Skip to content
ಆಗಷ್ಟ್ 22, 2010 / odubazar

ಇಂದು ಕನ್ನಡಕ್ಕೆ ಬರುತ್ತಿದೆ ‘ಇಂಡಿಯ ಆಫ್ಟರ್ ಗಾಂಧಿ’…

ಹೆಸರಾಂತ ಲೇಖಕ ರಾಮಚಂದ್ರ ಗುಹ ಬರೆದ ‘ಇಂಡಿಯಾ ಆಫ್ಟರ್‌ ಗಾಂಧಿ’ ಯನ್ನು ವಸಂತ ಪ್ರಕಾಶನ ಕನ್ನಡಕ್ಕೆ ತರುತ್ತಿದೆ. ಜಿ ಎನ್‌ ರಂಗನಾಥರಾವ್‌ ಅನುವಾದಿಸಿರುವ ಈ ಪುಸ್ತಕದ ಎರಡು ಸಂಪುಟಗಳು ಇಂದು ಬೆಳಗ್ಗೆ ೧೦.೩೦ಕ್ಕೆ ನೃಪತುಂಗಾ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಕೃತಿಯ ಲೇಖಕರ ಪರಿಚಯ ಇಲ್ಲಿದೆ.

ರಾಮಚಂದ್ರ  ಗುಹ

ರಾಮಚಂದ್ರ  ಗುಹ ಹುಟ್ಟಿದ್ದು ೧೯೫೮ ರಲ್ಲಿ ಡೆಹರಾಡೂನಿನಲ್ಲಿ. ದೆಹಲಿ, ಕೋಲ್ಕತ್ತಾಗಳಲ್ಲಿ ಉನ್ನತ ಶಿಕ್ಷಣ ಪಡೆದಿರುವ ಅವರು ಓಸ್ಲೋ ಸ್ಟ್ಯಾನ್ ಫರ್ಡ್, ಯೇಲ್ ವಿಶ್ವವಿದ್ಯಾಲಯಗಳಲ್ಲಿಯು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್  ಆಫ್ ಸೈನ್ಸ್ ನಲ್ಲಿಯೂ ಬೋಧಿಸಿದ್ದಾರೆ.

ಬರ್ಕ್ ಲಿಯಲ್ಲಿರುವ  ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ  ಇಂಡೋ-ಅಮೇರಿಕನ್  ಕಮ್ಯುನಿಟಿ ಚೇರ್ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಲವು ದೇಶಗಳಲ್ಲಿ  ಅಧ್ಯಯನ ನಡೆಸಿ, ಹತ್ತು ವರ್ಷಗಳಲ್ಲಿ ಮೂರು ಖಂಡಗಳಲ್ಲಿ ಐದು ಹುದ್ದೆಗಳನ್ನು ನಿರ್ವಹಿಸಿ, ಕಡೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಗುಹ ಈಗ ಪೂರ್ಣಾವಧಿ ಲೇಖಕರು. ಪ್ರಸಿದ್ದ ಅಂಕಣಕಾರರು.

ಸ್ಯಾವೆಜಿಂಗ್  ದಿ ಸಿವಿಲೈಸ್ದ್ , ಎನ್ವಿರಾನ್ಮೆಂಟ್ ಲಿಸಂ, ಅನ್ ಆಂತ್ರಪಾಲಜಿಸ್ಟ್ ಅಮಾಂಗ್ ಮಾರ್ಕಿಸ್ಟ್ ಅಂಡ್  ಅದರ್  ಎಸ್ಸೇಸ್, ಎ ಕಾರ್ನರ್  ಆಫ್ ಎ ಫಾರಿನ್ ಫಿಲ್ಡ್, ದಿ ಅನ್ ಕ್ವಯಟ್ ವುಡ್ಸ್ , ದಿ ಪಿಕಡಾರ್ ಬುಕ್ ಆಫ್ ಕ್ರಿಕೆಟ್  ಅವರು ರಚಿಸಿರುವ, ಸಂಪಾದಿಸಿರುವ ಮುಖ್ಯ ಕೃತಿಗಳು . ಇಂಡಿಯಾ ಆಫ್ಟರ್ ಗಾಂಧಿ ಅವರು ತಮ್ಮ  ವೃತ್ತಿ ಜೀವನದ ಉದ್ದಕ್ಕೂ ನಡೆಸಿದ ವ್ಯಾಪಕ ಅಧ್ಯಯನದ ಫಲ. ಗುಹ ಅವರ ಪುಸ್ತಕಗಳು ಇಪ್ಪತ್ತಕ್ಕೂ ಹೆಚ್ಹು ಭಾಷೆಗಳಿಗೆ ಅನುವಾದಗೊಂಡಿವೆ. ಅವರು ಪಡೆದಿರುವ ಪ್ರಶಸ್ತಿಗಳಲ್ಲಿ ಯುಕೆ ಕ್ರಿಕೆಟ್  ಸೊಸೈಟಿಯ ಸಾಹಿತ್ಯ ಪ್ರಶಸ್ತಿ , ಪರಿಸರ ಚರಿತ್ರೆಗಾಗಿ ಅಮೇರಿಕನ್ ಸೊಸೈಟಿ ನೀಡುವ ಲಿಯೋಪೋಲ್ -ಹೈಡಿ ಪ್ರಶಸ್ತಿ ಮುಖ್ಯವಾದವು .

ಜಿ.ಎನ್.ರಂಗನಾಥ ರಾವ್


ಜಿ.ಎನ್.ರಂಗನಾಥ ರಾವ್ ಹುಟ್ಟಿದ್ದು ೧೯೪೨ರಲ್ಲಿ , ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ, ಶಿಕ್ಷಣ ಹೊಸಕೋಟೆಯಲ್ಲಿ , ಬೆಂಗಳೂರು ನಗರದಲ್ಲಿ ವೃತ್ತಿಯಿಂದ ಪತ್ರಕರ್ತರಾಗಿರುವ ಅವರು ತಾಯಿನಾಡು, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ,ಮಯೂರ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮೂವತ್ತಕ್ಕೂ ಹೆಚ್ಹು ಕೃತಿಗಳನ್ನು ರಚಿಸಿರುವ ರಾವ್ ಸಂವೇದನಾ ಶೀಲ ಸಾಹಿತ್ಯ ವಿಮರ್ಶೆಗೆ, ಸೊಗಸಾದ ಅನುವಾದಕ್ಕೆ ಹೆಸರಾದವರು. ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ ಹೆಜ್ಜೆ, ಅನ್ಯೋನ್ಯ, ಗುಣ-ದೋಷ ಮುಖ್ಯ ವಿಮರ್ಶಾ ಕೃತಿಗಳು. ಶೇಕ್ಸ್ಪಿಯರನ ರೋಮಿಯೋ ಜೂಲಿಯಟ್ ಮತ್ತು ಆಂಟನಿ ಕ್ಲಿಯೋಪಾತ್ರ, ಬ್ರೆಕ್ತನ ಚಾಕ್ ಸರ್ಕಲ್, ಅನ್ವಿಯ ಅನ್ತಿಗೊನೆ, ಜೀನ್ ಜೆನೆಯ ದಿ ಬ್ಲ್ಯಾಕ್ಶ್, ಟಾಲ್ ಸ್ಟಾಯ್ ನ ಡೆತ್ ಆಫ್ ಇವಾನ್ ಇಲ್ಲಿಚ್ಯ್ , ಸೋಲ್ಜೆನಿತ್ಸಿನ್ ನ ಇವಾನ್ ದೆನಿಸೋವಿಚ್, ಕಾಫ್ಕ ಕತೆಗಳು, ಓ ಹೆನ್ರಿ ಕತೆಗಳು, ಜೆ.ದಿ.ಬರ್ನಾಲ್ ನ ಸೋಶಿಯಲ್  ಸೈನ್ಸ್  ಇನ್  ಹಿಸ್ಟರಿ  ಅವರು ಅನುವಾದಿಸಿರುವ ಕೃತಿಗಳು. ಇದೀಗ ರಾಮಚಂದ್ರ ಗುಹಾ ಅವರ ಇಂಡಿಯಾ ಆಫ್ಟರ್ ಗಾಂಧಿ  ಕೃತಿಯ ಭಾಷಾಂತರ. ಸಂದೇಶ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್ , ಖಾದ್ರಿ ಶಾಮಣ್ಣ  ಪ್ರಶಸ್ತಿ ಅವರು ಪಡೆದಿರುವ ಮುಖ್ಯ ಪುರಸ್ಕಾರಗಳು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: