Skip to content
ಅಕ್ಟೋಬರ್ 2, 2008 / odubazar

ಹಾಯ್ ‘ನೀಲು’….

ಲಂಕೇಶರ ನೀಲು ಮಾಡಿದ ಮೋಡಿಗೆ ಒಂದು ಪುಟ್ಟ ಸಾಕ್ಷಿ ಇಲ್ಲಿದೆ. ನೀಲುವಿನಿಂದ ಬೆರಗಾದ ಬೆಂಗಳೂರು ವಿಶ್ವವಿದ್ಯಾಲಯದ ಹುಡುಗರು ‘ನೀಲು- ಕ್ಯಾಂಪಸ್ ಕಾವ್ಯ’ ಎಂಬ ಕವಿತೆಗಳ ಸಂಕಲನ ಹೊರತಂದಿದ್ದಾರೆ.


ಹೊಸ ಸ್ಪರ್ಶ, ಹೊಸ ನೋಟ ಇಲ್ಲಿ ಎಲ್ಲವೂ ಹೊಸತು ಹೊಸತು..

ಹದಿಹರೆಯದಿಂದ ತಾರುಣ್ಯಕ್ಕೆ ಹೊರಳಿಕೊಳ್ಳುವ ಘಟ್ಟದ ಸುಖ, ಚಡಪಡಿಕೆಗಳಲ್ಲಿರುವ ಕವಿ-ಕವಯತ್ರಿಯರ ಸ್ವಚ್ಚಂದ ಆರ್ಕೆಸ್ಟ್ರಾ ಇದು. ಈ ಕ್ಯಾಂಪಸ್ ಸ್ವರಮೇಳದವರು ‘ಕವಿತೆ ಎನ್ನುವುದು ಕುಶಲ ಕಲೆ ಕೂಡ’ ಎಂಬ ವಾದಕ್ಕೆ ಅಷ್ಟೇನೂ ಸೂಪ್ಪು ಹಾಕಿದವರಲ್ಲ; ಬದಲಿಗೆ ನೆಲ ಹಾಗೂ ದೇಶ ಕಾಣದ ಮತ್ತಿನಲ್ಲಿ ‘ನಾನು ಕಂಡದ್ದು ಹೀಗೆ, ಇದು ನನ್ನ ಸತ್ಯ’ ಎಂಬ ಸಹಜ ವಿಶ್ವಾಸದಲ್ಲಿ ಶಬ್ದಗಳ ಜೊತೆ ಹೊಡೆದಾಡಿದವರು. ಲಂಕೇಶರ ನಿಲುವನ್ನು ಗುರು ಮತ್ತು ಗುರಿಯಾಗಿ ಸ್ವೀಕರಿಸಿರುವ ಈ ಹುಡುಗ ಹುಡುಗಿಯರು ಅಲ್ಲಲ್ಲಿ ಪರಿಣಾಮಕಾರಿ ರೂಪಕವನ್ನು ಸೃಷ್ಟಿಸಿದವರು.

ಈ ರೂಪಕಸೃಷ್ಟಿಯ  ಸೆಣಸಾಟದಲ್ಲಿ ಗೋವಿಂದರಾಜು, ಮಂಜುನಾರಯನ್, ಅರ್ಪಿತಾ ಮೇಗರವಳ್ಳಿ, ಅಬ್ದುಲ್ ಖಾಲಾಕ್, ಮುರಳಿಮೋಹನ್ ಕಾಟಿ, ರಾಮಕೃಷ್ಣ.ಶಿವಕುಮಾರ್ ಥರದವರು ಎಲ್ಲೋ ಮರದ ತುದಿಯಲ್ಲಿ ಕಂಡೂ ಕಾಣದಂತಿರುವ ಕವಿತೆಯೆಂಬ ಹಣ್ಣನ್ನು ಎಗರಿ ಮುಟ್ಟಲೆತ್ನಿಸುತ್ತಿರುವ ದೃಶ್ಯ ರೋಮಾಂಚಕಾರಿಯಾಗಿದೆ.

-ನಟರಾಜ್ ಹುಳಿಯಾರ್

+++

ನೀಲು ಕ್ಯಾಂಪಸ್ ಕಾವ್ಯ

ಪುಟ: ೪೦ ಬೆಲೆ: ೨೦
ನೀಲು ಸಾಹಿತ್ಯ ಬಳಗ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು

ಸಂಪರ್ಕ; nerudanarayan@yahoo.com

khalidhrr@gmail.com

cell: 97312 16828

99802 83968

93430 97613

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: