Skip to content
ಜನವರಿ 27, 2010 / odubazar

ಮಮತಾ ಸಾಗರ್ : ನಾನು ನನ್ನಮ್ಮನ ಹಾಗೆ

2229907409_7a7a99a0f9

ಎಲ್ಲರಿಗೂ ನಮಸ್ಕಾರ. ನಾನು ಯಾಕೆ ಪದ್ಯವನ್ನು ಬರೆಯುತ್ತೇನೆ ಅಂತ ಸ್ಪಲ್ಪ ಹೇಳಬೇಕೆಂದು ಕೇಳಿದರು. ಅದಕ್ಕೆ ಮುಂಚೆ ಒಂದು ಪದ್ಯದಿಂದ ಶುರು ಮಾಡುತ್ತೇನೆ.

ಹೀಗೆ ಹಾಳೆಯ ಮೇಲೆ ಹಾಡು

ಹಚ್ಚೆ ಹೊಯಿದ ಚಿತ್ತಾರದ ಹಾಗೆ ಹಾಡು

ಹಾಳೆಯಿಂದೆದ್ದ ಶಬ್ದ

ಅದರ ಹಿಂದೊಂದು ಶಬ್ದ

ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೂರಿಬಿಟ್ಟರೆ

ಹಾಡು

ಹಾಡು ನಿಶ್ಯಬ್ದ ಈಗ

ಕನ್ನಡದ  ಶಬ್ದಾರ್ಥ ಸಂಬಂಧಗಳು ಕಿವಿಗೆ  ಕೇಳುವಂತಹ ಶಬ್ದ ಮತ್ತು  ಪದದ ಶಬ್ದ ಮತ್ತು ಅದರ  ಅರ್ಥ ಈ ಸಂಬಂಧಗಳಿವೆಯಲ್ಲ ಅದು ಕನ್ನಡದ ಭಾಷೆಯ ಜೊತೆಗೆ, ಕನ್ನಡದ ಕಾವ್ಯದ ಜೊತೆಗೆ ಇಟ್ಟುಕೊಂಡಿರುವಂತಹ ಸಂಬಂಧ. ಅದು ನಮಗೆ ಏನು ಹೇಳುತ್ತದೆ ಎನ್ನುವಂತಹ ಕುತೂಹಲದಿಂದ ನಾನು ಪದ್ಯ ಬರೆಯುವುದನ್ನು ಶುರುಮಾಡಿದೆ ಎಂದು ಅನಿಸುತ್ತಿದೆ. ಕಾವ್ಯಕ್ಕೆ ಒಂದು ಕಾರಣ ಬೇಕೇ ಬೇಕು ಎಂದು ಹೇಳುತ್ತಾರೆ. ಅದನ್ನು ನಾನು ನಂಬುತ್ತೇನೆ. ಈ ಕಾವ್ಯದ ಕಾರಣಗಳು ಕಾಲ್ಪನಿಕ ಮತ್ತು ಕಾಲಕ್ರಮೇಣ ಅವು ಬದಲಾಗುತ್ತವೆ ಅನ್ನುವಂತಹುದನ್ನು ನಾನು ನಂಬುತ್ತೇನೆ. ಈ ಕವಿತೆ ಕಟ್ಟುವ ಪ್ರಕ್ರಿಯೆಯ ಒಳಗೆ ಸುಮಾರಷ್ಟು ಪೂರ್ವಾಗ್ರಹಗಳಿವೆ. ಉದಾ: “ಪುಟ್ಟ ಪುಟ್ಟ ಮಕ್ಕಳು ಹೇಳಿದ ಚಿಕ್ಕ ಚಿಕ್ಕ ನುಡಿಗಳಿವೆಯಲ್ಲ”, “ಹೆಂಗಸರ ಬಾಯಲ್ಲಿ ಮಾತು ನಿಲ್ಲಲ್ಲ “ ಒಂದು ರೀತಿನಲ್ಲಿ ಈ ತರಹ ಪೂರ್ವಾಗ್ರಹಗಳು ಎಷ್ಟರಮಟ್ಟಿಗೆ ಸತ್ಯ? ನಾವು ಪೂರ್ವಾಗ್ರಹಗಳನ್ನು ನಂಬಿದ್ದೀವಾ ಎನ್ನುವ ಅನುಮಾನಗಳು ಎಲ್ಲರಿಗೂ ಒಂದಲ್ಲ ಒಂದು ಕಾಲಘಟ್ಟದಲ್ಲಿ ಬಂದೇ ಬರುತ್ತದೆ ಇಂತಹ ನಂಬಿಕೆ ಅನುಮಾನಗಳ ಮಧ್ಯೆ ಕವಿತೆಯನ್ನು ನಾನು ಬರೆಯುತ್ತಾ ಇದ್ದೀನಿ. ಬರೆಯಲಿಕ್ಕೆ ಆರಂಭಿಸಿದ್ದೀನಿ. ಎಲ್ಲದಕ್ಕಿಂತ ಹೆಚ್ಚಾಗಿ ನನಗೆ ಕವಿತೆ ಬರಿತಾ ಬರೀತಾ ರಿಯಲೈಸ್ ಆಗಿರುವುದು ಎಂದರೆ, ಪೂರ್ವಾಗ್ರಹಗಳು ಒಂದೇ ಆದರೆ ಸತ್ಯ ಒಂದೇ ಅಲ್ಲ.

ನಮ್ಮ ನಮ್ಮ ನಂಬಿಕೆಗಳನ್ನು ಅವಲಂಬಿಸಿ ನಮ್ಮ ನಮ್ಮ ಸತ್ಯಗಳು ಬೇರೇ ಇರುತ್ತವೆ. ಆದ್ದರಿಂದ ನಾನು ಒಬ್ಬ ಕನ್ನಡದ ಕವಿಯಾಗಿ ಕನ್ನಡದ ಭಾಷೆ ಮತ್ತು ಸಂಸ್ಕೃತಿಯಲ್ಲಿ ಬೆಳೆದ ಹುಡುಗಿಯಾಗಿ, ಕನ್ನಡದಿಂದ ಬೇರೆ ಊರು ದೇಶಗಳಿಗೆ ಹೋಗಿ ಬಂದಂತಹ ವ್ಯಕ್ತಿಯಾಗಿ ಮತ್ತು ಕನ್ನಡದ ಪೂರ್ವಾಗ್ರಹಗಳನ್ನು ಒಡೆಯುವಂತಹ ಪ್ರಯತ್ನಗಳನ್ನು ಕೊಡುವ ಕವಿಯಾಗಿ, ಕನ್ನಡದ ಕವಿತೆಗಳನ್ನು ಬರೆಯಲು ಇಷ್ಟಪಡ್ತೀನಿ ಅಂತ  ಅಂದುಕೊಂಡಿದ್ದೀನಿ. ಈಗ ನನ್ನ ಕೆಲವು ಕವಿತೆಗಳನ್ನು ಓದ್ತೀನಿ.

ಅಮ್ಮನ ಹಾಗೆ

ನಾನು ನನ್ನಮ್ಮನ ಹಾಗೆ

ಪೀಚು ದೇಹ ಎಲುಬು ಕಾಣುವ ಕೈ

ಕಣ್ಣ ಕೆಳಗೆ ಹರಡಿದ ಕಪ್ಪು

ಒಳಗೆ ಹೊರೆ ಹೊರೆ ದುಃಖ

ನಾನು ನನ್ನಮ್ಮನ ಹಾಗೆ

ಒಳಗೆ ಹೊರೆ ಹೊರೆ ದುಃಖ ಹೊತ್ತ

ಎದೆ ಭಾರ ಹೊರಲಾರದ ಚಿಂತೆ ಮನಸ್ಸಿಗೆ

ಮೇಲೊಂದು ಮುಗುಳ್ನಗೆ

ನಾನು ನನ್ನಮ್ಮನ ಹಾಗೆ

ನನ್ನ ಕಣ್ಣೊಳಗೆ ಅವಳ ಕಣ್ಣೀರು.

Advertisements
  1. ಪುರುಷೋತ್ತಮ / ಫೆಬ್ರ 3 2010 10:48 ಅಪರಾಹ್ನ

    ತುಂಬಾ ಚೆನ್ನಾಗಿದೆ…..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: