ವಿಷಯದ ವಿವರಗಳಿಗೆ ದಾಟಿರಿ

ಬ್ಲಾಗ್ ಲೋಕದ ಮಹಾ ಮರ್ಜರ್

ಅವಧಿ ಹಾಗೂ ಜೋಗಿಮನೆ ಎರಡೂ ಕೈ ಕುಲುಕಿವೆ. ಅವಧಿ ನಡೆಸುತ್ತಿದ್ದ ‘ಬುಕ್ ಬಜಾರ್’ ಹಾಗೂ ಜೋಗಿ ಮನೆಯ ‘ಓದು ಜನಮೇಜಯ’ ಎರಡೂ ವಿಲೀನಗೊಂಡಿದೆ.

ಈ ಬೆಳವಣಿಗೆ ಮತ್ತೊಂದು ಮಹತ್ವದ ಬ್ಲಾಗ್ ಗೆ ದಾರಿಮಾಡಿಕೊಟ್ಟಿದೆ. ಬುಕ್  ಬಜಾರ್ ಹಾಗೂ ಓದು ಜನಮೇಜಯ ಎರಡೂ ಹೆಸರನ್ನು ಬಿಂಬಿಸುವ ‘ಓದು ಬಜಾರ್’ ಬ್ಲಾಗ್ ಲೋಕಕ್ಕೆ ಅಡಿ ಇಡಲಿದೆ. ಪುಸ್ತಕ,  ಸಾಹಿತಿ, ಪುಸ್ತಕ ಲೋಕದ ಏಳುಬೀಳು, ನಮ್ಮ ನೆರೆಯ ಭಾಷೆಗಳ ಪುಸ್ತಕ ಸಾಹಸಗಳು ಯಾವುದೂ ಕೇಳಲೂ ಸಿಗದ ಪರಿಸ್ಥಿತಿಯಲ್ಲಿ ಈ ಬ್ಲಾಗ್ ಮೂಡಿ ಬರುತ್ತಿದೆ.

ಕನ್ನಡದಲ್ಲಿ ಪುಸ್ತಕಕ್ಕೆ ಸಂಬಂಧಪಟ್ಟ  ಬೆಳಕಿಂಡಿಗಳೇ ಇಲ್ಲ ಎಂಬಷ್ಟು ಕಡಿಮೆ. ಹಾಗಾಗಿ ಓದುಗರಿಗೆ ಹೊಸ ದಾರಿ ಹುಡುಕಿ ಕೊಡಲು ಈ ಓದು ಬಜಾರ್ ಬರಲಿದೆ. ಕನ್ನಡ ಖ್ಯಾತ ಸಾಹಿತಿಗಳು ವಿಮರ್ಶಕರು ಓದುಗರು ಇದರಲ್ಲಿ ಅಂಕಣ ಬರೆಯಲಿದ್ದಾರೆ. ಪುಸ್ತಕ ಲೋಕದ ರೋಚಕ ಸುದ್ದಿಗಳೂ ಇರುತ್ತವೆ. ಪುಸ್ತಕಕ್ಕೆ ಸಂಬಂಧಪಟ್ಟ  ಯಾವುದೇ ಕಾರ್ಯಕ್ರಮದ ಫೋಟೋ ಅಲ್ಬಮ್ ಎಲ್ಲರ ಗಮನ ಸೆಳೆಯಲಿದೆ. ಪುಸ್ತಕ ಮಾರಾಟಗಾರರನ್ನು ಪರಿಚಯಿಸಲಾಗುತ್ತಿದೆ. ಪುಸ್ತಕಕ್ಕೆ ಸಂಬಂಧಪಟ್ಟ  ಎಲ್ಲವೂ ಇಲ್ಲಿರುತ್ತದೆ.

ಜೋಗಿ ತಾವು ಓದಿದ ಪುಸ್ತಕದ ಮೊದಲ ಅನಿಸಿಕೆಯನ್ನು ‘ಫರ್ಸ್ಟ್ ನೈಟ್’ ಅಂಕಣದಲ್ಲಿ ನಮ್ಮ ಮುಂದಿಡುತ್ತಾರೆ. ಓದುಗರದ್ದೇ ಟಾಪ್ ಟೆನ್ ಇರುತ್ತದೆ.

ಬುಕ್ ಬಜಾರ್ ಹಾಗೂ ಓದು ಜನಮೇಜಯದಲ್ಲಿ ಇದುವರೆಗೆ ಬಂದಿರುವ ಎಲ್ಲ ಲೇಖನಗಳೂ ಅರ್ಕೇವ್  ನಲ್ಲಿ ಲಭ್ಯವಿರುತ್ತದೆ.

  1. amara / ಸೆಪ್ಟೆಂ 1 2008 4:00 ಅಪರಾಹ್ನ

    🙂 “ಮಹಾ ಮರ್ಜರ್” ಇನ್ನಷ್ಟು ಹೊಸ ಹೊಸ ವಿಷಯಗಳನ್ನ ಓದುಗರಲ್ಲಿ ಹಂಚಿಕೊಳ್ಳುವಂತಾಗಲಿ …….
    ಶುಭ ಹಾರೈಕೆಗಳೊಂದಿಗೆ
    -ಅಮರ

  2. ಎಚ್ ಆನಂದರಾಮ ಶಾಸ್ತ್ರೀ / ಸೆಪ್ಟೆಂ 6 2008 1:42 ಅಪರಾಹ್ನ

    ಉಪಯುಕ್ತ ಕೊಡುಗೆ.
    ಸ್ತುತ್ಯರ್ಹ ಯತ್ನ.

  3. Prabhugouda Patil / ಸೆಪ್ಟೆಂ 8 2008 7:20 ಅಪರಾಹ್ನ

    really odu bazar sub title is so beautiful. and also this blog is new type to purchase the kannada literate.

  4. B.A. Puneeth / ನವೆಂ 28 2008 8:44 ಫೂರ್ವಾಹ್ನ

    odu bazaar….tumbane ishta ayithu….manassige hattira vaagide…good work…munduvarisi….

    omme nanna blog kadeyu ‘haage summane’ bandu hogi:

    http://www.haagesummane.wordpress.com

  5. Dr. BR. Satyanarayana / ಫೆಬ್ರ 16 2009 2:04 ಅಪರಾಹ್ನ

    ಗುಡ್ ಲಕ್

  6. Keshava Prasad M / ಸೆಪ್ಟೆಂ 28 2009 7:34 ಅಪರಾಹ್ನ

    ಒಳ್ಳೇ ಕೆಲ್ಸ… ನಿಮ್ಮಿಂದ ತುಂಬಾ ನಿರೀಕ್ಷೆ ಇಟ್ಕೊಂಡಿದ್ದಿವಿ…
    ನಿಮ್ಮವ,
    ಕೇಶವ ಪ್ರಸಾದ್ ಮಾರ್ಗ

  7. ತ.ವಿ.ಶ್ರೀನಿವಾಸ / ಫೆಬ್ರ 9 2010 2:15 ಅಪರಾಹ್ನ

    ಒಳ್ಳೆಯ ಕೆಲಸ

    ಕನ್ನಡ ಸಾರಸ್ವತ ಲೋಕ ಇನ್ನೂ ಹೆಚ್ಚು ಶ್ರೀಮಂತವಾಗಲೆಂದು ಆಶಿಸುವೆ

  8. sharan / ಫೆಬ್ರ 27 2010 9:32 ಫೂರ್ವಾಹ್ನ

    pustaka, sahitya andare adu
    “OoDi”na bajaru… endenisikoLLali.

  9. ಜಲನಯನ / ಆಗಸ್ಟ್ 13 2010 3:51 ಅಪರಾಹ್ನ

    ಬಹಳ ಉತ್ತಮೆ ಪ್ರಯತ್ನ, ನಿಮ್ಮ ಈ ಪ್ರಯತ್ನ ನಿಮಗೆ ಮತ್ತು ಸಾಹಿತ್ಯ ಲೋಕಕ್ಕೆ ಸಫಲತೆಯನ್ನು ತರಲಿ ಎಂದು ಹಾರೈಸುತ್ತೇನೆ.

  10. mahadev / ಸೆಪ್ಟೆಂ 3 2010 1:09 ಅಪರಾಹ್ನ

    l like this wibsite its realy good.

  11. Ganesh K / ಡಿಸೆ 1 2010 12:09 ಅಪರಾಹ್ನ

    Ibbaru diggajaru seridare innobba diggaja huttbodu. 🙂

  12. archana swamy / ಡಿಸೆ 22 2010 3:05 ಅಪರಾಹ್ನ

    hve joined now dnt know hw it is

ನಿಮ್ಮ ಟಿಪ್ಪಣಿ ಬರೆಯಿರಿ