Skip to content
ಸೆಪ್ಟೆಂಬರ್ 3, 2008 / odubazar

ಫೋಟೋಗ್ರಾಫರ್ ಬಂದ್ರು, ಓಡಿ..ಓಡಿ…

ಫೋಟೋ ಟೆರರಿಸಂ !

ಮೊನ್ನೆ ಮೊನ್ನೆ ಗೆಳೆಯನೊಬ್ಬನ ಮದುವೆಯಿತ್ತು. ಮಹರಾಯ ಹತ್ತಿರದವನಾದ್ದರಿಂದ ತಾಳಿ ಕಟ್ಟಬೇಕಾದರೆ ನಾವೆಲ್ಲಾ ಹಾಜರಿರಬೇಕಿತ್ತು. ಮೊದಲೇ ತಡವಾಗಿದ್ದರಿಂದ ಎದ್ದೆನೋ ಬಿದ್ದೆನೋ ಅಂತ ೧೫ ಕಿ.ಮಿ. ಬೈಕೋಡಿಸಿಕೊಂಡು ಹೋಗಿದ್ದಾಯಿತು. ಎಲ್ಲರಿಗೂ ಹಲ್ಲು ಕಿರಿದು ಸುಧಾರಿಸಿಕೊಂಡು ಆದಮೇಲೆ ಗಟ್ಟಿ ಮೇಳ ಶುರುವಾಗುತ್ತಿದ್ದಂತೇ ಅದೆಲ್ಲಿದ್ದರೋ ಈ ಫೋಟೋ ಗ್ರಾಫರುಗಳು ೩-೪ ಜನ ಬಂದು ಮಂಟಪದ ಮುಂದೆ ನಿಂತು ಫೋಟೋ ತೆಗೆಯಲು ಶುರುಮಾಡಿಬಿಟ್ಟರು. ಜೊತೆಗೆ ಈಗ ತಮ್ಮ ಡಿಜಿಟಲ್ ಕ್ಯಾಮರಾಗಳು, ಸೆಲ್ ಫೋನುಗಳಲ್ಲಿ ಫೋಟೋ ತೆಗೆದುಕೊಳ್ಳುವ ಪುಕ್ಸಟ್ಟೆ ಫೋಟೋಗ್ರಾಫರುಗಳು, ಚಿಳ್ಳಿಪಿಳ್ಳೆಗಳು ಎಲ್ಲಾ ಸೇರಿಕೊಂಡು ಸುತ್ತಲೂ ಕೋಟೆಕಟ್ಟಿ ತಾಳಿಕಟ್ಟುವುದನ್ನೇ ನೋಡದಂತೆ ಮಾಡಿಬಿಟ್ಟರು. ಇದ್ದುದರಲ್ಲೇ ಅಂದಾಜು ಮಾಡಿ ಅಕ್ಷತೆ ಕಾಳುಗಳನ್ನು ಗುರಿ ಇಟ್ಟು ಎಸೆದು ಸಮಾಧಾನ ಪಟ್ಟಿದ್ದಾಯಿತು.

ಹಿಂದಿನ ವಾರದಲ್ಲಿ ಚೇತನಾ ತೀರ್ಥಹಳ್ಳಿಯವರ ಭಾಮಿನಿ ಷಟ್ಪದಿ ಪುಸ್ತಕದ ಬಿಡುಗಡೆಯಿತ್ತು. ಮೊದ ಮೊದಲು ಎಲ್ಲಾ ಚೆನ್ನಾಗಿ ನೆಡೆಯಿತು. ಆದರೆ ಈಗ ಪುಸ್ತಕ ಬಿಡುಗಡೆ ಎಂದು ಘೋಷಿಸಿದ್ದೇ ತಡ ೮-೧೦ ಫೋಟೊಗ್ರಾಫರು ಗಳು ವೇದಿಕೆಯನ್ನು ಯಾವ ಪರಿ ಸುತ್ತುವರೆದು ಬಿಟ್ಟರೆಂದರೆ ಅದ್ಯಾರು ಪುಸ್ತಕ ಬಿಡುಗಡೆ ಮಾಡಿದರೋ, ಅಲ್ಲಿ ಅದೇನು ಆಯಿತೋ ಒಂದೂ ತಿಳಿಯಲಿಲ್ಲ. ಸುಮಾರು ೨-೩ ನಿಮಿಷ ನೆಡೆದ ಸತತ ಫೋಟೋ ಫ್ಲಾಷುಗಳಿಗೆ ವೇದಿಕೆಯಲ್ಲಿದ್ದವರೂ ಹಿಂಸೆ ಪಡುತ್ತಿದ್ದುದು ಕಂಡುಬಂತು. ಪುಸ್ತಕ ಬಿಡುಗಡೆ ನೋಡಲು ಖುದ್ಧಾಗಿ ಹೋದವರು ಪುಸ್ತಕ ಬಿಡುಗಡೆ ಆಯಿತು ಎಂದು ಕೆಳಗೆ ಕುಳಿತುಕೊಂಡು ತಿಳಿದುಕೊಳ್ಳಬೇಕಾಯಿತು. ಎಂತದೂ ಕಾಣ್ತನೇ ಇಲ್ಯಲೇ, ಸಾಯ್ಲಿ ಅಂತ ಶ್ರೀನಿಧಿ ಗೊಣಗಿದ. ನಾಳೆ ಫೋಟೋ ಸಿಗ್ತು ಅದ್ರಲ್ಲೇ ನೋಡ್ಕೋ ಅಂತ ನಾನಂದೆ. ಸುಶ್ರುತ ಹೌದು ಅಂತ ತಲೆ ಅಲ್ಲಾಡಿಸಿದ. ನನ್ನ ಪಕ್ಕದಲ್ಲಿ ಕೂತಿದ್ದ ಬಿಳಿಗಡ್ಡದ ವಯಸ್ಸಾದವರೊಬ್ಬರು ಹ್ಹ ಹ್ಹ ಹ್ಹ ಎಂದು ನಕ್ಕರು. ಬಹುಶಃ ಇಂತದ್ದು ಬಹಳ ಅನುಭವ ಆಗಿದೆಯೆನೋ ಅವರಿಗೆ ಅವರ ಸರ್ವೀಸಿನಲ್ಲಿ 🙂

ಮೇ ಫವರ್ ಮೀಡಿಯಾ ಹೌಸ್ ಸಂಸ್ಥೆಯಿಂದ ಫಿಶ್ ಮಾರ್ಕೆಟ್ ಎಂಬ ಒಳ್ಳೆಯ ಕಾರ್ಯಕ್ರಮವೊಂದು ನೆಡೆಯುತ್ತದೆ. ಖ್ಯಾತ ಕವಿ, ಬರಹಗಾರ, ಕಲಾವಿದ ಯಾರಾದರೊಬ್ಬರ ಜೊತೆ ನಮ್ಮ ಒಂದು ಸಂಜೆಯನ್ನು ಸುಂದರವಾಗಿಸುವ ಕಾರ್ಯಕ್ರಮವದು. ಮೊನ್ನೆ ಶನಿವಾರ ಅದಕ್ಕೂ ಹೋಗಿದ್ದೆ. ದುಂಡಿರಾಜ್ ಬಂದಿದ್ದರು. ಅಬ್ಬಾ, ಕಾರ್ಯಕ್ರಮ ಶುರುವಾದಾಗಿಂದ ಮೂರು ಜನ ಹುಡುಗಿಯರು ಅದೆಷ್ಟು ಫೋಟೋಗಳನ್ನು ತೆಗೆದರು ಎಂಬುದಕ್ಕೆ ಲೆಕ್ಕವಿಲ್ಲ. ಹುಡುಗಿಯರೇನೋ ಚೆನ್ನಾಗಿಯೇ ಇದ್ದರು. ಹಾಗಂತ ಎಷ್ಟು ಅಂತ ಫೋಸು ಕೊಡೋದು ನಾವು. ದುಂಡಿರಾಜರ ಹನಿಗವನಗಳನ್ನು ಕೇಳಿ ಕೆಟ್ಟ ಕೆಟ್ಟದಾಗಿ ಬಿದ್ದೂ ಬಿದ್ದೂ ನಗುತ್ತಿದ್ವಿ. ಮೊದ ಮೊದಲು ಫೋಟೋ ತೆಗೆಯುವಾಗ ಕೂತ ಭಂಗಿ ಸರಿಮಾಡಿಕೊಂಡು, ಕೂದಲು ಸರಿಮಾಡಿಕೊಂಡು ಫೋಸು ಕೊಟ್ಟರೂ ನಂತರ ಫೋಟೋ ಹುಡುಗಿಯರ ಓಡಾಟದ ಪರಿ ನೋಡಿ ಭಯಪಟ್ಟು ಹೆಂಗಾದ್ರೂ ತೆಕ್ಕೊಳ್ಲಿ ಅಂತ ಸುಮ್ಮನಿರಬೇಕಾಯಿತು. ದುಂಡೀರಾಜರ ಚುಟುಕಗಳಿಗಿಂತ ಫೋಟೋ ಪ್ಲ್ಯಾಷ್ ಗಳೇ ಇನ್ನೂ ತಲೆಯಲ್ಲಿ, ಕಣ್ಣಲ್ಲಿ….

*******************

ಅಲ್ಲ,ಇದೆಲ್ಲಾ ಮಾಡುವುದು ತಪ್ಪೂ ಅಂತ ಅಲ್ಲ. ನೆನಪು, ಪ್ರಚಾರ, ಮಾರ್ಕೆಟಿಂಗ್ ಕಾರಣಕ್ಕಾಗಿ ಇದೆಲ್ಲಾ ಮಾಡಬೇಕಾಗುತ್ತದೆ ನಿಜ. ಹಾಗಂತ ನಮ್ಮ ತೊಂದರೆ ನಾವು ಹೇಳಿಕೊಳ್ಳದೇ ಇರೋಕಾಗುತ್ತದಾ? 🙂

Advertisements
  1. malathi S / ಸೆಪ್ಟೆಂ 6 2008 3:46 ಅಪರಾಹ್ನ

    ಭಾಮಿನಿ ಷಟ್ಪದಿ ಪುಸ್ತಕದ ಬಿಡುಗಡೆಗೆ ನಾನು ನನ್ನ ಮಗಳು ಬಂದಿದ್ವಿ. ತುಂಬಾ ಮುಂದೆ ಬೇರೆ ಕುಂತಿದ್ವಿ. ಬೇಗ ಹೋಗ ಬೇಕಿತ್ತು ಮನೆಗೆ. ಹೇಗಪ್ಪ ಎದ್ದು ಹೋಗೋದು ಅಂತ ಮುಜುಗರ ಪಟ್ಕೋತಾ ಇರಬೇಕಾದ್ರೆ, ಬುಕ್ ಮಾರ್ಕರ್ ಬಿಡುಗಡೆಗೆ ಫೋಟೊಗ್ರಾಫರ್ಸ್ ವೇದಿಕೆ ಎದ್ರಿಗೆ ಬಂದು ಲಗ್ಗೆ ಹಾಕಿದ್ರು, ನಾವಿಬ್ಬರೂ ಅಲ್ಲಿಂದ ಔಟ್.
    Very convenient 🙂 for me.
    ಮಾಲತಿ ಎಸ್.
    🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: