Skip to content
ಸೆಪ್ಟೆಂಬರ್ 22, 2008 / odubazar

ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ



divakarcover.jpg

ಎಸ್ ದಿವಾಕರ್ | ಅಂಕಿತ ಪುಸ್ತಕ | ೦೮೦-೨೬೬೧೭೧೦೦
೫೩, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-೫೬೦೦೦೪

*

ಪ್ರಸ್ತುತ ಕಥಾ ಸಂಗ್ರಹದಲ್ಲಿ ಎಂಟು ಕಥೆಗಳಿವೆ. ಎಂಟೂ ಕಥೆಗಳು ಕಥೆಗಾರಿಕೆಯಲ್ಲಿ ಮಡಿದ ಹೊಚ್ಚ ಹೊಸ ಪ್ರಯೋಗಗಳಾಗಿವೆ. ಪ್ರಯೋಗಶೀಲತೆ ಈ ಬರವಣಿಗೆಯ ಕಣ್ಣಿಗೆ ಹೊಡೆಯುವ ವೈಶಿಷ್ಟ್ಯವಾಗಿದೆ. “ಸಣ್ಣಕಥೆ” ಎನ್ನುವ ಸಾಹಿತ್ಯ ಪ್ರಕಾರವನ್ನು ಕುರಿತು ಪ್ರಚಲಿತವಿರುವ ವಿಚಾರಗಳ ಬಗ್ಗೆ ಮಾಡಿಕೊಂಡ ಕಲ್ಪನೆಗಳ ಬಗ್ಗೆ ಓದಿ ಕೇಳಿ ಬೇಸರಪಟ್ಟ ಮನಸ್ಸು ಒಂದು ಬಗೆಯ ತುಂಟತನದ ಮೂಡಿನಲ್ಲಿದ್ದಾಗ ಈವರೆಗೆ ಬಂದ ಕಥೆಗಳಿಂದ ತೀರಾ ಭಿನ್ನವಾದ ರೀತಿಯಲ್ಲಿ ಬರೆಯುವುದೂ ಶಕ್ಯವಿದೆ ಎನ್ನುವುದನ್ನು ತೋರಿಸಲು ಹೊರಟಿದ್ದರ ಪರಿಣಾಮವಾಗಿ ಈ ಕಥೆಗಳು ಹುಟ್ಟಿಕೊಂಡಂತಿವೆ. ಪಾತ್ರಸೃಷ್ಟಿ, ಭಾಷೆ, ಕಾಲವಿನ್ಯಾಸ, ವಿವರಗಳ ವಿಪುಲತೆ, ನಿರೂಪಣಾ ತಂತ್ರ, ಅಷ್ಟೇಕೆ, ಕಥೆಗಳ ಶೀರ್ಷಿಕೆ, ಪಾತ್ರಗಳ ಹೆಸರುಗಳನ್ನೂ ಬಿಡದೆ ಪ್ರತಿಯೊಂದು ಕ್ಷೇತ್ರದಲ್ಲಿ ಈ ಪ್ರಯೋಗ ತನ್ನ ದಿಟ್ಟ ಹೆಜ್ಜೆ ಇಟ್ಟಿದೆ.

ನಾನೇ ಒಬ್ಬ ಕಥೆಗಾರನಾಗಿ ಈ ಸಂಗ್ರಹದಲ್ಲಿ ತುಂಬಾ ಮೆಚ್ಚಿಕೊಂಡ ಕಥೆ “ಬಿಳಿಯ ಹೂಗಳ ಕವಿತೆ”. ಈ ಕಥೆ ಕಥೆಯಾಗಿಯೇ ಉಳಿದು ಹೊಸತನ, ತಾಜಾತನ ಮೆರೆದಿದೆ. ಪ್ರಯೋಗದ ಮಟ್ಟಿಗೆ ಸಣ್ಣಕಥೆ ತುಂಬಾ ನಾಜೂಕು ಪ್ರಕೃತಿಯ ಮಾಧ್ಯಮ; ಸಾಧ್ಯತೆಗಳಂತೆ ಮಿತಿಯನ್ನೂ ಉಳ್ಳದ್ದು ಎನ್ನುವ ಅರಿವು ಬರವಣಿಗೆಯೊಳಗಿನ ನಿಗ್ರಹಕ್ಕೆ ಕಾರಣವಾದಂತಿದೆ. ಮಕ್ಕಳಿಲ್ಲದ ದಂಪತಿಗಳ ಅಂತರಂಗದ ಕೊರಗು ಬಹಿರಂಗ ವರ್ತನೆಯಲ್ಲಿ ತೆರೆದುಕೊಳ್ಳುತ್ತಿದ್ದ ಹಲವು ಆಕಾರಗಳನ್ನು ನೋಡುತ್ತಿದ್ದಂತೆ ತಲ್ಲಣಗೊಳ್ಳುತ್ತೇವೆ. ಓದಿ ಮುಗಿಸಿದ ಬಹು ಕಾಲದ ನಂತರವೂ ಕತೆ, ನಮ್ಮನ್ನು ಬಲವಾಗಿ ತಟ್ಟಿದ ಕವಿತೆಯೊಂದರ ಸಾಲಿನಂತೆ ನೆನಪಿನಲ್ಲಿ ಮರುಕಳಿಸುತ್ತದೆ.

ಯಶವಂತ ಚಿತ್ತಾಲ
(ಕೃತಿಯ ಬೆನ್ನುಡಿಯಿಂದ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: