್ ಮಾಡೋದಂತೂ ಕಷ್ಟ ಏನಲ್ಲ .ಯಾಕಂದ್ರೆ ನಾನು ವರ್ಷ ಇಡೀ ಕೂತು ಓದಿದ್ರೂ ಮುಗಿಯದಷ್ಟು ಪುಸ್ತಕಗಳು ಅಲ್ಲಿವೆ .ಬಿಟ್ಟಿಯಾಗಿ ಯಾವುದನ್ನು ಬೇಕಾದ್ರೂ ಎತ್ತಿಕೊಂಡು ಓದಬಹುದು !

ಹೇಗೂ ಕಾರ್ಯಕ್ರಮ ಶುರು ಆಗೋದಕ್ಕೆ ಸಮಯ ಇತ್ತಲ್ವ ,ಅದಿಕ್ಕೆ ಅಲ್ಲೇ ಇಟ್ಟಿದ್ದ ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ ಎತ್ತಿಕೊಂಡೆ.ಬಹಳ ಚೆನ್ನಾಗಿತ್ತು ವಿಶೇಷಾಂಕ .ಅದರಲ್ಲಿ ನನ್ನ ನೆಚ್ಚಿನ

ಇಂದುಶ್ರೀ ಹಾಗೂ ಅವಳ ಮಾತನಾಡುವ ಗೊಂಬೆ ಡಿಂಕು
ಬಗ್ಗೆ ಲೇಖನ ಪ್ರಕಟವಾಗಿತ್ತು .ಸುಧನ್ವಾ ದೇರಾಜೆ ಬರೆದಿದ್ರು ಅದನ್ನು.ಓದಿ ಪುಟ ತಿರುಗಿಸೋದರ ಒಳಗೆ ಸುಧನ್ವಾನೇ ಪ್ರತ್ಯಕ್ಷ ಆಗ್ಬೇಕಾ!

ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದವರು ಸುಬ್ಬು ಹೊಲೆಯಾರ್ .ಲಂಕೇಶ್ ರ್ ’ ಕಲ್ಲು ಕರಗುವ ಸಮಯ ’ ಅವರ ನೆಚ್ಚಿನ ಪುಸ್ತಕ.ಲಂಕೇಶರ ಜೊತೆಗಿದ್ದ ತಮ್ಮ ಒಡನಾಟ ,ತಮಗೆ ಯಾಕೆ ಈ ಪುಸ್ತಕ ಇಷ್ಟ ಅನ್ನೋದರ ಬಗ್ಗೆ ತುಂಬ ಸರಳವಾಗಿ,ಸುಂದರವಾಗಿ ಮಾತನಾಡಿದರು ಸುಬ್ಬು.

ನಂತರ ಮಂಜುನಾಥ ಸ್ವಾಮಿ ’ಬರ್ಕ್ವೈಟ್ ಕಂಡ ಭಾರತ ’ ಪುಸ್ತಕದ ಬಗ್ಗೆ ಮಾತನಾಡಿದ್ರು.

ಟೀನಾ ರವರ ನೆಚ್ಚಿನ ಪುಸ್ತಕ THE ADVENTURES OF DUNNO AND HIS FRIENDS ಇದೊಂದು ರಷ್ಯಾ ಮೂಲದ ಪುಸ್ತಕ . ಟೀನಾ ಇದರ ಬಗ್ಗೆ ಮಾಡಿದ ವರ್ಣನೆ ಕೇಳಿದ ನಂತರವಂತೂ ಈ ಪುಸ್ತಕದ ಬಗ್ಗೆ ತುಂಬಾ ಕುತೂಹಲ ಇತ್ತು ನಂಗೆ .ಅವರು ಹೇಳಿದ ಹಾಗೆ ಈ ಪುಸ್ತಕದಲ್ಲಿ illustrations ಗಳಂತೂ ಅದ್ಭುತವಾಗಿವೆ.

ಸುಧನ್ವಾ ದೇರಾಜೆ ಪುತ್ತೂರಿನ ಸಂಧ್ಯಾದೇವಿಯವರ ‘ಮಾತು ಚಿಟ್ಟೆ -ಬೆಂಕಿ ಬೆರಳು-ಮುರಿದ ಮುಳ್ಳಿನಂತೆ ಜ್ಞಾನ’ ಪುಸ್ತಕದ ಬಗ್ಗೆ ಮಾತಾಡಿದರು.
ಈ ಪುಸ್ತಕದ ಬಗ್ಗೆ ನನಗೂ ತುಂಬಾ ಪ್ರೀತಿ! ನಾನು ತೆಗೆದುಕೊಂಡ ಮೊದಲ ಕವನ ಸಂಕಲನ ಇದು.ನಾನು ಕಾವ್ಯಲೋಕದಿಂದ ತುಂಬಾ ದೂರ,ಆದರೂ ಪ್ರಜಾವಾಣಿಯಲ್ಲೋ ಯಾವುದರಲ್ಲೋ ಬಂದ ವಿಮರ್ಷೆ ನೋಡಿ ಅಂಕಿತ ಪುಸ್ತಕದ ಅಂಗಡಿಗೆ ಹೋಗಿ ತೆಗೆದುಕೊಂಡ ಪುಸ್ತಕ ಇದು.

ಸುಳ್ಯದ ಹರೀಶ್ ಕೇರ ’ಬೆಂಕಿಯ ನೆನಪು’ ಪುಸ್ತಕದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದರು.ಎಡುವರ್ಡೋ ಗೆಲಿಯಾನೋ ನ Memory of Fire ನ ಕನ್ನಡಾನುವಾದ ಇದು .ಬಹಳ ಚೆನ್ನಾಗಿ ಮಾತಾಡ್ತಾರೆ ಹರೀಶ್.

ವಿ ಆರ್ ಕಾರ್ಪೆಂಟರ್ ಅವರು ’ಟೀಕೆ -ಟಿಪ್ಪಣಿ’ ಪುಸ್ತಕದ ಬಗ್ಗೆ ಮಾತಾಡಿದ್ರು.

ಕೊನೆಯದಾಗಿ ವಿದ್ಯಾರಶ್ಮಿ ಪೆಲತಡ್ಕ ಅವರು ’ಗಾಂಧಿ ಬಂದಾಗ’ ( ಅದರ ಲೇಖಕಿಯ ಹೆಸರೂ ಮರೆತು ಹೋಯ್ತು ನಂಗೆ!) ಪುಸ್ತಕದ ಬಗ್ಗೆ ಮಾತಾಡಿದ್ರು. ನಂಗೆ ತುಂಬಾ ಇಷ್ಟ ಆಯ್ತು ಅವರ ವಿವರಣೆ.ಅದಕ್ಕೆ ಕಾರವೂ ಇದೆ! ’ಗಾಂಧಿ ಬಂದಾಗ’ ಪುಸ್ತಕ ಮಂಗಳೂರಿಗೆ ಸಂಬಂಧಪಟ್ಟ ಕಥೆ .ಈ ಪುಸ್ತಕದಲ್ಲಿ ತುಳುನಾಡಿನ ಸೊಗಡನ್ನು ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೋ ಅಷ್ಟೇ ಸೊಗಸಾಗಿ ಅದರ ಚಿತ್ರಣವನ್ನು ವಿದ್ಯಾರಶ್ಮಿ ಅಲ್ಲಿ ಕಟ್ಟಿಕೊಟ್ಟರು.

ಜೋಜಿಗ ಹಾಗೂ ದೀಪಿಕಾರ ಅನುಪಸ್ಥಿತಿ ಎದ್ದು ಕಾಣಿಸ್ತಾ ಇತ್ತು(ನನಗೆ ಮಾತ್ರ!) ಆದ್ರೆ ಅವರ ಗೆಳತಿ ಮಾತ್ರ ’ನೀವು ಬ್ಲಾಗ್ ನಲ್ಲಿ ಏನು ಬೇಕಾದ್ರೂ ಬರೆಯಿರಿ ಫೊಟೋ ತೆಗೆಯೋದು ಮಾತ್ರ ನನ್ನ ಜನ್ಮಸಿದ್ಧ ಹಕ್ಕು ’ ಅನ್ನೊ ಹಾಗೆ ಅವರ ’ಕರ್ತವ್ಯವನ್ನು ನಿರ್ವಹಿಸ್ತಾ ಇದ್ರು.

ಒಟ್ಟಿನಲ್ಲಿ ಬಹಳ ಸುಂದರ ಕಾರ್ಯಕ್ರಮ . ಥ್ಯಾಂಕ್ಸ್ ಮೇ ಪ್ಲವರ್ ಟೀಮ್ !

‘ಕಡಲತೀರ’ದಿಂದ ಕಷ್ಟಪಟ್ಟು ಹೆಕ್ಕಿ ತಂದದ್ದು

November 21, 2008 Posted by odubazar | ಬುಕ್ ಬಜಾರ್, ಮೇಫ್ಲವರ್ | | No Comments Yet

ಎಷ್ಟೊಂದು ಪುಸ್ತಕಗಳು ನಮ್ಮ ಮನಸಿನಲ್ಲಿ

ರಾಷ್ಟ್ರೀಯ ಪುಸ್ತಕ ಸಪ್ತಾಹದ ಅಂಗವಾಗಿ ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿ ಹಮ್ಮಿಕೊಂಡಿದ್ದ ‘ಈ ಪುಸ್ತಕ ನಂಗಿಷ್ಟ…’ ಕಾರ್ಯಕ್ರಮದ ಒಂದು ನೋಟ.

ಇನ್ನಷ್ಟು ಚಿತ್ರಗಳಿಗೆ ‘ಅವಧಿ’ ಗೆ ಭೇಟಿ ಕೊಡಿ

img_6543

img_6553 img_6648img_6563

img_6590 img_6604

img_6605

img_6609 img_6629

img_6527 img_6526

img_6628

November 16, 2008 Posted by odubazar | ಬುಕ್ ಬಜಾರ್, ಮೇಫ್ಲವರ್ | | No Comments Yet