Skip to content
ಜುಲೈ 23, 2010 / odubazar

ಸಾಹಿತ್ಯ ವಿಮರ್ಶೆ


ಬಾನುಲಿ ಮತ್ತು ಮುದ್ರಣ ಮಾಧ್ಯಮಗಳು ಬೇರೆಯಾದರೂ ಸಾಮಾನ್ಯವಾಗಿ ಸಮಾನ ಉದ್ದೇಶಗಳಿಗಾಗಿ ಕೆಲಸ ಮಾಡುತ್ತವೆ. ಆದರೆ, ಬಳಕೆಯಾಗುವ ಭಾಷಾ ಶೈಲಿ ಮತ್ತು ವಿಷಯ ಮಂಡನೆಗಳಲ್ಲಷ್ಟೇ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿರುತ್ತವೆ. ಬಾನುಲಿ, ಮುದ್ರಣ ಮಾಧ್ಯಮಕ್ಕೆ ಪೂರಕವಾಗಿ ಕೆಲಸ ಮಾಡುವಂಥ ಒಂದು ಅಪೂರ್ವ ಸಂದರ್ಭ, ಪ್ರತಿವಾರ ಗುಲಬರ್ಗಾ ಆಕಾಶವಾಣಿಯಿಂದ ಪ್ರಸಾರವಾಗುವ ’ಹೊಸ ಓದು’ ಕಾರ್ಯಕ್ರಮ. ಹೈದರಾಬಾದ್-ಕರ್ನಾಟಕ ಪ್ರದೇಶದ ಪ್ರತಿಭಾವಂತ ಲೇಖಕ-ಲೇಖಕಿಯರು ಬರೆದು ಪ್ರಕಟಿಸುವ ಸಾಹಿತ್ಯ ಪುಸ್ತಕಗಳ ಕಿರು ಪರಿಚಯವನ್ನು ಮಾಡಿಕೊಟ್ಟು ಬಾನುಲಿಯ ಕೇಳುಗರಿಗೆ ಪ್ರಸ್ತುತ ಹೊಸಗನ್ನಡ ಸಾಹಿತ್ಯದ ರುಚಿಯನ್ನು ಉಣಬಡಿಸುವುದಷ್ಟೇ ಅಲ್ಲದೆ ಹೈದರಾಬಾದ್-ಕರ್ನಾಟಕ ಭಾಗದ ಪ್ರಕಟಿತ ಲೇಖಕರೆಲ್ಲರ ಬರವಣಿಗೆಯ ಮಾದರಿಗಳನ್ನು ಲಕ್ಷಾಂತರ ಕೇಳುಗರ ಮನೆ-ಮನಗಳಿಗೆ ತಲುಪಿಸುತ್ತಿರುವ ’ಹೊಸ ಓದು’ ಕಾರ್ಯಕ್ರಮದ ಪರಿಕಲ್ಪನೆ ಈ ಮೊದಲು ನಿಲಯ ನಿರ್ದೇಶಕರಾಗಿದ್ದ ಶ್ರೀ ಎಸ್.ಎಸ್.ಹಿರೇಮಠರದ್ದು. ಈಗ್ಗೆ ಸುಮಾರು ೮ ವರ್ಷಗಳ ಹಿಂದೆ ಅವರಿಂದ ಆದ ಬೀಜಾವಾಪನೆ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ.
ಈ ಕಾರ್ಯಕ್ರಮಕ್ಕೆ ದೊರೆಯುತ್ತಿರುವ ನಿರಂತರ ಪ್ರಾಯೋಜಕತ್ವ ಕಾರ್ಯಕ್ರಮದ ಜನಪ್ರಿಯತೆಯ, ಯಶಸ್ಸಿನ ಸೂಚಕವೂ ಹೌದು. ಹೊಸ ಲೇಖಕರ ಹೊಸಕೃತಿಗಳ ಪರಿಚಯವನ್ನು ಮಾಡಿಕೊಡಲು ಯುವ ಲೇಖಕರ ಬಳಗವನ್ನೇ ಹುಟ್ಟು ಹಾಕಿದವರು ಈ ಕಾರ್ಯಕ್ರಮದ ಸೂತ್ರಧಾರ ಡಾ. ಸದಾನಂದ ಪೆರ್ಲ. ವಾರದಿಂದ ವಾರಕ್ಕೆ ನಿಲಯಕ್ಕೆ ಬಂದು ತಲುಪುವ ಕೃತಿಗಳಲ್ಲಿ ಸಮಂಜಸವಾದುದನ್ನು ಆಯ್ದು, ಯೋಗ್ಯ ಲೇಖಕರನ್ನು ಹುಡುಕಿ ಅವರಿಂದ ಆ ಪುಸ್ತಕಗಳ ಪರಿಚಯ ಬರೆಸಿ, ಆ ಲೇಖನವನ್ನು ಧ್ವನಿಮುದ್ರಿಸಿ ಪ್ರಸಾರಕ್ಕೆ ಸಜ್ಜುಗೊಳಿಸಿದ ಡಾ. ಪೆರ್ಲರದ್ದು ದಣಿವರಿಯದ ದುಡಿಮೆ.
ಹಿಂದುಳಿದ ಪ್ರದೇಶ ಎಂಬ ಅನಗತ್ಯ ಹಣೆಪಟ್ಟಿ ಹೊತ್ತ ಹೈದರಾಬಾದ್-ಕರ್ನಾಟಕ ಪ್ರದೇಶದ ಸಾಹಿತ್ಯ ಕೃಷಿಯ ಒಂದು ವಿಹಂಗಮ ನೋಟವನ್ನು ಶಬ್ದಗಳಲ್ಲಿ ದಾಖಲು ಮಾಡಿದ್ದು ’ಹೊಸ ಓದು’-ಕಾರ್ಯಕ್ರಮದ ಅತಿದೊಡ್ಡ ಉಪಲಬ್ಧಿ. ಈ ಶ್ರವ್ಯ ದಾಖಲೀಕರಣ ಇದೀಗ ಮುದ್ರಿತವಾಗಿ ಶಾಶ್ವತವಾಗಿ ದಾಖಲಾಗುವಂತೆ ಅನುವುಮಾಡಿಕೊಟ್ಟ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಜಿ.ಮೂಲಿಮನಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. ಹೊಸಗನ್ನಡ ಸಾಹಿತ್ಯ ಚರಿತ್ರೆಯ ಅಧ್ಯಯನವನ್ನು ಮುಂದುವರೆಸಬೇಕೆನ್ನುವವರಿಗೆ ಇದೊಂದು ಅತ್ಯಮೂಲ್ಯ ಆಕರಗ್ರಂಥವಾದೀತು.
ಗಾಳಿಯಲ್ಲಿ ತೇಲಿ ಬಿಟ್ಟ ನುಡಿಹಡಗನ್ನು ಮುದ್ರಣ ಲಂಗರಿನಿಂದ ಸಾರಸ್ವತ ಸಮುದ್ರದಲ್ಲಿ ಕಟ್ಟಿ ನಿಲ್ಲಿಸಿದ ಯಶಸ್ವೀ ಪ್ರಯತ್ನ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ್ದು. ಅದಕ್ಕಾಗಿ ನಿರ್ದೇಶಕರಾಗಿದ್ದ ಪ್ರೊ.ಡಿ.ಬಿ. ನಾಯಕ ಅವರಿಗೆ ಅನಂತ ಕೃತಜ್ಞತೆಗಳು. ’ಹೊಸ ಒದು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೇಖಕರೆಲ್ಲರಿಗೂ ಶುಭ ಕಾಮನೆಗಳು.

ಡಾ.ಎನ್.ರಘು
ಕಾರ್ಯಕ್ರಮ ಮುಖ್ಯಸ್ಥ
ಆಕಾಶವಾಣಿ, ಗುಲಬರ್ಗಾ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: