Skip to content
ಆಗಷ್ಟ್ 29, 2008 / odubazar

ನಿಮ್ಮಮ್ಮ ಅಂದ್ರೆ ನಂಗಿಷ್ಟ

ಪ್ರಿಯರೆ,

ಇಂಥದೊಂದು ಅಭಿನಂದನೆಯನ್ನು ತಿಳಿಸಬೇಕೆಂದು ನನಗೆ ತೀವ್ರವಾಗಿ ಅನಿಸುತ್ತಿದೆಯಾದ್ದರಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ.ಬಹುಶಃ ನಾಳೆ ಇದೆಲ್ಲವನ್ನು ನಾನು ಲ್ಯಾಪ್ ನಲ್ಲಿ ಮತ್ತೆ ಟೈಪ್ ಮಾಡಿ ನಿಮಗೆ ಮೇಲ್ ಮಾಡಬಹುದು.ಸಮಯ ರಾತ್ರಿ ಒಂದು ಗಂಟೆ.ನನಗೆ ತುಂಬ ಬೇಜಾರಾದಾಗ,shattered ಅನಿಸಿದಾಗಲೆಲ್ಲ ನಿಮ್ಮ “ನಮ್ಮಮ್ಮ ಅಂದ್ರೆ ನಂಗಿಷ್ಟ” ಓದುತ್ತೇನೆ.
ಯಾಕೆಂದರೆ ಪ್ರತಿಸಾರಿ ನಾನು ಅದನ್ನು ಓದಿದಾದಗಲೂ ನಾನು ಹೊಸ ಹೊಸ ತೆರನಾದ unexplainable ಅನುಭೂತಿ ಪಡೆದಿದ್ದೇನೆ.ಅದನ್ನು ನೀವು ಸಮಾಧಾನ ಅಂತಲೋ releif ಅಂತಲೋ ಅಥವಾ re-emerging ಅಂತಲೂ ಭಾವಿಸಬಹುದು..ಅದೇನೇ ಇರಲಿ,ರಸ್ತೆ ಬದಿಯ ಹೋಟೇಲಿನಲ್ಲಿ ಅಪರೂಪಕ್ಕೊಮ್ಮೆ ತಿಂಡಿ ರುಚಿಯಾಗಿದೆ ಅಂತ ಅನಿಸಿದರೆ ನೇರವಾಗಿ ಅಡುಗೆಭಟ್ಟನಿಗೇ ಥ್ಯಾಂಕ್ಸ್ಹೇಳಿಬರುವ ನನ್ನಂಥವನಿಗೆ ನಿಮಗಿನ್ನೂ ಚಿಕ್ಕದೊಂದು ಅಭಿನಂದನೆ ಕೂಡ ತಿಳಿಸಲಾಗಲಿಲ್ಲವೆಂದು ನಾಚಿಕೆಯಾಗುತ್ತಿದೆ.
Realy sorry..ಇನ್ನು “ನಮ್ಮಮ್ಮ…” ಪುಸ್ತಕದ ಬಗ್ಗೆ ಹೇಳುವದಾದರೆ,mostly ಮುಂದೊಮ್ಮೆ ಯಾವತ್ತಾದರೂ ನೀವು ಆತ್ಮಕಥೆ ಬರೆದುಕೊಂಡರೆ ಅದರ ಬಹುಮುಖ್ಯಭಾಗ ಇದರಲ್ಲೇ ಇದೆಯೆಂದು ನಿಸ್ಸಂದೇಹವಾಗಿ ಹೇಳಬಹುದು..ಮೊದಲ ಮೂರು-ನಾಲ್ಕು ಅಧ್ಯಾಯಗಳಲ್ಲಿ ಬರುವ ನಿಮ್ಮಮ್ಮ-ನಮ್ಮೆಲ್ಲರ ಲೋಕಲ್ ಅಮ್ಮನಾಗಿಯೇ ಹೊರ ಹೊಮ್ಮಿದ್ದಾಳೆ..ಮಣಭಾರದ ಪದಗಳಿಲ್ಲ:ಶಬ್ದಗಳ ನಿರರ್ಥಕ ಕಸರತ್ತಿಲ್ಲ.ಆದರೂ ಎಷ್ಟೊಂದು ಗಟ್ಟಿಯಾಗಿ,ಜೀವಂತವಾಗಿ ಅಮ್ಮನನ್ನು ಚಿತ್ರಿಸಿಬಿಟ್ಟಿದ್ದೀರಿ..!ನೀವು ಹಾಗೆ ಬರೆದಿದ್ದೇ ಸರಿ.
ಅಮ್ಮ ಹಾಗಿದ್ದರೇ ಸರಿ.ಮನೆಯೊಳಗಿದ್ದ ಪಾತ್ರೆ ಕಾಣದಾದಾಗ ಕೆಲಸದವಳ ಮೇಲೆ ಅನುಮಾನಪಟ್ಟಿದ್ದು,ಸ್ಕೂಲ್ ಮೇಷ್ಟ್ರು ವಿಹಾರಕ್ಕೆಂದು ಕರೆದೊಯ್ದಾಗ ಒಬ್ಬಂಟಿಯಾಗಿದ್ದ ನಿಮ್ಮನ್ನು ಹುಡುಕಿಕೊಂಡು ಬಂದ ನಿಮ್ಮಮ್ಮ ಮೇಷ್ಟ್ರಿಗೆ (ಪಾಪ,ಅವರದೇನೂ ತಪ್ಪಿರದಿದ್ದರೂ ಕೂಡ!) ಹಿಡಿಶಾಪ ಹಾಕಿದ್ದು,ಮದುವೆಯಾದ ಹೊಸತರಲ್ಲಿ ಗಂಡ ಕೊಡಿಸಿದ್ದ ಸ್ಟೀಲ್ ಪಾತ್ರೆ ಹಿಡಿದುಕೊಂಡು ಊರತುಂಬೆಲ್ಲ ಪತಿರಾಯನ ಬಗ್ಗೆ ಡಾಣಾಡಂಗೂರ ಬಾರಿಸಿದ್ದ ನಿಮ್ಮಮ್ಮ-ನಿಮ್ಮ ಕಾಲೇಜಿನ ಸಮಾರಂಭದಲ್ಲಿ ನಿಮ್ಮ ತಂದೆಗೆ ಮೈಕಿನ ಮುಂದೆ ಮಾತಲಾಡಲಾಗದೇ ಬಾಯಿಕಟ್ಟಿದಾಗ ಅದೇ ಗಂಡನಿಗೆ ಛೇಡಿಸಿದ್ದು,ಟೀವಿ ರಿಪೇರಿಯ ಗೊಂದಲದಲ್ಲಿ ನೀವು ಸಿಕ್ಕಿಹಾಕಿಕೊಂಡಿದ್ದಾಗ ಥೇಟ್ ಹೆಂಟೆ(ಕೋಳಿಗಳ ಅಮ್ಮ?)ಯಂತೆ ಬಂದುನಿಮ್ಮನ್ನು ರಕ್ಷಿಸಿದ್ದು…ತುಂಬ ಸರಿ.
ಅಮ್ಮ ಹಾಗಿದ್ದರೇನೇ ಅಮ್ಮ. ಹಾಗಿರಲೇಬೇಕು ಕೂಡ. ಇನ್ನು ಪುಸ್ತಕದ ಇನ್ನೊಂದು ಭಾಗದಲ್ಲಿ ನೀವು ಕಟ್ಟಿಕೊಡುವ ವಿಮಾನ ನಿಲ್ದಾಣದ ದೄಶ್ಯಗಳು ಕೆಲವು ಕಪೋಲಕಲ್ಪಿತ ಎನಿಸಿದರೆ ಇನ್ನು ಕೆಲವು ರೋಚಕವಾಗಿವೆ. ಆದರೆ ಇವೆಲ್ಲವೂ ವಾಸ್ತವಕ್ಕೆ ಹಿಡಿದ ಕನ್ನಡಿಗಳು ಎಂದು ಮಾತ್ರ ಹೇಳಬಲ್ಲೆ…ತುಂಬ ತಡವಾಗಿ ಅಭಿನಂದನೆ ವ್ಯಕ್ತಪಡಿಸುತ್ತಿರುವದಕ್ಕೆ ಮತ್ತೊಮ್ಮೆ ಸ್ಸಾರಿ!
ಅನಂತ ಪ್ರೀತಿಯೊಂದಿಗೆ,

ರಾಘವೆಂದ್ರ ಜೋಶಿ


+++ವಸುಧೇಂದ್ರರಿಗೆ ನನ್ನ ಒಂದು ಅಭಿನಂದನೆಯನ್ನು ತಲುಪಿಸಿ ಬಿಡಿ…. ಮೊದಲನೆಯದಾಗಿ ಕನ್ನಡ ಸಾಹಿತ್ಯದ ಬಗ್ಗೆ ಗೀಳು ಹಚ್ಚಿಸಿಕೊಂಡವರಿಗೆ ನಾನು ಕೊಡುವ ಪುಸ್ತಕಗಳಲ್ಲಿ ನಮ್ಮಮ್ಮ …. ಕೂಡ ಒಂದು. ನೀವು ಬರೆದಿರುವ ಒಂದೊಂದು ಅನುಭವವವು ನನ್ನ ಮಟ್ಟಿಗೂ ನಿಜ.

-ಅಮರ

+++ಇತ್ತೀಚಿಗೆ ನನ್ನ ಹಳೆಯ ಗೆಳೆಯನೊಬ್ಬ ಸಿಕ್ಕಿದ್ದ. ಮಾತುಕತೆ ಪುಸ್ತಕಗಳತ್ತ ಹೊರಳಿತು. ವಸುದೇಂದ್ರ ಪುಸ್ತಕ ನಮ್ಮಮ್ಮ.. ಓದಿದ್ದೀರಾ ಎಂದ. ‘ಹು’ ಅಂದೆ. ಆ ಪುಸ್ತಕ ಇಬ್ಬರು ವ್ಯಕ್ತಿಗಳಿಗಂತೂ ಮರೆಯಲಾಗದ ಪುಸ್ತಕ ಅಂದ. ಯಾರು ಅಂದೇ. ನಾನು ಮತ್ತು ನನ್ನಮ್ಮ ಅಂದ. ‘ಹೋ’.. ಅಂದೆ.ಆ ಪುಸ್ತಕ ಓದುವವರೆಗೆ ನಾನು ಅಮ್ಮನ ಮೇಲೆ ಎಷ್ಟೇ ಪ್ರೀತಿ ಇದ್ರೂ ಆಗಾಗ ಸಿಡುಕ್ತಿದ್ದೆ. ಪುಸ್ತಕ ನನ್ನನ್ನ ಸಂಪೂರ್ಣ ಬದಲು ಮಾಡಿಬಿಡ್ತು. ಈಗ ನನಗೂ ಅಷ್ಟೆ- ನಮ್ಮಮ್ಮ ಅಂದ್ರೆ ನಂಗಿಷ್ಟ ಅಂದ.ಆ ನಂತರ ನಾನೂ ನಾನಾಗಿ ಉಳಿದಿಲ್ಲ. ನಾನು ಅಮ್ಮನ ಜೊತೆ ಮಾತಾಡುವಾಗ ಸ್ವಲ್ಪ ದನಿ ದೊಡ್ಡದು ಮಾಡಿದರೂ ತಪ್ಪು ಅನಿಸಿಬಿಡುತ್ತೆ. ಯಾಕೆ ಅಂದ್ರೆ ನಾನೂ ನಮ್ಮಮ್ಮ ಅಂದ್ರೆ ನಂಗಿಷ್ಟ ಓದಿದೀನಿ ಅಲ್ವ?
-ಜಿ ಎನ್ ಮೋಹನ್

Advertisements
 1. Tina / ಸೆಪ್ಟೆಂ 1 2008 11:57 ಫೂರ್ವಾಹ್ನ

  ವಸುಧೇಂದ್ರ,
  ನಾನು ’ಓದುಬಜಾರ್’ ಗೆ ನನ್ನ ವಿಳಾಸ ಕಳುಹಿಸಿದರೆ ನನಗೆ ಈ ಪುಸ್ತಕ ಕಳುಹಿಸುತ್ತೀರ? ಬರೆ ಇಲ್ಲಿಯ ಕಮೆಂಟುಗಳನ್ನ ನೋಡಿಯೆ ನಿಮ್ಮಮ್ಮ ನನಗೂ ಇಷ್ಟವಾಗತೊಡಗಿದ್ದಾರೆ!!
  -ಟೀನಾ.

 2. ವಸುಧೇಂದ್ರ / ಸೆಪ್ಟೆಂ 15 2008 6:36 ಅಪರಾಹ್ನ

  ಟೀನಾ,

  ಎಲ್ಲಾ ಪುಸ್ತಕದಂಗಡಿಯಲ್ಲೂ ಇದು ಲಭ್ಯ. ಇಲ್ಲದಿದ್ದರೆ ನನಗೆ ನಿಮ್ಮ ವಿಳಾಸವನ್ನು ತಿಳಿಸಿ, ಕಳುಹಿಸಿ ಕೊಡುತ್ತೇನೆ.

  ವಂದನೆಗಳು,
  ವಸುಧೇಂದ್ರ

 3. rujit / ಜನ 2 2010 3:05 ಅಪರಾಹ್ನ

  i am impressed by this book please tell me the adress in belgaum where can i get it?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: