Skip to content
ಸೆಪ್ಟೆಂಬರ್ 9, 2008 / odubazar

ಒಂದು ಉತ್ತಮ ಬ್ಲಾಗ್ ಇನ್ನಿಲ್ಲವಾಗಿದೆ

ಒಂದು ಉತ್ತಮ ಬ್ಲಾಗ್ ಇನ್ನಿಲ್ಲವಾಗಿದೆ. ಬಹುಷಃ ನಾವೆಲ್ಲರೂ ಪ್ರೀತಿ, ಕಾಳಜಿಯಿಂದ ಚರ್ಚೆ ಮಾಡಬೇಕಾದ ವಿಚಾರ ಇದು. ಕನ್ನಡದ ಬ್ಲಾಗ್ ಗಳಲ್ಲಿ ಮುಸುಕು ಹಾಕಿಕೊಂಡ ಪತ್ರ ಭಯೋತ್ಪಾದಕರು ಸಾಕಷ್ಟಿದ್ದಾರೆ. ಕಾಲ ಕಾಲಕ್ಕೆ ಸಿಕ್ಕವರ ಮೇಲೆಲ್ಲಾ ಹರಿಹಾಯುವುದು ಇವರ ಹವ್ಯಾಸ.

ಆದರೆ ಈಗ ಈ ಹವ್ಯಾಸ ಒಂದು ಉತ್ತಮ ಬ್ಲಾಗ್ ತನ್ನ ಬಾಗಿಲು ಮುಚ್ಚಿ ನಿಮ್ಮ ಸಹವಾಸವೇ ಬೇಡ ಎಂದು ಹೊರಟುಹೋಗುವಂತೆ ಮಾಡಿದೆ.

ನರೇಂದ್ರ ಪೈ ಕನ್ನಡದ ಮುಖ್ಯ ಪುಸ್ತಕ ಪ್ರೇಮಿ ಮಂಗಳೂರಿನ ಕೆ ಎಂ ಸಿಯಲ್ಲಿ ಉದ್ಯೋಗದಲ್ಲಿರುವ ಇವರು ಹಲವು ಪುಸ್ತಕ ಸಾಹಸಿಗಳಿಗೆ ಗೊತ್ತಿರುವ ಹೆಸರು. ವೆಂಕಟರಮಣ ಗೌಡರು ‘ಹಂಗಾಮ’ ಆರಂಭಿಸಿದಾಗ ಅವರ ಪರಿಚಯವೇ ಇಲ್ಲದಿದ್ದರೂ ಹತ್ತಾರು ಪ್ರತಿ ಖರೀದಿಸಿ ಗೆಳೆಯರಿಗೆ ಮಾರುತ್ತಿದ್ದವರು. ಮೆಲು ದನಿಯ ನರೇಂದ್ರ ಪೈ ಅತ್ರಿ ಬುಕ್ ಸೆಂಟರ್ ಗೆ ಭೇಟಿ ನೀಡುವ ಬಹುತೇಕ ಎಲ್ಲರಿಗೂ ಪರಿಚಿತರು.

ನರೇಂದ್ರ ಪೈ ಬರೆದ ವಿಮರ್ಶೆ ಎಷ್ಟು ಆಳವಾಗಿ ಹಾಗೂ ಪುಸ್ತಕ ಪ್ರೀತಿಯಿಂದ ಕೂಡಿರುತ್ತಿತ್ತು ಎಂದರೆ ‘ಅವಧಿ’ ಅವರ ಅನೇಕ ಲೇಖನಗಳನ್ನು ಪ್ರಕಟಿಸಿತ್ತು. ಅವರು ತಮ್ಮ ‘ಓದುವ ಹವ್ಯಾಸ’ ಬ್ಲಾಗ್ ನಿಂದ ಕನ್ನಡದಲ್ಲಿ ಇರುವ ಪುಸ್ತಕ ವಿಮರ್ಶೆಯ ಕೊರತೆಯನ್ನು ಒಂದಿಷ್ಟಾದರೂ ಇಲ್ಲವಾಗಿಸಲು ಯತ್ನಿಸಿದ್ದರು.
ಆದರೆ ಪತ್ರದ ಮೂಲಕವೇ ಬ್ಲಾಗ್ ಕರ್ತರನ್ನು ಹಿಂಸಿಸುವ ಒಂದು ಕೆಟ್ಟ ಚಾಳಿ ಕನ್ನಡ ಬ್ಲಾಗ್ ಮಂಡಲಕ್ಕೂ ಕಾಲಿಟ್ಟಿದೆ. ಇಂಗ್ಲಿಶ್ ನಲ್ಲಿ ಇದರ ಹಾವಳಿ ವಿಪರೀತವಾದಾಗ ಪ್ರಚಾರ ಆರಂಭವಾಗಿತ್ತು ಈಗ ಒಂದು ಬ್ಲಾಗ್ ಈ ಅಪಪ್ರಚಾರಕ್ಕೆ ನೊಂದು ಇಲ್ಲವಾಗಿದೆ. ನರೇಂದ್ರ ಪೈ ವಿವೇಕ ಶಾನಭಾಗ್ ಅವರ ಪಾಡ್ಕ್ಯಾಸ್ಟ್ ಸಂದರ್ಶನ ನಡೆಸಿ ಕೊಟ್ಟದ್ದನ್ನು ಮರೆಯುವ ಹಾಗಿಲ್ಲ.

ನರೇಂದ್ರ ಪೈ ಅವರು ನೊಂದ ಮನಸ್ಸಿಗೆ ನಾವು ಒಂದಿಷ್ಟು ಸಾಂತ್ವನ ಹೇಳೋಣವೇ. ಆ ಮೂಲಕ ಮತ್ತೆ ನರೇಂದ್ರ ಪೈ ತಮ್ಮ ‘ಓದುವ ಹವ್ಯಾಸ’ ಬ್ಲಾಗ್ ಆರಂಭಿಸಲು ನಾವು ನೀವೆಲ್ಲರೂ ಕಾರಣವಾಗೋಣವೆ? ಹಾಗಾದರೆ ಅವರಿಗೆ ಒಂದು ಮೇಲ್ ಕಳಿಸಿ.narendra.pai@manipal.edu

ಅವರು ಬ್ಲಾಗ್ ಮುಚ್ಚುವ ಮುನ್ನ ಬರೆದಿದ್ದ ಪತ್ರವೊಂದರ ಭಾಗ ಇಲ್ಲಿದೆ-

Dear All,

Please read the full version of my write up in http://narendrapai.blogspot.com/ and also the comment passed by one of the readers who is hiding himself in a lady’s name.

To introduce a good book, is it a sin? Ofcourse, my language and style is not simple, I do agree. But does it deserve this kind of harsh slap? This is what we are supposed to received in a Kannda web site like sampada.net for having written good words about a book.

Regards,

Narendra

Advertisements
 1. ಸಂದೀಪ್ ಕಾಮತ್ / ಸೆಪ್ಟೆಂ 9 2008 5:28 ಅಪರಾಹ್ನ

  ಛೇ! ಹೀಗಾಗ್ಬಾರ್ದಿತ್ತು.
  ಇದು ಒಂದು ಬ್ಲಾಗ್ ನ ಕೊಲೆ!

 2. ನರೇಂದ್ರ / ಸೆಪ್ಟೆಂ 10 2008 12:31 ಅಪರಾಹ್ನ

  ಹಲವರಿಂದ ನನಗೆ ಬರೆಯುವುದನ್ನು ನಿಲ್ಲಿಸಬಾರದು, ಇಂಥ ಟೀಕೆಗಳನ್ನು ನಿರ್ಲಕ್ಷಿಸುವುದೇ ಸರಿಯಾದುದು ಎಂಬೆಲ್ಲ ಈಮೇಲ್‌ಗಳು ಬರುತ್ತಿರುವುದರಿಂದ ಇಲ್ಲಿಯೇ ನಾನು ಕೆಲವೊಂದು ವಿಚಾರಗಳನ್ನು ಸ್ಪಷ್ಟಪಡಿಸುವುದು ಉತ್ತಮ ಎನಿಸುತ್ತದೆ. ವಾಸ್ತವವಾಗಿ ನನಗೆ ನನ್ನ ಬರಹಗಳ ಬಗ್ಗೆ ಹಲವರಿಂದ ಸಾಕಷ್ಟು ಒಳ್ಳೆಯ ಮಾತುಗಳು, ಉತ್ತೇಜನ, ಬೆಂಬಲ, ಪ್ರೋತ್ಸಾಹ ಎಲ್ಲವೂ ಸಿಕ್ಕಿದ್ದಿದೆ. ಈ ವಿಚಾರದಲ್ಲಿ ಉದ್ದಕ್ಕೂ ನಾನು ಸ್ವಲ್ಪ ಹೆಚ್ಚೇ ಎನಿಸುವಷ್ಟು ಅದೃಷ್ಟವಂತನಾಗಿದ್ದೆ. ನನ್ನ ಬರಹಗಳಿಗೆ ಸಿಕ್ಕಿದ ಧನಾತ್ಮಕ ಪ್ರತಿಕ್ರಿಯೆಗಳ ಎದುರು ಈ ಒಂದು ಕಾಮೆಂಟ್ ಏನೂ ಅಲ್ಲ ಎನ್ನುವುದು ಕೂಡ ವಾಸ್ತವವಾಗಿದೆ. ಈಗಲೂ ಬರುತ್ತಿರುವ ಈಮೇಲ್‌ಗಳ ಹಿಂದಿನ ಮನಸ್ಸುಗಳ ಕಾಳಜಿ, ಪ್ರೀತಿಗೆ ನನ್ನಲ್ಲಿ ಮಾತುಗಳಿಲ್ಲ. ನಾನು ಅನಗತ್ಯವಾಗಿ ಇದೆಲ್ಲದರ ಕೇಂದ್ರವಾಗಿ ಹಲವರ ಗಮನಸೆಳೆದುಕೊಳ್ಳುತ್ತಿರುವುದು ನನಗೇ ಮುಜುಗರದ ವಿಷಯ. ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ನಾನು ಕೊಂಚ ಅತಿಯಾಗಿ ಪ್ರತಿಕ್ರಿಯಿಸಿದಂತೆ ಕಾಣುವ ನನ್ನ ವರ್ತನೆಯ ಬಗ್ಗೆ ಎರಡು ಮಾತು.

  ಹಾಗೆ ನೋಡಿದರೆ ಇಂಥ ಕ್ಷುಲ್ಲಕ ಟೀಕೆಗಳನ್ನು ನಿರ್ಲಕ್ಷಿಸುವುದು ಸರಿಯಾದ ನಿಲುವು ಎಂದೇ ನಾವೆಲ್ಲ ತಿಳಿಯುತ್ತೇವೆ. ಹಾಗೆ ತಿಳಿದು ನಿರ್ಲಕ್ಷಿಸುತ್ತೇವೆ ಎಂದೇ ಈ ಸಣ್ಣತನದ, ಕಾಲೆಳೆಯುವ ಬುದ್ಧಿಯವರು ಇದೆಲ್ಲ ಸರಳ, ಸುಲಭ ಎಂದು ತಿಳಿದು ಬೇಕೆನಿಸಿದಾಗ ಇನ್ನೊಬ್ಬರ ಮೂತಿಗೆ ಇಕ್ಕುವುದಕ್ಕೆ ಭಂಡ ಧೈರ್ಯದಿಂದ ಮುಂದಾಗುತ್ತಾರೆ. ಎಲ್ಲೋ ಒಂದು ಕಡೆ ಇದು ಇಂಟರ್ನೆಟ್, ಇಲ್ಲಿ ಇದೆಲ್ಲ ಸಾಮಾನ್ಯ, ತಲೆಕೆಡಿಸಿಕೋ ಬೇಡ ಎಂಬ ಸಲಹೆ ಕೂಡಾ ಸಿಗುತ್ತದೆ. ಇದು ಇಂಟರ್ನೆಟ್ ಎಂಬ ಒಂದೇ ಕಾರಣಕ್ಕೆ ನಾವಿದನ್ನು ಸಹಿಸುವುದೇ ಸರಿಯಾದ ರೀತಿ ಎಂಬ ವಾದದಲ್ಲಿ ಏನೋ ತಪ್ಪಿದೆ ಅನಿಸುತ್ತದೆ ನನಗೆ. ಹಾದಿಯಲ್ಲಿ ಮುಖಾಮುಖಿಯಾಗಿ ತದಕುವುದಕ್ಕೂ ಇಲ್ಲಿ ಹೀಗೆ ಮುಖೇಡಿಯಂತೆ ಮರೆಯಾಗಿ ನಿಂತು ತದಕುವುದಕ್ಕೂ ಸಂವೇದನೆಗಳಲ್ಲಿ ವ್ಯತ್ಯಾಸವಿಲ್ಲ ಎನ್ನುವುದನ್ನು ನಾವು ಮನಗಾಣುವುದು ಮುಖ್ಯ. ಅನಾಮಿಕ ಕಾಮೆಂಟುಗಳಿಗೆ ಅವಕಾಶ ನೀಡುವುದಿಲ್ಲ, ಡಮ್ಮಿ ವ್ಯಕ್ತಿಯ ಹೆಸರಿನಲ್ಲಿ ಯಾರನ್ನೂ ನೋಂದಾಯಿಸಲು ಬಿಡುವುದಿಲ್ಲ ಎಂದೆಲ್ಲ ಹೇಳಿಕೊಳ್ಳುವ ಸಂಪದದಂಥ ತಾಣದಲ್ಲೇ ಇಂಥದ್ದು ಸಂಭವಿಸಿದ್ದು ಆಘಾತಕರ, ಅನಪೇಕ್ಷಿತ ಕೂಡ.

  ಇದಲ್ಲದೆ ನನ್ನ ಸ್ವಂತ ಅನುಭವ, ಸಾಹಿತ್ಯ-ಸಾಹಿತಿಗಳ ಜಗತ್ತಿನಲ್ಲಿ ತುಂಬ ಕಹಿಯಾದದ್ದು. ಕಳೆದ ಹತ್ತು ವರ್ಷಗಳಲ್ಲಿ ನಾನು ಇಲ್ಲಿ ಎದುರಿಸಿದ ಸಣ್ಣತನ, ಚಿತಾವಣೆ, ಕಾಲೆಳೆಯುವುದು ಮತ್ತು ಅವಕಾಶ ಸಿಕ್ಕರೆ ಅವಮಾನಿಸುವುದು ಸಾಕಷ್ಟಿದೆ. ಇದರಲ್ಲಿ ನಮ್ಮ ನಿಯರ್ ಎಂಡ್ ಡಿಯರ್‌ಗಳು ಇರುವುದನ್ನೂ, ಬರೆಯುವುದೇ ಒಂದು ಆಡುವುದೇ ಇನ್ನೊಂದು ಮಾಡುವ ಗಣ್ಯ ಬರಹಗಾರರು ಇರುವುದನ್ನೂ, ತುಂಬ ಪ್ರಬುದ್ಧ ಎಂದು ನಾವೆಲ್ಲ ನಂಬಿದವರು ಕೂಡ ಇರುವುದನ್ನು ಕಂಡು ಕನ್ನಡ, ಸಾಹಿತ್ಯ, ಸಾಹಿತಿ ಮುಂತಾದುವುದರ ಕುರಿತ ನನ್ನ ಮನೋಧರ್ಮ ಕೂಡ ತುಂಬ ಬದಲಾಗಿದೆ. ಎಲ್ಲದರಿಂದ ದೂರ ಇರುವುದು ಯಾವುದೋ ಅನಪೇಕ್ಷಿತ ವಸ್ತುವಿನಿಂದ ದೂರವುಳಿಯುವಷ್ಟೇ ಸಮಾಧಾನ ನೀಡುತ್ತಿರುವುದು ಕೂಡ ವಿಚಿತ್ರವಾಗಿದೆ! ಹಾಗೆ ನನ್ನದು ಒಂದು ದುಡುಕಿನ ಅಥವಾ ಅತಿಯಾಗಿ ಪ್ರತಿಕ್ರಿಯಿಸಿದ ವಿದ್ಯಮಾನವಲ್ಲ, ಒಂದರ್ಥದಲ್ಲಿ ತೀರ ತಡವಾಗಿಯೇ ತೆಗೆದುಕೊಂಡ, ಸಾಕಷ್ಟು ಸಂಯಮ ಮತ್ತು ಸಮಾಧಾನದ ಸರಿಯಾದ ನಿರ್ಧಾರ ಎನ್ನುವ ನಂಬುಗೆಯೇ ನನ್ನಲ್ಲಿದೆ.

  ಪ್ರಸ್ತುತ ಕಾಮೆಂಟ್ ಕಾಣಿಸಿದ್ದು ಸಂಪದ.ನೆಟ್ ತಾಣದಲ್ಲಿ, ನನ್ನ ವೈಯಕ್ತಿಕ ಬ್ಲಾಗ್‌ನಲ್ಲಿ ಅಲ್ಲ. ಅದು ಅಂಥ ಗಮನಾರ್ಹವಾದ ಏನನ್ನೂ ಹೇಳುತ್ತಿರಲಿಲ್ಲ. ಅದು ನನ್ನ ಶೈಲಿಯನ್ನು ಕುಹಕದಿಂದ ಪ್ರಶ್ನಿಸುತ್ತ ನಾನು ಕೆಲವು ಶಬ್ದಗಳನ್ನು ಮತ್ತೆ ಮತ್ತೆ ಬಳಸಿರುವುದು ವಿಮರ್ಶೆಯ ಅನಿವಾರ್ಯತೆಯೆ ಎಂದೆಲ್ಲ ಲೇವಡಿಯ ಧ್ವನಿಯಲ್ಲಿ ಟೀಕಿಸಿತ್ತು. ಉದ್ದೇಶ ಕೇವಲ ನೋಯಿಸುವುದು, ವಸ್ತುನಿಷ್ಠ ಚರ್ಚೆಯಲ್ಲ. ನಾನು ಅಬ್ದುಲ್ ರಶೀದರ ಒಂದು ಪುಸ್ತಕದ ಬಗ್ಗೆ ಬರೆದಿದ್ದೆ. ಅಬ್ದುಲ್ ರಶೀದರ `ಕೆಂಡಸಂಪಿಗೆ’ ದಿನದಿಂದ ದಿನಕ್ಕೆ ಸಾಕಷ್ಟು ಮೆಚ್ಚುಗೆ, ಯಶಸ್ಸು ಗಳಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಕಾಮೆಂಟ್ ಹಾಕಿದ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚಿನ ಉದ್ದೇಶಗಳಿದ್ದವು ಎನ್ನುವುದು ಕೂಡ ಈ ಕಾಮೆಂಟನ್ನು ಕೊಂಚ ಗಂಭೀರವಾಗಿ ನೋಡಲು ಕಾರಣ. ಸಂಪದದ ನಾಡಿಗರ ಜೊತೆ ಮಾತನಾಡಿದ ಮೇಲೆ ಸ್ಪಷ್ಟವಾದ ಕೆಲವು ಸಂಗತಿಗಳ ಅರಿವಿಲ್ಲದೇ ಹೋಗಿದ್ದರೆ ಬಹುಷಃ ನಾನು ಈ ಕಾಮೆಂಟನ್ನು ನಿರ್ಲಕ್ಷಿಸುತ್ತಿದ್ದೆ ಎಂಬುದು ಮಾತ್ರ ಸತ್ಯ.

  ಕನ್ನಡದ ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ಪುಸ್ತಕಪ್ರಿಯರ ಗಮನಸೆಳೆಯುವುದು ನನ್ನ ಬರವಣಿಗೆಯ ಉದ್ದೇಶವಾಗಿತ್ತು. ಸದ್ಯಕ್ಕಂತೂ ಸಾಕಷ್ಟು ಬ್ಲಾಗುಗಳು, ಸ್ವತಂತ್ರ ತಾಣಗಳು ಇಂಥ ಕೆಲಸವನ್ನು ಅಚ್ಚುಕಟ್ಟಾಗಿ ಮತ್ತು ಒಂದೇ ಕಡೆ ಮಾಹಿತಿ ಸಿಗುವಂತೆ ಮಾಡುತ್ತಿವೆ. ನಾನು ಬರೆಯುವುದು ಬರೆಯದಿರುವುದು ಮುಖ್ಯ ಸಂಗತಿಯಲ್ಲ. ಸಣ್ಣತನ ಎಂಬ ಕಳೆಗಿಡ ಅಂತರ್ಜಾಲದ ಕನ್ನಡ ಬಳ್ಳಿಯ ಎಡೆಯಲ್ಲಿ ಚಿಗುರುವುದಕ್ಕೆ, ಅರಳುವುದಕ್ಕೆ ಬಿಡದಿರುವುದು ಮುಖ್ಯ. ಓದುಬಜಾರ್ ಮತ್ತು ತನ್ಮೂಲಕ ಸ್ಪಂದಿಸಿದ ಎಲ್ಲ ಹಿತೈಷಿಗಳಿಗೆ ಅನಂತ ಧನ್ಯವಾದಗಳು.

 3. ಮನಸ್ವಿ / ಆಕ್ಟೋ 8 2008 3:45 ಅಪರಾಹ್ನ

  ನಿಮ್ಮ ಬರಹ ಓದಿ ಮನಸ್ಸಿಗೆ ಕಷ್ಟವಾಗುತ್ತಿದೆ.. ಒಂದು ಬ್ಲಾಗ್ ಮುಚ್ಚುವಂತೆ ಮಾಡಿರುವುದು ಕ್ರೂರತೆ..

  A little information..
  bloggers can set comment to modration then you can accept or reject the comments.. use that service

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: