Skip to content
ಜನವರಿ 24, 2010 / odubazar

ಕ್ಯೂಬಾ-ಮನಸ್ಸನ್ನು ಕಲಕಿಬಿಟ್ಟಿದೆ

-ಜಯಂತಿ ಮನೋಹರ್

ಮೇ ಫ್ಲವರ್ ನಲ್ಲಿ ಮೂರುದಿನಗಳ ಹಿಂದೆ, ಜಿ.ಎನ್.ಮೋಹನ್ ಕೈಯ್ಯಲ್ಲಿಟ್ಟ ಅವರ `ಕ್ಯೂಬಾ ಹಾಡು” ಈ ಪರಿ ಕಾಡುತ್ತದೆ ಎಂದು ತಿಳಿದಿರಲಿಲ್ಲ.  ತಿಳಿದ ಮೇಲೆ ಇಷ್ಟೊಂದು ದಿನಗಳು ತಿಳಿಯದೇ ಹೋಯಿತಲ್ಲಾ ಎಂದೂ ಕಾಡುವ ಅಲ್ಲಿನ ದಟ್ಟ ಚಿತ್ರಣ ಮನಸ್ಸನ್ನು ಕಲಕಿಬಿಟ್ಟಿದೆ.

ಕಲಾಕ್ಷೇತ್ರದಲ್ಲಿ ದಶಕಗಳ ಹಿಂದೆ ನೋಡಿದ್ದ ಚೆ ಗೆವಾರನ ನಾಟಕದ ಗಟ್ಟಿ ನೆನಪುಗಳೊಂದಿಗೆ ಆಗೊಮ್ಮೆ ಈಗೊಮ್ಮೆ ಕಣ್ಣಿಗೆ-ಕಿವಿಗೆ ಬಿದ್ದ ಸಂಗತಿಗಳು ಸೇರಿಕೊಂಡು ಕ್ಯೂಬಾದತ್ತ ಮೂಡಿಸಿದ್ದ ಬೆರಗನ್ನು ಹಿಂದಿಟ್ಟುಗೊಂಡು, ಕ್ಯೂಬಾ ಹಾಡಿನೊಳಗೆ ಹೋಗಿದ್ದೊಂದೇ ಗೊತ್ತು .. ಇನ್ನೂ ಹೊರಬರಲಾಗಿಲ್ಲ.  ಇನ್ನೊಂದಷ್ಟು ತಿಳಿಯುವ ಒತ್ತಡದಿಂದ ಫೋನಾಯಿಸಿದರೆ, ಕಾಲಿಗೆ ಚಕ್ರಕಟ್ಟಿಕೊಂಡು ತಿರುಗುವ ಮೋಹನ್ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ!

ಕ್ಯೂಬಾ ಎಂದೊಡನೆ ಮನಸ್ಸನ್ನು ಆವರಿಸುವುದು ಚೆ ಗೆವಾರ ಹಾಗೂ ಫಿಡೆಲ್ ಕ್ಯಾಸ್ಟ್ರೋ.  ‘ಚೆ ‘ ಮಿಂಚಿನಂತೆ ಬಂದು ಗುಡುಗು ಸಿಡಿಲುಗಳನ್ನು ಸುರಿಸಿ ಒಮ್ಮೆಗೇ ಮರೆಯಾಗಿಬಿಟ್ಟ.  ಕ್ಯಾಸ್ಟ್ರೋ ಎಂಬ ಗಟ್ಟಿ ಗೋಡೆ ದೊಡ್ಡಣ್ಣನ ಕಣ್ಣು ಕುಕ್ಕುತ್ತಾ ನಮ್ಮೊಂದಿಗಿದೆ ಎನ್ನುವುದು ಸ್ವಲ್ಪ ನೆಮ್ಮದಿ ತರುವ ಸಂಗತಿ.  ಹಿಂದೊಮ್ಮೆ, ಮಹಾ ವಿಜ್ಞಾನಿ, ಐನ್ ಸ್ಟೈನ್, ಮಹಾತ್ಮಾ ಗಾಂಧಿಯ ಬಗ್ಗೆ ಹೇಳುತ್ತಾ, ‘`ಇಂತಹ ಶಾಂತಿದೂತನೊಬ್ಬ ನಮ್ಮ ನಡುವೆ ಇದ್ದ ಎನ್ನುವುದೇ  ಮನುಕುಲದ ಅಚ್ಚರಿ” ಎಂದಿದ್ದ ಮಾತನ್ನು ಈಗ ಕ್ಯೂಬಾದ ಈ ಮಾಂತ್ರಿಕ ನಾಯಕರಿಗೆ ಹೇಳಬೇಕು ಎನಿಸುತ್ತದೆ. ಕೈಯಲ್ಲಿ ಕೋವಿ ಹಿಡಿದು ನಿಂತವರು ವಿದ್ಯೆ, ವೈದ್ಯಕೀಯ, ವೈಜ್ಞಾನಿಕ ರಂಗಗಳಲ್ಲಿ ಸಾಧಿಸಿರುವ ಅಗಾಧ ಪ್ರಗತಿ ಅವರ ನಾಡಿಗೆ ಶಾಂತಿಯನ್ನು ಕೊಟ್ಟಿರುವಾಗ, ಅವರು ಶಾಂತಿದೂತರಲ್ಲದೆ ಮತ್ತೇನು ? ನಮ್ಮನ್ನು ಶೋಷಿಸುವವರಿಗೆ ನಮ್ಮ ಶಕ್ತಿಯನ್ನು ತೋರಿಸಿದ್ದಲ್ಲದೆ ಶಾಂತಿಯನ್ನು ಅರಸುವುದು ವ್ಯರ್ಥ ಪ್ರಯತ್ನ.

ಹಲವು ಹತ್ತು ಜಿಜ್ಞಾಸೆಗಳನ್ನು ಬಿತ್ತುವ ಜಿ.ಎನ್.ಮೋಹನ್ ಅವರ ‘`ನನ್ನೊಳಗಿನ ಹಾಡು ಕ್ಯೂಬಾ” ಅಲ್ಲಿನ ಜನರ ನೋವುಗಳನ್ನು ಬಿಚ್ಚಿಡುವಂತೆಯೇ, ತನ್ನ ಜೀವಿತಾವಧಿ ಯಲ್ಲಿಯೂ  ದಂತಕಥೆಯಾಗಿರುವ ಫಿಡೆಲ್ ಕ್ಯಾಸ್ಟ್ರೋ ಅಂತಹ ನಾಯಕ ಇಲ್ಲಿ ಇಲ್ಲವಲ್ಲ ಎನ್ನುವ ಕೊರಗನ್ನು ಹೆಚ್ಚಿಸುತ್ತದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: