Skip to content
ಸೆಪ್ಟೆಂಬರ್ 24, 2008 / odubazar

1084 ನೇ ನಂಬರಿನ ಶವ

-ಸುನ0ದಾ ಪ್ರಕಾಶ ಕಡಮೆ

ಕಲ್ಕತ್ತೆಯಲ್ಲಿ ನಡೆದ – ಬಾ0ಗ್ಲಾದೇಶ ಮತ್ತು ಪಶ್ಚಿಮ ಬ0ಗಾಲ ವಿಮೋಚನೆಯ “ಮುಕ್ತಿದಶಕ” ಎ0ದೇ ಹೆಸರಾದ ಚಳವಳಿಯಲ್ಲಿ ತೊಡಗಿಕೊ0ಡು 1084 ನೇ ನ0ಬರಿನ ಶವವಾಗಿ ಹೋದ “ಬ್ರತಿ” ಎ0ಬ ಯುವಕನ ಕಥನವು ಮಹಾಶ್ವೇತಾದೇವಿಯವರ “ಹಜಾರ್ ಚೌರೇಶೀರ್ ಮಾ” ಕಾದ0ಬರಿಯಲ್ಲಿದೆ.

ಮಗ “ಬ್ರತಿ” ಹುಟ್ಟುವಾಗ ತಾಯಿ ಸುಜಾತಾ, ಒಬ್ಬಳೇ ಆಸ್ಪತ್ರೆಗೆ ಹೋಗಿ ಏಕಾ0ಗಿಯಾಗಿ ಹಡ್ದು, ಹಸುಗೂಸನ್ನೆತ್ತಿಕೊ0ಡು ಮನೆಗೆ ಬ0ದಿರುತ್ತಾಳೆ. ಮೊದಲು ಮೂರು ಮಕ್ಕಳು ಜನಿಸುವಾಗ ಇದ್ದ ಅವಳ ಅತ್ತೆ ಅದೇ ವೇಳೆಗೆ ಉದ್ದೇಶಪೂರ್ವಕ ಊರಿಗೆ ಹೋಗಿದ್ದಾಳೆ. ಈ ಭೂಮಿಗೆ ಶಿಶುಗಳನ್ನು ತರುವ ತನ್ನ ಗುರುತರ ಕಾರ್ಯದಲ್ಲಿ ಪ್ರೀತಿ – ವಿಶ್ವಾಸಗಳೇ ಇಲ್ಲದ ಈ ಪರಿಸರಕ್ಕೆ ಮುಗ್ಧ ಮಕ್ಕಳು ಬ0ದು ಬೀಳುವ ಬಗ್ಗೆ ಸುಜಾತಾಗೆ ಅ0ದಿನಿ0ದ ಆತ0ಕ ಹುಟ್ಟಲು ಪ್ರಾರ0ಭ.

“ಬ್ರತಿ ಅತಿ ಚಿಕ್ಕವನಿರುವಾಗಲೇ ತ0ದೆ ದಿವ್ಯನಾಥ ಚಟಜರ್ಿಯ ಆದೇಶದ0ತೆ ತಾಯಿಯಿ0ದ ಬೇರೆಯಾಗಿ ಮಲಗಲು ಅತಿ ಕಷ್ಟದಿ0ದ ರೂಢಿಸಿಕೊಳ್ಳುತ್ತಾನೆ. ಆಗ ಸುಜಾತಾಳ ಚಡಪಡಿಕೆ ಕಠಿಣ ಮನಸ್ಸುಳ್ಳ ದಿವ್ಯನಾಥನ ಒಳಗಣ್ಣಿಗೆ ಬೀಳುವುದಿಲ್ಲ. ಬ್ರತಿಗೆ ಆಶ್ಚರ್ಯ. ಅಣ್ಣ ಮತ್ತು ಇಬ್ಬರು ಅಕ್ಕ0ದಿರು ಅಪ್ಪನ ಕ್ಲೀಷೆಯೆನ್ನಿಸುವ ಶಿಸ್ತಿಗೆ ಹೊ0ದಿಕೊ0ಡು ಮುಖದಲ್ಲಿ ಅನವಶ್ಯಕ ಗಾ0ಭೀರ್ಯ ಮತ್ತು ವೇಷಭೂಷಣಗಳಲ್ಲಿ ಸಾಮ್ಯ ಕಾಯ್ದುಕೊ0ಡು ಸ್ವ0ತದ ವ್ಯಕ್ತಿತ್ವವನ್ನೇ ಕಳಕೊ0ಡವರ0ತಿರುತ್ತಾರೆ. ಆಗೆಲ್ಲಾ ಬ್ರತಿ ಒ0ಟಿಯಾಗಿ ತನ್ನ ಕೋಣೆಯ ಕಿಟಕಿಯ ಹೊರ ನೋಡುತ್ತ ಸಾವಿನ ಬಗ್ಗೆ ಬರೆದ ಕವನಗಳನ್ನು ರೋಮಾ0ಚನದಿ0ದ ಓದುತ್ತಿರುತ್ತಾನೆ. ತ0ದೆ ದಿವ್ಯನಾಥನೆ0ದರೆ ಅವನಿಗೆ ಎಲ್ಲಿಲ್ಲದ ಭಯ. ತ0ದೆಯ ಹಿ0ದೆ ಆತ ಅವನನ್ನು “ಬಾಸ್” ಎ0ದೇ ಸ0ಬೋಧಿಸುವುದು.

ದಿವ್ಯನಾಥ ತನ್ನ ಟೈಪಿಸ್ಟಳೊ0ದಿಗೆ ಅಕ್ರಮ ಸ0ಬಧ ಹೊ0ದಿದ್ದರೂ ಸುಜಾತಾ ಮೌನವಾಗಿರಬೇಕು. ಅ0ಥ ಭಿನ್ನಾಭಿಪ್ರಾಯದಲ್ಲೂ ದಿವ್ಯನಾಥ ಹೆ0ಡತಿಯ ಪಕ್ಕದಲ್ಲೇ ಮಲಗಬೇಕು. ತನಗೆ ಆಥರ್ಿಕ ಮುಗ್ಗಟ್ಟು ಎದುರಾದಾಗ ಹೆ0ಡತಿಯನ್ನು ಒ0ದು ಬ್ಯಾ0ಕಿನಲ್ಲಿ ನೌಕರಿ ಹಿಡಿಯಲು ಪ್ರೇರೇಪಿಸಿ, ಹಣದ ಅಗತ್ಯ ತೀರಿದ ನ0ತರ ಕೆಲಸ ಬಿಡಲು ಒತ್ತಾಯಿಸುತ್ತಾನೆ. ಸುಜಾತಾ ಕೆಲಸದಿ0ದ ಸಿಗುವ ನೆಮ್ಮದಿಗಾಗಿ ಅವನ ಮಾತಿಗೆ ಒಪ್ಪುವುದಿಲ್ಲ. ಆಗಿನಿ0ದ ವೈಮನಸ್ಯ ಶುರು. “ಬ್ರತಿ” ಯುವಕನಾಗುತ್ತಾನೆ. ತಾಯಿಯ ದಿನದ ಒ0ದು ಇಷ್ಟವಾದ ಕೆಲಸವೆ0ದರೆ ತನ್ನ ಕಿರಿಯ ಮಗನೊ0ದಿಗೆ ಬಿಡುವು ಮಾಡಿಕೊ0ಡು ಹರಟುವುದು. “ಬ್ರತಿ” ತನ್ನ ತಾಯಿಯ0ತೆಯೇ ಕುಟು0ಬದ ಆಪ್ತ ಸ0ವಾದಕ್ಕೆ ಮಿಡಿಯುವ, ಯಾರನ್ನಾದರೂ ಪ್ರೀತಿಸಬೇಕು, ಗೌರವಿಸಬೇಕು ಮತ್ತು ಎಲ್ಲರ ಪ್ರೀತಿಗೆ ತಾನೂ ಒಳಗಾಗಬೇಕು ಎ0ಬ ನಿರ0ತರ ಹ0ಬಲದವನು.

ಆಗಾಗ ಹೊಟ್ಟೆ ನೋವಿನಿ0ದ ನರಳುವ ತಾಯಿಗೆ ದೊಡ್ಡ ಮಕ್ಕಳು ಕಣ್ಣಲ್ಲಿ ಕಣ್ಣಿಟ್ಟು ಸಹ ನೋಡದೇ ಕರ್ತವ್ಯವೆ0ಬ0ತೆ ಲಿ0ಬು ಶರಬತ್ತು ಮಾಡಿ ಕೊಡುತ್ತಾರೆ. ಸಣ್ಣ ಮಗ ಬ್ರತಿ ಮಾತ್ರ ತನ್ನ ಶಟರ್ಿನ ಗು0ಡಿ ರಿಪೇರಿ ಮಾಡಿಲ್ಲವೆ0ದೊ, ಬೆಳಿಗ್ಗೆಯ ಚಳಿಗೆ ಅಮ್ಮ ಬೆಚ್ಚನೆ ಶಾಲು ಹೊದ್ದುಕೊ0ಡಿಲ್ಲವೆ0ದೊ ರೇಗುವುದು ಸುಜಾತಾಗೆ ಹಿತವಾಗಿರುತ್ತದೆ. ಮನೆ ಮ0ದಿಯಿ0ದ ಕೆಲಸಕ್ಕೆ ಬಾರದವನೆ0ದು ಹಣೆಪಟ್ಟಿ ಹೊತ್ತ, ಅಮ್ಮನ ಮುದ್ದು ಮಗನೆ0ದೇ ಹೀಯಾಳಿಸಲ್ಪಡುವ “ಬ್ರತಿ”, ಏನು ಮಾಡುತ್ತಿದ್ದೇನೆ0ದು ಯಾರಿಗೂ ತಿಳಿಸದೇ ತನ್ನೆಲ್ಲ ಶೌರ್ಯ, ಧೈರ್ಯಗಳನ್ನು ಸಾವಿನಲ್ಲಿ ತೋರಿಸಿ ಬಿಡುತ್ತಾನೆ. ಬಾ0ಗ್ಲಾ ದೇಶಕ್ಕೆ ಸಹಾನುಭೂತಿ ಹಾಗೂ ಬೆ0ಬಲ ಸೂಚಿಸುವ ನೆಪದಲ್ಲಿ ಪಶ್ಚಿಮ ಬ0ಗಾಲವನ್ನು ಅಲ್ಲೋಲ ಕಲ್ಲೋಲ ಮಾಡಿದ ಬರ್ಬರತೆ – ಕ್ರೌರ್ಯಗಳ ಚಿತ್ರಗಳು ಕಣ್ಣಿಗೆ ಕಟ್ಟಿ ನಿಲ್ಲುತ್ತವೆ. ನಿರ್ದಯವಾದ ರಾಜಕೀಯ ವರ್ತನೆಗಳಲ್ಲಿ ಪ್ರತಿಭಟನೆಗಳನ್ನೊಡ್ಡುವ ಸಾರ್ವಜನಿಕ ಚಳುವಳಿಗಳೂ, ನಡೆದು ಹೋಗುವ ಹತ್ಯಾಕಾ0ಡಗಳೂ ಹೊರ ಕಣ್ಣುಗಳಿಗೆ ಕಾಣದೇ ಉಳಿದು ಹೋಗುವುದು ತೀರಾ ಅಮಾನವೀಯವೆನಿಸುತ್ತದೆ.

ಇ0ಥ ಹತ್ಯೆಗೆ ಹೆಚ್ಚಾಗಿ ಬಲಿಯಾಗುವವರು “ಬ್ರತಿ” ಯ0ತ ತರುಣರು. ತನ್ನ ಮುದ್ದು ಮಗನ ಮುಖವನ್ನು ಕಣ್ತು0ಬಾ ನೋಡಿ ಹಣೆಗೊ0ದು ಮುತ್ತು ಕೊಟ್ಟು ಹಿ0ತಿರುಗಬೇಕೆ0ದಿರುವ ಸುಜಾತಾ, ಮುಖವೇ ಇಲ್ಲದ0ತೆ ಬರ್ಬರವಾಗಿ ಹತ್ಯೆಗೀಡಾದ ಮಗನ ಬೆರಳು, ನೀಲಿ ಶಟರ್ು, ತಲೆಗೂದಲನ್ನು ನೋಡಿ ಗುರುತಿಸಬೇಕಾದ ಪರಿಸ್ಥಿತಿ. ಕೊ0ಚ ಅಶಿಸ್ತು ರೂಢಿಸಿಕೊ0ಡಿದ್ದರೂ ಮಾನವೀಯ ಸ0ಬ0ಧಗಳ ಕೊ0ಡಿಯ0ತಿರುವ ಮಗ ಬ್ರತಿ ನಿಃಸ್ವಾರ್ಥ ಸಾವು ಪಡೆದಿದ್ದು ತಾಯಿಯ ಮನಸ್ಸಿಗೆ ಒ0ದು ಕ್ಷಣ ಹೆಮ್ಮೆಯಾಗಿ ಕ0ಡರೂ, ತ0ದೆ ಆಗಲೇ ಮಗನನ್ನು ದ್ರೋಹಿ ಎ0ಬ0ತೆ ಕಡೆಗಣಿಸಿದ್ದು ಸಹಿಸಲಸಾಧ್ಯವಾಗಿರುತ್ತದೆ.

ಮಗ ಸತ್ತು ಹೋದ ಮರುದಿನ ವೃತ್ತ ಪತ್ರಿಕೆಗಳಲ್ಲಿ ಎಲ್ಲಿಯೂ ಬ್ರತಿಯ ಹೆಸರು ಅಚ್ಚಾಗದ0ತೆ ನೋಡಿಕೊಳ್ಳುವಲ್ಲಿ ತನ್ನ ಪ್ರಭಾವ ಬಳಸಿ ದಿವ್ಯನಾಥ ಯಶಸ್ವಿಯಾಗಿರುತ್ತಾನೆ. ಮಗನ ಶವವನ್ನು ನೋಡಲು ಹೋಗುವುದಾಗಿ ಹಠ ಮಾಡುತ್ತಿದ್ದ ಸುಜಾತಾಗೆ ತನ್ನ ಕಾರನ್ನೂ ಬಳಸಕೂಡದೆ0ದು ಆಜ್ಞಾಪಿಸುತ್ತಾನೆ. ಇ0ಥದೊ0ದು ವಿವಾದಾತ್ಮಕ ಸಾವಿಗೆ ಮಗ ತುತ್ತಾದನೆ0ದು ಹೇಳಿಕೊಳ್ಳುವುದು ಅವನಿಗೆ ನಾಚಿಕೆಯ ಹಾಗು ಸ್ವಪ್ರತಿಷ್ಠೆಗೆ ಅಡ್ಡಿಯಾಗುವ ವಿಷಯವಾಗಿರುತ್ತದೆ. ಆತ ಸಭ್ಯ ಗೃಹಸ್ಥ ಹಾಗೂ ಸಜ್ಜನ ನಾಗರಿಕನೆ0ಬ ವತರ್ುಳದಲ್ಲಿ ಬ0ಧಿಯಾದವನ0ತೆ ವತರ್ಿಸುತ್ತಾನೆ.

ನ0ತರ ಮನೆಯಲ್ಲಿ ಬ್ರತಿಯ ರೇನ್ಕೋಟನ್ನು ನಾಶ ಮಾಡಿ ಅವನ ಇರುವಿನ ಕುರುಹನ್ನೇ ಅಳಿಸಿ ಹಾಕಲು ಪ್ರಯತ್ನಿಸುವುದು ಸುಜಾತಾಗೆ ಇನ್ನಷ್ಟು ವೇದನೆಯನ್ನು ತರುತ್ತದೆ. ಸಭ್ಯರೆ0ಬುವರ ಜಗತ್ತಿನ ಸೋಗು, ವಿಕಾರ, ಪೊಳ್ಳುತನ ಮತ್ತು ಅಮಾನವೀಯ ಮುಖಗಳನ್ನು ಹೇಳುವ ಈ ಕಥೆಯಲ್ಲಿ ನಮ್ಮ ದಾರಿಯುದ್ದಕ್ಕೂ ಜೊತೆಯಾಗಿರುವವರು ಬ್ರತಿ ಮತ್ತು ಆತನ ತಾಯಿ!
‘ಹಂಗಾಮ’ದಿಂದ ಹೆಕ್ಕಿದ್ದು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: