Skip to content
ಸೆಪ್ಟೆಂಬರ್ 22, 2008 / odubazar

ಭಾಮಿನಿ ಷಟ್ಪದಿ- ನಾಲ್ಕು ತಕರಾರು

ಕನ್ನಡ ಪುಸ್ತಕ ಲೋಕದ ಮುಖ್ಯ ಓದುಗ ಹರೀಶ್ ಖೇರ ಚೇತನಾ ತೀರ್ಥಹಳ್ಳಿ ಅವರ ‘ಭಾಮಿನಿ ಷಟ್ಪದಿ’ ಬಗ್ಗೆ ಬರೆದ ವಿಮರ್ಶೆಯ ಆಯ್ದ ಭಾಗ ಇದು. ಸಂಪೂರ್ಣ ಓದಿಗೆ ಭೇಟಿ ಕೊಡಿ- ಬೆಟ್ಟದಡಿ

ಚೇತನಾ ಅವರ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯಲು ನನಗೆ ಇಷ್ಟ. ಆದರೆ ಜೋಗಿ, ಹುಳಿಯಾರ್, ನರೇಂದ್ರ ಪೈ ಸೇರಿದಂತೆ ಎಲ್ಲರೂ ಈಗಾಗಲೇ ಅದನ್ನು ಸಾಕಷ್ಟು ಹೊಗಳಿದ್ದಾಗಿದೆ. ಚೇತನಾ ಕನ್ನಡದ ಒಳ್ಳೆಯ ಲೇಖಕಿಯರಲ್ಲಿ ಒಬ್ಬರು ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಅವರ ಬರಹದ ಬಗೆಗೆ ನನಗಿರುವ ಕೆಲವು ತಕರಾರುಗಳನ್ನು ಇಲ್ಲಿ ದಾಖಲಿಸಲು ಬಯಸುತ್ತೇನೆ.

ಒಂದು : ಹಿಂಸೆಯಲ್ಲಿ ರಮಿಸುವ, ಹಿಂಸೆಯಲ್ಲೇ ವಿರಮಿಸುವ ಗುಣ. ಇದು ಎಂ.ವ್ಯಾಸರಲ್ಲಿ ತುಂಬಾ ಇತ್ತು. ಅವರು ಇದರಿಂದ ಎಂದೂ ಮೇಲೆ ಬರಲೇ ಇಲ್ಲ. ಚೇತನಾ ಇದನ್ನು ಮೀರಬಲ್ಲರೋ ಎಂಬುದು ಇನ್ನೂ ಸ್ಪಷ್ಟವಿಲ್ಲ ; ಮೀರಬೇಕೇ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ.


ಎರಡು : ಪುರಾಣದ ಪಾತ್ರಗಳ ಭಂಜನೆ. ಇದರಿಂದ ಹೊಸ ಅರಿವು ಉಕ್ಕುವಂತಿದ್ದರೆ, ಹೊಸ ಗ್ರಹಿಕೆಯನ್ನು ನನಗೆ ಅದು ನೀಡುತ್ತದಾದರೆ ನಾನು ಸ್ವಾಗತಿಸಬಲ್ಲೆ. ಇಲ್ಲವಾದರೆ ಇದರಿಂದ ಪ್ರಯೋಜನವೇನು ? ಯಶೋಧರೆ, ದ್ರೌಪದಿ, ಅಹಲ್ಯೆ ಎಲ್ಲರ ಬಗ್ಗೆಯೂ ಚೇತನಾಗಿಂತ ಒಂದು ತಲೆಮಾರು ಹಿಂದಿನ ಲೇಖಕಿಯರು ಇನ್ನಷ್ಟು ಪ್ರಖರವಾಗಿ ಬರೆದಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು. ಉದಾಹರಣೆಗೆ- ಇರಾವತಿ ಕರ್ವೆ, ಪ್ರತಿಭಾ ನಂದಕುಮಾರ್.


ಮೂರು : ಗಂಡು ಶೋಷಕ, ಹೆಣ್ಣು ಶೋಷಿತೆ ಎಂಬ ಸ್ಥಾಪಿತ ಮಾದರಿಗೆ ಬೀಳುವ ಭಯ. ಇದು ಜನಪ್ರಿಯವಾದುದೂ ಆಗಿದೆ ; ಪೊಲಿಟಿಕಲಿ ಕರೆಕ್ಟ್ ಆಗಿಯೂ ಇದೆ. ಆದರೆ ಇದೇ ಗ್ರಹಿಕೆಯೊಂದಿಗೆ ನಾವು ಇನ್ನಷ್ಟು ಮುಂದೆ ಹೋಗಲು ಸಾಧ್ಯವಿಲ್ಲ. ದಾಂಪತ್ಯದ ನರಕ ಎಲ್ಲರಿಗೂ ಒಂದೇ ; ಆಧುನಿಕ ಸಂದರ್ಭದಲ್ಲಿ ಹೆಚ್ಚಿನ ಸಲ ಗಂಡಿನೊಂದಿಗೆ ಹೆಣ್ಣೂ ಈ ನರಕಕ್ಕೆ ಪಾಲುದಾರಳು. ಗಂಡಿನ ಸೋಲು, ನೋವು, ಯಾತನೆಗಳನ್ನು ಕಾಣುವ ಕಣ್ಣು ಬರಹಗಾರರಿಗೆ ಮಂದವಾಗಕೂಡದು.


ನಾಲ್ಕು : ಅಷ್ಟೊಂದು ಬರಹಗಳನ್ನು ಓದಿದ ಮೇಲೆ, ಇಲ್ಲಿನ ಯಾವ ಪಾತ್ರವೂ ನನ್ನ ಚಿತ್ತ ಭಿತ್ತಿಯ ಮೇಲೆ ಅಚ್ಚೊತ್ತಿ ನಿಲ್ಲಲಿಲ್ಲವಲ್ಲಾ ಎಂದನಿಸಿದ್ದು ನಿಜ. ಅದಕ್ಕೆ ಕಾರಣವೇನು ಎಂಬ ಬಗ್ಗೆ ಆಲೋಚಿಸಿದೆ ; ನನಗೆ ತಿಳಿದಂತೆ ಬಹುತೇಕ ಬರಹಗಳ ಬೋನ್ಸಾಯ್ ಆಕೃತಿ ಇದಕ್ಕೆ ಕಾರಣ. ವೇದವ್ಯಾಸರು ಮೂವತ್ತು ಸಾವಿರ ಶ್ಲೋಕಗಳಲ್ಲಿ ಚಿತ್ರಿಸಿದ ದ್ರೌಪದಿಯನ್ನು ಐದು ಪ್ಯಾರಾಗಳಲ್ಲಿ ಬೇರೆ ರೀತಿ ಕೆತ್ತಿ ನಿಲ್ಲಿಸಬಹುದೆ ? ಹನಿಗವಿತೆಗಳು ನಕ್ಕು ಸುಮ್ಮನಾಗುವುದಕ್ಕಷ್ಟೇ ಯಾಕೆ ಸೀಮಿತವಾಗಿವೆ ? ಈ ಮುಂತಾದ ಪ್ರಶ್ನೆಗಳೂ ಇದರ ಜತೆಗೇ ಹುಟ್ಟುತ್ತವೆ. ಸವುಡು ಸಿಕ್ಕಿದರೆ, ಇದರ ಬಗ್ಗೆ ವಿಸ್ತಾರವಾಗಿ ಇನ್ನೊಮ್ಮೆ ಬರೆದೇನು

 1. sunaath / ಸೆಪ್ಟೆಂ 27 2008 12:34 ಅಪರಾಹ್ನ

  ತುಂಬ interesting ಆದಂತಹ ವಿಮರ್ಶಾ ನೋಟ.

 2. Vishalamathi N K / ಆಕ್ಟೋ 8 2008 4:01 ಅಪರಾಹ್ನ

  ಒಂದರಿಂದ ಹಿಡಿದು ನಾಲ್ಕೂ ವಿಮರ್ಶೆ ತುಂಬಾ ಸರಿಯಾಗಿದೆ

 3. ಡಿ.ಎಸ್.ರಾಮಸ್ವಾಮಿ / ನವೆಂ 8 2008 8:24 ಫೂರ್ವಾಹ್ನ

  ಪ್ರಿಯ ಹರೀಶ್ ಕೇರ,
  ಉದಯವಾಣಿಯ ಪೃಥ್ವಿ ’ಬರೆಯುವ ಕಷ್ಟ’ ಕಾಲಂಗೆ ನಿಮ್ಮಿಂದ ಬರೆಸಿದ್ದ ಉದ್ಘಾಟನೆ ನನ್ನ ಬರಹದ ಸಮಾರೋಪದ ನಂತರ ನಿಮ್ಮನ್ನು ಓದಿರಲಿಲ್ಲ. ನೀನಾಸಂ ನ ಅನುಭವ ಮೊನ್ನೆ ಎಲ್ಲೋ ಹಾಗೇ ಕಣ್ಣಾಡಿಸಿದ ನೆನಪು. ಭಾಮಿನಿಯ ಬಗ್ಗೆ ದಿವಿನಾದ ಮಾತಾಡಿದ್ದೀರಿ. ಅಲ್ಲಿ ಇಲ್ಲೆ ಬಿಡಿ ಬಿಡಿಯಾಗಿ ಚೇತನಾರನ್ನು ಓದಿಕೊಂಡಿರುವ ನನಗೂ ನೀವೆತ್ತಿದ ಪ್ರಶ್ನೆಗಳೇ ಕಾಡಿದ್ದವು. ಏನೇ ಹೇಳಿ ಈ ನಡುವೆ ಓದಿಗಿಂತ ಪೋಸುಗಳು, ಅನುಭವಕ್ಕಿಂತ ಕ್ಲೀಷೆಗಳು ಬರಹಸಾಮ್ರಾಜ್ಯವನ್ನಾಳುತ್ತಿವೆ. ನನ್ನ ಮೈಲ್ ಗೆ ಆಗೀಗ ಬರೆಯುತ್ತಿರೆ. ನಮಸ್ಕಾರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: