Skip to content
ಮೇ 27, 2010 / odubazar

ಅಕಾವ್ಯಕ್ಕೆ ಅರ್ಥ ಗೊತ್ತಿಲ್ಲ ನನಗೆ…

ಹೆಚ್ಚಿನ  ಅಭಿಪ್ರಾಯ, ಚರ್ಚೆಗಳೂ ಬಹುತೇಕ  ಮಾತಲ್ಲೇ ಸೋರಿ ಹೋಗುತ್ತಿರುವ  ಈ ಕಾಲದಲ್ಲಿ  ಅದನ್ನು  ದಾಖಲಿಸುವ  ಎಚ್ಚರ ಮತ್ತು ಜವಾಬ್ದಾರಿಯಿಂದ ಕೂಡಿದ ಕೆಲಸವನ್ನು  ಗೆಳೆಯ ಸುಧೀಂದ್ರ  ಕೈಗೆತ್ತಿಕೊಂಡಿರುವುದು ಕಾವ್ಯದ ಬಗೆಗಿನ ಅವರ ಬದ್ಧತೆಯನ್ನು ತಿಳಿಸುತ್ತದೆ.

ಇತ್ತೀಚೆಗೆ ಸಮಕಾಲೀನ –ರಾಗಿರುವ ಒಬ್ಬ ಕವಿಯ ಕಾವ್ಯವಿರಿಸಿಕೊಂಡು ಪುಸ್ತಕ ಹೊರಬರುತ್ತಿರುವುದು ಕಡಿಮೆಯಾಗಿರುವ ಸಂದರ್ಭದಲ್ಲಿ  ಈ ಪ್ರಯತ್ನ ವಿಶಿಷ್ಟವಾಗಿ ನಿಲ್ಲುತ್ತದೆ.

ಬಂಡಾಯದ ವಿಸ್ತರಣೆಯಾಗಿ ಜಯಪ್ರಕಾಶರ ಕಾವ್ಯದ ಈ ಬಗೆಯ ಅನುಸಂಧಾನ ಯಾವುದೇ ತತ್ವ  ಪಂಥಗಳಿರದ ಈ ಕಾಲದಲ್ಲಿ ಹೊಸ  ಮಾರ್ಗವನ್ನು  ಕಂಡುಕೊಳ್ಳುವುದಕ್ಕೆ ನಮ್ಮನ್ನು ಹಚ್ಚುವಂತಿದೆ. ಹಾಗೆಯೇ, ಕನ್ನಡಕ್ಕೆ ಕನ್ನಡದ್ದೇ ಆದ ಸಾಹಿತ್ಯ ಮೀಮಾಂಸೆಯನ್ನು ಕಟ್ಟುವ, ನಿರ್ವಚಿಸುವ  ನಿಟ್ಟಿನಲ್ಲಿ ಹೇಗೆ ಒಂದು ಕೃತಿಯೇ ಅದನ್ನು ನೋಡಬೇಕಾದ ಬಗೆಯನ್ನು  ಹೇಳುತ್ತದೆ  ಎಂಬುದನ್ನು ಗ್ರಹಿಸುವ ಸೂಕ್ಷ್ಮತೆಯೂ ಇಲ್ಲಿದೆ.

ವಿಮರ್ಶೆಯೇ ಪ್ರಧಾನವಾಗದೇ  ತಮ್ಮ ಹಿಂದಿನ ತಲೆಮಾರಿನ ಕವಿಯ  ಕಾವ್ಯದೊಂದಿಗೆ  ಆಪ್ತ ಸಂವಾದ ಬೆಳೆಸುವ ರಸಗ್ರಹಣದ ಮಾದರಿಯನ್ನು ಇಲ್ಲಿ ಕಾಣಬಹುದು. ಹೀಗೆ ನೋಡುವಾಗ  ಬೇಂದ್ರೆ, ಕುವೆಂಪು, ಪುತಿನ ಅವರ  ಜೊತೆಗೇ ಬಂಜಗೆರೆಯವರ ಸಮಕಾಲೀನರ ಬರಹದೊಂದಿಗೆ ಅವರ ಕಾವ್ಯವನ್ನಿಟ್ಟು  ನೋಡಿದ್ದರೆ ಕೃತಿಗೆ ಹೆಚ್ಚಿನ ಹರಹು  ದೊರಕುತ್ತಿತ್ತು. ಹೀಗಿದ್ದರೂ ಸಿದ್ದ ಚರ್ಚೆಯಾಗೇ ಒಂದು ಹೊರಳು ನೋಟ ಆಯಿಸಲು ಪ್ರೇರಣೆ ನೀಡಬಹುದೆಂಬ ಭರವಸೆ ಹುಟ್ಟಿಸುವ ಕಾರಣದಿಂದ ಈ ಕೃತಿ ಮುಖ್ಯವಾಗುತ್ತದೆ .

ಬಂಜಗೆರೆಯವರ ಕಾವ್ಯಕ್ಕೊಂದು ಒಳ್ಳೆಯ ಪ್ರವೇಶಿಕೆ ಎನ್ನಬಹುದಾದರೂ ಈ ಕೃತಿಯ ಹರವು  ಅಲ್ಲಿಗೇ ನಿಲ್ಲದೇ ನಮ್ಮ ತೆಲೆಮಾರು ಕಾವ್ಯವನ್ನು ಗ್ರಹಿಸುತ್ತಿರುವ ಬಗೆ  ಇಲ್ಲಿ ಗರಿಗಟ್ಟುತ್ತಿರುವುದನ್ನು ಗಮನಿಸಬಹುದು.

–  ಪಿ. ಭಾರತೀದೇವಿ

ಬೆನ್ನುಡಿಯಲ್ಲಿ

Advertisements
  1. raoavg / ಜುಲೈ 6 2010 4:11 ಅಪರಾಹ್ನ

    ಕನ್ನಡ ಪುಸ್ತಕಗಳೂ ಅಂತರ್ಜಾಲ ಮುಖೇನ ಕೊಳ್ಳುವಂತಿದ್ದರೆ (ವಿಶೇಷವಾಗಿ ಈ ತಾಣದಲ್ಲಿ ಯುಕ್ತ ‘ಲಿಂಕ್’ ಇರಬೇಕು) ಒಳ್ಳೆಯದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: