Skip to content
ಆಗಷ್ಟ್ 30, 2010 / odubazar

‘ಕಥಾ ಕಥನ’…

ಡಾ. ಎಲ್. ಹನುಮಂತಯ್ಯ ಅವರು ಹುಟ್ಟಿದ್ದು ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ. ’ಕಪ್ಪು ಕಣ್ಣಿನ ಹುಡುಗಿ, ಮತ್ತು ’ಅವ್ವ’ ಕವಿತೆಗಳ ಮೂಲಕ ಕಾವ್ಯಲೋಕಕ್ಕೆ ಪರಿಚಿತರಾಗಿರುವ ಇವರು ಹೋರಾಟದ ಮೂಲಕವೇ ಕವಿಯಾಗಿ ರೂಪುಗೊಂಡವರು. ನಿಖರವಾದ ವಿಮರ್ಶನ ಪ್ರಜ್ಞೆಗೆ ಪ್ರಸ್ತುತ ಪುಸ್ತಕವೇ ಸಾಕ್ಷಿ. ’ಅಂಬೇಡ್ಕರ್’ ನಾಟಕದ ಮೂಲಕ ನಾಟಕಕಾರರಾಗಿಯೂ ಪ್ರಸಿದ್ಧರಾಗಿದ್ದಾರೆ.

ಡಾ. ಎಲ್. ಹನುಮಂತಯ್ಯ

ಎರಡು ಮೌಲ್ಯ  ಮಾಪನಗಳು

ದಲಿತ ಬದುಕನ್ನು, ವ್ಯಕ್ತಿತ್ವವನ್ನು ಅಧ್ಯಯನ ಮಾಡುವವರಿಗೆ ಇದು ಮೂಲ ಆಕರ ಸಾಮಾಗ್ರಿಯಾಗಿಯೂ ನಿಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದುದರಿಂದ ದಲಿತ-ಬಂಡಾಯ ಕಥೆಗಳು ದಲಿತರ ಬದುಕಿನ ಚಾರಿತ್ರಿಕ ಅಧ್ಯಯನಕ್ಕೆ ಹೇಗೆ ಮೂಲ ಆಕರ ಸಾಮಾಗ್ರಿಗಳಾಗಬಲ್ಲವು ಎಂಬುದನ್ನು ಪ್ರಸ್ತುತ ಸಂಶೋಧನೆಯ ಮೂಲಕ ಸಾಬೀತುಪಡಿಸಲಾಗಿದೆ.

– ಡಾ. ಬಿ.ಆರ್.ಹಿರೇಮಠ್

ಕನ್ನಡದ ಸಂದರ್ಭದಲ್ಲಿ ವಿಶೇಷವಾದ ತಾತ್ವಿಕ ಮತ್ತು ಸಾಮಾಜಿಕ ಹಿನ್ನಲೆಗಳೊಂದಿಗೆ ಮೂಡಿಬಂದ ಬಂಡಾಯ ಸಾಹಿತ್ಯ ಪ್ರಕಾರವನ್ನು, ಅಲ್ಲಿಯ ಕಥಾಸಾಹಿತ್ಯಕ್ಕೆ ಸೀಮಿತಗೊಳಿಸಿ ಲಕ್ಷಿಸುತ್ತ, ಅಲ್ಲಿ ಮೂಡಿರುವ ದಲಿತ ಪ್ರಜ್ಞೆಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಈ ಮಹಾಪ್ರಬಂಧವು ಕೈಗೊಂಡಿದೆ.

ಕೊರಡ್ಕಲ್ ಶ್ರೀನಿವಾಸರಾಯರ ’ಧನಿಯರ ಸತ್ಯನಾರಾಯಣ’, ಕಡೆಂಗೋಡ್ಲು ಅವರ ’ದುಡಿಯುವ ಮಕ್ಕಳು’ ಇಂತಹ ಕೆಲವು ಅಪೂರ್ವವಾದ ಕಥೆಗಳನ್ನು ಒಳಗೊಂಡಂತೆ ಇಲ್ಲಿಯ ಹರಹು ಕನ್ನಡದ ಪ್ರಮುಖ ಬಂಡಾಯ ಕಥೆಗಾರರ ಮುಖ್ಯ ಕಥೆಗಳನ್ನು ಚರ್ಚಿಸುತ್ತ ಬೆಳೆಯುತ್ತದೆ.

ತೇಜಸ್ವಿ, ದೇವನೂರ ಮಹಾದೇವ, ಬೆಸಗರಹಳ್ಳಿ ರಾಮಣ್ಣ, ಬರಗೂರು ರಾಮಚಂದ್ರಪ್ಪ, ಕಾಳೇಗೌಡ ನಾಗವಾರ, ಶಾಂತರಸ, ಕುಂ.ವೀ, ಚೆನ್ನಣ್ಣ ವಾಲೀಕಾರ, ಬೊಳುವಾರು, ಸಾರಾ, ಲಲಿತನಾಯಕ್, ವೈದೇಹಿ ಮುಂತಾದ ಕಥೆಗಾರರೆಲ್ಲರೂ ಇಲ್ಲಿ ಎಡೆಪಡೆದಿದ್ದಾರೆ.

– ಡಾ. ತಾಳ್ತಜೆ ವಸಂತಕುಮಾರ್

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: