Skip to content
ಫೆಬ್ರವರಿ 24, 2010 / odubazar

ಮಳೆಯಿಂದ ತೋಯ್ದಿದೆ ತೋಳು!

ಶಾಸ್ತ್ರೀಯ ಜಪಾನ್ ಕಾವ್ಯ- ತಂಕಾ

-ಜಯದೇವ ಪ್ರಸಾದ ಮೊಳೆಯಾರ

ಪ್ರಾಯಶಃ, ಜಪಾನಿನ ಶಾಸ್ತ್ರೀಯ ಕಾವ್ಯ ಇತಿಹಾಸದಲ್ಲೇ ಪುರಾತನ ಗ್ರಂಥವೆನ್ನಬಹುದಾದ ‘ಹ್ಯಾಕು-ನಿನ್-ಇಶ್ಶು’ (ನೂರು ಜನರ ನೂರು ಪದ್ಯಗಳು) ಗ್ರಂಥವು ಸುಮಾರು ಕ್ರಿ.ಶ 1235 ರಲ್ಲಿ ಸದೈಯ್ಯೇ ಫéುಜಿವಾರ ಎಂಬ ಮಹಾಕವಿಯಿಂದ ಸಂಪಾದಿಸಲ್ಪಟ್ಟಿತ್ತು. ಇದು ಇಂಗ್ಲಿಷ್ ಭಾಷೆಗೆ ಪ್ರಪ್ರಥಮವಾಗಿ ತಜರ್ುಮೆಗೊಂಡದ್ದು 1909 ರಲ್ಲಿ- ಇಂದಿಗೆ ಸರೀ 100 ವರ್ಷಗಳ ಹಿಂದೆ-ವಿಲಿಯಮ್ ಪೋರ್ಟರ್ ಎಂಬ ಮಹಾನುಭಾವನ ಕಠಿಣ ಪರಿಶ್ರಮದ ಫಲವಾಗಿ.

ಈ ಪ್ರಾಚೀನ ಹೊತ್ತಿಗೆಯಲ್ಲಿ ಫéುಜಿವಾರ ಅವರು ತನ್ನದೂ ಸೇರಿಸಿ ಒಟ್ಟು 100 ಕವಿಗಳ ಒಂದೊಂದು ಪ್ರಾತಿನಿಧಿಕ ಪದ್ಯಗಳನ್ನು ಕ್ರಿ.ಶ 1235 ರಲ್ಲಿ ಈ ಗ್ರಂಥವಾಗಿ ಪ್ರಕಟಿಸಿದ್ದಾನೆ. ಇದೊಂದು ಅತಿ ವಿಶಿಷ್ಟವಾದ ಸಂಪಾದಿತ ಕೃತಿ ಎಂದೇ ಹೇಳಬೇಕು. ಇದರಲ್ಲಿ ಕ್ರಿ.ಶ 670 ರಲ್ಲಿ ಅಂದರೆ 7ನೇ ಶತಮಾನದಿಂದ ಆರಂಭಗೊಂಡು ಕ್ರಿ.ಶ 1235 ರಲ್ಲಿ ಅಂದರೆ 13ನೆ ಶತಮಾನದ ವರೆಗಿನ ಸುಮಾರು 565 ವರ್ಷಗಳ ಕಾಲಘಟ್ಟದ ಕವನಗಳು ಸೇರಿವೆ. ಒಂದೊಂದು ಕವನಕ್ಕೂ ಒಂದೊಂದು ಆಕರ್ಷಕ ರೇಖಾಚಿತ್ರ ಇದೆ. ಅಷ್ಟು ಪುರಾತನವಾದರೂ ಇದು ಇಂದಿಗೂ ಜಪಾನಿನಲ್ಲಿ ಪ್ರಚಲಿತವಾಗಿ ಸಾಮಾನ್ಯರ ಓದಿನ ಒಂದು ಅವಿಭಾಜ್ಯ ಅಂಗವಾಗಿದೆ ಅಲ್ಲದೆ, ಅವರ ಜೀವನದ ಮಧುರ ಕ್ಷಣಗಳೊಂದಿಗೆ, ಹಬ್ಬ ಹರಿದಿನಗಳೊಂದಿಗೆ, ಆಟ-ಪಾಠಗಳೊಂದಿಗೆ ಹಾಸುಹೊಕ್ಕಾಗಿದೆ. ಇವು ಜಗತ್ತಿನ ಎಲ್ಲೆಡೆ ಭಾಷಾಂತರಗೊಂಡು ಶಾಸ್ತ್ರೀಯ ಜಪಾನೀ ಕಾವ್ಯಕ್ಕೆ ಒಂದು ಪ್ರತೀಕವಾಗಿದೆ.

ಈ ಹೊತ್ತಿಗೆಯಲ್ಲಿರುವ ಎಲ್ಲಾ ಪದ್ಯಗಳೂ ‘ತಂಕಾ’ ಎಂದು ಕರೆಯಲ್ಪಡುವ ಈ ಕಾವ್ಯ ಪ್ರಕಾರದ್ದು. ತಂಕಾ ಪದ್ಯಗಳು ಗಾತ್ರದಲ್ಲಿ ಚಿಕ್ಕವು. ಬರೇ 5 ಗೆರೆಗಳ 5-7-5-7-7 ರಂತೆ ಒಟ್ಟು 31 ಮಾತ್ರೆಗಳುಳ್ಳ ಇವು ಹಾಯ್ಕುಗಳಲ್ಲ – ಹಾಯ್ಕುಗಳಲ್ಲಿ 5-7-5 ಮಾತ್ರೆಗಳಂತೆ ಒಟ್ಟು 17 ಮಾತ್ರೆಗಳು ಇರುತ್ತವೆ. ತಂಕಾ ಪ್ರಕಾರವು ಹಾಯ್ಕುಗಳಿಂದಲೂ ಪುರಾತನವಾದದ್ದು, ತಂಕಾ ಸುಮಾರು 1300 ವರ್ಷಗಳಷ್ಟು ಹಳೇದ್ದಾದರೆ ಹಾಯ್ಕುಗಳು ಬರೇ 300 ವರ್ಷಗಳಷ್ಟೇ ಹಳೇದು. ತಂಕಾಗಳು ಭಾವನಾತ್ಮಕವಾಗಿ, ಓದುಗನ ಕಲ್ಪನೆಗೆ ಗರಿಕಟ್ಟುವಂತೆ ಇರುತ್ತವಾದರೆ ಹಾಯ್ಕುಗಳು ಅನುಭವಜನ್ಯವಾದ, ಖಚಿತವಾದ ಚಿತ್ರಗಳನ್ನು ನೇರವಾಗಿ ಮನದಲ್ಲಿ ಮೂಡಿಸಿ ಓದುಗನನ್ನು ತಾತ್ವಿಕ/ಜéೆನ್ ಚಿಂತನೆಗೆ ಹಚ್ಚುವಂತಿರುತ್ತವೆ.

ತಂಕಾ ಕಿಂಚಿತ್ತೂ ಚೀನೀ ಪದಗಳ ಪ್ರಭಾವವಿಲ್ಲದ, ಮೂಲತಃ ಜಪಾನೀಯ ಕಾವ್ಯ ಪ್ರಕಾರ. ಇದರಲ್ಲಿ ಪ್ರಾಸ, ಲಯ ಏನೇನೂ ಇಲ್ಲ. ಆದರೆ, ಶ್ಲೇಷೆ ಇದೆ, ಪದಗಳ ಪಯರ್ಾಯಾರ್ಥಗಳೊಂದಿಗಿನ ಆಟಗಳು ಇವೆ. ಪುಟ್ಟದಾಗಿವೆ ಹಾಗೂ ಮಾತ್ರೆಗಳ ಲೆಕ್ಕದೊಂದಿದೆ ಛಂದೋಬದ್ಧವಾಗಿವೆ.

ಅಂದಿನದ್ದು ರಾಜರೂ, ಆಸ್ಥಾನ ಪಂಡಿತರೂ ಮಾತ್ರ ಕಾವ್ಯರಚನೆ ಮಾಡುತ್ತಿದ್ದ ಕಾಲ; ಕಾವ್ಯ ಜನ ಸಾಮಾನ್ಯರ ಕಿವಿಗೂ ಬೀಳದಿರುತ್ತಿದ್ದ ಕಾಲ. ಈ ಚುಟುಕುಗಳು ಅಥವ ಕವನಗಳು ಜೀವನದ ಸಣ್ಣ ಪುಟ್ಟ ದೃಶ್ಯಗಳ ಚಿತ್ರಣವೇ ಆಗಿದ್ದು ಅವುಗಳ ಕೇಂದ್ರದಲ್ಲಿ ಇರುವುದು ಪ್ರೀತಿ ಅಥವಾ ಪ್ರೇಮ. ಅತ್ಯಂತ ಹೃದಯಂಗಮಯವಾಗಿಯೂ, ಧ್ವನಿಪೂರ್ಣವಾಗಿಯೂ, ಅತಿ ತೀವ್ರವಾಗಿ ತಟ್ಟುವ ಈ ‘ತಂಕಾ’ ಕವನಗಳು ಇಂದಿಗೂ ಜಪಾನೀಯರ ಮನದಲ್ಲಿ ಮನೆಮಾಡಿವೆ. ಈ ಪದ್ಯಗಳು ಶಬ್ದಗಳ ಮೂಲಕ ಪ್ರಕೃತಿಯ ಸಣ್ಣ ಸಣ್ಣ ಚಿತ್ರಗಳನ್ನು ಕಟ್ಟಿಕೊಡುತ್ತವೆ.

ಈ ಪುಟ್ಟ ಪದ್ಯಗಳು ಉದುರುತ್ತಿರುವ ಚೆರ್ರಿ ಬ್ಲಾಸಂ (ಸಕುರಾ) ಪುಷ್ಪ, ಬೀಸುವ ಗಾಳಿಯಿಂದ ಚದುರಿದ ಎಲೆಯ ಮೇಲಿನ ಮಂಜು, ಗೊಂಡಾರಣ್ಯದಲ್ಲಿ ತೇಲಿ ಬರುವ ಬೆದರಿದ ಜಿಂಕೆಯ ರೋದನ, ಬಿದ್ದು ನಶಿಸಿಹೋಗುತ್ತಿರುವ ಮೇಪಲ್ ಎಲೆಯ ಕೆಂಬಣ್ಣ, ತಿಂಗಳ ಬೆಳಕಲ್ಲಿ ಅಳುತ್ತಿರುವ ಕೋಗಿಲೆಯ ಶೋಕ, ಬೆಟ್ಟಕಾಡುಗಳ ಏಕಾಂತದ ಭಾವ ಇತ್ಯಾದಿ, ಇತ್ಯಾದಿ ಚಿತ್ರಗಳನ್ನು ಒಬ್ಬ ಸೂಕ್ಷ್ಮಗ್ರಾಹಿ ಓದುಗನ ಮನದಲ್ಲಿ ಬಹಳ ಸುಂದರವಾಗಿ ಮೂಡಿಸುತ್ತವೆ.

* ಕ್ರಿ.ಶ 1155 ಯಲ್ಲಿ ತೀರಿಕೊಂಡ ಅಕಿ-ಸುಕೆ ಬರೆದ ಈ ತಂಕಾ ಪ್ರಕೃತಿಯ ಒಂದು ಸುಂದರ ಚಿತ್ರಣ:

ನೋಡು, ಮಾಗಿಯ ಮಾರುತ ಹೇಗೆ ಓಡಿಸುತ್ತಿದೆ

ಮೋಡಗಳನ್ನು ಎಡ ಬಲಕೆ;

ಎಡಕಿನಿಂದ ಚಂದಿರ ಇಣುಕುತ್ತಾನೆ

ಕಿರಣಗಳಿಂದ ಓಡಿಸುತ್ತಾ

ರಾತ್ರಿಯ ಕತ್ತಲನು.

* 12 ನೇ ಶತಮಾನದ ಕೊನೆಯಲ್ಲಿ ಬಾಳಿದ ಜಾರು-ರೆನ್ ಎಂಬವನು ಬರೆದ ಈ ತಂಕಾ  ಶರದ್ ಋತುವಿನ ಇನ್ನೊಂದು ಸುಂದರ ಚಿತ್ರಣವನ್ನು ಕಟ್ಟಿಕೊಡುತ್ತದೆ:

ಓಡುತ್ತಿರುವ ಮೋಡಗಳಿಂದ ಬಿದ್ದ ಮಳೆ

ಮಂಜಿನಂಥ ಹನಿಗಳು, ಇನ್ನೂ ಅಲ್ಲೇ ಇವೆ

ಫéಿರ್ ಮರಗಳು ಸೂಜಿ ಎಲೆಗಳ ಮೇಲೆ;

ಮತ್ತು ಸಂಜೆಯ ಮಂಜಹನಿಗಳು ಏರುತ್ತವೆ

ಶರತ್ ಬಾನಿನ ಎತ್ತರಕೆ.

* ಕ್ರಿ.ಶ 1237 ರಲ್ಲಿ ತೀರಿಕೊಂಡ ಇಯೆ-ತಾಕ ಬರೆದ ಸಾಲುಗಳನ್ನು ನೋಡಿ:

ಮಂದ ಮುಸ್ಸಂಜೆ, ಮಂದ ಮಾರುತ

ನಾರಾದ ಸಣ್ಣ ತೊರೆಯ ಬದಿಯಲ್ಲಿ

ಜಳಕದಲಿ ನಿರತ ಭಕ್ತರ ಸದ್ದು ಗದ್ದಲ

ಎದುರಿಗೆ ವಿಗ್ರಹ; ಇವೆಲ್ಲ

ಪರಿಪೂರ್ಣ ಬೇಸಗೆಯ ಕನಸಿನಂತೆ.

* ಚಕ್ರವತರ್ಿ ತೆಂಚಿ (ಕ್ರಿ.ಶ 668-671) ಖಟಾವಿನ ಸಮಯದಲ್ಲಿ ಪ್ರಜೆಗಳ ಸಹಾಯಕ್ಕೆ ಹೋದಾಗ ಆದ ಅನುಭವವನ್ನು ಒಂದು ತಂಕಾ ಆಗಿಸಿದ್ದಾನೆ:

ಮಾಗಿಯ ಇಂದು ಹೊರಗೆ ಹೊಲದಲ್ಲಿ

ಖಟಾವಿನಲ್ಲೇ ಮಂದಿ ಮಗ್ನ;

ಈ ಸೂರಿನಡಿ ಮರೆಗಾಗಿ ಬಂದೆ

ಆದ್ರೆ, ಅದೆಲ್ಲಾ ವ್ಯರ್ಥ

ಮಳೆಯಿಂದ ತೋಯ್ದಿದೆ ತೋಳು!

* ಮಹಾರಾಣಿ ಜಿತೋ (ಕ್ರಿ.ಶ 690-696) ಬರೆದ ಬೇಸಿಗೆಯ ದಿಗಂತದ ವರ್ಣನೆ:

ವಸಂತ ಹೋಯ್ತು, ಬೇಸಿಗೆ ಬಂತು

ನನಗೆ ತೋರುತ್ತದೆ,

ಅಮ ಪರ್ವತದ ಶಿಖರದಲ್ಲಿ

ಬಾನಿನೊಳಗಿನ ಯಕ್ಷಿಣಿಯರು

ತಮ್ಮ ಶುಭ್ರ ಬಿಳಿಬಟ್ಟೆಯನ್ನು ಒಣಗಹಾಕಿದ್ದಾರೆ.

* ಓಕಿ-ಕಜéೆ ( ಸುಮಾರು ಕ್ರಿ.ಶ 911) ಏನು ಧ್ವನಿಸುತ್ತಾರೆ ಕೇಳಿ:

ಹಳೆ ಪರಿಚಿತ ಮಿತ್ರರೆಲ್ಲ ಸಂದರು

ನನಗೆ ಗೊತ್ತಿರುವವರೆಲ್ಲ,

ಆದರೂ ತಕಸಾಗೋ ಕಡಲತೀರದಲಿ

ಬಹಳ ಹಿಂದಿನಿಂದ ಅರಿತಿದ್ದ

ಅದೇ ಹಳೆಯ ಪೈನ್ ವೃಕ್ಷ ಬೆಳೆಯುತ್ತಿದೆ,

ಸುರ-ಯುಕಿ (ಕ್ರಿ.ಶ 884-946) ಎಂಬವನು ಆಸ್ಥಾನದ ಗಣ್ಯನಾಗಿದ್ದವನು. ಒಬ್ಬ ಶ್ರೇಷ್ಠ ಕವಿ ಹಾಗೂ ಜಪಾನಿ ಗದ್ಯ ಸಾಹಿತ್ಯದ ಜನಕ. ಒಂದು ಬಾರಿ ತನ್ನ ಮಿತ್ರನೊಬ್ಬನನ್ನು ಕಾಣಲು ಹೋಗಿದ್ದಾಗ ಆತನು ಇಷ್ಟು ಕಾಲದ ಬಳಿಕವೂ ತನ್ನ ಮನೆ ದಾರಿಯ ಗುರುತು ಹೇಗೆ ಸಿಕ್ಕಿತು ಎಂದು ವಿಚಾರಿಸಿದಾಗ ಗೇಟಿನ ಬದಿಯಲ್ಲಿದ್ದ ಮರದಿಂದ ಹೂಗೊಂಚಲನ್ನು ಮುಷ್ಠಿಯಲ್ಲಿ ತೆಗೆದು ಈ ಆಶುರಚನೆಯನ್ನು ವಾಚಿಸಿದನಂತೆ:

ನನ್ನ ಬಾಲ್ಯದ ಹಳ್ಳಿ ಈಗಿಲ್ಲ

ಹೊಸ ಮುಖಗಳು ಗೋಚರಿಸುತ್ತವೆ

ಆದರೂ ನಿನ್ನ ಗೇಟಿನ ಬದಿಯ ಬ್ಲಾಸಂ

ಹಾದಿಯುದ್ದಕ್ಕೂ ಸುಗಂಧ ಬೀರುತ್ತವೆ

ನನ್ನ ಬಾಲ್ಯ ನೆನಪಿಸುತ್ತವೆ.

13 ಶತಮಾನಗಳ ಹಿಂದೆ ಪುಟ್ಟ ಪುಟ್ಟ ಸಾಲಿನಲ್ಲಿ ಕಟ್ಟಿ ಕೊಟ್ಟಿರುವ ಭಾವ ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತವೆ, ಮನಗಳನ್ನು ಅರಳಿಸುತ್ತವೆ. ಇದೇ ಈ ತಂಕಾ ಕಾವ್ಯದ ಶಕ್ತಿ.

ಜಯದೇವ ಪ್ರಸಾದ ಮೊಳೆಯಾರ.

‘ಮೊಳೆಯಾರ’  1 ನೇ ಮುಖ್ಯ ರಸ್ತೆ

ಲಕ್ಷ್ಮೀಂದ್ರ ನಗರ

ಉಡುಪಿ-576102

9343232321, 0820-2574575.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: