ಓದು ಬಜಾರ್

ಓದಿ ಇಲ್ಲಾ ಓಡಿ…

ಕಥಾ ಸಂಕಲನ ಬಿಡುಗಡೆಯ ನೋಟ

ರಮೇಶ್ ಹಿರೆಜಂಬೂರು ಅವರ ಕಥಾ ಸಂಕಲನ ಬಿಡುಗಡೆಯ ನೋಟ

IMG_2026

IMG_2036 IMG_2040

IMG_2020 IMG_2041

IMG_2037 IMG_2029

July 12, 2009 Posted by odubazar | Uncategorized | | No Comments Yet

ಎಷ್ಟೊಂದು ನಾಗೇಶ್ ಹೆಗಡೆ?

ಮೇ ಫ್ಲವರ್ ಮೀಡಿಯಾ ಹೌಸ್ ಹಮ್ಮಿಕೊಂಡಿದ್ದ ಫಿಶ್ ಮಾರ್ಕೆಟ್ ಗೆ ಈ ಬಾರಿಯ ಅತಿಥಿ ನಾಗೇಶ್ ಹೆಗಡೆ. ತಮ್ಮ ಕಳಕಳಿಯ ದನಿಯಲ್ಲಿ ಪರಿಸರದ ಲಾಭ ಯಾರಿಗೆ ಎಂದು ಬಣ್ಣಿಸಿದ ನಾಗೇಶ್ ಹೆಗಡೆ ಅವರ ವಿಶಿಷ್ಟ ಭಂಗಿಗಳು ಇಲ್ಲಿವೆ.
ಇನ್ನಷ್ಟು ಫೋಟೋಗಳು ಹಾಗೂ ವರದಿಗಳಿಗಾಗಿ ಭೇಟಿ ಕೊಡಿ: ಅವಧಿ 

ಮೇಫ್ಲವರ್ ಮೀಡಿಯಾ ಹೌಸ್ ಹಮ್ಮಿಕೊಂಡಿದ್ದ ‘ಫಿಶ್ ಮಾರ್ಕೆಟ್’ ಗೆ ಈ ಬಾರಿಯ ಅತಿಥಿ ನಾಗೇಶ್ ಹೆಗಡೆ. ತಮ್ಮ ಕಳಕಳಿಯ ದನಿಯಲ್ಲಿ ಪರಿಸರದ ಲಾಭ ಯಾರಿಗೆ ಎಂದು ಬಣ್ಣಿಸಿದ ನಾಗೇಶ್ ಹೆಗಡೆ ಅವರ ವಿಶಿಷ್ಟ ಭಂಗಿಗಳು ಇಲ್ಲಿವೆ.

ಇನ್ನಷ್ಟು ಫೋಟೋಗಳು ಹಾಗೂ ವರದಿಗಳಿಗಾಗಿ ಭೇಟಿ ಕೊಡಿ: ಅವಧಿ 

ಚಿತ್ರಗಳು: ಡಿ ಜಿ ಮಲ್ಲಿಕಾರ್ಜುನ್, ಸುಘೋಷ್ ಎಸ್ ನಿಗಳೆ 

IMG_8489

IMG_8502

IMG_8510

IMG_1609

IMG_8530

IMG_8520

IMG_8499

IMG_1607

June 2, 2009 Posted by odubazar | ಕ್ಲಿಕ್.., ಮೇಫ್ಲವರ್ | | 1 ಅನಿಸಿಕೆ

ಅಲ್ಲಿ ಕಂಡ ಮುಖಗಳು

ಜೋಗಿ ಹಾಕಿದ ಹೊಸ ಹೆಜ್ಜೆ ನೋಡಲು ಸೇರಿದ ಮುಖಗಳು ಇಲ್ಲಿವೆ. ಚಿತ್ರಗಳನ್ನು ತೆಗೆದವರು ಡಿ ಜಿ ಮಲ್ಲಿಕಾರ್ಜುನ್, ಪ್ರಕಾಶ್ ಹೆಗಡೆ, ಅಜಿತ್ ಕೌಂಡಿನ್ಯ

ಇನ್ನೂ ಹೆಚ್ಚಿನ ಚಿತ್ರಗಳಿಗೆ ಭೇಟಿ ಕೊಡಿ: ಅವಧಿ

IMG_1499

IMG_2513

IMG_1455

IMG_1425

IMG_1441

IMG_1467

IMG_1438

IMG_2511

IMG_1498

IMG_1477

IMG_1486

IMG_1439IMG_1435

May 25, 2009 Posted by odubazar | ಕ್ಲಿಕ್.. | | 2 ಅನಿಸಿಕೆಗಳು

ಧರ್ಮದ ಸೆಂಟ್ರಲ್ ಜೈಲು…

ಕೋಮು ಗಲಭೆಗಳು ಹಾಗೂ ಭಾರತದ ಪೊಲೀಸರು

ವಿಭೂತಿ ನಾರಾಯಣ ರಾಯ್

ಅನುವಾದ: ಹಸನ್ ನಯೀಂ ಸುರಕೋಡ

ಲೋಹಿಯಾ ಪ್ರಕಾಶನ

ಕ್ಷಿತಿಜ, ಕಪ್ಪಗಲ್ಲು ರಸ್ತೆ

ಬಳ್ಳಾರಿ- ೫೮೩ ೧೦೩

ದೂರವಾಣಿ: ೦೮೩೯೨-೨೫೭೪೧೨

ಪುಟ ೧೦೪ ಬೆಲೆ ೫೦

-ಹಸನ್ ನಯೀಂ ಸುರಕೋಡ

hasana0001

ಸ್ವಾಮಿ ನಿಷ್ಠೆಗೆ ಹೆಸರಾಗಿದ್ದ ತಮ್ಮ ಪೊಲೀಸ್ ಪಡೆಯ ಮೂಲಕ ಬ್ರಿಟಿಷ್ ದೊರೆಗಳು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವಲ್ಲಿ ಅಷ್ಟೇನೂ ಸಫಲರಾಗಲಿಲ್ಲ. ಜೈಲಿಗೆ ಹೋಗುವುದು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವಲ್ಲಿ ಅಷ್ಟೇನೂ ಸಫಲರಾಗಲಿಲ್ಲ. ಜೈಲಿಗೆ ಹೋಗುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಹೆಮ್ಮೆಯ ವಿಷಯವೆನಿಸಿತು. ಅವರು ಬ್ರಿಟಿಷರ ದೌರ್ಜನ್ಯಕ್ಕೆ ಮಣಿಯದಾದರು. ಆಗ ಭಾರತೀಯರಿಗೆ ಮೂಲ ಗುಣ ಹಾಗೂ ಭಾರತೀಯ ಸಮಾಜದ ಒಳ ಸೆಳೆತಗಳು ಬ್ರಿಟಿಷರ ಅರಿವಿಗೆ ಬಂದವು. ಇಲ್ಲಿ ಜಾತಿಯ ಜೈಲಿನಲ್ಲೇ ಕಣ್ತೆರೆದು ತಮ್ಮ ಪಾಲಿಗೆ ದಕ್ಕಿದ ಬದುಕನ್ನು ಎದುರಾಡದೇ ಸ್ವೀಕರಿಸಿ ಅದೇ ಜೈಲಿನಲ್ಲಿ ಕಣ್ತೆರೆದು ತಮ್ಮ ಪಾಲಿಗೆ ದಕ್ಕಿದ ಬದುಕನ್ನು ಎದುರಾಡದೇ ಸ್ವೀಕರಿಸಿ ಅದೇ ಜೈಲಿನಲ್ಲಿ ಕಣ್ಣು ಮುಚ್ಚುವ ಭಾರತೀಯರಿಗಾಗಿ ಧರ್ಮದ ಸೆಂಟ್ರಲ್ ಜೈಲುಗಳನ್ನು ನಿರ್ಮಿಸಿದರು. ಹೀಗೆ ದೇಶವನ್ನು ಒಡೆದು ಆಳುವುದಕ್ಕೆ ಈ ಅಮೂರ್ತ ಜೈಲುಗಳಿಗಿಂತ ಮಿಗಿಲಾದ ಮಾರ್ಗೊಪಾಯವಿಲ್ಲ ಎಂದು ಅವರಿಗೆ ಖಾತ್ರಿಯಾಯಿತು.

ಬ್ರಿಟಿಷರೇನೊ ಭಾರತ ಬಿಟ್ಟು ತೊಲಗಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ಸಿಕ್ಕಿದ್ದು ಸಂಭ್ರಮದ ಸಂಗತಿಯಾಗಬೇಕಿತು. ಆದರೆ ದೇಶ ಒಡೆದದ್ದು ಅತ್ಯಂತ ನೋವಿನ ಪ್ರಸಂಗವಾಗಿ ಪರಿಣಮಿಸಿತು. ಶತ ಶತಮಾನಗಳಿಂದ ಕೂಡಿ ಬದುಕಿದ್ದ ಭಾರತೀಯರಿಗೆ ಧರ್ಮದ ಸೆಂಟ್ರಲ್ ಜೈಲುಗಳನ್ನು ನಿರ್ಮಿಸಿದರು. ಹೀಗೆ ದೇಶವನ್ನು ಒಡೆದು ಆಳುವುದಕ್ಕೆ ಈ ಅಮೂರ್ತ ಜೈಲುಗಳಿಗಿಂತ ಮಿಗಿಲಾದ ಮಾರ್ಗೊಪಾಯವಿಲ್ಲ ಎಂದು ಅವರಿಗೆ ಖಾತ್ರಿಯಾಯಿತು.

ಬ್ರಿಟಿಷರೇನೊ ಭಾರತ ಬಿಟ್ಟು ತೊಲಗಿದರು. ದೇಶ ಒಡೆದದ್ದು ಅತ್ಯಂತ ನೋವಿನ ಪ್ರಸಂಗವಾಗಿ ಪರಿಣಮಿಸಿತು. ಶತ ಶತಮಾನಗಳಿಂದ ಕೂಡಿ ಬದುಕಿದ್ದ ಭಾರತೀಯರ ಮನಸ್ಸುಗಳು ಒಡೆದಿದ್ದವು. ಇದಕ್ಕೆ ಬ್ರಿಟಿಷರ ಕುತಂತ್ರವೂ ಕಾರಣವಾಗಿತ್ತು. ಜೊತೆಗೆ ಅದೊಂದು ಸ್ವಯಂಕೃತ ಅಪರಾಧವೂ ಅಗಿತ್ತು. ಒಡೆದ ಮನಸ್ಸುಗಳನ್ನು ಬೆಸೆಯುವ ನಿಟ್ಟಿನಲ್ಲಿ ಸರಕಾರವಾಗಲೀ ರಾಜಕಾರಣಿಗಳಾಗಲೀ ಪ್ರಾಮಾಣಿಕವಾಗಿ ಪ್ರಯತ್ನಿಸಲೇ ಇಲ್ಲ. ಆ ಕಾರಣದಿಂದಾಗಿ ಸ್ವತಂತ್ರ ಭಾರತದಲ್ಲಿ ಕೋಮುಗಲಭೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವುದಿಲ್ಲ ಎನ್ನುವುದು ಖೇದದ ಸಂಗತಿಯಾಗಿದೆ. ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಪೊಲೀಸರು ತಮ್ಮ ಹೊಸ ಒಡೆಯರ ಇಂಗಿತವನ್ನರಿತು ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಆತಂಕದ ವಿಷಯವಾಗಿದೆ.

ಖ್ಯಾತ ಪತ್ರಕರ್ತ ದಿನೇಶ್ ಅಮೀನ ಮಟ್ಟು ಅವರ ಪ್ರಕಾರ, ” ಪೊಲೀಸ್ ಇಲಾಖೆಯ ಈ ದುಸ್ಥಿತಿಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದವರು ರಾಜಕಾರಣಿಗಳು. ನೇಮಕಾತಿಯಿಂದ ವರ್ಗಾವಣೆವರೆಗೆ ಎಲ್ಲ ಅಧಿಕಾರಿಗಳನ್ನು ಕೈಯಲ್ಲಿಟ್ಟುಕೊಂಡಿರುವ ಈ ಒಡೆಯರ ‘ಬಂಧನ’ದಲ್ಲಿರುವ ಪೊಲೀಸರನ್ನು ಮುವತ್ತು ವರ್ಷಗಳ ಹಿಂದೆಯೇ ಬಿಡುಗಡೆಗೊಳಿಸುವ ಪ್ರಯತ್ನ ನಡೆಯಿತು. ಅದರ ಅಂಗವಾಗಿಯೇ ನೇಮಕಗೊಂಡದ್ದು ಧರ್ಮವೀರ ಅಧ್ಯಕ್ಷತೆಯ ‘ರಾಷ್ಟ್ರೀಯ ಪೊಲೀಸ್ ಆಯೋಗ’. ಇದಕ್ಕೆ ಪ್ರೇರಣೆ ತುರ್ತು ಪರಿಸ್ಥಿತಿ ಕಾಲಲ್ಲಿ ಇಂದಿರಾಗಾಂಧಿ ನಡೆಸಿದ ಪೊಲೀಸರ ದುರ್ಬಳಕೆ . ಆದರೆ 1979-1981ರ ಅವಧಿಯಲ್ಲಿ ಆಯೋಗ ನೀಡಿದ ಮೂರು ಸಂಪುಟಗಳ ವರದಿಯನ್ನು ಇಂದಿರಾಗಾಂಧಿ ಮಾತ್ರವಲ್ಲ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರಕಾರಗಳು ಕೂಡ ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ತೋರಿಸಲಿಲ್ಲ. ಇದರ ಬದಲಿಗೆ ಇನ್ನಷ್ಟು ಸಮಿತಿಗಳನ್ನು ನೇಮಿಸಿ ಗೊಂದಲ ನಿರ್ಮಿಸುವ ಪ್ರಯತ್ನ ನಡೆದವು. ಕೊನೆಗೂ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ ಪೊಲೀಸ್ ಸುಧಾರಣೆಯ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತೆ ಆದೇಶ ನೀಡಿತು. ಇದರಲ್ಲಿರುವುದು ನೇಮಕಾತಿ, ವರ್ಗಾವಣೆ ಮತ್ತು ಒತ್ತಡ ರಹಿತ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಸುಧಾರಣೆಗಳ ಕ್ರಮಗಳಷ್ಟೇ…. ಪೊಲೀಸರನ್ನು ರಾಜಕೀಯದ ಜೈಲಿನಿಂದ ಬಿಡುಗಡೆಗೊಳಿಸುವುದು ಸುಲಭದ ಕೆಲಸವಲ್ಲ.”

ನಮ್ಮದು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ. ಆದರೆ ಇಲ್ಲಿ ಒಬ್ಬ ರಾಜಕಾರಣಿ ಅಷ್ಟೇ ದೊಡ್ಡ ಸರ್ವಾಧಿಕಾರಿಯಾಗಿ ಮೆರೆಯಬಲ್ಲನು. ನಮ್ಮದು ನಾಗರಿಕ ಸಮಾಜ. ಆದರೆ ಇಲ್ಲಿ ನಾಗರಿಕರೆನಿಸಿಕೊಂಡವರು ಕ್ರೂರ ಮೃಗಗಳಾಗಬಲ್ಲರು. ಕೋಮು ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ಹಾಗೂ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಪೊಲೀಸರನ್ನು ಕಂಡು ಕೆಂಡಮಂಡಲವಾಗುತ್ತಿರುವವರಲ್ಲಿ ಹಿರಿಯ ಮಾಜಿ ಪೊಲೀಸ್ ಅಧಿಕಾರಿ, ಸಾಹಿತಿ ಹಾಗೂ ಎಲ್ಲಕ್ಕೂ ಹೆಚ್ಚಾಗಿ ಸಾಮಾಜಿಕ ಕಾಳಜಿಯ ಅಪ್ಪಟ ಮಾನವಪ್ರೇಮಿ ವಿಭೂತಿ ನಾರಾಯಣರಾಯ್ ಅವರೂ ಒಬ್ಬರಾಗಿದ್ದಾರೆ. ಅವರ ಪ್ರಕಾರ ಪೊಲೀಸರನ್ನು ಜಾತಿ, ಧರ್ಮದ ಜೈಲಿನಿಂದ ಬಿಡುಗಡೆಗೊಳಿಸುವುದು ಕಷ್ಟ ಸಾಧ್ಯವಾದ ಕೆಲಸ.

ಪೊಲೀಸ್ ಹಾಗೂ ಸೇನೆರಹಿತ ಜಗತ್ತಿನ ಕನಸು ಕಂಡಿದ್ದ ಡಾ. ರಾಮ ಮನೋಹರ ಲೋಹಿಯಾ ಸ್ವತಂತ್ರ ಭಾರತದಲ್ಲೂ ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ನಿರಂತರ ಹೋರಾಟ ಮಾಡಿದರು. ಬ್ರಿಟಿಷ್ ಸರಕಾರಕ್ಕಿಂತ ನಮ್ಮ ಸರಕಾರವೇ ಅವರನ್ನು ಹೆಚ್ಚು ಸಲ ಜೈಲಿಗಟ್ಟಿತು. ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ನಿರಂತರ ಹೋರಾಟ ಮಾಡಿದರು. ಬ್ರಿಟಿಷ್ ಸರ್ಕಾರಕ್ಕಿಂತ ನಮ್ಮ ಸರ್ಕಾರವೇ ಅವರನ್ನು ಹೆಚ್ಚು ಸಲ ಜೈಲಿಗಟ್ಟಿತು. ಒಡೆದ ದೇಶವನ್ನು ಹಾಗೂ ಒಡೆದ ಮನಸ್ಸುಗಳನ್ನು ಬೆಸೆಯಲು ಜೀವನದುದ್ದಕ್ಕೂ ಶ್ರಮಿಸಿದ ಲೋಹಿಯಾರ ಕನಸು ನನಸಾಗುವಂಥದ್ದಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳುವವರು ಕೋಮು ದಳ್ಳುರಿಯನ್ನು ಹೊತ್ತಿರುವವರಿಗಿಂತ ಹೆಚ್ಚು ಬೇಜವಾಬ್ದಾರಾಗುತ್ತಾರೆ.

ಪೋಲಿಸ್ ಪಡೆಯೆಂದರೆ ರಕ್ಕಸರ ಪಡೆಯಲ್ಲ. ಅಲ್ಲಿ ಕೂಡ ಪ್ರಜ್ಞಾವಂತರೂ ಮಾನವ ಪ್ರೇಮಿಗಳೂ ಇದ್ದಾರೆ ಎನ್ನುವುದನ್ನು ವಿಭೂತಿ ನಾರಾಯಣರಾಯ್ ಅಂಥವರು ಸಾಕ್ಷಿಯಾಗಿದ್ದಾರೆ. ನಾನು ಅವರ ಜೊತೆಗೆ ಮಾತಾಡುತ್ತಿದ್ದಾಗ ಒಬ್ಬ ಮಾಜಿ ಪೊಲೀಸ್ ಅಧಿಕಾರಿ ಜೊತೆ ಮಾತಾಡುತ್ತಿದ್ದೇನೆ ಎಂದು ನನಗೆ ಅನ್ನಿಸಲೇ ಇಲ್ಲ. ಅವರ ‘ಸಾಂಪ್ರದಾಯಿಕ’ ದಂಗೆ ಔರ್ ಭಾರತೀಯ ಪೊಲೀಸ್’ ಪುಸ್ತಕವನ್ನು ಅನುವಾದಿಸಲು ಅವರ ಅನುಮತಿ ಕೋರಿದಾಗ ಅವರು, “ಮೊದಲು, ‘ರಸೀದಿ ತಿಕೇಟು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದಕ್ಕೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸಾಮಾಜಿಕ ಕಾಳಜಿಯ ನಿಮ್ಮ ಪ್ರಕಾಶಕರಿಗೂ ಅಭಿನಂದನೆ’ ಎಂದರು.

ಕೋಮು ದಳ್ಳುರಿಗೆ ಬಲಿಯಾದ ಅಸಂಖ್ಯಾತ ಅಮಾಯಕರಿಗೆ ಈ ಕೃತಿಯನ್ನು ಗೌರವಾದರಗಳೊಂದಿಗೆ ಅರ್ಪಿಸಿದ್ದೇನೆ.

ಏಪ್ರಿಲ್ 21, 2009 Posted by odubazar | ಬುಕ್ ಬಜಾರ್ | | No Comments Yet

ಕ್ರಿಯಾ ಪ್ರಕಾಶನದ ಹೊಸ ಪುಸ್ತಕಗಳು

ಕ್ರಿಯಾ ಪ್ರಕಾಶನ ಸದಾ ಸಮಕಾಲೀನ ವಿಚಾರಗಳಿಗೆ ಕನ್ನಡಿ ಹಿಡಿಯುತ್ತಾ ಬಂದಿದೆ. ಸಮಾಜದ ಬೆಳವಣಿಗೆಗೆ ತತ್ ಕ್ಷಣದ ಸ್ಪಂದನ ಕ್ರಿಯಾದ ಹೆಚ್ಚುಗಾರಿಕೆ. ಇತ್ತೀಚಿಗೆ ಬ್ಲಾಗ್ ಸಹಾ ಆರಂಭಿಸಿದೆ. ಬ್ಲಾಗ್ ನಲ್ಲಿ ಪ್ರಕಾಶನ ತನ್ನನ್ನು ಪರಿಚಯಿಸಿಕೊಂಡಿರುವುದು ಹೀಗೆ-  ಇತ್ತೀಚಿಗೆ ಹೊರಬಂದ ಎರಡು ಪುಸ್ತಕಗಳೂ ಇವೆ. 

ಕ್ರಿಯಾ ಪ್ರಕಾಶನ

ಕ್ರಿಯಾ ಪ್ರಕಾಶನ ಎಪ್ಪತ್ತರ ದಶಕದ ಎಡ-ಪ್ರಜಾಸತ್ತಾತ್ಮಕ ಮತ್ತು ಪ್ರಗತಿಪರ ಚಳುವಳಿಗಳ ಭಾಗವಾಗಿ ಹುಟ್ಟಿ ಬೆಳೆದ ಸಂಸ್ಥೆ. ಹಲವು ದಶಕಗಳಿಂದ ಪುಸ್ತಕ ಪ್ರಕಾಶನವಲ್ಲದೆ ಸ್ವಂತ ಆಧುನಿಕ ಪ್ರೆಸ್ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ.  ಕರ್ನಾಟಕದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸುವ ಕೃತಿಗಳ ರಚನೆ, ಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುತ್ತಾ ಬಂದಿದೆ. ಕೋಮುವಾದ, ಜಾಗತೀಕರಣ ಮತ್ತು ಭೋಗವಾದದ ದಾಳಿಗಳನ್ನು ಧೃಢವಾಗಿ ಎದುರಿಸಿ, ಅವುಗಳಿಗೆ ಬದಲಿ ಮೌಲ್ಯಗಳನ್ನು ರೂಪಿಸುವ ಚಳುವಳಿಯನ್ನು ಎತ್ತಿ ಹಿಡಿಯುವ ಪುಸ್ತಕಗಳ ಪ್ರಕಾಶನ ಕ್ರಿಯಾದ ಮುಖ್ಯ ಉದ್ದೇಶಗಳಲ್ಲೊಂದು. ಕ್ರಿಯಾ ಕರ್ನಾಟಕದ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗಳನು,ಮತ್ತು ಅವು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನ ಆಧಾರಿತ  ಪುಸ್ತಕಗಳ ಪ್ರಕಾಶನವನ್ನು ಇನ್ನಷ್ಟು ವ್ಯಾಪಕಗೊಳಿಸುವ ಆಶಯ ಹೊಂದಿದೆ.

scan00081

enidu-hindu-rashtra2

ಏಪ್ರಿಲ್ 15, 2009 Posted by odubazar | ಬುಕ್ ಬಜಾರ್ | | No Comments Yet

ಬೆಳಕಿನ ಬೆನ್ನು ಹತ್ತಿದ ಕಾವ್ಯ

 

 

belakina belakina-back0001

ಇಂದಿನ ಜಗತ್ತಿಗೆ ಕಾವ್ಯದ ಅಗತ್ಯವಿಲ್ಲವೆಂದು ಮೇಲ್ನೋಟಕ್ಕೆ ತೋರುತ್ತದೆ. ಸಂಸೃತಿಯ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೆಆಥರ್ಿಕ ಅಭಿವೃದ್ಧಿಯೊಂದನ್ನೇ ಗುರಿಯಾಗಿರಿಸಿಕೊಂಡುಬೆಳೆಯುತ್ತಿರುವ ಜಗತ್ತಿಗೆ ಕಾವ್ಯದ ಮಾರ್ದವತೆಯಿಂದ ಗದ್ಯದ ವೈಚಾರಿಕತೆಯೇ ಹೆಚ್ಚು ಇಷ್ಟ. ದೆಹಲಿಯಲ್ಲಿ ಓಡಾಡುತ್ತಿರುವ ನನಗೆ ಗದ್ಯ ಓದುವ ಜನ ಆಗಾಗ ಕಣ್ಣಿಗೆ ಬೀಳುತ್ತಾರೆ. ಆದರೆ ಪದ್ಯ ಓದುವವರನ್ನು ನಾನು ಎಲ್ಲಿಯೂ ಕಂಡಿಲ್ಲ.

 ಹೀಗಿದ್ದರೂ ಅಲ್ಲಿ ಇಲ್ಲಿ ನಡೆಯುವ ಕವಿ ಸಮ್ಮೇಳನಗಳಲ್ಲಿ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ದೂರದರ್ಶನಗಳಲ್ಲಿ ಓದಲಾಗುವ ಕವಿತೆಗಳನ್ನು ಕೇಳಲು-ನೋಡಲು ಮನೆಮಂದಿಯೆಲ್ಲಾ ಹಾತೊರೆಯುತ್ತಿರುತ್ತಾರೆ. ಕವಿಗೆ ಸಿಗುವ ಸ್ಥಾನಮಾನ ಗದ್ಯ ಬರಹಗಾರನಿಗೆ ದೊರೆಯುತ್ತಿಲ್ಲ. ಹೀಗಾಗಿ ಗದ್ಯ ಬರಹಗಾರರೂ ಕೂಡಾ ಒಂದೆರಡು ಕವನ ಬರೆದೇ ಬರೆಯುತ್ತಾರೆ. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಆಧುನಿಕ ತಂತ್ರಜ್ಞಾನಿಗಳು ಕೂಡಾ ಆಗೀಗ ಕವನ ಬರೆಯುವ ಪದ್ಧತಿಗೆ ಬಲಿಯಾಗಿದ್ದಾರೆ. ಕವನಗಳು ಎಷ್ಟೇ ಕೆಟ್ಟವಿರಲಿ, ಅವನ್ನು ಬರೆಯುವವರೂ ಇದ್ದಾರೆ, ಖಾಸಗಿಯಾಗಿ ಓದುವವರೂ ಇದ್ದಾರೆ. ಈ ಚೋದ್ಯವು ಕಾವ್ಯವು ಆಧುನಿಕ ಜಗತ್ತಿಗೆ ಅಗತ್ಯ ಎಂಬ ಸತ್ಯವನ್ನು ಸಾರಿ ಹೇಳುತ್ತಿದೆ…..

-ಡಾ ಪುರುಷೋತ್ತಮ ಬಿಳಿಮಲೆ

ಮುನ್ನುಡಿಯ ಆರಂಭದ ಭಾಗ 

ಏಪ್ರಿಲ್ 2, 2009 Posted by odubazar | ಬುಕ್ ಬಜಾರ್ | | No Comments Yet

ಕವಿತಾ ರೈ ವಿಮರ್ಶಾ ವಿವೇಕ

 

ನವ ವಿಸರ್ಗ

ಡಾ ಕವಿತಾ ರೈ

ವಿಮರ್ಶಾ ಲೇಖನಗಳ ಸಂಕಲನ

ಪ್ರಕಾಶಕರು: ಸೃಷ್ಟಿ ಪಬ್ಲಿಕೇಷನ್ಸ್ 

nava

ಸಾಹಿತ್ಯ ಮತ್ತು ಸಮಾಜದ ನಡುವಣ ಅನನ್ಯತೆಗಳನ್ನು ಪಾರಸ್ಪರಿಕ ಸಂಬಂಧವಾಗಿ ಗುರುತಿಸುವ ನವ ವಿಸರ್ಗ‘ ವಿಮರ್ಶೆ ಯ ಉಪಕ್ರಮದಲ್ಲಿ ಹೊಸಬಗೆಯ ಲಯಗಳನ್ನು ಗುರುತಿಸಲು ತೊಡಗಿದೆ. ಕವಿತಾ ರೈ, ತಮ್ಮ ಬರಹದಲ್ಲಿ ತೋರಿಸುವ ವಿಮರ್ಶಾ ವಿವೇಕ, ಬದುಕಿನ ನೋಟದಲ್ಲಿ ಕಾಣುವ ದಿಟ್ಟತನ, ಸಾಮಾಜಿಕ ಬದಲಾವಣೆಗಳ ಹಿಂದಿರುವ ಪ್ರಭುತ್ವ ಮತ್ತು ಶಕ್ತಿಗಳನ್ನು ಇಲ್ಲಿಯ ಬರಹಗಳಲ್ಲಿ ನಾವು ಕಾಣಬಹುದು.

nava-back-11ಬದುಕಿನ ಲಯವು ಸಾಹಿತ್ಯದ ಒಳಲಯಗಳಲ್ಲಿ ಚರಿಸುವ ಸೂಕ್ಷ್ಮತೆಯನ್ನು ಕವಿತಾ ರೈಹಿಡಿಯುವ, ವಿಶ್ಲೇಷಿಸುವ ಮತ್ತು ವ್ಯಾಖ್ಯಾನಿಸುವ ಬಗೆಗಳು ನವ ವಿಸರ್ಗಕ್ಕೆ ತಾಳ ಲಯವನ್ನು ಹೊಂದಿಸುತ್ತವೆ. ಇದು ಅವರಿಗೆ ಸಾಧ್ಯವಾಗಿರುವುದೇ ಸಮಾಜ ಮತ್ತು ಸಾಹಿತ್ಯದ ನಡುವಣ ಹೊಕ್ಕು ಬಳಕೆಗಳನ್ನು ತೀವ್ರವಾಗಿ ಶೋಧಿಸುವ ಪರಿಣಾಮವಾಗಿದೆ. ಕವಿತಾ ರೈ ಅವರ ಸೂಕ್ಷ್ಮ ಸಂವೇದನೆ ವಿಮರ್ಶೆ ಯ ಉದ್ದಕ್ಕೂ ಅಡ್ಡ ಹಾಸುಗಳಿಂದ ಇಲ್ಲಿಯ ಎಲ್ಲಾ ಲೇಖನಗಳಲ್ಲೂ ಚರಿಸುತ್ತದೆಂಬುದು ಒಂದು ವಿಶೇಷವೇ ಸರಿ.

-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

 ಬೆನ್ನುಡಿಯಿಂದ

ಏಪ್ರಿಲ್ 2, 2009 Posted by odubazar | ಬುಕ್ ಬಜಾರ್ | | No Comments Yet

ಬೆಂಗಳೂರಿನಲ್ಲಿ ತುಳು ತಲ್ಲಣ

ಕರಾವಳಿಯ ಬಹುಸಂಸ್ಕೃತಿ ಕುರಿತ ಲೇಖನಗಳ ಸಂಕಲನ ‘ಕಡಲತಡಿಯ ತಲ್ಲಣ’ ಕೃತಿ

ಬೆಂಗಳೂರು ಹಾಗೂ ದೆಹಲಿಯಲ್ಲಿ ಬಿಡುಗಡೆಯಾಯಿತು.

img_0642

img_0627 img_0629

img_0631 img_06361

img_0638 img_0645

March 30, 2009 Posted by odubazar | ಬುಕ್ ಬಜಾರ್ | | No Comments Yet

ದೆಹಲಿಯಲ್ಲಿ ‘ತಲ್ಲಣ’

ಸೃಷ್ಟಿ ಪಬ್ಲಿಕೇಶನ್ಸ್, ಬೆಂಗಳೂರು ಇವರು ಹೊರ ತಂದಿರುವ ಉಷಾ ಕಟ್ಟೆಮನೆ ಮತ್ತು ಡಾ. ಪುರುಷೋತ್ತಮ ಬಿಳಿಮಲೆ ಸಂಪಾದಿಸಿದ “ಕಡಲ ತಡಿಯ ತಲ್ಲಣ” ಕರಾವಳಿಯ ಬಹುಸಂಸ್ಕೃತಿಯ ಕುರಿತ ಲೇಖನಗಳ ಸಂಕಲನವನ್ನು ದಿ ವೀಕ್ ಪತ್ರಿಕೆಯ ದೆಹಲಿಯ ಸ್ಥಾನೀಯ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಬಿಡುಗಡೆಗೊಳಿಸಿದರು.

ಭಾರತ ಸರಕಾರದ ಮಾಜಿ ಮುಖ್ಯ ವಾರ್ತಾ ಅಧಿಕಾರಿ ಹಾಗೂ ಎ.ಎನ್.ಐ.ಯ ಸಂಪಾದಕ  ರಾಮಮೋಹನ್ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಪುರುಷೋತ್ತಮ ಬಿಳಿಮಲೆಯವರು ಪುಸ್ತಕದ ಕುರಿತು ಪ್ರಸ್ತಾವನೆ ಮಾಡಿದರು. ಕವಿ ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಮತ್ತು ಆರ್. ಭರತಾದ್ರಿ ಅವರೂ ಮಾತಾಡಿದರು. ಪುಸ್ತಕದ ಕುರಿತು ಉಷಾ ಭರತಾದ್ರಿ ಮತ್ತು ಬಾಲಕೃಷ್ಣ ನಾಯ್ಕ್ ಮಾತಾಡಿದರು.

ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಶಾಲೆಯ ಸೆಮಿನಾರ್‍ ಹಾಲ್‍ನಲ್ಲಿ ನಡೆದ ಬಿಡುಗಡೆಕಾರ್ಯಕ್ರಮವನ್ನು ಗುರುಬಾಳಿಗ ನಡೆಸಿಕೊಟ್ಟರು. ಜಲಜಾರಾಜು  ಕಯ್ಯಾರ ಕಿಂಞಣ್ಣ ರೈ ಅವರ ಶ್ರೀಮುಖ ಕವನ ಹಾಡಿದರು.

ಚಿತ್ರಗಳು: ಬಸ್ತಿ ದಿನೇಶ್ ಶೆಣೈ
ವರದಿ: ಬಾನಾಡಿ

kadalatadi-dinesh-8

kadalatadi-dinesh-2 kadalatadi-dinesh-9

kadalatadi-dinesh-6 kadalatadi-dinesh-4

kadalatadidinesh1

March 30, 2009 Posted by odubazar | ಬುಕ್ ಬಜಾರ್ | | No Comments Yet

ಗುಜರಾತಿನ ಹೊಸ ದನಿ ದರ್ಶಿನಿ

ಗುಜರಾತಿನ ಹೊಸ ದನಿ ದರ್ಶಿನಿ ದಾದಾವಾಲಾ ಬೆಂಗಳೂರಿನಲ್ಲಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರವಾಸ ಅಧ್ಯಯನ ಯೋಜನೆಯ ಅಂಗವಾಗಿ ಇಲ್ಲಿದ್ದ ದರ್ಶಿನಿ ಮೇಫ್ಲವರ್ ಮೀಡಿಯಾ ಹೌಸ್ ನ ಅಂಗಳದಲ್ಲಿ ಜೋಗಿ ಎಚ್ ಎನ್ ಆರತಿ ಜೊತೆಗೂಡಿ ಕವಿತೆಗಳನ್ನು ವಾಚಿಸಿದರು. ಮಮತಾ ಸಾಗರ್ ದರ್ಶಿನಿ ಕವಿತೆಗಳನ್ನು ಕನ್ನಡಕ್ಕಿಳಿಸಿದರು

img_0592

img_0552 img_0613

img_0537

img_0562 img_0540

img_0550 img_0587

img_0598 img_0588

img_0618

March 26, 2009 Posted by odubazar | ಬುಕ್ ಬಜಾರ್, ಮೇಫ್ಲವರ್ | | 1 ಅನಿಸಿಕೆ

ಪಾಪಿ ನ್ಯೂ ಇಯರ್

ಹೊಸ ವರ್ಷಕ್ಕೆ ವಿಶ್ ಮಾಡ್ಬೇಕು. ಆದ್ರೆ ಏನೇನೋ ಶುಭಾಷಯ ಹೇಳೋದರ ಬದಲು ಪುಸ್ತಕದ ಮೂಲಕವೇ ವಿಶ್ ಮಾಡಿದ್ರೆ ಹೇಗೆ ಅನಿಸ್ತು.

ನೋಡಿ ಇಲ್ಲಿದೆ ಛಂದ ಪುಸ್ತಕ ಪ್ರಕಟಿಸಿರುವ ಅಪಾರ ಅವರ ಮದ್ಯಸಾರ ಕೃತಿಯಿಂದ ಆಯ್ದ ಒಂದು ಶುಭಾಷಯ

ಇದು ಬ್ಲಾಗಿಗರಿಗೆ ಹೇಳಿಮಾಡಿಸಿದ್ದು. ಇದು ಬರೀ ಶುಭಾಷಯ ಪತ್ರವಲ್ಲ. ಮೌಸ್ ಪ್ಯಾಡ್.

ನಿಮಗೆ ಇದು ಬೇಕಾದರೆ ವಿವರಗಳಿಗೆ mayflowermh@gmail.com ಸಂಪರ್ಕಿಸಿ.  

m2

ಡಿಸೆಂಬರ್ 31, 2008 Posted by odubazar | Uncategorized | | No Comments Yet

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು..

dscn4100-copydscn4078-copy

dscn4095-copy

dscn4083-copyನಾಗತಿಹಳ್ಳಿ ರಮೇಶ್ ಇತ್ತೀಚಿಗೆ ‘ಸಮುದ್ರ ಮತ್ತು ಮಳೆ’ ಕವನ ಸಂಕಲನ ತಂದರು. ಅದರ ಮುಖಪುಟದಿಂದ ಆರಂಭಿಸಿ ಇಡೀ ಪುಸ್ತಕವನ್ನು ಆವರಿಸಿದ್ದು ಅವರ ತಾಯಿ ಪ್ರೀತಿ. ನಾಗತಿಹಳ್ಳಿ ನೀಲಗಿರಿ ಪದದ ಕೆಂಪಕ್ಕ ರಮೇಶ್ ಅವರ ತಾಯಿ. ಈ ಸಂಕಲನ ನನ್ನ ತಾಯಿ ಅಲ್ಲದೆ ಇನ್ನಾರು ಬಿಡುಗಡೆ ಮಾಡಲು ಅರ್ಹರು ಎಂದು ಅನಿಸಿದ್ದೇ ನಾಗತಿಹಳ್ಳಿ ಪುಸ್ತಕದ ಗಂಟಿನ ಸಮೇತ ಊರಿಗೆ ಹೊರಟರು. ಆ ತಾಯಿ ಬಿಡುಗಡೆ ಮಾಡಿ ಸಂಭ್ರಮಿಸಿದ ಪರಿ ಇಲ್ಲಿದೆ….

January 15, 2009 Posted by odubazar | ಬುಕ್ ಬಜಾರ್ | | 2 ಅನಿಸಿಕೆಗಳು

ಹೊಸತು…ಹೊಸತು…

ಜನಸಂಸ್ಕೃತಿ

ಡಾ. ಪುರುಷೋತ್ತಮ ಬಿಳಿಮಲೆ

ಕನ್ನಡ ಸಂಘ

ಕ್ರೈಸ್ಟ್ ವಿಶ್ವವಿದ್ಯಾಲಯ

ಹೊಸೂರು ರಸ್ತೆ

ಬೆಂಗಳೂರು- ೫೬೦೦೨೯  

jana-samskriti-1

January 16, 2009 Posted by odubazar | ಬುಕ್ ಬಜಾರ್ | | No Comments Yet

‘ಪುಸ್ತಕವೆಂದರೆ ಪುಸ್ತಕವಲ್ಲ, ಅರಿವಿನ ಗೂಡು…’

chinthanaa3

‘ಚಿಂತನ’ ಪುಸ್ತಕ ಲೋಕದಲ್ಲೊಂದು ವಿಶಿಷ್ಟ ಹೆಸರು. ಪುಸ್ತಕಕ್ಕಾಗಿ ಪುಸ್ತಕ ಎನ್ನುವ ಸಂಸ್ಥೆ ಇದಲ್ಲ. ‘ಪುಸ್ತಕವೆಂದರೆ ಪುಸ್ತಕವಲ್ಲ, ಅರಿವಿನ ಗೂಡು…’ ಎಂಬ ಗೀತೆಯಂತೆ ಪುಸ್ತಕ ನಮ್ಮೊಳಗಿನ ಬದಲಾವಣೆಗೆ ತುಡಿಯಬೇಕು ಎಂಬ ಹಂಬಲವುಳ್ಳದ್ದು. ಈಗಾಗಲೇ ಪುಸ್ತಕ ಪ್ರೀತಿ ಬ್ಲಾಗ್ ನೀವೆಲ್ಲಾ ಓದುತ್ತಲೇ ಬಂದಿದ್ದೀರಿ. ಆ ಸಾಲಿಗೆ ಅದೇ ಬಳಗ ಸೇರಿಸುತ್ತಿರುವ ಇನ್ನೊಂದು ಕೊಂಡಿ ಚಿಂತನ ಪುಸ್ತಕ. ಹಲವು ಗಮನಿಸಬೇಕಾದ ಪುಸ್ತಕಗಳು ಈಗ ಪ್ರಕಟಣೆಯ ಹಂತದಲ್ಲಿದೆ.

ತಮ್ಮ ಬ್ಲಾಗ್ ಅನ್ನು ಚಿಂತನ ಪರಿಚಯಿಸಿಕೊಳ್ಳುವುದು ಹೀಗೆ-

ನಾವು ಹಲವು ವರ್ಷಗಳಿಂದ ಉತ್ತಮ ಅಭಿರುಚಿಯಜನಪರ-ಪ್ರಗತಿಪರ ಆಶಯ ಮತ್ತು ಮೌಲ್ಯಗಳನ್ನು ಬಿಂಬಿಸುವ ಪುಸ್ತಕಗಳ ಪ್ರಕಾಶನದಲ್ಲಿ ತೊಡಗಿದ್ದೇವೆ. ಇದಕ್ಕಾಗಿ ಚಿಂತನ‘ ಎಂಬ ಸಂಸ್ಥೆ ಸ್ಥಾಪಿಸಿ ಕೆಲಸ ಮಾಡುತ್ತಿದ್ದೇವೆ. ಅದನ್ನು ದೊಡ್ಡ ಪ್ರಮಾಣದಲ್ಲಿ ಪ್ರಬಲವಾದ ಸಂಸ್ಥೆಯಾಗಿ ಬೆಳೆಸಿ ಜನಪರ-ಪ್ರಗತಿಪರ ಕೃತಿಗಳ ರಚನೆ-ಪ್ರಕಾಶನಮತ್ತು ಕರ್ನಾಟಕದ  ಸಾಂಸ್ಕೃತಿಕ ಲೋಕದ ಆರೋಗ್ಯಕರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕನಸು ಕಾಣುತ್ತಾ ಬಂದಿದ್ದೇವೆ. ಆ ಹಾದಿಯಲ್ಲಿ ಬರುವ ಅಡಚಣೆಗಳನ್ನು ನಿವಾರಿಸಿಕನಸನ್ನು ನನಸು ಮಾಡಲು ಭರದ ಸಿಧ್ಧತೆ ನಡೆಸುತ್ತಿದ್ಧೇವೆ. ಈ ನಡುವೆ ಕರ್ನಾಟಕದ ಸಾಂಸ್ಕೃತಿಕ ಲೋಕದ ಹರವು ಮತ್ತು ಸವಾಲುಗಳು ಇನ್ನಷ್ಟು ಹೆಚ್ಚಿವೆ.

1. ಕರ್ನಾಟಕದ  ಬದುಕಿನಲ್ಲಿ ಜನ-ಪರಪ್ರಗತಿಪರ ಮೌಲ್ಯಗಳನ್ನು ಎತ್ತಿ ಹಿಡಿಯುವ ಉತ್ತಮ ಅಭಿರುಚಿಯ ಕೃತಿಗಳ ರಚನೆ,ಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು.

2. ಕನ್ನಡ ಪುಸ್ತಕ ಪ್ರಕಾಶನ ಲೋಕವನ್ನು ಪುಸ್ತಕಗಳ ವಿಷಯಶೈಲಿಮುದ್ರಣವಿನ್ಯಾಸಗಳಲ್ಲಿ ಇನ್ನಷ್ಟು ಹೊಸಸಾಮಯಿಕ ಮತ್ತು ಸೃಜನಶೀಲ ಬಳವಣಿಗೆಗಳಿಂದ ಶ್ರೀಮಂತಗೊಳಿಸುವುದು

3. ಕನ್ನಡದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳ ರಚನೆಯಲ್ಲಿ ತೊಡಗಿರುವ ಉದಯಮಾನ ಮತ್ತು ಪ್ರಭುದ್ದ ಲೇಖಕರನ್ನು ಪ್ರೋತ್ಸಾಹಿಸಿ ಅವರ ಕೃತಿಗಳು ಜನತೆಯನ್ನು ತಲುಪುವಂತೆ ಎಲ್ಲಾ ಪ್ರಯತ್ನಗಳನ್ನು ಮಾಡುವುದು

4. ಕನರ್ಾಟಕದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸುವ ಕೃತಿಗಳ ರಚನೆಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು.

ಇವೇ ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊರಟ ನಮ್ಮ ಹಾದಿ ಹೆಜ್ಜೆಗಳನ್ನು ದಾಖಲಿಸಲು ಈ ಬ್ಲಾಗ್ ಪ್ರಯತ್ನಿಸುತ್ತದೆ.

 

January 17, 2009 Posted by odubazar | ಬುಕ್ ಬಜಾರ್ | | No Comments Yet

ಬದುಕು ಪ್ರೀತಿಸುವ ‘ಹಳ್ಳ ಬಂತು ಹಳ್ಳ’

 

-ಎಂ.ಎಸ್. ಆಶಾದೇವಿ

hallapreviewಸಾಮಾನ್ಯವಾಗಿ ಮಹತ್ವದ ಲೇಖಕನೊಬ್ಬನ ಬರವಣಿಗೆಯ ಪ್ರಕ್ರಿಯೆಯಲ್ಲಿ ಓದುಗರೂ ಅವಿನಾ ಸಂಬಂಧವೊಂದನ್ನು ಕಟ್ಟಿಕೊಂಡಿರುತ್ತಾರೆ. ಕೆಲವು ಸಂದರ್ಭಗಳಲ್ಲಂತೂ ಅದೊಂದು ಸಾವಯವ ಸಂಬಂಧ ಎನಿಸುವಷ್ಟು ಕ್ರಿಯಾಶೀಲವಾಗಿರುತ್ತದೆ. ಆದರೆ ಕೆಲವು ಅಪರೂಪದ ಮಹತ್ವದ ಲೇಖಕರಿರುತ್ತಾರೆ. ಅವರು ಆ ಪ್ರಕ್ರಿಯೆಯ ಹಂಗೇ ಇಲ್ಲದವರಂತೆ ತಮ್ಮ ಮಹತ್ವದ ಕೃತಿಯೊಡನೆ ಓದುಗರೆದುರಿಗೆ ಪ್ರತ್ಯಕ್ಷರಾಗುತ್ತಾರೆ. ಕೃತಿಯೊಂದಿಗೆ ಅನುಸಂಧಾನ ನಡೆಸುತ್ತಿರುವಾಗಲೇ ಓದುಗರಿಗೆ ಇದಕ್ಕೆ ನಾವು ಬಹುದಿನದಿಂದ ಕಾಯುತ್ತಿದ್ದೆವಲ್ಲಾ, ಇದರೊಂದಿಗಿನ ಅನುಸಂಧಾನಕ್ಕೆ ಸಿದ್ಧರಾಗಿದ್ದೆವಲ್ಲಾ ಎನಿಸತೊಡಗುತ್ತದೆ.

ಮಹತ್ವದ ಕೃತಿಯೊಂದಕ್ಕೆ ಆಸಕ್ತ ಓದುಗ ಸಮುದಾಯ ನಡೆಸುವ ಅಮೂರ್ತ ಸಿದ್ಧತೆ ಈ ಬಗೆಯದು. ಸಾಹಿತ್ಯದಲ್ಲಿ ಇಂಥ ಅಪರೂಪದ ಉದಾಹರಣೆಗಳು ಹಲವಿವೆ. ಶ್ರೀನಿವಾಸ ವ್ಯೆದ್ಯರ ‘ಹಳ್ಳ ಬಂತು ಹಳ್ಳ’ ಕೃತಿ ಹೀಗೆ ಕನ್ನಡ ಓದುಗರಿಗೆ ಅಚಾನಕ್ ಎನ್ನುವಂತೆ ಒದಗಿಬಂತು. ಅವರ ಇದಕ್ಕೆ ಮುಂಚಿನ ಬರವಣಿಗೆಗಳನ್ನು ನಿರ್ಲಕ್ಷಿಸಿ ಈ ಮಾತನ್ನು ಹೇಳುತ್ತಿಲ್ಲ. ಹಾಗೆ ನೋಡಿದರೆ ಅವರ ‘ಮನಸುಖರಾಯನ ಮನಸು’ ಕೃತಿಯನ್ನು ಅನೇಕ ಕಾರಣಗಳಿಗಾಗಿ ಕನ್ನಡದ ಮುಖ್ಯ ಕೃತಿಗಳಲ್ಲಿ ಒಂದೆಂದೇ ನಾನು ತಿಳಿದಿದ್ದೇನೆ. ಲಲಿತ ಪ್ರಬಂಧ ಮತ್ತು ಸಣ್ಣ ಕಥೆಗಳ ಪ್ರಕಾರವನ್ನು ಅಭಿನ್ನವಾಗಿ ಬೆಸೆದು ನೋಡುವ ಪ್ರಯೋಗಶೀಲ ಕೃತಿ ಇದು. ಆದರೆ ‘ಹಳ್ಳ ಬಂತು ಹಳ್ಳ’ ಕೃತಿಯನ್ನು ಓದುಗರು ಅಚ್ಚರಿ ಮತ್ತು ಸಂಭ್ರಮಗಳಲ್ಲಿ ಸ್ವೀಕರಿಸಿದ ಬಗೆಯನ್ನು ಗಮನಿಸಿದಾಗ ಈ ಮಾತು ಹೇಳುವುದು ಅನಿವಾರ್ಯ.

ಶ್ರೀನಿವಾಸ ವ್ಯೆದ್ಯರ ಮುಖ್ಯ ಕಾಳಜಿಗಳೆಂದರೆ ಕಾಲದ ಸ್ಥಿತ್ಯಂತರಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ಪೂರ್ಣ ಸಂಬಂಧ, ಮನುಷ್ಯ ಸ್ವಭಾವದ ನಿಗೂಢ ವಿಲಕ್ಷಣಗಳು, ಸಂಗತವೆನ್ನುವಂತೆ ಕಾಣುತ್ತಲೇ ತನ್ನೊಳಗೆ ಅಸಂಗತವಾಗಿರುವ ಬದುಕು, ಶಾಶ್ವತವೆನ್ನುವಂತೆ ಕಾಣುವ ಮೌಲ್ಯಗಳು, ನಿಧಾನವಾಗಿ ತಮ್ಮ ಸ್ವರೂಪ ಮತ್ತು ಕೇಂದ್ರವನ್ನು ಬದಲಿಸಿಕೊಳ್ಳುವ ಕ್ರಮ ಮತ್ತು ಮನುಷ್ಯ ಸಂಬಂಧಗಳ ಬಿಡಿಸಬರದ ಗೋಜಲುಗಳು. ಈ ಎಲ್ಲವನ್ನೂ ವ್ಯೆದ್ಯರು ಚಿಕಿತ್ಸಕ ದೃಷ್ಟಿಯಿಂದಲ್ಲ, ತಾತ್ವಿಕ ದೃಷ್ಟಿಕೋನದಿಂದಲೂ ಅಲ್ಲ ಬದಲಿಗೆ ಅಪ್ಪಟ ಮಾನವೀಯಾನುಕಂಪ ಎನ್ನುವ ನೆಲೆಯಲ್ಲಿ ನಿಂತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. 

ದೈನಂದಿನ ಕ್ಷುದ್ರವೆಂದೂ ಸಹಜವೆಂದೂ ಕಾಣುವ ವ್ಯಕ್ತಿಗಳ ಬದುಕು ಮತ್ತು ನಿರ್ಣಾಯಕ ಪಲ್ಲಟಗಳ ನಡುವಿನ ಒಳ ಸಂಬಂಧದ ಎಳೆಗಳನ್ನು ‘ಹಳ್ಳ ಬಂತು ಹಳ್ಳ’ ಕೃತಿ ಸೂಕ್ಷ್ಮವಾಗಿ ಶೋಧಿಸುತ್ತದೆ. ಕಾಲದ ಚಲನೆ ಮತ್ತು ಪಲ್ಲಟಗಳಿಗೆ ವ್ಯಕ್ತಿ ಸ್ಪಂದಿಸುವುದು ಆಸೆಯಿಂದಲೋ ಅನಿವಾರ್ಯ ಒತ್ತಡದಿಂದಲೋ ಎನ್ನುವ ಪ್ರಶ್ನೆಯೊಂದು ಇವರ ಕೃತಿಗಳಲ್ಲಿ ಸತತವಾಗಿ ಅನುರಣಿಸುತ್ತದೆ, ಶೋಧಕ್ಕೊಳಗಾಗುತ್ತದೆ. ಒಂದು ಬೀಸಿನಲ್ಲಿ ಕಳೆದು ಹೋದ ಕಾಲಘಟ್ಟವೊಂದು ಎದುರಿಸಿದ ತಲ್ಲಣಗಳು ಸ್ಥೂಲವಾಗಿ ಈ ಕಾದಂಬರಿಯ ವಸ್ತು. ಆದರೆ ಕಾಲ ಬದ್ಧತೆಯನ್ನು ಮೀರಿ ‘ಸದ್ಯೋಜಾತ’ವಾಗುವ ಆವರನವೊಂದು ಈ ಕಾದಂಬರಿಯಲ್ಲಿ ಸೃಷ್ಟಿಯಾಗುತ್ತದೆ.

ಇದು ಸಾಧ್ಯವಾಗುವುದು ಪಲ್ಲಟಗಳ ಮೂಲ ನೆಲೆಗಳನ್ನು ಹಿಡಿಯುವಲ್ಲಿ ಶ್ರೀನಿವಾಸ ವ್ಯೆದ್ಯರು ಯಶಸ್ವಿಯಾಗಿರುವುದರಿಂದ. ಪಲ್ಲಟಗಳನ್ನು ಚಾರಿತ್ರಿಕ ಅನಿವಾರ್ಯತೆಯಲ್ಲಿ ಗುರುತಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ ಬದುಕಿನ ಅನಿವಾರ್ಯತೆಯಲ್ಲಿ ಮತ್ತು ಮನುಷ್ಯ ಸ್ವಭಾವದ ನಿಜದಲ್ಲಿ ಲೇಖಕರು ಇಡುತ್ತಾರೆ. ‘ಹಳ್ಳ ಬಂತು ಹಳ್ಳ’ ಮಹತ್ವದ ಕೃತಿಯಾಗಿರುವುದು ಈ ಕಾರಣಕ್ಕಾಗಿಯೇ. ವಾಸುದೇವಾಚಾರ್ಯರು ಮಕ್ಕಳನ್ನ ಧಾರವಾಡದಲ್ಲಿ ಓದಿಸಲು ಕಳುಹಿಸುವ ಪ್ರಸಂಗ ಇದಕ್ಕೆ ಅತ್ಯುತ್ತಮ ಉದಾಹರಣೆ. ಅವರು ಮಕ್ಕಳನ್ನು ವಿದ್ಯಾಭ್ಯಾಸದ ಮೇಲಿನ ಆಕರ್ಷಣೆಯಿಂದಲೋ ಕಳುಹಿಸುವುದಲ್ಲ. ಆರ್ಥಿಕ ಅಸಹಾಯಕತೆ ಮತ್ತು ಜೀವನೋಪಾಯದ ಹುಡುಕಾಟದಲ್ಲಿ ಅವರಿಗೆ ಆಧುನಿಕ ವಿದ್ಯಾಭ್ಯಾಸ ಉಪಯುಕ್ತ, ಏಕೈಕ ಪರಿಹಾರವಾಗಿ ಕಾಣಿಸುತ್ತದೆ. ಇಷ್ಟಾಗಿಯೂ ಆ ಮಕ್ಕಳು ಧಾರವಾಡಕ್ಕೆ ಹೊರಡುವುದು ಆ ಇಡೀ ಊರನ್ನು ಕಾಡುವ ಪ್ರಸಂಗವೂ ಆಗಿದೆ. ಇಂಥ ಪ್ರಸಂಗಗಳ ಸರಮಾಲೆಯೇ ಕಾದಂಬರಿಯಲ್ಲಿದೆ. ಕೂಡು ಕುಟುಂಬದ ಸೌಷ್ಟವದಂತೆಯೇ ಅದರ ಒಡಕುಗಳು, ಸ್ವಾತಂತ್ರ್ಯ ಹೋರಾಟದ ಶಕ್ತ, ದುರ್ಬಲ ಮಾದರಿಗಳು, ಎಲ್ಲಿಂದಲೋ ಬಂದು ಇನ್ನೆಲ್ಲೋ ಬೇರು ಬಿಟ್ಟು ಬದುಕಿನ ಅರ್ಥ ಹುಡುಕುವ ಮನುಷ್ಯ ಪ್ರಯತ್ನಗಳು ತಲೆಮಾರುಗಳ ತಳಮಳಗಳು ಈ ಎಲ್ಲವನ್ನೂ ಶ್ರೀನಿವಾಸ ವ್ಯೆದ್ಯರು ಸಂಕ್ರಮಣ ಘಟ್ಟ ಎನ್ನುವ ‘ವಿಶಿಷ್ಟ ನೆಲೆ’ಯಲ್ಲಿ ಇಡದೆ ಬದುಕಿನ ‘ಗತಿ’ಯ ‘ಸಹಜನೆಲೆ’ಯಲ್ಲಿ ಇಟ್ಟು ಶೋಧಿಸುತ್ತಾರೆ. ಕಾಲ-ಸಂಧರ್ಭಗಳು ಬೇರೆಯಾಗಬಹುದು. ಆದರೆ ಮನುಷ್ಯನ ‘ಅವಸ್ಥೆ’ಮತ್ತು ಸಮುದಾಯಗಳು ಎದುರಿಸುವ ಬಿಕ್ಕಟ್ಟಿನ ಮೂಲ ವಿನ್ಯಾಸ ಇದೇ ಅಲ್ಲವೇ ಎನ್ನುವ ಪ್ರಬಂಧ ಧ್ವನಿ ಕಾದಂಬರಿಯ ಮುಖ್ಯ ಸಾಧನೆಗಳಲ್ಲಿ ಒಂದು.

ಶ್ರೀನಿವಾಸ ವ್ಯೆದ್ಯರ ಬರವಣಿಗೆಯ ಇನ್ನೊಂದು ಮುಖ್ಯ ನೆಲೆಯೆಂದರೆ ಅದು ಮಹತ್ವಾಕಾಂಕ್ಷೆ ಮತ್ತು ಹಠಮಾರಿತನವನ್ನು ಬಿಟ್ಟುಕೊಟ್ಟದ್ದು. ಈ ಕಾದಂಬರಿಯೂ ಸೇರಿದಂತೆ ಇತರ ಕೃತಿಗಳಲ್ಲಿಯೂ ಈ ಅಂಶ ಎದ್ದು ಕಾಣುತ್ತದೆ. ತಾರ್ಕಿಕತೆಯ ಭಾರವಿಲ್ಲದ ಆದರೆ ಬದುಕಿನ ಬದ್ಧತೆಯನ್ನು ಆಸ್ಥೆಯನ್ನು ಕ್ಷಣಕ್ಕೂ ಕಳೆದುಕೊಳ್ಳದ ಜೀವಪರ ನಿಲುವೊಂದು ಇವರ ಬರವಣಿಗೆಯ ಸ್ಥಾಯಿ ಭಾವವಾಗಿದೆ. ‘ಮನಸುಖರಾಯನ ಮನಸು’ ಸಂಕಲನದ ಶ್ರದ್ಧಾ, ತ್ರಯಸ್ಥ, ಗಾಯಕವಾಡ ದಾದಾ ಮೊದಲಾದ ಕಥಾ ಲೇಖನಗಳಲ್ಲಿನ(?) ಮನುಷ್ಯ ಸಂಕಟದ ಬದುಕನ್ನೇ ಛಿದ್ರಗೊಳಿಸುವ ದಾರುಣ ಸತ್ಯಗಳನ್ನು ಕಹಿಯಿಲ್ಲದೆ, ವ್ಯಗ್ರತೆಯಿಲ್ಲದೆ ನೋಡುವುದು ಸಾಧ್ಯವಾಗಿರುವುದು ಇದೇ ಕಾರಣದಿಂದ. ವಾಸ್ತವನ್ನು ಅದರ ಕರಾಳ ಮುಖಗಳಲ್ಲಿ ಎದುರಿಸುತ್ತಲೇ ಬದುಕಿನ ಬಗೆಗಿನ ಪ್ರೀತಿಯನ್ನು ಹೆಚ್ಚಿಸುವುದೇ ಶ್ರೀನಿವಾಸ ವ್ಯೆದ್ಯರ ಬರವಣಿಗೆಯ ಶಕ್ತಿ.

 ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ

January 17, 2009 Posted by odubazar | Uncategorized | | 1 ಅನಿಸಿಕೆ

ಬರಲಿದೆ ಆಹಾ ದೂರದಿ ಬರಲಿದೆ…

dhare-hatti-prahladsandhakathajagattu-new3‘ಅಪಾರ’ನಿಂದ ಹೆಕ್ಕಿದ್ದು

January 19, 2009 Posted by odubazar | ಬುಕ್ ಬಜಾರ್ | | No Comments Yet

ಗೋಕುಲದಿಂದ ನಿರ್ಗಮಿಸಿದ ಪು ತಿ ನ

img_8522img_8485img_8476img_84861img_8500img_8504img_8490ಗೋಕುಲದಿಂದ ನಿರ್ಗಮಿಸಿದ ಕೃಷ್ಣ ನ ಕಥೆ ಹೇಳಿದ ಪು ತಿ ನ ಅವರ ನೆನಪು ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ.

ಪು ತಿ ನ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲೆಲ್ಲೂ ಆ ಕೃಷ್ಣ ಬಿಸುಟಿ ಹೋದ ಆ ಕೊಳಲಿನದ್ದೆ ನೆನಪು.

ಅದರ ಕ್ಷಣಗಳು ಸುಘೋಷ್ ನಿಗಳೆ ಕಣ್ಣಿನ ಮೂಲಕ ಇಲ್ಲಿ-

January 31, 2009 Posted by odubazar | ಕ್ಲಿಕ್.., ಬುಕ್ ಬಜಾರ್ | | 1 ಅನಿಸಿಕೆ

ನಾವ್ ರೆಡಿ ನೀವ್ ರೆಡಿನಾ?

tadi2tadi1tadiಚಿತ್ರದುರ್ಗ ಸಾಹಿತ್ಯ ಸಮ್ಮೇಳನಕ್ಕೆ ಹೋಗುವವರಿಗೆ ಸಮ್ಮೇಳನ ಆರಂಭವಾಗುವುದು ಈ ೪ ರಿಂದ.

ಆದರೆ ಚಿತ್ರದುರ್ಗಕ್ಕೆ ಮಾತ್ರ ಈಗಾಗಲೇ ಸಂಭ್ರಮ ಕಾಲಿಟ್ಟು ಸಾಕಷ್ಟು ದಿನಗಳು ಕಳೆದಿವೆ.

ಚಿತ್ರದುರ್ಗದ ಹುಡುಗರ ಕ್ಯಾಮೆರಾ ಕಣ್ಣಿಗೆ ಆ ಸಂಭ್ರಮದ ಒಂದು ತುಣುಕು ಸಿಕ್ಕಿರುವುದು ಹೀಗೆ…

ಫೆಬ್ರವರಿ 1, 2009 Posted by odubazar | ಕ್ಲಿಕ್.. | | No Comments Yet

ನಾನು ಅವನಲ್ಲ… ಅವಳು..

-ವಿದ್ಯಾರಶ್ಮಿ ಪೆಲತಡ್ಕ

 

ನಡುವೆ ಸುಳಿವಾತ್ಮದ ನೋವು ನಲಿವು

ನಾನು ಅವನಲ್ಲ… ಅವಳು..!

ಲೇ: ಲಿವಿಂಗ್ ಸ್ಮೈಲ್ ವಿದ್ಯಾ

ಅನು: ತಮಿಳ್ ಸೆಲ್ವಿ

ಪುಟ: ೨೨೪; ಬೆಲೆ :೧೫೦ ರೂ

ಪ್ರ: ಪ್ರಗತಿ ಗ್ರಾಫಿಕ್ಸ್, ಬೆಂಗಳೂರು -೪೦.

ದೂ:೦೮೦-೨೩೪೦೯೫೧೨

 

book-60-1‘ಮೊಲೆ ಮೂಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವಾತ್ಮನು

ಗಂಡೂ ಅಲ್ಲ ಹೆಣ್ಣೂ ಅಲ್ಲ

ಕಾಣಾ ರಾಮನಾಥಾ -

ಎಂದು ಜೇಡರ ದಾಸಿಮಯ್ಯನೆಂಬ ಶರಣ ಹನ್ನೆರಡನೇ ಶತಮಾನದಲ್ಲಿ ವಚನ ಬರೆದಿದ್ದ. ನಾನು ಹೆಣ್ಣು ಅಥವಾ ನಾನು ಗಂಡು ಎಂದು ಗುರುತಿಸುವ ಎಲ್ಲರೊಳಗೂ ಇರುವ ಆತ್ಮಕ್ಕೆ ಲಿಂಗವಿಲ್ಲ ಎಂಬದು ಅವನ ವಚನದ ಅರ್ಥ. ಹೀಗೆ ಲಿಂಗವಿಲ್ಲದ ಆತ್ಮವನ್ನು ಹೊತ್ತು ಓಡಾಡುವ ನಾವು ಅದೇ ಬಗೆಯ ಆತ್ಮವುಳ್ಳ, ನಿರ್ದಿಷ್ಟ ಲಿಂಗದವರೆಂದು ಗುರುತಿಸಲಾರದವರನ್ನು ಏಕೆ ಕಡೆಗಣಿಸುತ್ತಿದ್ದೇವೆ. ಅವರನ್ನೂ ನಮ್ಮ ಸಹಜೀವಿಗಳೆಂದು ಪರಿಗಣಿಸುವುದಕ್ಕೆ ಇರುವ ತೊಡಕಾದರೂ ಏನು? \

 

ಆತ್ಮಕ್ಕೆ ಲಿಂಗವಿಲ್ಲ ನಿಜ. ಆದರೆ ಲೌಕಿಕದ ಬದುಕಿನಲ್ಲಿ ಈ ದೇಹ ಹೊತ್ತು ಓಡಾಡುವಾಗ ಅದಕ್ಕೊಂದು ‘ಲಿಂಗ’ ಬೇಕು. ಆತ್ಮದಂತೆಯೇ ಲಿಂಗದ ಗುರುತಿಲ್ಲದೆ ಬದುಕುವ ಸ್ಥಿತಿ ಇನ್ನೂ ಈ ಸಮಾಜದಲ್ಲಿ ಸೃಷ್ಟಿಯಾಗಿಲ್ಲ. ಇಂಥಾ ಸನ್ನಿವೇಶದಲ್ಲಿ ನಿರ್ದಿಷ್ಟ ಲಿಂಗವಿಲ್ಲದೇ ಹುಟ್ಟಿಕೊಳ್ಳುವ ಪ್ರತಿಯೊಬ್ಬರಿಗೂ ಒದಗಿಬರುವ ಉಭಯಸಂಕಟ ಊಹೆಗೂ ಮೀರಿದ್ದು. ಈ ರೀತಿ ಹುಟ್ಟಿಕೊಳ್ಳುವವರು ಎಂತಹ ಶ್ರೀಮಂತರಾಗಿ ಜನಿಸಿದರೂ, ಶ್ರೇಷ್ಠ ಜ್ಞಾನಿಯಾದರೂ ಅವರಿಗೆ ಸಿಗುವ ಸ್ಥಾನಮಾನ ಕೆಳಮಟ್ಟದ್ದೇ. ಅನುಭವಿಸುವ ಶೋಷಣೆಯೂ ಅಸಹನೀಯವೇ. ಇವೆಲ್ಲವೂ ಸಮಗ್ರವಾಗಿ ನಿರೂಪಿತಗೊಂಡಿರುವುದು ಲಿವಿಂಗ್ ಸ್ಮೈಲ್ ವಿದ್ಯಾ ಅವರ ‘ನಾನು ಅವನಲ್ಲ… ಅವಳು…!’ ಕೃತಿಯಲ್ಲಿ.

‘ಅವನ’ ದೇಹದೊಳಗೆ ‘ಅವಳ’ ಮನಸ್ಸನ್ನು ಹೊತ್ತು ಪೂರ್ತಿ ಅವಳಾಗಿಬಿಡುವತ್ತ ಹೊರಟ ವಿದ್ಯಾರ ಈ ಜೀವನಕಥೆ ಅವರದು ಮಾತ್ರವಲ್ಲ, ಅಂತಹ ಸಮಸ್ತರ ತಲ್ಲಣಗಳ ಪ್ರತೀಕ. ಅವಳಾಗಿ ಗುರುತಿಸಿಕೊಳ್ಳುವತ್ತಲಿನ ಅವರ ತುಡಿತ, ಆ ಕಡೆಗಿನ ಪ್ರಯತ್ನ, ಉಳಿದವರಂತೆಯೇ ಗೌರವಯುತ ನಾಗರಿಕ ಜೀವನ ನಡೆಸುವತ್ತ ಹಲ್ಲುಕಚ್ಚಿ ಹೋರಾಡಿದ ಆಕೆಯ ಜೀವನಗಾಥೆ ಆ ರೀತಿಯ ಹೋರಾಟದಲ್ಲಿರುವ, ದ್ವಂದ್ವ ಜೀವನದಲ್ಲಿರುವ ಉಳಿದವರಿಗೂ ಮಾದರಿ. ಅಷ್ಟೇ ಏಕೆ, ತುಳಿತಕ್ಕೊಳಗಾದ ಎಲ್ಲರಿಗೂ.

‘ಅಂದು ಕೂಡಾ ಹಾಗೆಯೇ ನನ್ನನ್ನೇ ಮರೆತು ಗಿರ್ರನೆ ಸುತ್ತುತ್ತಾ ಮನೆಯೊಳಗೆ ಆಟವಾಡುತ್ತಿದ್ದೆ.

ನಾನು ರಾಜ ಕುಮಾರಿ

ಮುದ್ದು ರೋಜಾ ಕುಮಾರಿ

ನನ್ನಾಸೆ ಕೈಗೂಡುವುದೇ..!

ಹೊರಗೆಲ್ಲೋ ಹೋಗಿದ್ದ ನನ್ನ ಅಜ್ಜಿ ಅನಿರೀಕ್ಷಿತವಾಗಿ ಒಳಬಂದು, ‘ಅಯ್ಯೋ ಪಾಪಿ ಮುಂಡೇದೆ! ಏನೋ ಇದು ಹುಡುಗುತನ… ಇಲ್ನೋಡ್ರೆ.. ಇವರು ಆಡ್ತಿರೋ ಆಟನಾ..’ -

-ಶರವಣನ್ ಎಂಬ ಪುಟ್ಟ ಕೂಸು ತನ್ನೊಳಗಿನ ಹೆಣ್ತನದೊಂದಿಗೆ ಅನುಭವಿಸುತ್ತಿದ್ದ ಖುಷಿ ಹೊರಜಗತ್ತಿಗೆ ಮೊದಲ ಬಾರಿ ತಿಳಿದದ್ದು ಹೀಗೆ.

ಬೆಳೆಯುತ್ತಾ ಹೋದಂತೆ ಹೊರಜಗತ್ತಿಗಾಗಿ ಗಂಡಸ್ಥನದ ನಟನೆಯನ್ನು ಮಾಡುತ್ತಲೇ ಕೂರಲಿಲ್ಲ ಶರವಣನ್. ತನ್ನೊಳಗಿನ ಭಾವಕ್ಕೆ ಇಂಬು ಕೊಟ್ಟರು. ‘ವಿದ್ಯಾ’ ಎಂದು ಹೆಸರು ಬದಲಾಯಿಸಿಕೊಂಡರು. ಬಿಎಸ್ಸಿ, ಎಂಎ ಮಾಡುತ್ತ ಮಾಡುತ್ತ ತಾನು ಗಂಡುರೂಪದ ಹೆಣ್ಣಿನ ಸೋಗಿನಲ್ಲಿ ಇರಲಾರೆ ಎಂಬ ಸತ್ಯ ಮನಗಂಡರು.

ನಿಧಾನವಾಗಿ ಆಪ್ತರಿಗೆಲ್ಲ ತನ್ನ ದಾರಿ ತಿಳಿಸಿದರು. ಈ ತನಬ ಸಹಜ ಜೀವನ ಸಾಗಿಸುವ ಗುರಿ ನೆರವೇರಲು ಎಲ್ಲಿಂದ ಎಲ್ಲಿಗೋ ಸಾಗಿದರು. ಸ್ನಾತಕೋತ್ತರ ಪದವಿ ಓದಿದ್ದರೂ ಭಿಕ್ಷೆ ಬೇಡುವ (ಅಂಗಡಿ ಕೇಳುವುದು) ಕೆಲಸವನ್ನೂ ಮಾಡಿದರು. ‘ಯಾಕೆ ನಿಮಗೇನು ಕೈ ಕಾಲಿಲ್ವಾ? ಹೀಗೆ ಭಿಕ್ಷೆ ಬೇಡಿ ಬದುಕೋದಕ್ಕಿಂತ ನೇಣು ಹಾಕ್ಕೊಂಡು ತೂಗಬಹುದಲ್ಲ? ಎಂಬಂತಹ ಮಾತುಗಳನ್ನೂ ಕೇಳಬೇಕಾಯಿತು. ಗೌರವಯುತ ಜೀವಕ್ಕಾಗಿ ಹಾತೊರೆದರು, ಪ್ರಾಮಾಣಿಕ ಪ್ರಯತ್ನವನ್ನೂ ನಡೆಸಿದರು.

ಇಂದು ಆಕೆ ಸಿನಿಮಾ ನಿರ್ದೇಶಕಿ. ನಾಗರಿಕ ಜಗತ್ತಿನಲ್ಲಿ ಯಾವ ಹಿಂಜರಿಕೆಯೂ ಇಲ್ಲದೆ ಓಡಾಡುವ, ಇತರರಿಂದ ಸಹಜ-ಸಮಾನ ಗೌರವ ಪಡೆಯುವ ವ್ಯಕ್ತಿ. ಇದು ಆಕೆಯ ಹೋರಾಟದ ಫಲ. ಈ ಸ್ಥಿತಿ ತಲುಪಲು ಕೆ ಕ್ರಮಿಸಿದ ಕಡಿದಾದ ಹಾದಿಯನ್ನು ಅರಿಯಬಕಾದರೆ ‘ನಾನು ಅವನಲ್ಲ..’ ಕೃತಿಯನ್ನು ಓದಬೇಕು.

vidyaಮುಚ್ಚುಮರೆಯಿಲ್ಲದೆ ಬದುಕಿನ ನಡೆಗಳೆಲ್ಲವನ್ನೂ ತೆರೆದಿಟ್ಟ ವಿದ್ಯಾರ ಕಥನದ ರೀತಿ, ನಿರೂಪಣೆಯ ಸರಳ ಶೈಲಿ ಓದುಗರ ಮನತಟ್ಟಿತ್ತು ಎಂಬದಕ್ಕೆ ಇದು ‘ಕನ್ನಡಪ್ರಭ’ದಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾದಾಗ ಬಂದ ಓದುಗರ ಸ್ಪಂದನೆಯೇ ಸಾಕ್ಷಿ. ಹಿಜಡಾಗಳ ಲಿಂಗ ಪರಿವರ್ತನೆಯ ಪ್ರಕ್ರಿಯೆ, ಅವರೆದುರಿಸುವ ಆರೋಗ್ಯ ಸಂಬಂಧಿ ಅಪಾಯಗಳು, ಆದಾಯದ ಮೂಲ, ಅವರ ಕುಟುಂಬ ಕಲ್ಪನೆ, ಸಂಬಂಧಗಳು… ಹೀಗೆ ಇಲ್ಲಿ ಬರುವ ವಿವರಗಳೆಲ್ಲವೂ ಹೊಸದು. ಅನೇಕರಿಗೆ ಈ ಕೃತಿ ಜೀವಜಗತ್ತಿನ ಹೊಸದೊಂದು ಲೋಕದತ್ತ ಕಣ್ಣು ತೆರೆಸಿತು.

ಈ ಧಾರಾವಾಹಿಯನ್ನು ಓದಿದವರು ಖಂಡಿತಾ ಮುಂದೆಂದೂ ಹಿಜಡಾಗಳನ್ನು ಗೇಲಿ ಮಾಡಲಾರರು, ಕನಿಕರದಿಂದಲೂ ನೋಡಲಾರರು. ಅವರ ದೃಷ್ಟಿಯಲ್ಲಿ ಹಿಜಡಾಗಳಿಗೂ ಮನುಷ್ಯಲೋಕದ ಸಮಾನ ಸಮ್ಮಾನ ಸಿಗುವುದು ಖಚಿತ.

ಶರವಣನ್ ತನ್ನ ಹೆಸರನ್ನು ‘ಲಿವಿಂಗ್ ಸ್ಮೈಲ್ ವಿದ್ಯಾ’ ಎಂದು ಪರಿವರ್ತಿಸಿಕೊಳ್ಳಲು ಪಡುವ ಪಾಡು ಒಂದೇ ಸಾಕು ಹಿಜಡಾಗಳತ್ತ ಆಡಳಿತ ವ್ಯವಸ್ಥೆಯೂ ಎಷ್ಟು ನಿರ್ಲಕ್ಷ ತೋರಿದೆ ಎಂಬುದಕ್ಕೆ. ಸರ್ಕಾರವೂ ಇವರತ್ತ ಗಮನಹರಿಸಿ ಇವರಿಗೂ ಗೌರವಯುತ ಜೀವನ ಸಿಗುವಂತೆ ಪ್ರಯತ್ನಿಸಬೇಕಿದೆ.

ಕೃತಿಯನ್ನು ಅನುವಾದಿಸಿರುವ ಸಂಶೋಧಕಿ, ವಿಮರ್ಶಕಿ ಡಾ ತಮಿಳ್ ಸೆಲ್ವಿ ಬಹಳ ಆಸ್ಥೆಯಿಂದ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಹಿಜಡಾಗಳ ಲೋಕದ ಹಲವು ಪಾರಿಭಾಷಿಕ ಶಬ್ದಗಳನ್ನು ಕನ್ನಡೀಕರಿಸುವಾಗ ಬಹಳ ಜವಾಬ್ದಾರಿಯಿಂದ ಯೋಚಿಸಿ, ಸಮಾಲೋಚಿಸಿದ್ದಾರೆ ಅವರು. ಈ ಮೂಲಕ ಆಪ್ತವಾದ ಓದೊಂದು ಲಭ್ಯವಾಗಿದೆ.

‘ತನ್ನ ಗೂಡನ್ನು ಬಿಟ್ಟು ಹಾರಿ ಬಹುದೂರ ಹೋಗಿ ಎಲ್ಲಿಯೂ ನೆಲೆಗಾಣದೆ, ಭೂಮಿ ಗುಂಡಾಗಿದೆ ಎಂಬ ಮಾತಿಗೆ ಸಂವಾದಿಯಾಗಿ ಅದೇ ಮಾನವ ವಿಷವ್ಯೂಹದಲ್ಲಿ ಒಂಟಿಯೆನಿಸಿದರೂ ಬದುಕಿ, ಸಾಧಿಸಿ ತೋರುವೆನೆಂಬ ಛಲ ನಿಜಕ್ಕೂ ಮೆಚ್ಚಬೇಕು . ಹುಟ್ಟಿದಂದಿನಿಂದ ಇದುವರೆಗೆ ನಡೆದು ಬಂದ ದಾರಿ, ಕಂಡ ಕನಸುಗಳು, ಅನುಭವಿಸಿದ ಅವಮಾನಗಳು ಎಲ್ಲವನ್ನೂ ನಿರ್ಲಿಪ್ತತೆಯಿಂದ ನಿವೇದಿಸಿಕೊಳ್ಳುವ ವಿದ್ಯಾಳ ಬದುಕಿನ ಪುಟಗಳಿಗೆ ಅಕ್ಕರೆಯೆಂಬ ಬಂಡಿ ಬೇಕಾಗಿದೆ’ ಎಂದಿದ್ದಾರೆ ಮುನ್ನುಡಿ ಬರೆದ ಎಂ. ಬೈರೇಗೌಡ.

ಲಿವಿಂಗ್ ಸ್ಮೈಲ್ ವಿದ್ಯಾರಿಗಿನ್ನೂ ಚಿಕ್ಕ ವಯಸ್ಸು. ಈಗಾಗಲೇ ಹೋರಾಟದ ರೇಖೆಗಳನ್ನು ಬದುಕಿನಲ್ಲಿ ಮೂಡಿಸಿಕೊಂಡವರು ಅವರು. ಅಸ್ಪೃಶ್ಯತೆ, ಶೋಷಣೆಯ ವಿರುದ್ಧದ ಹೋರಾಟಗಳಂತೆ ಇವರದೂ ಮಾನವತೆಯ ಮೂಲಭೂತ ಅಸ್ತಿತ್ವದ ಕುರಿತ ಹೋರಾಟ. ಇದಕ್ಕೆ ಆಡಳಿತ ಹಸ್ತಗಳಿಂದ ಅಧಿಕೃತ ಬೆಂಬಲ ಸಿಗಬೇಕು. ಸಮಸ್ತ ನಾಗರಿಕರ ನೆಚ್ಚು ಸಿಗಬೇಕು. ವಿದ್ಯಾರ ಹೋರಾಟ ಇಂತಹ ಅನೇಕರ ಹೃದಯದಲ್ಲಿ ಹೋರಾಟದ ಕಿಚ್ಚು ಹಚ್ಚಬೇಕು. ಅದನ್ನು ಸಾಧಿಸಲು ಈ ಕೃತಿ ನಿಮಿತ್ತವಾಗುತ್ತದೆ. ಆದ್ದರಿಂದ ಇದು ಬರಿಯ ಸಾಹಿತ್ಯ ಕೃತಿಯಾಗಿ ಉಳಿಯದೇ ಮಾನವೀಯ ಹೋರಾಟವೊಂದರ ಮೈಲಿಗಲ್ಲಾಗುವುದರಲ್ಲಿ ಸಂದೇಹವಿಲ್ಲ.

ಫೆಬ್ರವರಿ 3, 2009 Posted by odubazar | ಬುಕ್ ಬಜಾರ್ | | 2 ಅನಿಸಿಕೆಗಳು

ಕಲಾಮ್ ಕೈನಲ್ಲಿ ಶಿವಪ್ರಸಾದ್

 

kalam-book-release3-1ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಂದು ಇಲ್ಲಿ ಹೇಳಿದರು. 

ಪತ್ರಕರ್ತ ಶಿವಪ್ರಸಾದ್ ಬರೆದಿರುವ ಚಂದ್ರಯಾನ ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.

ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಥಮ ಪ್ರತಿಯನ್ನು ದಿ ವೀಕ್ ನ ಸ್ಥಾನಿಕ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ನಂತರ ಪುಸ್ತಕದಲ್ಲಿನ ವಿವಿಧ ಅಧ್ಯಾಯಗಳ ಬಗ್ಗೆ ಮಾಹಿತಿ ಪಡೆದರು. 

ಚಂದ್ರಯಾನ ಉಡ್ಡಯನದ ನಂತರ ಅಮೇರಿಕಾದ ನಾಸಾ, ಒಬಾಮಾ ನೀಡಿದ್ದ ಪ್ರತಿಕ್ರಿಯೆ ಹಾಗೂ ಆ ಬಗ್ಗೆ ಮಾಧವನ್ ನಾಯರ್ ನೀಡಿದ್ದ ವಿವರಣೆ ಇರುವ ಅಧ್ಯಾಯವನ್ನು ಲೇಖಕ ಶಿವಪ್ರಸಾದ್ ಅವರಿಂದ ಓದಿಸಿ, ವಿವರಣೆ ಪಡೆದರು. 

ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಅಧ್ಯಾಯದ ಬಗ್ಗೆಯೂ ವಿವರಣೆ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿನಾಯಕ್ ಭಟ್ ಅವರಿಗೆ ಅವರ ಲೇಖನದಲ್ಲಿದ್ದ ಫೋಟೋ ತೋರಿಸಿ, ಈ ಬಗ್ಗೆ ವಿವರಣೆ ಕೇಳಿ ಆನಂದಿಸಿದರು.

‘ಚಂದ್ರಯಾನ ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡಿದ್ದೀರಿ. ಐತಿಹಾಸಿಕ ಯೋಜನೆಯಾದ ಚಂದ್ರಯಾನ ಕುರಿತ ಸಮಗ್ರ ವಿವರ ಇರುವ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಪ್ರಯತ್ನ’ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ವಿಶೇಷ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು, ‘ಡೆಕ್ಕನ್ ಹೆರಾಲ್ಡ್’ ಸ್ಥಾನಿಕ ಸಂಪಾದಕ ಬಿ.ಎಸ್. ಅರುಣ್, ‘ವಿಜಯ ಕರ್ನಾಟಕ’ ದೆಹಲಿ ಪ್ರತಿನಿಧಿ ವಿನಾಯಕ್ ಭಟ್, ಕರ್ನಾಟಕ ವಾರ್ತಾ ಕೇಂದ್ರದ ಸಹಾಯಕ ನಿರ್ದೆಶಕ ವೀರಣ್ಣ ಕಮ್ಮಾರ, ಸುವರ್ಣ ಚಾನೆಲ್ ವರದಿಗಾರ ಪ್ರಶಾಂತ್ ನಾತೂ ಉಪಸ್ಥಿತರಿದ್ದರು.

ಫೆಬ್ರವರಿ 6, 2009 Posted by odubazar | ಬುಕ್ ಬಜಾರ್ | | No Comments Yet

ಹೊಸತು…ಹೊಸತು…

kanna-1untitled

ಫೆಬ್ರವರಿ 6, 2009 Posted by odubazar | ಬುಕ್ ಬಜಾರ್ | | No Comments Yet

ಹೊತ್ತಗೆಯೊಂದಿಗೆ ಹೊತ್ತು

_u_ಓದಿ…ಭೇಟಿ ಕೊಡಿ- ಇರ್ಷಾದ್ ಎಂ.ವೇಣೂರು ಅವರ ‘ಹೊತ್ತಗೆಯೊಂದಿಗೆ ಹೊತ್ತು ‘

ಫೆಬ್ರವರಿ 6, 2009 Posted by odubazar | ಒಂದು ಹೊಸ ಜೀವ | | No Comments Yet

Murder by ವಸುಧೇಂದ್ರ

2300981979_e41f6a0e7d_m…..

‘ಸಾರ್ …. ವಸುಧೇಂದ್ರ ಬಂದ್ರು !’ ಅಂದ್ಲು ಹುಡುಗಿ.

ಸಧ್ಯ ಬದುಕಿದೆ ಅಂದುಕೊಂಡು ಕ್ಯಾಶ್ ಕೌಂಟರ್ ಗೆ ಹೋದೆ ,ಅಲ್ಲಿ ವಸುಧೇಂದ್ರ ಮತ್ತೆ ಅಪಾರ ,ಪ್ರಕಾಶ್ ಕಂಬತ್ತಳಿಯವರೊಡನೆ ಮಾತಾಡಿಕೊಂಡು ನಿಂತಿದ್ರು !

ನಾನು ಕ್ಯಾಶ್ ಕೌಂಟರ್ ಬಳಿ ಹೋಗಿ ಟೇಬಲ್ ಮೇಲೆ ಪುಸ್ತಕಗಳನ್ನಿಟ್ಟೆ .ಅಷ್ಟರಲ್ಲಿ ವಸುಧೇಂದ್ರ ,ಅಪಾರ ಹೊರಟು ನಿಂತರು.
‘ಸರ್…. ಆಟೋಗ್ರಾಫ್ ಪ್ಲೀಸ್ ’ ಅಂದೆ .
ವಸುಧೇಂದ್ರ ನಗುತ್ತಾ ಕೈ ಚಾಚಿ ’ಏನ್ ಹೆಸರು ’ ಅಂದ್ರು .
ಸಂದೀಪ್ ಕಾಮತ್ ಅಂದೆ. ಥಟ್ಟನೆ ’ಒಹ್ ನೀನಾ ಸಂದೀಪ್ ಕಾಮತ್ ! ನೀನು ’ಹಂಪಿ ಎಕ್ಸ್ಪ್ರೆಸ್’ ಬಗ್ಗೆ ನಂಗೆ ಮೇಲ್ ಮಾಡಿದ್ದೆ ಅಲ್ವಾ ?’ ಅಂತ ಕೇಳಿದ್ರು.
’ಹೌದು ಸರ್, ಅದು ನಾನೆ ’ ಅಂದೆ .

’ಹಂಪಿ ಎಕ್ಸ್ ಪ್ರೆಸ್’ ತುಂಬಾ ಇಷ್ಟ ಆಯ್ತು ಅಂತ ವಸುಧೇಂದ್ರರಿಗೆ ಮೇಲ್ ಮಾಡಿದ್ದೆ ನಾನು.ಜೊತೆಗೆ ಅದರಲ್ಲಿ ’ ಸರ್ ಕಥೆಗಾರರಾದ ನೀವು ಬ್ರಹ್ಮ-ವಿಷ್ಣು-ಮಹೇಶ್ವರ ಮೂರೂ ಆಗಿರ್ತೀರಾ . ಮತ್ತೆ ಯಾಕೆ ಸರ್ ಸುಜಾಳ ಗಂಡ ಶ್ರೀನಿವಾಸ ನಂಬೂದರಿಯ ಕೊಲೆ ಮಾಡಿದ್ರಿ ’ನೀವು’ ? ನಿಜ ಜೀವನದಲ್ಲಂತೂ ಬರೀ ಟ್ರಾಜೆಡಿಗಳೇ ಇರೋದು ಕೊನೆಪಕ್ಷ ಕಥೆಗಳಲ್ಲಾದ್ರೂ ಸುಖಾಂತ್ಯ ಮಾಡೋದಲ್ವಾ ? ಅಂತ ಗಂಭೀರವಾದ ಕೊಲೆ ಆರೋಪವನ್ನೂ ಹಾಕಿದ್ದೆ ಅವರ ಮೇಲೆ!

‘ಹಂಪಿ ಎಕ್ಸ್ ಪ್ರೆಸ್’ ನ ’ಕ್ಷಮೆಯಿಲ್ಲದೂರಿನಲ್ಲಿ’ ಅನ್ನೋ ಕಥೆಯಲ್ಲಿ ಸುಜಾಳ ಗಂಡನ ಕೊಲೆ ಆಗುತ್ತೆ .ಅಂಥ ಟ್ರಾಜೆಡಿ ಅಂತ್ಯದ ಬಗ್ಗೆ ನನಗೆ ಅಸಮಧಾನವಿತ್ತು.ಅದನ್ನೇ ಅವರಿಗೆ ಮೇಲ್ ನಲ್ಲಿ ಬರೆದಿದ್ದೆ.ಬರೆದ ಮೇಲೆ ’ಛೇ ಕಥೆಗಾರರಿಗೆ ಅಂಥ ನಿರ್ಬಂಧ ಹಾಕಿದ್ರೆ ಸರಿ ಅಲ್ಲ ’ ಅಂತ ಬೇಜಾರಾಗಿತ್ತು ನಂಗೆ……

ಸಂಪೂರ್ಣ ಓದಿಗೆ ಭೇಟಿ ಕೊಡಿ: ಕಡಲತೀರ img_6527

ಫೆಬ್ರವರಿ 7, 2009 Posted by odubazar | ಬುಕ್ ಬಜಾರ್ | | No Comments Yet

ನಾನು ಹೇಳುತ್ತೇನೆ, ಹೌದು ಇದೆಲ್ಲ `ನಮ್ಮ’ ಅನುಭವ…

‘ಓದು ಬಜಾರ್’ ನ ಹೊಸ ಮಾಲಿಕೆ ಇದು. ಬರಹಗಾರರು ರೂಪುಗೊಂಡ ಮೆಟ್ಟಲುಗಳನ್ನು ಗುರುತಿಸುವ ಕೆಲಸ. ನೂರೆಂಟು ಪುಸ್ತಕ ಬರೆದಿರಬೇಕಿಲ್ಲ. ಮನಸ್ಸಿಗೆ ಖುಷಿ ಕೊಟ್ಟ ಒಂದು ಕಥೆ, ಕವಿತೆ ಬರೆದವರೂ ತಾವು ಎದ್ದು ಬಂದ ಬಗೆಯನ್ನು ಹುಡುಕಲಿ ಎಂಬುದು ನಮ್ಮ ಆಶಯ.

ಎಲ್ಲಕ್ಕಿಂತ ಮಿಗಿಲಾಗಿ ತೆರೆಯ ಹಿಂದಿರುವ, ನಾನು ಬರೆಯಬಲ್ಲೆನೆ? ಎಂದು ಮಿಡುಕುತ್ತಿರುವ ಹಲವರಿಗೆ ಇದು ಹುಮ್ಮಸ್ಸು ನೀಡಲಿ ಎಂಬ ಕಾರಣಕ್ಕೆ ಈ ಸರಮಾಲೆ. ನೀವೂ ಬರೆಯಿರಿ…

ನಿಮ್ಮ ಬರಹ mayflowermh@gmail.com ಗೆ ಮೇಲ್ ಮಾಡಿ. ಪೋಸ್ಟ್ ಮಾಡುವುದಾದರೆ ವಿಳಾಸ ‘ಮೇಫ್ಲವರ್ ಮೀಡಿಯಾ ಹೌಸ್, 1, ಮಹಡಿ, ಯುನಿಟ್  5, ಯಮುನಾಬಾಯಿ ರಸ್ತೆ, ಮಾಧವನಗರ, ಬೆಂಗಳೂರು- 560 001

 

‘ದಣಪೆಯಾಚೆ’ಯ ಹುಡುಗಿ ಅಕ್ಷತಾ ಕೆ ತಮ್ಮ ಬರವಣಿಗೆಯ ಹಿಂದಿನ ಕಥೆಯನ್ನು ಇಲ್ಲಿ ಹೇಳಿಕೊಂಡಿದ್ದಾರೆ….

-ಅಕ್ಷತಾ ಕೆ 

2418146181_b215f35b19ಮಲೆನಾಡಿನ ಹಳ್ಳಿಯ ಪರಿಸರದಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕಿಯೊಬ್ಬರ ಮಗಳಾಗಿ ಹುಟ್ಟಿ ಬೆಳೆದ ನನಗೆ ಸಾಹಿತ್ಯದ ಬಗೆಗೆ ಆಸಕ್ತಿ ಬೆಳೆದಿದ್ದೆ ಅಮ್ಮನಿಂದ. ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂಧರ್ಭದಲ್ಲಿ ನಮ್ಮ ಮನೆಗೆ ಪ್ರಜಾವಾಣಿ, ಸುಧಾ, ತರಂಗ, ಕರ್ಮವೀರ, ಚಂದಮಾಮ ಎಲ್ಲ ಪತ್ರಿಕೆಗಳು ಬರ್ತಿದ್ದವು. ಆಗ ಲೈಬ್ರರಿ ಇತ್ಯಾದಿಗಳ ಪರಿಕಲ್ಪನೆಯೇ ಇಲ್ಲದ ನಮ್ಮ ಹಳ್ಳಿಯಲ್ಲಿ ಇಷ್ಟೊಂದು ಪತ್ರಿಕೆಗಳನ್ನು ತರಿಸುವ ಬೇರೊಂದು ಮನೆಯನ್ನು ನಾನು ನೋಡಿರಲಿಲ್ಲ. ಎಷ್ಟು ಪತ್ರಿಕೆಗಳು ಬಂದರೂ ಅಮ್ಮ ಮಕ್ಕಳ ಓದುವ ತಹತಹ ಮುಗಿಯುತ್ತಿರಲಿಲ್ಲ. ಪತ್ರಿಕೆ, ಪುಸ್ತಕ ಯಾವುದೂ ಮನೆಗೆ ಬಂದ ಕೂಡಲೇ ನಾ ಮೊದಲು ತಾ ಮೊದಲು ಎಂದು ಅದಕ್ಕಾಗಿ ಮುಗಿ ಬೀಳುತಿದ್ದೆವು. ನೀ ಒಂದು ಕಥೆ ಓದಿ ನಂಗೆ ಕೊಡು, ನಾನು ಈ ಪ್ರಬಂಧ ಓದಿ ಅವಳಿಗೆ ಕೊಡ್ತೀನಿ ಈ ರೀತಿಯ ಒಪ್ಪಂದಗಳು ಅಮ್ಮ ಮಕ್ಕಳ ನಡುವೆ ನಡೆಯುತಿದ್ದವು.

ಮೊದ ಮೊದಲು ಮಕ್ಕಳ ಕಥೆಯನ್ನಷ್ಟೆ ಓದುತ್ತಿದ್ದ ನಾನು ಮೂರನೇ ನಾಲ್ಕನೇ ಕ್ಲಾಸಿಗೆ ಬರುವಷ್ಟರಲ್ಲೆ ಕಥೆ, ಧಾರವಾಹಿ ಎಲ್ಲವನ್ನು ಓದುವ ಪರಿಪಾಠ ಬೆಳೆಸಿಕೊಂಡೆ. ಶೋಭಾ ಡೇಯ ಕಾದಂಬರಿ ತರಂಗದಲ್ಲಿ ಧಾರವಾಹಿಯಾಗಿ ಬರುತ್ತಿದ್ದ ಸಂಧರ್ಭದಲ್ಲಿ ಅದನ್ನೆಲ್ಲ ಓದಬಾರದೆಂದು ಅಮ್ಮ ತಡೆದಿದ್ದು ಇದೆ. ಆದರೆ ಓದುವುದಕ್ಕೆ ಸುಲಭವಾಗುತ್ತಿದ್ದ ಎಲ್ಲವನ್ನು ಅಮ್ಮನ ಕಣ್ತಪ್ಪಿಸಿ ಆದರೂ ಓದುತಿದ್ದೆ. ಆದರೆ ನಾನು ಕವಿತೆ, ಕಥೆ ಬರೆಯಬಹುದೆಂದು ಮಾತ್ರ ನನಗೆ ಎಂದಿಗೂ ಅನ್ನಿಸುತಿರಲಿಲ್ಲ. ಯಾಕೆಂದರೆ ನಾನು ಆಗ ಓದುತಿದ್ದದು ಹೆಚ್ಚಾಗಿ ಜನಪ್ರಿಯ ಬರವಣಿಗೆಯಾದ್ದರಿಂದ ಅಲ್ಲಿ ಚಿತ್ರಿಸಿದ ಪ್ರಪಂಚ ನನಗೆ ಬಹಳ ಅಪರಿಚಿತವಾಗಿತ್ತು.

ಅಪ್ಪ ಅಮ್ಮ ದುಡಿಯೋದು, ಬೆವರೋದು, ಪರಸ್ಪರ ಜಗಳಾಡೋದು ನಮಗೆ ಗೊತ್ತಿತ್ತು ಆದರೆ ನಾನು ಓದುತಿದ್ದ ಬರಹದಲ್ಲಿ ಬರ್ತಿದ್ದರಲ್ಲ ಆದರ್ಶ ಪ್ರೇಮಿಗಳು, ದಂಪತಿಗಳು ಆ ರೀತಿ ಒಂದು ದಿನವೂ ಪ್ರೀತಿ ಮಾಡಿದ್ದು ನಮ್ಮ ಗಮನಕ್ಕೆ ಬರ್ತಿರಲಿಲ್ಲ. ನಮ್ಮ ಅಪ್ಪ ಅಮ್ಮನದು ಅಂತರ್ ಜಾತಿ ಪ್ರೇಮದ ಮದುವೆ ಆಗಿದ್ದರೂ ಅವರು ಕಾದಂಬರಿಯ ಪ್ರೇಮಿಗಳ ರೀತಿ ಯಾವತ್ತೂ ನಡೆದುಕೊಳ್ಳದೆ, ಜೊತೆಗೆ ನಮ್ಮಮ್ಮ ಹಂಸ ಬಿಳುಪಿನ ಅಪೂರ್ವ ಸುಂದರಿಯು ಆಗಿರದೇ ಎಲ್ಲರ ಅಪ್ಪ ಅಮ್ಮ ಹ್ಯಾಗಿರ್ತಾರೋ ಹಾಗೆ ಇದ್ದರು. ಒಂಚೂರು ಓದವ್ರು, ನಮಗೆ ಗಾಂಧಿ, ಪರಮಹಂಸರು, ವಿವೇಕಾನಂದರ ಬಗ್ಗೆ ಎಲ್ಲ ಹೇಳವ್ರು ಅಷ್ಟೆ ವ್ಯತ್ಯಾಸ.

ಇನ್ನು ನಮ್ಮಜ್ಜಿ ಇವ್ರ ಮದುವೆಗೆ ವಿರೋಧ ಮಾಡಿ ನಮ್ಮನೆಗೆ ಬರದೇ ಹೋದ್ರು ನಾವೆಲ್ಲಾರೂ ಕಂಡ್ರೆ ಮಾತಾಡಿಸೋರು, ಏನಾದ್ರೂ ಅಂಗಡಿಯಿಂದ ತನ್ಕೊಡಕ್ಕೆ ಹೇಳಿ, ತನ್ಕೊಟ್ಟ ಮೇಲೆ ಉಳಿದ ಕಾಸನ್ನು ನಮಗೆ ಕೊಟ್ಟು ಬಿಸ್ಕತ್ ತಗಳಕೆ ಹೇಳೋಳು. ಆದ್ದರಿಂದ ಕಥೆಯಲ್ಲಿ ಬರುವ ಅತಿ ರಂಜಿತ ಘಟವಾಣಿ ಅತ್ತೆಯನ್ನು ನಮ್ಮಜ್ಜಿಯಲ್ಲಿ ನೋಡುವ ಸೌಭಾಗ್ಯದಿಂದಲೂ ವಂಚಿತರಾಗಿದ್ವಿ.

img_18851ನಮ್ಮೂರ ಜನ, ನಮ್ಮ ಚಿಕ್ಕಪ್ಪ- ದೊಡ್ಡಪ್ಪ, ಬಡವರು, ಶ್ರೀಮಂತರು, ನನ್ನ ಕ್ಲಾಸ್ ಮೇಟ್ ಹುಡುಗ ಹುಡುಗಿಯರು ಯಾರನ್ನ ಗಮನಿಸಿದರೂ ಅವರುಗಳಿಗೂ ನಾನು ಓದ್ತಿರೊ ಬರವಣಿಗೆಯ ಪಾತ್ರಗಳಿಗೆ ಎಳ್ಳಷ್ಟು ಸಾಮ್ಯತೆ ಕಾಣಿಸ್ತಾ ಇರಲಿಲ್ಲವಾದ್ದರಿಂದ ನಮ್ಮ ಅಮ್ಮಮ್ಮ ಹೇಳ್ತಿದ್ದ ಕಥೆಗಳ ರಾಜಕುಮಾರಿಯರ ಹಾಗೆ ಕಥೆಯಲ್ಲಿ ಬರೋರು ಬೇರೊಂದು ಲೋಕದೋರು ಅಂತ್ಲೂ ಇದನ್ನ ಬರೆಯೋರು ಅಸಾಮಾನ್ಯ ಶಕ್ತಿ, ಪ್ರತಿಭೆ ಎಲ್ಲ ಇರೋರು ಅವರುಗಳನ್ನ ನಾವೆಲ್ಲ ನೋಡಕ್ಕೆ ಸಾಧ್ಯವೇ ಇಲ್ಲ ಅಂತ್ಲೂ ತಿಳಿದಿದ್ದೆನಾದ್ದರಿಂದ ನನಗೆ ನಾನು ಸಾಹಿತ್ಯ ರಚನೆ ಮಾಡಬಲ್ಲೆ ಅನ್ನೋ ಯಾವ ವಿಶ್ವಾಸವು ಇರಲಿಲ್ಲ.

ನನಗೆ ನಾನು ಬರೀಬಲ್ಲೆ, ಒಂದು ಘಟನೆಯನ್ನು ಮಾತಿನಲ್ಲೂ ಬರಹದಲ್ಲೂ ಕಟ್ಟಿಕೊಡಬಲ್ಲೆ ಅಂತ ಅನಿಸಿದ್ದು ಫ್ರೌಡಶಾಲೆಗೆ ಬಂದ ಮೇಲೆ ಅದೂ ನಾವು ಮಾಡ್ತಿದ್ದ ನಾಟಕಗಳಿಂದ. ನಮ್ಮೂರ ರಾಮನವಮಿ, ಮಾರಿಜಾತ್ರೆ ಸಂದರ್ಭದಲ್ಲಿ ನಾವೆಲ್ಲ ಗೆಳತಿಯರು ಸೇರ್ಕಂಡು ನಾಟಕ ಪ್ರದಶರ್ಿಸ್ತಿದ್ವಿ. ನಮ್ಮಮ್ಮನೇ ನಾಟಕ ಹೇಳಿಕೊಡೋರು. ಒಮ್ಮೆ ದುಷ್ಯಂತ ಶಾಕುಂತಲೆ ನಾಟಕ ಮಾಡ್ತಿದ್ದಾಗ. ಶಾಕುಂತಲೆ ಪಾತ್ರಧಾರಿಯಾದ ನಾನು ನಾಟಕದ ವೇದಿಕೆಯ ಎದುರಿಗೆ ಎಲೆಗಳೇ ಕಾಣದಂತೆ ಹೂವಿನಿಂದ ತುಂಬಿಕೊಂಡು, ಮಾರುದೂರದುದ್ದಕ್ಕೂ ಹೂವಿನ ರಾಶಿಯನ್ನೆ ಚೆಲ್ಲಿಕೊಂಡು ನಿಂತಿದ್ದ ಗುಲ್ ಮೊಹರ್ ಮರವನ್ನು ನೋಡಿದವಳೇ ಪ್ರಿಯಂವದೆಯ ಬಳಿ ತನ್ನ ವಿರಹ ವೇದನೆಯನ್ನು ಹೇಳುವ ಸಂದರ್ಭದಲ್ಲಿ ‘ ಪ್ರಿಯಂವದೆ ನಮ್ಮ ಕುಟೀರದ ಎದುರಿರುವ ಈ ಹಳದಿ ಹೂವಿನ ವೃಕ್ಷವನ್ನು ನೋಡಿದಾಗಲೆಲ್ಲ ಈ ವೃಕ್ಷ ತನ್ನೊಡಲ ತುಂಬಾ ಹಳದಿ ಹೂಗಳನ್ನು ಧರಿಸಿಕೊಂಡು ನನ್ನಂತೆಯೇ ದುಷ್ಯಂತನ ಆಗಮನಕ್ಕಾಗಿ ಕಾದಿದೆ ಎನಿಸುತ್ತದೆ. ಮಾರುದೂರದುದ್ದಕ್ಕೂ ಚೆಲ್ಲಾಡಿದ ಅದರ ಹೂಗಳನ್ನು ನೋಡಿದಾಗಲೆಲ್ಲ ದುಷ್ಯಂತನ ಪಾದಸ್ಪರ್ಷಕ್ಕಾಗಿ ಬಿದ್ದ ಹೂಗಳು ಬಾಡದೇ ಕಾಯುತ್ತಿವೆ ಎನಿಸುತ್ತದೆ.ವಸಂತಕಾಲದಲ್ಲಿ ಪ್ರಕೃತಿಯಲ್ಲಾಗುತ್ತಿರುವ ಈ ಬದಲಾವಣೆಗಳು ನನ್ನ ವಿರಹವನ್ನು ಹೆಚ್ಚಿಸುತ್ತಿವೆ’ ಎಂದು ಆ ಕ್ಷಣ ಕಂಡ ಹೂವಿನ ಮರದ ಬಗ್ಗೆ ಮಾತು ಕಟ್ಟಿ ಹೇಳಿದಾಗ ಅಲ್ಲಿರುವ ಪ್ರೇಕ್ಷಕರನ್ನು ಈ ಮಾತು ತಟ್ಟಿ ಎದುರಿರುವ ಹೂವಿನ ಮರ ಹೇಗೆ ನೈಜವೋ ಹಾಗೆ ಶಕುಂತಲೆಯ ವಿರಹವು ನೈಜವೆನಿಸಿ ನಾಟಕ ಭರಪೂರ ಪ್ರಶಂಸೆಗೆ ಪಾತ್ರವಾಯಿತು.

ಇದೊಂದೆ ಬಾರಿ ಅಂತ ಅಲ್ಲ ನಾಟಕ ಮಾಡುವಾಗಲೆಲ್ಲ ನಾನು ವೇದಿಕೆಯ ಬಳಿ ಇರುವ ಆಕ್ಷಣದಲ್ಲಿ ಕಂಡ ವಸ್ತು ವಿಷಯಗಳೊಡನೇ ನನ್ನ ಪಾತ್ರಕ್ಕೆ ರಿಲೇಟ್ ಮಾಡಿಕೊಂಡು ಪ್ರತಿಕ್ರಿಯಿಸೋದು ಮಾಡ್ತಾ ಇದ್ದೆ. ಇದರಿಂದ ನನ್ನ ಪಾತ್ರ ಪೋಷಣೆ ಅರ್ಥಪೂರ್ಣವಾಗೋದು. ಜೊತೆಗೆ ಇದೇ ಸಂದರ್ಭದಲ್ಲಿ ನನ್ನ ಕೈಗೆ ಸಿಕ್ಕಿದ ಲಂಕೇಶ್ ಪತ್ರಿಕೆ ಸಹ ನನ್ನ ಯೋಚನೆ, ಚಿಂತನೆಯ ವಿನ್ಯಾಸವನ್ನೆ ಬದಲಿಸಿತು. ನಾನು ಹುಟ್ಟಿದ ವರ್ಷವೇ ಹುಟ್ಟಿದ ಲಂಕೇಶ್ ಪತ್ರಿಕೆ ನನ್ನ ಕೈಗೆ ಸಿಕ್ಕಿದ್ದು ಮಾತ್ರ ನನ್ನ 14ನೇ ವಯಸಿನಲ್ಲಿ. ನಮ್ಮ ಶಾಲೆಗೆ ಶಿವಮೊಗ್ಗೆಯಿಂದ ಬರುತಿದ್ದ ಜಿ ಪಿ ಮೇಷ್ಟ್ರು ಅವರ ಒಂದೂವರೆ ತಾಸಿನ ಪ್ರಯಾಣದ ಬೇಸರ ನೀಗಲು ಇದನ್ನು ಕೊಂಡು ತರುತಿದ್ದರು. ಅವರ ಮೇಜಿನ ಮೇಲಿಂದ ನನ್ನ ಗಮನ ಸೆಳೆದ ಪತ್ರಿಕೆ ಆಮೇಲೆ ಅದು ಬರುವ ದಿನಕ್ಕಾಗಿ ಕಾಯುತ್ತಾ ಕೂರುವಂತೆ ಮಾಡಿತು. ‘ತುಂಬಿದ ಕುಟುಂಬಕ್ಕೆ ಚೆಂದದ ಪತ್ರಿಕೆ’ ಹಾಗೂ ಮಹಾನ್ ದೇಶಭಕ್ತರ ಜೀವನಚಿತ್ರಣಗಳು ತುಂಬಿದ ಪುಸ್ತಕಗಳ ಓದಿಗೆ ಸೀಮಿತವಾಗಿದ್ದ ನನಗೆ ಲಂಕೇಶ ಪತ್ರಿಕೆ ನನ್ನೂರು,ಅಲ್ಲಿನ ಹೂವು ಹಣ್ಣು, ವೈಶಿಷ್ಟ್ಯತೆ, ದಿನನಿತ್ಯದ ಬದುಕು ಜಾತ್ರೆ ಹಬ್ಬಗೋಳು ಅದರ ಮಧ್ಯೆಯು ಉಳಿಸಿಕೊಳ್ಳಬೇಕಾದ ಸಂಕೋಚ, ನಿಷ್ಟುರವಾದಿಯಾಗಿರಬೇಕು ಎನ್ನುವ ಪಾಠ, ಜೀವನೋತ್ಸಾಹ ಸೋರಿಹೋಗದಂತೆ ರೂಢಿಸಿಕೊಳ್ಳಬೇಕಾದ ಕ್ರಿಯಾಶೀಲತೆ ಎಲ್ಲವನ್ನು ಕುರಿತು ಲಂಕೇಶ್ ನಮಗೆ ತಾಕುವ ಮಾತುಗಳಲ್ಲಿ ಕಟ್ಟಿಕೊಡ್ತಾ ಇದ್ದರು.

ಪುಟ್ಟ ಊರಿನ ಹೆಣ್ಣಾದ ಜೇನ್ ಆಸ್ಟೆನ್ ತನ್ನೂರು ಜಾತ್ರೆ, ಮದುವೆ, ಪ್ರೇಮ, ಸಂಬಂಧ, ಕಷ್ಟ, ನೋವು, ನಲಿವುಗಳನ್ನು ಧ್ಯಾನಿಸಿ ಅಪೂರ್ವವಾದ ಮತ್ತು ಅಷ್ಟೆ ಸಹಜವಾದ ಲೋಕವೊಂದನ್ನು ಕಾದಂಬರಿಗಳಲ್ಲಿ ಸೃಷ್ಟಿಸಿದಳು ಎಂಬುದರ ಬಗೆಗೆಲ್ಲ ಲಂಕೇಶ್ ಬರೆದದ್ದನ್ನು ಓದಿದ ನಂತರ ಬರೀ ರಂಜನೆಯ ಕಥಾಲೋಕ ನನಗೆ ಬೋರಾಗ ತೊಡಗಿತು. ಬದಲಿಗೆ ಶ್ರಮದಾಯಕ ಕೆಲಸ ಹಾಗೂ ಬಡತನದ ನಡುವೆಯು ಜೀವನೋತ್ಸಾಹ ಕಳೆದುಕೊಳ್ಳದ ಹಳ್ಳಿಗರು, ಅವರ ಹೊಂದಾಣಿಕೆ, ಸ್ವಾರ್ಥ, ಸಂಯಮದ ಬದುಕು, ಓದಿನಲ್ಲಿ ಮಹಾ ದಡ್ಡರಾಗಿದ್ದರೂ ಆ ಬಗ್ಗೆ ಚೂರು ದುಗುಡಗೊಳ್ಳದೆ ಆರಾಮಾಗಿ,ಹುಡುಗಾಟದಿಂದಿರುತಿದ್ದ ನನ್ನ ಸಹಪಾಠಿ ಹುಡುಗರು, ನನ್ನೂರ ಕಾಡು,ಗುಡ್ಡ,ಕೆರೆ,ಎಲ್ಲವು ನನ್ನ ಮನಸನ್ನು ತುಂಬಿಕೊಳ್ಳತೊಡಗಿದವು.

ಈ ಎಲ್ಲ ವಿದ್ಯಮಾನಗಳು ನನ್ನಲ್ಲಿ ಬರೆಯುವ ಸ್ಪೂತರ್ಿಯನ್ನು, ವಿಷಯ ವಸ್ತುಗಳನ್ನು ಹೊಳೆಯಿಸಿದವು. ಆದರೆ ನಾನು ನನ್ನ ಪಿಯುಸಿ ಮುಗಿವವರೆಗೂ ಕವನ, ಕಥೆ ಏನೇ ಬರೆದರೂ ಈ ರೀತಿ ಬರೆದಿದ್ದೇನೆ ನೋಡಿ ಅಂತ ಹೇಳುವಂತ ಯಾವ ಸಾಹಿತ್ಯಾಸಕ್ತರ ಪರಿಚಯವು ನನಗಿರಲಿಲ್ಲ. ನಾನು ಓದಿದ ಹಳ್ಳಿಯ ಶಾಲಾ ಕಾಲೇಜಿನಲ್ಲಿ ಸಾಹಿತ್ಯಿಕ ವಾತಾವರಣವು ಇರಲಿಲ್ಲ ಆದ್ದರಿಂದ ಬರೆಯುವ ಒತ್ತಡ ಎಂಬುದು ಏನು ಅಂತ ಗೊತ್ತು ಇರಲಿಲ್ಲ. ಪಿಯುಸಿ ಮುಗಿಸಿ ಅಪ್ಪನ ಆಗ್ರಹ ಪೂರ್ವಕ ಒತ್ತಾಯಕ್ಕೆ ಮಣಿದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಸೇರಿಕೊಂಡವಳಿಗೆ ಹಾಸ್ಟೆಲ್ ವಾಸ, ಸಿಟಿಬಸ್ ಪ್ರಯಾಣ, ಇಂಗ್ಲಿಷ್ ಪಾಠ, ದಾರಿ ತಪ್ಪಿಸುವ ಜನ ಭರಿತ ರಸ್ತೆಗಳು ಗೊಂದಲಕ್ಕೆ ತಳ್ಳುತಿದ್ದವು ಇಂಥ ಸಂಧರ್ಭದಲ್ಲಿ ಒದಗಿ ಬಂದದ್ದು ಬರಹವೆಂಬ ಬಂಧು.

ನನ್ನ ಹಳ್ಳಿ, ಅಲ್ಲಿಯ ಚಿತ್ರಣ ಅಪ್ಪ ಅಮ್ಮ ತಂಗಿ ತಮ್ಮ ಅವರ ಬಗೆಗೆಲ್ಲ ಏನು ಅನಿಸುತ್ತದೋ ಅದನ್ನೆಲ್ಲ ಗೀಚತೊಡಗಿದೆ. ನನ್ನ ತಲ್ಲಣಗಳಿಂದ ಹೊರಬರಲು ಬರಹವೆಂಬುದು ಒಂದು ಹಾದಿಯಾಗಿ ಕಂಡುಬಂತು. ಸಹ್ಯಾದ್ರಿ ಕಾಲೇಜಿನಲ್ಲಿ ಅಪರೂಪದ ಸಾಹಿತ್ಯಿಕ ವಾತಾವರಣವಿತ್ತು. ಕಾಲೇಜಿನ ಕವಿಗೋಷ್ಟಿಯೊಂದರಲ್ಲಿ ನನ್ನ ಕವನ ಕೇಳಿದ ಇಂಗ್ಲಿಷ್ ಪ್ರಾಧ್ಯಾಪಕರಾದ ಸಿರಾಜ್ ಸರ್ ಈ ಕವನ ವೈದೇಹಿಯ ಬರಹದಂತಿದೆ ಎಂದಿದ್ದಲ್ಲದೆ ಏನು ಬರೆದರೂ ತಂದು ತೋರಿಸಿ ಎಂದು ಹೇಳಿದರು. ಜೊತೆಗೆ ಹಲವು ಪುಸ್ತಕಗಳನ್ನು ಓದಲು ಕೊಟ್ಟರು. ಅವರ ಪ್ರೋತ್ಸಾಹ,ಅಂತ:ಕರಣ ನನ್ನ ಬರಹದ ಬದುಕಿಗೆ ಅಮೂಲ್ಯ ತಿರುವನ್ನು ಕೊಟ್ಟಿತು.

ಸಹ್ಯಾದ್ರಿ ಕಾಲೇಜಿನಲ್ಲಿ ಸಾಹಿತ್ಯಾಸಕ್ತ ವಿದ್ಯಾಥರ್ಿಗಳ ಗುಂಪು ಇಂಗ್ಲಿಷ್ ಮೇಷ್ಟ್ರುಗಳ ಮಾರ್ಗದರ್ಶನದಲ್ಲಿ ಗೋಡೆ ಪತ್ರಿಕೆಯನ್ನು ಪ್ರಾರಂಭಿಸಿದೆವು. ಅದರ ಮೊದಲ ಸಂಪಾದಕಿ ನಾನೇ ಆಗಿ ಪ್ರತಿವಾರವೂ ಸಂಪಾದಕೀಯ ಬರಯುತಿದ್ದುದು. ಪತ್ರಿಕೆಯಲ್ಲಿ ಸಮುದಾಯ ಪ್ರಜ್ಞೆಯೊಂದಿಗೆ ವೈಯಕ್ತಿಕ ಸ್ವಾತಂತ್ರವಿಟ್ಟುಕೊಂಡು ಬರೆಯುವ ಅವಕಾಶ ಸಿಕ್ಕಿದ್ದು. ನನ್ನ ಬರವಣಿಗೆಯ ಲೋಕವನ್ನು ವಿಸ್ತರಿಸಿತು. ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದ ಬೇಂದ್ರೆ ಕವನ ಸ್ಪಧರ್ೆಯಲ್ಲೂ ನಾ ಬರೆದ ಕವಿತೆಗಳು ಸೆಲೆಕ್ಟ್ ಆದವು. ಕರ್ಮವೀರದಲ್ಲಿ ಇದೇ ಸಂಧರ್ಭದಲ್ಲಿ ಪ್ರಕಟವಾದ ನನ್ನ ಸರ್ಕಸ್ ಹುಡುಗಿ ಕವಿತೆಗೆ ನೂರಾರು ಪ್ರೋತ್ಸಾಹದ ಪತ್ರಗಳು ಬಂದವು. ಬಹಳಷ್ಟು ಪತ್ರಗಳು ಕವಿತೆಯನ್ನು ಬರೀ ಚೆನ್ನಾಗಿದೆ ಅಂತ ಹೇಳದೆ ವಿವಿಧ ಬಗೆಯಲ್ಲಿ ವಿಶ್ಲೇಷಿಸಿದ್ದವು.

ಜೊತೆಗೆ ಆಕೃತಿ ಅನ್ನುವ ಪತ್ರಿಕೆ ನನ್ನ ಕ್ರೈಸ್ಟ್ ಕವನ ಸ್ಪಧರ್ೆಗೆ ಆಯ್ಕೆಯಾದ ಕವನವನ್ನಿಟ್ಟುಕೊಂಡು ಒಂದು ಉತ್ತಮ ಲೇಖನವನ್ನು ಪ್ರಕಟಿಸಿತ್ತು. ಸರ್ಕಸ್ ಹುಡುಗಿ ಕವಿತೆಗೆ ಲೇಖಕಿಯರ ಸಂಘ ನೀಡುವ ಗುಡಿಬಂಡೆ ಪೂಣರ್ಿಮಾ ಪ್ರಶಸ್ತಿಯು ಸಂದಿತು. ಈ ಎಲ್ಲ ವಿದ್ಯಮಾನಗಳು ನನ್ನಲ್ಲಿ ಬರೆಯುವ ಆಶೆಯನ್ನು,ಬರೆಯಬಲ್ಲೆ ಎಂಬ ವಿಶ್ವಾಸವನ್ನು ಮೊಳೆಯಿಸಿದವು. ಅಷ್ಟೊತ್ತಿಗೆ ಬಿಎ ಮುಗಿಯಿತು,ಮತ್ತು ಮೆಚ್ಚಿದವನೊಡನೆ ಕೂಡಲೆ ಮದುವೆಯು ಆಯಿತು. ಮದುವೆಯ ನಂತರ ನಾಲ್ಕು ವರ್ಷ ನಾನು ಬರೀತಿದ್ದೆ ಅನ್ನುವ ವಿಷಯವೇ ಮರೆತು ಹೋದಂತೆ ಇದ್ದೆ ಅಂದರೆ ನನಗೇ ಈಗ ಆಶ್ಚರ್ಯವಾಗುತ್ತದೆ.

ಬರೆಯುವುದಿರಲಿ ಮದುವೆಯ ನಂತರ ಓದು ಮುಂದುವರೆಸಿದ್ದ ನಾನು ಪರೀಕ್ಷೆಯ ಸಂದರ್ಭದಲ್ಲಿ ಸಿಲಬಸ್ನಲ್ಲಿದ್ದುದ್ದನ್ನು ಅನಿವಾರ್ಯವಾಗಿ ಕಣ್ಣಾಡಿಸುತಿದ್ದುದು ಬಿಟ್ಟರೆ ಬೇರೇನನ್ನೂ ಓದುವ ಆಸಕ್ತಿಯನ್ನು ಕಳೆದುಕೊಂಡಿದ್ದೆ. ಅಪ್ಪಟ ಗೃಹಿಣಿಯಾಗುವ ಕನಸಿತ್ತು ನನ್ನಲ್ಲಿ. ನನಗೆ ಈ ಸಂಧರ್ಭದಲ್ಲಿ ರೋಲ್ ಮಾಡೆಲ್ ಆಗಿದ್ದು ಎಂದರೆ ಏಕ್ತಾಕಪೂರಳ ಹಿಂದಿ ಮೆಗಾ ಸೀರಿಯಲ್ಗಳು. ಮದ್ಯಾಹ್ನ 2 ಗಂಟೆಗೆ ಟಿವಿ ಮುಂದೆ ಕುಳಿತರೆ ಸಂಜೆ 5ಕ್ಕೆ ಮತ್ತೆ ರಾತ್ರಿ 7ಕ್ಕೆ ಕುಳಿತರೆ 11 ಗಂಟೆಗೆ ಏಳುತಿದ್ದೆ. ವಾರದ 4,5ದಿನ ಹೀಗೆ ನಡೆಯುತಿತ್ತು. ಸಾಹಿತ್ಯದ ಕಾರ್ಯಕ್ರಮ, ನಾಟಕ ಯಾವುದಕ್ಕೂ ಹೋಗೋಣ ಎಂದು ಗಂಡ ಒತ್ತಾಯಿಸಿದರೂ ಅವನಿಗೆ ನೀನೊಬ್ಬನೇ ಹೋಗಿ ಬಾ ಎಂದು ಪುಸಲಾಯಿಸಿ ನಾನು ಟಿವಿ ಮುಂದೆ ಆಸೀನಳಾಗುತಿದ್ದೆ. ಈ ಹುಚ್ಚು ಎಲ್ಲಿಯ ಮಟ್ಟಿಗೆ ಮೇರೆ ಮೀರಿತ್ತೆಂದರೆ ಅವರ ಉಡುಗೆ ತೊಡುಗೆ, ದೇವರಮನ,ೆ ಅಡುಗೆ ಮನೆ ಇಷ್ಟರ ಬಗ್ಗೆಯೇ ಯೋಚಿಸುತಿದ್ದೆ. ಆದರೆ ವಿಚಿತ್ರವೆಂದರೆ ಅಡುಗೆ, ಭಕ್ತಿ, ಸೌಂದರ್ಯ ಇವುಗಳಲ್ಲೂ ಸಹ ನನ್ನ ಸೃಜನಶೀಲತೆಯನ್ನು ವ್ಯಕ್ತಗೊಳಿಸಲಾರದಷ್ಟು ಸೋಮಾರಿಯಾಗಿದ್ದೆ. ನನ್ನ ಸುತ್ತ ಸಂಕುಚಿತ ಪ್ರಪಂಚವನ್ನು ಸೃಷ್ಟಿಸಿಕೊಂಡ ನಾನು ಸಂಕುಚಿತ ಮನಸ್ಥಿತಿಯವಳಾಗತೊಡಗಿದ್ದೆ.

ಈ ಸಂಧರ್ಭದಲ್ಲಿ ನನ್ನನ್ನು ತುಂಬಿಕೊಳ್ಳುತಿದ್ದುದು ಒಂದೆ ಭಾವ `ತೀರದ ಬೇಸರ’ ಪದೇ ಪದೇ ಉಚ್ಚರಿಸುತಿದ್ದ ಶಬ್ದ ಒಂದೆ `ಬೇಜಾರು’, ಸಂಸಾರಿಯಾದ ನಂತರ ಹೊಸ ಪರಿಸರದಲ್ಲಿ ಹೊಂದಾಣಿಕೆಯ ಅನಿವಾರ್ಯತೆ, ವಿಚಿತ್ರ ಒತ್ತಡಗಳಿಂದ ತಲ್ಲಣಿಸಿದ ನಾನು ಟಿವಿ ಧಾರವಾಹಿಗಳಿಗೆ ಮೊರೆಹೋಗಿದ್ದು ನಿಜ ಆದರೆ ಅವು ನನ್ನೊಳಗನ್ನು ಒಂದು ಕಾವ್ಯದ ರೀತಿಯಲ್ಲಿ, ಒಂದು ಉತ್ತಮ ಬರಹ ಪೊರೆದ ಹಾಗೆ ಎಂದು ಪೊರೆದದ್ದು ಇಲ್ಲ. ಆದ್ದರಿಂದ ಆ ಲೋಕದಿಂದ ಬಿಡಿಸಿಕೊಂಡು ಹೊರಬರಲು ನನಗೆ ಅಂಥಹ ಕಷ್ಟವಾಗಲಿಲ್ಲ. ಮನೆಯ ನಾಲ್ಕು ಗೋಡೆ ನಡುವಿನ ಲೋಕದ ಸೀಮಿತವಾಗಿದ್ದೋಳು ಅದರಾಚೆ ಒಂದು ಲೋಕವಿದೆ ಎಂಬ ಅರಿವಿದ್ದರೂ ಪ್ರಜ್ಞಾಪೂರ್ವಕವಾಗಿ ಆ ಲೋಕದೆಡೆಗ ದೃಷ್ಟಿ ಹಾಯಸದೇ ಇದ್ದವಳು ನಿಧಾನಕ್ಕೆ ಹೊರಗಿನ ಲೋಕಕ್ಕೆ ತೆರೆದು ಕೊಳ್ಳತೊಡಗಿದೆ.

ಸಾಂಸ್ಕೃತಿಕ ಸಾಹಿತ್ಯಿಕ ಕೇಂದ್ರವಾದ ಶಿವಮೊಗ್ಗೆ ನನ್ನೀ ವ್ಯಕ್ತಿತ್ವಕ್ಕೆ ಇಂಬು ಕೊಟ್ಟಿತು. ಕೋಮು ಸೌಹಾರ್ದ ವೇದಿಕೆ, ಆಸಕ್ತಿ, ಕನರ್ಾಟಕ ಸಂಘದ ಕಾರ್ಯಕ್ರಮಗಳು ನನ್ನ ಅರಿವನ್ನು ಹೆಚ್ಚಿಸಿದವು. ನೀನಾಸಂ ಶಿಬಿರಗಳು ಮತ್ತು ನಾಟಕಗಳು ಸಹ ನನ್ನ ವ್ಯಕ್ತಿತ್ವಕ್ಕೆ ಹೊಸ ಆಯಾಮ ನೀಡಿದವು. ಈಗ ಮತ್ತೆ ನಾನು ಓದಲು ಬರೆಯಲು ಮನಸು ಮಾಡಿದೆ. ಆದರೆ ಬರವಣಿಗೆ ಮೊದಲಿನಷ್ಟು ಸುಲಭವಾಗಿ ಹೊಮ್ಮುತಿರಲಿಲ್ಲ. ಬದುಕು ಸಂಕೀರ್ಣವಾದದ್ದು ಅನಿಸುತಿತ್ತು. ಎಲ್ಲವನ್ನು ಜಯಿಸಿ ಬಿಡ್ತೀವಿ, ಎಲ್ಲ ಸರಿ ಮಾಡ್ತೀವಿ, ಎಲ್ಲವು ಸಾದ್ಯ ಅಸಾದ್ಯವಾದುದು ಯಾವುದೂ ಇಲ್ಲ ಅನ್ನುವ ಎಲ್ಲ ನಂಬಿಕೆಗಳು ಇದ್ದವು ಮೊದಲು ಆದರೆ ಈಗ ಬದುಕನ್ನು ವೈಯಕ್ತಿಕ ನೆಲೆಯಲ್ಲಿ ಮಾತ್ರ ಇಟ್ಟು ನಾನು ನನ್ನದು ನಾನು ಮಾತ್ರವೇ ಅಂತೆಲ್ಲ ಬದುಕಲು ಸಾದ್ಯವಿರಲಿಲ್ಲ. ಬದುಕೆಂದರೆ ನನ್ನೊಬ್ಬಳದೇ ಅಲ್ಲ ಸಮುದಾಯಿಕವಾದದ್ದು ಎಂಬ ಅರಿವಾಗಿತ್ತು. ಬರಹದಲ್ಲಿ ಆ ಎಲ್ಲ ಸಂಕೀರ್ಣತೆಯನ್ನು, ನೋವನ್ನು, ನಲಿವನ್ನು ಬದುಕಿನ ಹೋರಾಟವನ್ನು ತರಬೇಕಿತ್ತು ನನಗೆ.

ನನ್ನ ಕವನ ಸಂಕಲನ`ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಬಂದ ನಂತರ ಅದನ್ನೋದಿದ ಬಹಳಷ್ಟು ಹೆಂಗಸರು ಕೇಳಿದ ಪ್ರಶ್ನೆಯೆಂದರೆ ಇದೆಲ್ಲಾ ನಿಮ್ಮ ಅನುಭವವಾ ಎಂದು. ನಾನು ಹೇಳುತ್ತೇನೆ ಹೌದು ಇದೆಲ್ಲ `ನಮ್ಮ’ ಅನುಭವ. ನನ್ನ ಕೊಲಾಜ್, ಸೂಚನೆಯ ಪಾಲನೆ, ದಣಪೆ, ಕಟ್ಟುಬಿಚ್ಚು, ಆಸ್ಥೆ, ದಿನಚರಿಯಲ್ಲಿ ಸ್ವಲ್ಪ ಮಾಪರ್ಾಟು ಕವಿತೆಗಳಲ್ಲಿ ಬರುವ ಲೋಕ ಸ್ತ್ರೀ ಕೇಂದ್ರಿತವಾಗಿರೋದು ಹೌದಾದರೂ ಅದು ವೈಯಕ್ತಿಕ ಅನುಭವ ಅಲ್ಲ ಮತ್ತು ಅದೇ ಸಮಯಕ್ಕೆ ಅದರಲ್ಲಿ ವೈಯಕ್ತಿಕವಾದದ್ದು ಇಲ್ಲವೇ ಇಲ್ಲ ಎಂದು ಹೇಳಲಾರೆ. ಯಾಕೆಂದರೆ ಇಡೀ ಹೆಣ್ಣಿನ ಲೋಕವೆ ನನ್ನ ಪಾಲಿಗೆ ತುಂಬಾ ವೈಯಕ್ತಿಕವಾದದ್ದು, ಆ ಲೋಕವನ್ನು ಬಿಟ್ಟು ನನ್ನ ಅಸ್ತಿತ್ವ ಇರಲು ಸಾದ್ಯ ಎಂಬ ನಂಬಿಕೆ ನನಗಿಲ್ಲ. ನನ್ನದೇ ಪದ್ಯದ ಸಾಲುಗಳ ಮೂಲಕ ಹೇಳುವುದಾದರೆ `ನನಗೋ ಆ ಹೆಣ್ಣನ್ನು ಕಾಣುವ ತವಕ/ ಹಾಗಂತ ಧ್ಯಾನಿಸಿದರೆ ಮಕಮಲ್ಲಿನ ಹಿಂದೆ ಅಡಗಿದ್ದ ನನ್ನ ಛಾಯೆಯೇ ಪ್ರತ್ಯಕ್ಷವಾಗಿ ಬೆಚ್ಚಿ ಬೀಳಿಸಿತು/ ಸಮಾಧಾನಗೊಂಡೆ! ಅಮ್ಮ, ಗೆಳತಿ, ಅತ್ತೆ, ಟೀಚರ್, ಎಲ್ಲರ ಛಾಯೆಗಳು ನನ್ನೊಳಗೆ ಹೆಣೆದುಕೊಂಡು ಸುಂದರ ಕೊಲಾಜ್ ಸಿದ್ದಗೊಂಡಿತು’(ಕೊಲಾಜ್).

ಮಲೆನಾಡ ಮೂಲೆಯ ಹಳ್ಳಿಯಲ್ಲಿ 18 ವರ್ಷ ಕಳೆದ ನನಗೆ ಸಮುದಾಯವನ್ನು ಬಿಟ್ಟು ಯೋಚಿಸೋದು ಬಹಳ ಕಷ್ಟ. ನಮ್ಮ ಅಮ್ಮನ ಮನೆ ಪಕ್ಕವೇ ಮಸೀದಿ ಇದೆ ಹತ್ತಿರದಲ್ಲೆಲ್ಲೂ ಮುಸ್ಲಿಂ ಮನೆಯಿಲ್ಲ. ಆ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಹುಡುಗರನ್ನು ನೇಮಿಸುತಿದ್ದರು. ಆ ಮೌಲ್ವಿಗೆ ದಿನಕ್ಕೊಬ್ಬ ಮುಸ್ಲಿಂರ ಮನೆಯಲ್ಲಿ ಊಟ. ಆದರೆ ಎಷ್ಟೊ ಮನೆಗಳಲ್ಲಿ ಊಟವೇ ಹಾಕದೆ ಬರಿ ಹೊಟ್ಟೆಯಲ್ಲಿರಬೇಕಾದ ಪ್ರಸಂಗ ಬರುತಿತ್ತು. ಆಗೆಲ್ಲ ಆ ಮೌಲ್ವಿ ಹುಡುಗರು ನಮ್ಮ ಅಮ್ಮನ ಕೈಲಿ ತಮಗಾಗುತ್ತಿರುವ ಅನ್ಯಾಯವನ್ನು ಹೇಳಿ ಕೊಳ್ಳುತಿದ್ದದ್ದನ್ನು ನಾನು ಕೇಳಿದ್ದೇನೆ. ನಮ್ಮ ಅಪ್ಪ ಅಮ್ಮನ ಅಂರ್ತಜಾತೀಯ ಮದುವೆಯು ನಮ್ಮನ್ನು ಜಾತಿ ಮತದ ಕಂದರದಾಚೆ ಯೋಚಿಸಲು ಬದುಕಲು ಅನುವು ಮಾಡಿಕೊಟ್ಟಿತು. ನನ್ನ ಮದುವೆಗೆ ಅಪ್ಪನ ಜಾತಿಯವರು ಬಹಿಷ್ಕಾರ ಹಾಕಿದರು. ಆದರೆ ಬೇರೆ ಬೇರೆ ಜಾತಿಯ ರಕ್ತ ಸಂಬಂಧವೇ ಇಲ್ಲದ ಬರಿಯ ಬಾವನಾತ್ಮಕ ಬೆಸುಗೆ ಇದ್ದ ಜನರೆಲ್ಲ ಬಂದು ಹರಸಿದರು.

ಆಮೇಲೆ ಹೆಣ್ಣು ಮಕ್ಕಳ ದುಡಿಮೆ, ಎಳ್ಳಷ್ಟೂ ಪುರಸೊತ್ತಿಲ್ಲದೆ ದೈಹಿಕ ಕೆಲಸದಲ್ಲಿ ತೊಡಗಿಕೊಂಡ `ಮನೆತನದ ಉದ್ದಾರ ಸೂತ್ರವೊಂದನ್ನೆ ಗುರಿಯಾಗಿಸಿಕೊಂಡ’ ಎಷ್ಟೊಂದು ಹೆಂಗಸರನ್ನು ನೋಡಿದ್ದೇನೆ ನಾನು,ಮತ್ತು ಜಾತಿ, ಸಂಪ್ರದಾಯದ ಹೆಸರಲ್ಲಿ ಹೆಂಗಸರಿಗೆ ಮಾಡುತಿದ್ದ ಅವಮಾನ, ಶೋಷಣೆಗಳನ್ನು, ಇವೆಲ್ಲ ಮತ್ತು ಇವನ್ನು ಬಿಟ್ಟು ಬಹಳಷ್ಟು ವಿಷಯಗಳು ನನ್ನನ್ನು ಪ್ರಭಾವಿಸಿವೆ, ಬದುಕನ್ನು ರೂಪಿಸಿವೆ. ಬರಹವನ್ನು ಕೂಡ.

ನನ್ನ ಬರಹದ ಬದುಕಿನಲ್ಲಿ ಆಶಾದೇವಿ ಮೇಡಂ ಮತ್ತು ಜಿ.ಪಿ.ಬಸವರಾಜು ಸರ್ ಅವರ ಪ್ರಭಾವ ಬಹಳಷ್ಟಿದೆ. ಅವರಿಬ್ಬರು ನನಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ನಾನೆಂದೂ ನನ್ನ ಕವಿತೆಗಳನ್ನ ಪ್ರಕಟಿಸುವ ಧೈರ್ಯ ಮಾಡುತ್ತಿರಲಿಲ್ಲ. ಜೊತೆಗೆ ಕಡಿದಾಳು ಶಾಮಣ್ಣನವರ ಆತ್ಮವೃತ್ತಾಂತಕ್ಕೆ ಅಕ್ಷರ ರೂಪ ಕೊಡುವ ಸಾಹಸಕ್ಕೆ ನಾನು ಕೈ ಹಾಕಿದ್ದೂ ಅವರ ಒತ್ತಾಸೆಯಿಂದಲೆ. ಈಗ ನನಗೆ ಬರೆಯುವ ವಿಶ್ವಾಸ ಅಲ್ಪ ಮಟ್ಟಿಗಾದರೂ ಬಂದಿದೆ. ಆದರೆ ಬರೆಯಬೇಕಾದ್ದು ಬಹಳಷ್ಟಿದೆ. ಬರಹದ ಸೆಲೆ ಬತ್ತದಂತೆ ಕಾದುಕೊಳ್ಳುವ ಜೊತೆಗೆ ಜೀವನ್ಮುಖಿ ಗುಣದಿಂದ ಬರಹ ವಂಚಿತವಾಗದಂತೆ, ಅಗ್ಗದ ಮಾರಾಟ ಸರಕಾಗದಂತೆ ಕಾದುಕೊಳ್ಳುವ ಅವಶ್ಯಕತೆಯು…

ಫೆಬ್ರವರಿ 13, 2009 Posted by odubazar | Uncategorized | | 3 ಅನಿಸಿಕೆಗಳು

ಹೊಸತು..ಹೊಸತು..

dasaratdasarat-back

ಫೆಬ್ರವರಿ 14, 2009 Posted by odubazar | ಬುಕ್ ಬಜಾರ್ | | No Comments Yet

ಭಂಡಾರಿಯವರ ನೆನಪು

shayanashayana-back

ಫೆಬ್ರವರಿ 14, 2009 Posted by odubazar | ಬುಕ್ ಬಜಾರ್ | | No Comments Yet

ಚಿಂತನ-ಚಿಂತನೆ

shikshna-savalushikshna-savalu-back

ಫೆಬ್ರವರಿ 14, 2009 Posted by odubazar | ಬುಕ್ ಬಜಾರ್ | | No Comments Yet

ಗೋಪಾಲ್ ಆಚಾರ್ ಮತ್ತೆ ನೆನಪಾಗುತ್ತಾರೆ…

s

‘ಓದು ಬಜಾರ್’ ನ ಹೊಸ ಮಾಲಿಕೆ ಇದು. ಬರಹಗಾರರು ರೂಪುಗೊಂಡ ಮೆಟ್ಟಲುಗಳನ್ನು ಗುರುತಿಸುವ ಕೆಲಸ. ನೂರೆಂಟು ಪುಸ್ತಕ ಬರೆದಿರಬೇಕಿಲ್ಲ. ಮನಸ್ಸಿಗೆ ಖುಷಿ ಕೊಟ್ಟ ಒಂದು ಕಥೆ, ಕವಿತೆ ಬರೆದವರೂ ತಾವು ಎದ್ದು ಬಂದ ಬಗೆಯನ್ನು ಹುಡುಕಲಿ ಎಂಬುದು ನಮ್ಮ ಆಶಯ.

ಎಲ್ಲಕ್ಕಿಂತ ಮಿಗಿಲಾಗಿ ತೆರೆಯ ಹಿಂದಿರುವ, ನಾನು ಬರೆಯಬಲ್ಲೆನೆ? ಎಂದು ಮಿಡುಕುತ್ತಿರುವ ಹಲವರಿಗೆ ಇದು ಹುಮ್ಮಸ್ಸು ನೀಡಲಿ ಎಂಬ ಕಾರಣಕ್ಕೆ ಈ ಸರಮಾಲೆ. ನೀವೂ ಬರೆಯಿರಿ…

ನಿಮ್ಮ ಬರಹ mayflowermh@gmail.com ಗೆ ಮೇಲ್ ಮಾಡಿ. ಪೋಸ್ಟ್ ಮಾಡುವುದಾದರೆ ವಿಳಾಸ ‘ಮೇಫ್ಲವರ್ ಮೀಡಿಯಾ ಹೌಸ್, 1, ಮಹಡಿ, ಯುನಿಟ್  5, ಯಮುನಾಬಾಯಿ ರಸ್ತೆ, ಮಾಧವನಗರ, ಬೆಂಗಳೂರು- 560 001

ಈ ಬಾರಿ ನರೇಂದ್ರ ಪೈ ತಮ್ಮ ಲೋಕವನ್ನು ಬಿಚ್ಚಿಟ್ಟಿದ್ದಾರೆ 

 

The Bodies separate, Minds overlap.

But the soul is one. -Osho

ನನಗೆ ಚಿಕ್ಕಂದಿನಲ್ಲಿ ಸಿನಿಮಾ ಹುಚ್ಚು ಬಹಳ. ಮನೆಯ ಪಕ್ಕದಲ್ಲೆ ಸಿನಿಮಾ ಟಾಕೀಸು ಇದ್ದಿದ್ದೂ ಇದಕ್ಕೆ ಕಾರಣವಿದ್ದೀತು. ಹಬ್ಬಕ್ಕೆ, ಜಾತ್ರೆಗೆ ಎಲ್ಲ ಹೋದಾಗ ಪದೇ ಪದೇ ಸಿನಿಮಾ ನೋಡುವ ಪುಟ್ಟ ಆಟಿಕೆ ಕೊಳ್ಳುತ್ತಿದ್ದೆ. ಜೊತೆಗೆ ನಾನೇ ಗೋಡೆಯ ಮೇಲೆ ಸಿನಿಮಾ ತೋರಿಸುವ ಹಲವಾರು ಪ್ರಯತ್ನವೂ ನಡೆದಿತ್ತು. ಅದಕ್ಕೆಲ್ಲ ನನಗೆ ಬೇಕಾದ ಕೆಲವು ತುಂಡು ಫಿಲಂಗಳನ್ನು ಕೊಡುತ್ತಿದ್ದವರು ಗೋಪಾಲ್ ಆಚಾರ್ ಎನ್ನುವವರು. ಅವರು ಟಾಕೀಸಿನ ಆಪರೇಟರ್ ಆಗಿದ್ದರು. ಈ ಗೋಪಾಲ್ ಆಚಾರ್ ಒಬ್ಬ ಅದ್ಭುತ ಚಿತ್ರಕಾರ ಕೂಡ ಆಗಿದ್ದರು. ಒಂದು ಷೋ ಮುಗಿದು ಇನ್ನೊಂದು ತೊಡಗುವ ಮೊದಲು ಸಿಗುವ ಅಲ್ಪ ಸ್ವಲ್ಪ ಸಮಯದಲ್ಲಿ ತಮ್ಮ ಪ್ಯಾಡನ್ನು ಹಿಡಿದು ಎಂಥೆಂಥಾ ಚಿತ್ರಗಳನ್ನು ಬಿಡಿಸುತ್ತಿದ್ದರೆಂದರೆ ನನಗೆ ಇವರ ಆಕರ್ಷಣೆ ಹೆಚ್ಚುತ್ತಲೇ ಹೋಯಿತು. ಇದೆಲ್ಲಕ್ಕಿಂತ ಮುಖ್ಯವಾದದ್ದು ಇವರ ಬರವಣಿಗೆಯ ಮಾಯಕತೆ.

ನಮ್ಮೂರಿನ ಸಿನಿಮಾ ಟಾಕೀಸಿಗೆ ಒಂದು ಹುಟ್ಟುಹಬ್ಬದ ದಿನವೂ ಅದನ್ನು ಆಚರಿಸುವ ಕ್ರಮವೂ ಇತ್ತು. ಅದು ಏಪ್ರಿಲ್ ಎಂಟು. ಆವತ್ತು ಸ್ವಲ್ಪ ಹೊಸದಾದ ಸಿನಿಮಾ ನಮ್ಮೂರಿಗೆ ಬರುತ್ತಿತ್ತು ಮಾತ್ರವಲ್ಲ ಆ ದಿನದ ಎಲ್ಲಾ ಷೋಗೂ ಪ್ರತಿ ಕ್ಲಾಸಿಗೂ ಒಂದರ ಹಾಗೆ ಮೂರು ಮೂರು ಬಹುಮಾನ ಕೂಡ ಇರುತ್ತಿತ್ತು. ಇದೆಲ್ಲಕ್ಕಿಂತ ಮಜಾ ಇರುತ್ತಿದ್ದುದು ಆವತ್ತು ಹಂಚುತ್ತಿದ್ದ ಹ್ಯಾಂಡ್‌ಬಿಲ್ಲಿನದು. ಕಳೆದ ಇಡೀ ವರ್ಷ ಅಲ್ಲಿ ಪ್ರದರ್ಶಿತವಾದ ಎಲ್ಲ ಸಿನಿಮಾ ಹೆಸರುಗಳೂ ಬರುವ ಹಾಗೆ ವಾಕ್ಯ ರಚಿಸಿ ಹೆಣೆದ ಒಂದು ಸುಂದರ ಕಥೆ ಅದರಲ್ಲಿ ಇರುತ್ತಿತ್ತು ಮತ್ತು ಅದನ್ನು ಬರೆಯುತ್ತಿದ್ದುದು ಇದೇ ಗೋಪಾಲ್ ಆಚಾರ್. ಆ ಕಥೆ ಎಷ್ಟು ಅದ್ಭುತವಾಗಿರುತ್ತಿತ್ತು ಮತ್ತು ಅದನ್ನು ಓದಲು ಎಂಥಾ ಉತ್ಸಾಹ ಜನರಲ್ಲಿ ಇರುತ್ತಿತ್ತೆಂದರೆ ಅರ್ಧ ಗಂಟೆಯ ಒಳಗೆ ಎಲ್ಲಾ ಪ್ಯಾಂಪ್ಲೆಟ್‌ಗಳೂ ಖಾಲಿಯಾಗಿ ಸಿಗದೇ ಹೋದವರು ಪರದಾಡುವಂತಾಗುತ್ತಿತ್ತು!

2418146181_b215f35b191ಇನ್ನೂ ಕತ್ತಲಿರುವ ಮುಂಜಾನೆ ಹೊತ್ತಿನಲ್ಲಿ ಗೆಜ್ಜೆ ಸದ್ದು ಮಾಡುತ್ತ ಬರುವ ಸುಂದರ ಕನ್ಯೆ ನಂದಾ (ಟಾಕೀಸಿನ ಹೆಸರು) ಈ ನಿರೂಪಕನ ಜೊತೆ ತನ್ನೆಲ್ಲಾ ಬೆಡಗು ಬಿನ್ನಾಣದೊಂದಿಗೆ ಮನದ ನೋವು ನಲಿವು ಹಂಚಿಕೊಂಡಂತೆ ಇರುತ್ತಿದ್ದ ಈ ಕಥಾನಕ ಎಲ್ಲೂ ಅಸಂಬದ್ಧ ಎನಿಸದ ಹಾಗೆ ಸಿನಿಮಾ ಹೆಸರುಗಳನ್ನು ನೇಯ್ದುಕೊಂಡು, ಕುತೂಹಲಕರವಾಗಿ ಸಾಗುತ್ತ ಟಾಕೀಸನ್ನು ಕನಸಿನ ಕನ್ಯೆಯ ಮಟ್ಟಕ್ಕೆ ಜೀವಂತಗೊಳಿಸಿ ಬಿಡುತ್ತಿದ್ದ ಮಾಯಕ ಇವತ್ತಿಗೂ ನನ್ನನ್ನು ಅಚ್ಚರಿಗೆ ತಳ್ಳುತ್ತದೆ. ಇವತ್ತು ಆ ಟಾಕೀಸು ಕಲ್ಯಾಣಮಂದಿರವಾಗಿದೆ. ಗೋಪಾಲ್ ಆಚಾರ್ ಕೂಡ ಈಗ ಬದುಕಿಲ್ಲ. ಆದರೆ ಬರೆಯಬೇಕು, ನಾಲ್ಕು ಮಂದಿ ಬರೆಯುವವನು ಅಂತ ನನ್ನನ್ನು ಗುರುತಿಸಬೇಕು ಎಂದು ನನಗೆ ಮೊತ್ತ ಮೊದಲ ಬಾರಿ ಅನಿಸಿದ್ದರೆ ಅದಕ್ಕೆ ಈ ಮನುಷ್ಯನೇ ಕಾರಣ ಅನಿಸುತ್ತದೆ. ಮುಂದೆ ಈ ಗೋಪಾಲ್ ಆಚಾರ್ ನಾಟಕಗಳನ್ನು ಬರೆದರು, ನಿರ್ದೇಶನ ಮಾಡಿ ರಾಜ್ಯಮಟ್ಟದಲ್ಲೂ ಪ್ರಶಸ್ತಿ ಇತ್ಯಾದಿ ಪಡೆದರು, ದೂರದರ್ಶನ ಇವರ ನಾಟಕಗಳನ್ನು ಪ್ರಸಾರ ಮಾಡಿತು, ಯಕ್ಷಗಾನದಲ್ಲಿ ಹೆಸರು ಮಾಡಿದರು ಎಲ್ಲ ಸರಿಯೇ. ಆದರೆ, ಇದೆಲ್ಲಕ್ಕಿಂತ ಮುಖ್ಯವಾಗಿ ಇವರಲ್ಲಿ ಯಾರಲ್ಲೂ ಇರದ ಒಂದು ದೊಡ್ಡ ಗುಣವಿತ್ತು. ನಾವಿದ್ದುದು ಒಂದು ಸಣ್ಣ ಊರು. ಅಲ್ಲಿ ಆಗಲೂ ಈ ಮನುಷ್ಯನಿಗೆ ಸಿಗಬೇಕಾದ ಯಾವ ಅನುಕೂಲವೂ ಸಿಕ್ಕಿರಲಿಲ್ಲ. ಆದರೂ ಒಂದು ವರ್ಷ ಇವರು ಈ ಪ್ಯಾಂಪ್ಲೆಟ್ಟಿನ ಹಿಂದೆ ಕಥೆ ಬರೆಯುವ ಕೆಲಸಕ್ಕೆ ನನ್ನ ಹೆಸರು ಸೂಚಿಸಿ ತಾನು ಹಿಂದೆ ಸರಿದು ನಿಂತರು! ಹೆಚ್ಚೆಂದರೆ ನಾನಾವಾಗ ಎಸ್ಸೆಸ್ಸೆಲ್ಸಿಯಲ್ಲಿದ್ದೆನೋ ಏನೋ. ಆಗ ಅದನ್ನು ನಾನು ಬರೆದೆ ಎನ್ನುವುದು ನನ್ನ ಅಹಂಕಾರದ ಮೊತ್ತ ಮೊದಲ ಅಭಿವ್ಯಕ್ತಿ. ಆ ಹೊತ್ತಿಗೆ ನಾನು ಒಂದೆರಡು ಮಕ್ಕಳ ಕತೆಗಳನ್ನು ಬರೆದಿದ್ದೆ, ಅದು ತರಂಗದಲ್ಲಿ ಬಂದಿತ್ತು. ಅಷ್ಟಕ್ಕೇ ಇವರು ನನ್ನನ್ನು `ಕವಿಗಳು’ ಎಂದು ಕರೆದು ಮಾತನಾಡಿಸುತ್ತಿದ್ದರು, ಯಾವ ಕೊಂಕಿಲ್ಲದೇ!

ಜನ ಗುರುತಿಸಬೇಕು, ಹೆಸರು ಮಾಡಬೇಕು ಎನಿಸಿ ಬರೆಯುವುದು, ಬರೆದಿದ್ದು ಪತ್ರಿಕೆಗಳಲ್ಲಿ ಬರಬೇಕು ಎಂದು ಆಸೆಪಡುವುದು, ಬಂದಾಗ ಎಲ್ಲರೂ ಅದನ್ನು ಗಮನಿಸಬೇಕು ಎಂದು ಬಯಸುವುದು, ಅದು ಗೌರವದೊಂದಿಗೆ ಅಷ್ಟಿಷ್ಟು ಹಣವನ್ನೂ ತರದಿದ್ದರೆ ಅದಕ್ಕೇನೂ ಬೆಲೆಯಿಲ್ಲ ಎನಿಸುವುದು ಎಲ್ಲ ನಿಜವಾದರೂ ಆತ್ಮ ಸಂತೋಷಕ್ಕೆ ಬರೆಯುತ್ತೇನೆ ಎಂದು ಬೊಗಳೆ ಬಿಡುವುದು, ಇದೆಲ್ಲ ಅಸ್ಮಿತೆಯ ಪ್ರಶ್ನೆ ಎನ್ನುವುದು ಹೆಚ್ಚು. ಬರೆಯುವುದು ಒಂದು ಬಗೆಯಲ್ಲಿ ಅಸಹಜ ವಿದ್ಯಮಾನ. ಅದರ ಒಂದಾನೊಂದು ಕಾರಣ ನಮ್ಮ ಅಹಂಕಾರದ ವಿಸ್ತರಣೆ ಕೂಡ. ಹಾಗೆಯೇ ಅದು ಅಪರಿಚಿತ ಓದುಗನ ಪ್ರೀತಿಯ ಯಾಚನೆ ಕೂಡ.

೧೯೮೯ರಲ್ಲಿ ನನ್ನ ಓದು ಮುಗಿದು ಕೆಲಸ ಹುಡುಕುತ್ತಿದ್ದಾಗಿನ ಒಂದು ಘಟನೆ, ಏನೇ ಆಗು, ಬರಹಗಾರ ಮಾತ್ರ ಆಗಬೇಡ ಎನ್ನುವಲ್ಲಿಗೆ ತಂದು ನಿಲ್ಲಿಸಿತು! ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಸಂಪಾದಕರ ಬಳಗದ ನಡುವೆ ಅವರ ದಿನನಿತ್ಯದ ವ್ಯವಹಾರದಲ್ಲಿ ನಾವೆಲ್ಲ ತುಂಬ ಗೌರವಿಸುವ ಸಾಹಿತಿಗಳ ಬಗ್ಗೆ ಎಂಥೆಂಥ ಮಾತುಗಳು, ತಿರಸ್ಕಾರ, ಲೇವಡಿ ಎಲ್ಲ ಇರುವುದನ್ನು ಕಂಡೆನೆಂದರೆ ನನಗೆ ಸಂಪಾದಕೀಯಗಳಲ್ಲಿ, ತಮ್ಮ ಲೇಖನಗಳಲ್ಲಿ ಈ ಸಂಪಾದಕರು, ಅವರ ಬಳಗದವರು ಎಲ್ಲ ಬರೆಯುತ್ತಿದ್ದುದು ಸುಳ್ಳೇ ಹಾಗಾದರೆ ಎನಿಸಿ ಆಘಾತವೇ ಆಯಿತು. ಹಾಗೆಂದು ಅದು ಅಂಥಿಂಥ ಪತ್ರಿಕೆಯಲ್ಲ. ಅವರು ಅಂಥಿಂಥ ಸಂಪಾದಕರಲ್ಲ. ಅತ್ತ ಲಂಕೇಶ, ಚಿತ್ತಾಲ, ತೇಜಸ್ವಿ ತರ ಬರೆಯುವ ಲೇಖಕರೇ ಬರಲಿಲ್ಲ ನಮ್ಮಲ್ಲಿ ಎಂದು ಬರೆಯುತ್ತಿದ್ದರು, ಇತ್ತ ಸಾಹಿತ್ಯದ ಹುಚ್ಚು ಹಿಡಿದವರು ಮಾತ್ರ ಇವರು ಬರೆದಿದ್ದನ್ನೆಲ್ಲ ಓದುವುದು ಎಂದು ಜರೆಯುತ್ತಿದ್ದರು! ಯಾರೋ ದೊಡ್ಡ ಕವಿಯೊಬ್ಬರ ಸಂಬಂಧಿ ಸಂಭಾವನೆಯ ವಿಷಯದಲ್ಲಿ ತಕರಾರು ತೆಗೆದರು ಎಂದು ತಮಾಷೆ ಮಾಡಿ ನಗುವುದು, ಅಯ್ಯೋ ಇಂವ ಮಹಾ ಕಿರಿಕಿರಿ ಮಾರಾಯ, ಎಲ್ಲಾದರೂ ನಾಲ್ಕಿಂಚು ಜಾಗ ಹೊಂದಿಸಿ ಹಾಕಿಬಿಡಯ್ಯಾ ಎಂದು ಜೋಕು ಮಾಡುವುದು ಎಲ್ಲ ನೋಡಿ ಸಾಹಿತಿಯಾಗುವ ಆಸೆಯೇ ಮಣ್ಣುಮುಕ್ಕಿತು!

ಮುಂದೆ ನನ್ನ ವಯಸ್ಸು ಸುಮಾರು ಮುವ್ವತ್ತರ ಅಂಚಿನಲ್ಲಿದ್ದಾಗ ನಾನು ನನ್ನ ಮೊದಲ ಕಥೆ ಬರೆದೆ, ಅದು ಉದಯವಾಣಿಯಲ್ಲಿ ಬಂತು. ಅದರ ಹಿನ್ನೆಲೆ ಹೇಳುವುದು ಈ ಲೇಖನದ ದೃಷ್ಟಿಯಿಂದ ಮುಖ್ಯವೆಂದು ತಿಳಿದಿದ್ದೇನೆ. ನನ್ನ ಸಹೋದ್ಯೋಗಿಗಳ ಜೊತೆ ಆಗಾಗ ಜೋಗಕ್ಕೆ, ಮಡಿಕೇರಿಗೆ ಎಂದೆಲ್ಲ ಟೂರು ಹೋಗುವುದಿತ್ತು. ಸುಮಾರು ಹತ್ತು ಮಂದಿ ಟಾಟಾ ಸುಮೋದಲ್ಲೋ, ಟ್ರಾಕ್ಸ್‌ನಲ್ಲೋ ಹೋಗುತ್ತಿದ್ದುದು. ಎಲ್ಲ ಅದೇ ವಯೋಮಾನದವರು, ಅವಿವಾಹಿತರೇ ಹೆಚ್ಚು. ಮೂರ್ನಾಲ್ಕು ಮಂದಿ ಹುಡುಗಿಯರೂ ಇರುತ್ತಿದ್ದರು. ಮುಸ್ಸಂಜೆ ಮರಳಿ ಬರುವ ಹಾದಿಯಲ್ಲಿ, ಕತ್ತಲು ಕವಿಯುವುದರಿಂದ ಪ್ರಯಾಣದುದ್ದಕ್ಕೂ ತುಂಬ ಬೋರಾಗುತ್ತಿತ್ತು. ಆಗ ನನ್ನ ಏಕವ್ಯಕ್ತಿ ಯಕ್ಷಗಾನ ತಾಳಮದ್ದಲೆ ಸುರುವಾಗುತ್ತಿತ್ತು. ಅಲ್ಲಿ ನಮ್ಮ ಆಫೀಸಿನ ಮಂದಿಯೇ ಪಾತ್ರಧಾರಿಗಳು. ಆಫೀಸಿನಲ್ಲಿ ಎಂದೋ ನಡೆದ ಯಾವುದೋ ಜಗಳ, ಮನಸ್ತಾಪ, ತಮಾಷೆಯ ಪ್ರಕರಣ, ಯಾರೋ ಯಾರನ್ನೋ ಸಿಕ್ಕಿಸಿ ಹಾಕಿದ್ದು, ಅಥವಾ ಹಾಗಂತ ಇವರೋ ಅವರೋ ಅಂದುಕೊಂಡಿದ್ದು, ಅವರ ಮಧ್ಯೆ ಇನ್ನೂ ಕರಗದೆ ಉಳಿದು ಹೋದ ಐಸುಗಡ್ಡೆ, ನಮ್ಮ ಬಾಸ್‌ಗಳು (ಇಬ್ಬರಿದ್ದರು, ನಮ್ಮೊಂದಿಗೆ ಬರುತ್ತಿರಲಿಲ್ಲ, ವಯಸ್ಸಾದವರು ಮತ್ತು ಸದಾ ಒಳಜಗಳದಲ್ಲಿ ನಿರತರಾಗಿದ್ದರು), ಕಸಗುಡಿಸುವ ತಮಿಳಿನ ಚೆಲ್ಲಮ್ಮ – ಇವರದೇ ಒಂದಿಲ್ಲಾ ಒಂದು ಪ್ರಸಂಗ. ಮಾತುಗಾರಿಕೆಯ ಶೈಲಿ ಮಾತ್ರ ಯಕ್ಷಗಾನದ್ದು. ಯಾರೂ ಬೇಸರ ಮಾಡಿಕೊಳ್ಳುವಂತಿಲ್ಲ, ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಇದು ಮನಸ್ಸು ತೆರೆದಿಟ್ಟು ತಮ್ಮ ಕಥೆಯನ್ನು ತಾವೇ ಕೇಳುವ ಒಂದು ಅವಕಾಶ, ನನಗೂ ಸೇರಿ! ಕೊಂಚ ಸಡಿಲಾಗಲು, ತಮ್ಮದೇ ತಪ್ಪುಗಳನ್ನು, ದುಡುಕನ್ನು ಕೊಂಚ ಲಘುವಾಗಿ ಕಾಣಲು, ಕಂಡು ನಗಲು ಒಂದು ಯತ್ನ.

ಇದು ಸಫಲವಾಯಿತು. ಒಬ್ಬಿಬ್ಬರು ಇದನ್ನೆಲ್ಲ ಇಷ್ಟು ಚೆನ್ನಾಗಿ ಮಾಡ್ತೀಯಲ್ಲ, ನೀನ್ಯಾಕೆ ಪತ್ರಿಕೆಗಳಿಗೆ ಬರೆಯಬಾರದು ಎಂದು ಉಬ್ಬಿಸಿದರು. ಆಗ ನಾನು ನನ್ನ ಡಾಯರಿ ತೆರೆದು ನೋಡಿದೆ. ಅಲ್ಲಿತ್ತು ನನ್ನ ಮೊದಲ ಕಥೆ! ನನ್ನ ಬದುಕು ನನಗೆ ನೀಡಿದ ಅನುಭವಗಳಿಂದ ನಾನು ಪಡೆದುಕೊಳ್ಳಬೇಕಾದ್ದನ್ನು, ಜೀರ್ಣಿಸಿಕೊಳ್ಳಬೇಕಾದ್ದನ್ನು ಪಡೆದುಕೊಳ್ಳಲು ಮತ್ತು ಈ ಪಚನಕ್ರಿಯೆ ಸುಸೂತ್ರ ಸಾಗಲು ಒಂದು ಮೌನ, ಧ್ಯಾನ, ಏಕಾಂತ, ಚಿಂತನೆ ಅಗತ್ಯವಿತ್ತು. ಇಲ್ಲಿ ನನ್ನನ್ನು ನಾನು ಕಾಣುವ, ಕಂಡು ಅರಿಯುವ ಉದ್ದೇಶ ಮಾತ್ರ ಇದೆ. ನನ್ನ ಬದುಕು ನನಗೆ ಕೊಡಮಾಡಿದ ಅನುಭವಗಳಿಗೆ ನನ್ನ ತಕ್ಷಣದ ಪ್ರತಿಕ್ರಿಯೆಯೇ ನಾನು. ಅದನ್ನು ವಿಶ್ಲೇಷಿಸಬಹುದು.

ಅನುಭವಗಳಾಚೆ ಏನನ್ನೂ ಕೊಡಲಾರದ ಬದುಕು ಅರ್ಥವಾಗಬೇಕೆನ್ನುವ ಹಠ ಇಂದು ನಿನ್ನೆಯದಲ್ಲ. ಯಾವುದೇ ಪೂರ್ವ ಸೂಚನೆಯಿಲ್ಲದೆ, ಮಾರ್ಗದರ್ಶನವಿಲ್ಲದೆ, ಯಾಕೆ-ಏನು ಎನ್ನುವುದೂ ತಿಳಿದಿರದೆ ತೊಡಗಿದ ಈ ಜೀವನವೆಂಬೋ ನಾಟಕದ ಗೊತ್ತು ಗುರಿಗಳ ಬಗ್ಗೆ ಅದಮ್ಯ ಕುತೂಹಲ ಸಹಜವಾದದ್ದು. ಈ ಬದುಕನ್ನು ಬದುಕಬಹುದಾದ ಅತ್ಯಂತ ಸಂಪನ್ನ ಬಗೆ ಯಾವುದು ಎಂಬ ಹುಡುಕಾಟ ಕೂಡ ಅಷ್ಟೇ ಪುರಾತನವಾದದ್ದು. ನನ್ನನ್ನು ಕೇಳಿದರೆ ಈ ಜಗತ್ತಿನ ಎಲ್ಲ ಭಾಷೆಯಲ್ಲಿ ಸೃಷ್ಠಿಯಾದ ಎಲ್ಲಾ ಸಾಹಿತ್ಯದ ಹಿಂದೆಯೂ ಇರುವ ಮೂಲಭೂತ ಶೋಧ ಇದುವೇ ಆಗಿದೆ. ಸಾಂದರ್ಭಿಕವಾಗಿ ನಮಗೆ ಬೇರೇನೋ ಎದ್ದು ಕಂಡರೂ, ಅದರ ಮೂಲದಲ್ಲಿ ಇರುವುದು ಬದುಕನ್ನು ಇನ್ನಷ್ಟು ಉತ್ತಮಗೊಳಿಸುವ ಹಾದಿಯ ನಿರಂತರ ಶೋಧವೇ.

ಡಾಯರಿಯ ಉದ್ದೇಶವೂ ಅದೇ! ಇಷ್ಟೇ, ಇಲ್ಲಿ ನನ್ನ ಓದುಗ ನಾನೇ. ಇದೆಲ್ಲವೂ ನಾನು ನನಗೇ ಬರೆದುಕೊಂಡ ಸ್ವಗತ. ಆದರೆ ವಿಚಿತ್ರ ನೋಡಿ, ನಿಮಗೆ ಇಂಥದ್ದನ್ನೇ ಓದಲು ಇನ್ನಿಲ್ಲದ ಕುತೂಹಲ! ಅದು ನನ್ನಲ್ಲೂ ಇತ್ತು. ನನ್ನದೇ ಡಾಯರಿಯನ್ನು ನಾನೇ ಇನ್ನೆಂದೋ ಓದುವಾಗ ಅದು ಯಾರದೋ ಡಾಯರಿಯಾಗಿ ಬಿಡುತ್ತಿತ್ತು, ಎಲ್ಲಾ ಅರ್ಥದಲ್ಲೂ! ಅಂದರೆ, ಇಲ್ಲೂ ಆತ್ಮವಂಚನೆ ಸಾಧ್ಯ ಅನಿಸಿದ್ದು ಮತ್ತೊಮ್ಮೆ ಅದನ್ನು ನಾನೇ ಓದಿದಾಗ. ಅಲ್ಲಿ ಅನುಭವದ ದಾಖಲಾತಿಯೇನೋ ಇತ್ತು, ಆದರೆ ಅದರ ಜೊತೆಗೇ ಸಾಧ್ಯವಿರುವ ಎಲ್ಲ ಬಡಿವಾರವೂ ಇದ್ದುದನ್ನು ಕಂಡೆ. ಕೊಂಚ ಅಹಹ ಎನ್ನುವ ಭಾಷೆಯಲ್ಲೇ ಅದೆಲ್ಲ ಮೈತಳೆದಿದ್ದು ಕಂಡೆ. ಅಗತ್ಯವಿತ್ತೆ ಇದೆಲ್ಲ ಸತ್ಯವನ್ನು ಬತ್ತಲೆಯಾಗಿ ಮುಖಾಮುಖಿಯಾಗಲು?

ಖಂಡಿತ ಅಗತ್ಯವಿತ್ತು. ರೂಪಕಗಳು ಬೇಕು, ಪ್ರತಿಮೆಗಳು ಬೇಕು, ಅವಾಸ್ತವಿಕ ವಿವರಗಳು ಬೇಕು ಅನುಭವವನ್ನು ಅಕ್ಷರಗಳಲ್ಲಿ ಹಿಡಿಯಲು, ಅದು ಅನಿವಾರ್ಯ. ಅನುಭವ ಮತ್ತೊಮ್ಮೆ ಅಕ್ಷರರೂಪಿಯಾಗಿ ಮೂಡಿದಾಗಲೂ ಮೂಲ ಅನುಭವದ ಭಾವವನ್ನೇ ನನ್ನಲ್ಲಿ ಮತ್ತೊಮ್ಮೆ ಮೂಡಿಸದೇ ಹೋದರೆ ಅದನ್ನು ಇನ್ಯಾರಲ್ಲೋ ಅದು ಹೇಗೆ ಮೂಡಿಸೀತು? ಅಲ್ಲಿಗೆ ಅನುಭವ ಅಕ್ಷರವಾಗಿದ್ದು ಸುಳ್ಳು.

ಮೌನದಲ್ಲಿ ಕಲಕಿದ ಆ `ಅದನ್ನು’ ಸದ್ದಾಗಿಸಿ, ಅಕ್ಷರವಾಗಿಸಿ ನಿನಗೆ ತಲುಪಿಸುವ ಕಷ್ಟವಿದು. ತಲುಪಿಯೂ ತಲುಪದೇ ಹೋಗುವ, ತಲುಪಬೇಕಾದ್ದು ತಲುಪದೆ ಇನ್ನೇನೋ ತಲುಪುವ, ತಲುಪಿಯೂ ನಿನಗೆ ನನಗನಿಸಿದ್ದು ಅನಿಸದೇ ಹೋಗುವ, ಅನಿಸಿಯೂ ನೀನು ಕರಗದೇ ಹೋಗುವ, ಕರಗಿಯೂ ನನಗೆ ಹೇಳದೇ ನಿಲ್ಲುವ…..ಸಂಕಟಗಳಿವೆ ಬರೆದು ಎಲ್ಲವನ್ನೂ ಹೊರಗಿಕ್ಕುತ್ತೇನೆ ಎಂದು ಹೊರಡುವುದರಲ್ಲಿ.

ಆದರೆ ಈ ಅಗತ್ಯದ ಬೆನ್ನಲ್ಲೇ ಆತ್ಮವಂಚನೆಯ ನೆರಳು ಹರಡಿತ್ತಲ್ಲವೆ? ಹೌದು, ಅದೂ ನಿಜ. ಅದು ತಿಳಿದೂ ಮಾಡಿಕೊಂಡ ಆತ್ಮವಂಚನೆಯಲ್ಲ. ಅದಾಗಿದ್ದರೆ ಗುರುತಿಸುವುದು ಸುಲಭ. ಡಾಯರಿಗೆ ಅಂಥದ್ದರ ಹಂಗಿಲ್ಲ. ಇದರ ಆಳವೇ ಬೇರೆ. ಈ ಆತ್ಮವಂಚನೆ ಆತ್ಮಕ್ಕೇ ತಿಳಿಯದ ಹಾಗೆ ಭಾಷೆ ಮತ್ತು ಅದರ ಸದ್ದು ಹೂಡಿದ ಹೂಟದ್ದು! ಮಾತಿಗೆ `ಮಾತಿನ ಮೋಹ’ ಮಾಡಿದ ಮೋಸ! ಸತ್ಯವನ್ನು ಕಾಣಹೊರಟವನ ಕಣ್ಣು `ನೋಟ’ಕ್ಕೆ ಮಾಡಿದ ಮೋಸ! ಹಾಗಾದರೆ ಸತ್ಯ ಎಲ್ಲಿತ್ತು? ಹೇಳಿ, `ನಿಜ’ದ ಸತ್ಯ ಎಲ್ಲಿತ್ತು? ಅದು ಗೆರೆಗಳ ನಡುವೆ ಎಲ್ಲೋ ಇದ್ದ ಹಾಗೆ, ಇಲ್ಲದ ಹಾಗೆ ಇರುತ್ತದೆ. ವ್ಯಕ್ತದಲ್ಲಿನ ಅವ್ಯಕ್ತ ಮತ್ತು ಅವ್ಯಕ್ತದಲ್ಲಿನ ವ್ಯಕ್ತದ ಹಾಗೆ! ಕಾಣಿಸಿದರೆ ನಮ್ಮ ಅದೃಷ್ಟ. ಕಾಣಿಸದಿದ್ದರೆ ಆ ಅರಿವು ನಿಮಗಲ್ಲದಿರಬಹುದು. ನಿಮಗೆ ಅದು ಆಗಲೇ ದಕ್ಕಿರಬಹುದು, ದಕ್ಕುವುದಕ್ಕೆ ಇನ್ನೂ ಕಾಲ ಕೂಡಿ ಬಂದಿರದಿರಬಹುದು!

ಆದರೆ ಕಥೆ ಬರೆಯುವಾಗ, ಅದನ್ನು ಓದುಗರ ಮುಂದೆ ಇಡುವಾಗ, ಆಯಾ ಪ್ರಕಾರದ ಶಿಸ್ತು, ಅಗತ್ಯಗಳು, ಪರಂಪರೆಯ ಅರಿವು, ಹೊಸತನದ ಹಂಬಲ, ಓದುಗರ-ಅನ್ಯರ ಪೊರೆಯುವಿಕೆ ಎಲ್ಲ ಮುಖ್ಯವಾಗಿಬಿಡುತ್ತದೆ. ಬರೇ ಒಳಗನ್ನು ಕಾಣುತ್ತ ಬಂದ ವ್ಯಾಯಾಮ ಸಾಲದಾಗುತ್ತದೆ. ಹೊರಗನ್ನು ನೋಡಬೇಕು, ಆ ಹೊರಗನ್ನು ಮತ್ತೆ ಅಕ್ಷರಗಳಲ್ಲಿ ಸೃಜಿಸಬೇಕು, ಅದಕ್ಕೆ ಸೂಕ್ಷ್ಮ ಅವಲೋಕನ ಬೇಕು, ಅವಲೋಕನದ ಸ್ಪರ್ಶ ನನ್ನ ಅಂತರಂಗಕ್ಕೆ ಇಳಿಯಬೇಕು. ವ್ಯಕ್ತಿ ವಿಶಿಷ್ಟ ಮನುಷ್ಯ ಸಂಬಂಧಗಳ ಬಗ್ಗೆ ಮಾತನಾಡುವಾಗ ತಿಳಿದೋ ತಿಳಿಯದೆಯೋ ಘಟನೆಗಳ ಮೂಲವಾದ ವಾತಾವರಣವೂ, ಅದನ್ನು ಆಗಗೊಟ್ಟ ವಸ್ತುಲೋಕದ ವಿವರಗಳೂ ಮುಖ್ಯವಾಗುತ್ತವೆ, ಕಣ್ಣೆದುರಿನ ಬದುಕು ಸವಾಲುಗಳ ಕರೆಯಾಗುತ್ತದೆ.

ಕೊನೆಗೂ ಕಣ್ಣು ಕಂಡಿದ್ದು, ಕಿವಿ ಕೇಳಿದ್ದು, ಮಾತು ಆಡಿದ್ದು, ನಾಸಿಕಕ್ಕೆ ಅಡರಿದ್ದು, ಸ್ಪರ್ಶದ ಮೂಲಕ ಮೌನ ಸಂವಹಿಸಿದ್ದು ಮತ್ತು ಆ ವಾತಾವರಣ, ಜಗತ್ತು, ಅಲ್ಲಿದ್ದ-ಇರದಿದ್ದ ಎಷ್ಟೊಂದೆಲ್ಲ ಕಾರಣ ಮನಸ್ಸಿಗಿಳಿದ ಒಂದು ದರ್ಶನಕ್ಕೆ! ಅದನ್ನು ಹೇಗಿತ್ತೋ ಹಾಗೆ ನಿನಗೆ ಕಟ್ಟಿಕೊಡಲು ನನಗೆ ಎಂದಾದರೂ ಸಾಧ್ಯವಾದೀತೆ? ಬಣ್ಣವಿಲ್ಲದ, ನೋಟವಿಲ್ಲದ, ಶಬ್ದವಿಲ್ಲದ, ಸ್ಪರ್ಶವಿಲ್ಲದ, ಪರಿಮಳವಿಲ್ಲದ, ರುಚಿಯಿಲ್ಲದ ಅಕ್ಷರಗಳಲ್ಲಿ ಅವೆಲ್ಲವನ್ನೂ ಸೃಜಿಸುವ ಛಲವಿದು. ಎಲ್ಲಿ ಸಾಧ್ಯ? ನನ್ನ ರಣರಣ ಬಿಸಿಲು ನಿನ್ನದೂ ಆಗಿದ್ದಾಗ ಸಾಧ್ಯ. ನನ್ನ ರೋಮಾಂಚನ ನಿನಗೂ ಉಂಟಾದಾಗ ಸಾಧ್ಯ. ಓದುತ್ತ ಓದುತ್ತ ಬರೆದಿದ್ದು ಹೌದು ಹೌದು ಅನಿಸುತ್ತಿದ್ದರೆ ಸಾಧ್ಯ! ಅಂದರೆ ನಾನು ಯಾವುದನ್ನು ಅಕ್ಷರಗಳಿಗೆ ಬದಲಾಯಿಸಿದೆನೋ ಅದನ್ನು ಓದುಗ ಅಕ್ಷರಗಳಿಂದ ಮತ್ತೆ ಅನುಭವಕ್ಕೆ ಬದಲಿಸಿಕೊಳ್ಳಲು ಸಾಧ್ಯವಾದಾಗ ಮಾತ್ರ. ಅಷ್ಟರಮಟ್ಟಿಗೆ ಬರಹಗಾರನ ಪಾತ್ರ ಒಂದು ಸೃಜನಶೀಲ ಸೃಷ್ಟಿಯಲ್ಲಿ ಅರ್ಧದಷ್ಟು. ಇನ್ನರ್ಧ ಓದುಗನಿಂದಲೇ ನಿಜವಾಗಬೇಕಾದ್ದು! ಇದು ಅಂಥ ಸೃಷ್ಟಿಯ ಯಶಸ್ಸಿಗೂ ಸೋಲಿಗೂ ನಿಜ. `ನಾನು’ ಬರೆದೆ ಎಂಬುದು ಸುಳ್ಳು, ನೀನು ಓದಿ ದಕ್ಕಿಸಿಕೊಂಡಿದ್ದು ನಿಜ.

ನಾವು ನಮ್ಮ ಜೊತೆಯವರನ್ನು ಬೆಳೆಸುತ್ತ, ಬೆಳೆಯುವುದಕ್ಕೆ ಸಹಕರಿಸುತ್ತ ಇರುವುದು ಸಾಧ್ಯವಾಗದೇ ಹೋದರೆ ಸ್ವತಃ ನಾಶವಾಗುತ್ತೇವೆ ಎಂಬ ಮಾತಿದೆ. ಗೋಪಾಲ್ ಆಚಾರ್ ಮತ್ತೆ ನೆನಪಾಗುತ್ತಾರೆ. ಸಲಹೆಗಳು, ಟೀಕೆ – ಟಿಪ್ಪಣಿಗಳು, ಸುಮ್ಮನೇ ಸೆಳೆಯುವುದಕ್ಕೆ ಹೊಗಳುವವರು, ಇನ್ನೇನೋ ಮನಸ್ಸಲ್ಲಿಟ್ಟುಕೊಂಡು ತೆಗಳುವವರು, ಎಲ್ಲ ಎದುರಾಗುತ್ತವೆ. ಎಲ್ಲವನ್ನೂ ಎಲ್ಲಿಡಬೇಕೋ ಅಲ್ಲಿಟ್ಟು ಬೆಳೆಯುವ ಚೈತನ್ಯವನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಸುಲಭವಲ್ಲ ಎಂದು ಅರಿವಾಗುವ ಹೊತ್ತಿಗೆ ಹಾದಿ ಕಳೆದು ಹೋಗಿರುತ್ತದೆ. ತುಳಿಯುತ್ತ ಬಂದ ತಪ್ಪು ಹಾದಿ ಹಳತಾಗಿ ಅಭ್ಯಾಸವಾಗಿರುತ್ತದೆ. ಇದು ಬರಹಗಾರನ ದುರಂತ. ಇವನ್ನೆಲ್ಲ ಹೆಚ್ಚಿಸುವಂತೆ ಅಲ್ಲಿ ಹಣದ, ಅಹಂಕಾರದ, ಪ್ರತಿಷ್ಠೆಯ, ಪ್ರಶಸ್ತಿಯ, ಜನಮನ್ನಣೆಯ, ಮಾಧ್ಯಮಗಳ, ಹಾವೇಣಿಯಾಟದ ಆಮಿಷ! ಇಂದಿನ ಮಾರುಕಟ್ಟೆಯೇ ದೈವವೆನ್ನುವ ದಿನಗಳಲ್ಲಿ ಅಬ್ಬರದ ಪ್ರಚಾರವೇ ಯೋಗ್ಯತೆಯನ್ನು ನಿರ್ಣಯಿಸುವುದನ್ನು ಕಾಣುತ್ತಿರುವಾಗಲೂ ಸಾಹಿತಿಯ ಬಗೆಬಗೆಯ ಅವತಾರಗಳನ್ನು ಹೇಗೆ ಎದುರಾಗುತ್ತೇವೆ?

ಈ ಬಗೆಯ ತಲ್ಲಣಗಳನ್ನು ಹೇಗೆ ಎದುರಿಸುತ್ತೇವೆ? ಒಂದೇ ಉತ್ತರ ನಿಜಕ್ಕೂ ಇರುವುದು, ನಾನೇಕೆ ಬರೆಯುತ್ತೇನೆಂಬುದಕ್ಕೆ, ಬರೆಯುವ ಎಲ್ಲರ ಬಳಿ. ಮನುಷ್ಯನಾಗಲು ಎಂಬುದು. ಇದು, ಈ ಹಾದಿ, ಜಗತ್ತಿನ ಎಲ್ಲರಿಂದ ನನಗೆ ತರಬೇಕಿರುವುದು ಪ್ರೀತಿಯನ್ನು ಮತ್ತು ಪ್ರೀತಿಯನ್ನು ಮಾತ್ರ. ಪರಂತು, ಅದು ದ್ವೇಷ, ಅಸೂಯೆ, ಕಹಿ, ನಿಂದೆ, ಕಟಕಿ, ಸಣ್ಣತನ, ಕಾಲೆಳೆಯುವ ಸಾಂಸ್ಕೃತಿಕ ರಾಜಕಾರಣದ ವಾಸನೆ ತರಬಾರದು. ತಂದರೆ ಬರೆಯುವುದಾದರೂ ಹೇಗೆ? ಬರೆಯುವುದಕ್ಕೆ ಕೂಡ ಬೇಕಿರುವುದು ಬರೇ ಒಂದೇ ಒಂದು ಗುಣ. ಅದು ಪ್ರೀತಿ ಮತ್ತು ಪ್ರೀತಿಯೊಂದೇ. ಚರಾಚರಾ ಜಗತ್ತಿನ ಸಕಲರನ್ನೂ, ಸರ್ವಸ್ವವನ್ನೂ ಮಗುವಿನಂಥ ಮನಸ್ಸಿನಿಂದ ಪ್ರೀತಿಸುವುದು ಸಾಧ್ಯವಾದಾಗ ಮಾತ್ರಾ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ. ಅದು ಅಷ್ಟಿಷ್ಟು ಸಾಧ್ಯವಾಗದೇ ಹೋದರೂ ಬರೆದಿದ್ದು ಬರೇ ಬರವಣಿಗೆ, ಸಾಹಿತ್ಯವಲ್ಲ. ಕೊನೆಗೂ ನಮಗೆಲ್ಲ ಒಳ್ಳೆಯ ಮನುಷ್ಯರಾಗುವುದಕ್ಕಿಂತ ಒಳ್ಳೆಯ ಸಾಹಿತಿ ಅನಿಸಿಕೊಳ್ಳುವುದೇ ಹೆಚ್ಚಾಗಬಾರದು, ಅಲ್ಲವೆ?

(ಈ ಲೇಖನವನ್ನು ಬರೆದಿದ್ದು ಫೆಬ್ರವರಿ ೨೦೦೮ರಲ್ಲಿ. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿರುವ, ರಹಮತ್ ತರೀಕೆರೆ ಸಂಪಾದಕರಾಗಿರುವ “ಹೊಸ ತಲೆಮಾರಿನ ತಲ್ಲಣ” ಕೃತಿಗಾಗಿ ಬರೆದಿದ್ದು.ಸುಮಾರು ಮುವ್ವತ್ತೆಂಟು ಮಂದಿ ಬರಹಗಾರರ ಲೇಖನಗಳು, ಸಂಪಾದಕ ರಹಮತ್ ತರೀಕೆರೆಯವರ ಸೂಕ್ಷ್ಮ ವಿಶ್ಲೇಷಣೆಯ ಒಂದು ಸುದೀರ್ಘ ಲೇಖನ ಈ ಪುಸ್ತಕದಲ್ಲಿವೆ.) ಹೊಸ ತಲೆಮಾರಿನ ತಲ್ಲಣ ಸಂಪಾದಕರು: ರಹಮತ್ ತರೀಕೆರೆ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ. ಪುಟಗಳು:xii+190 ಬೆಲೆ: ಎಂಭತ್ತು ರೂಪಾಯಿ.

ಫೆಬ್ರವರಿ 18, 2009 Posted by odubazar | ಓದು ಜನಮೇಜಯ, ಬುಕ್ ಬಜಾರ್ | | No Comments Yet

ಓದಿ- ಹೊಸ ತಲ್ಲಣ

scan0006

ಫೆಬ್ರವರಿ 25, 2009 Posted by odubazar | ಬುಕ್ ಬಜಾರ್ | | No Comments Yet

ಕರಿಸ್ವಾಮಿ ಕಂಡ ಫ್ರೀಡ್ಮನ್ ಲೋಕ

baraka-9baraka-71baraka-31ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಹೆಸರಾಂತ ಪತ್ರಕರ್ತ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ `ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಪುಸ್ತಕದ ಕರ್ತೃ ಥಾಮಸ್ ಲಾರೆನ್ ಫ್ರೀಡ್ಮನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಸುಮಾರು ಮೂರು ನೂರು ಆಹ್ವಾನಿತರ ಸಮ್ಮುಖದಲ್ಲಿ ಜಗತ್ತಿನ ಐಟಿ ಐಕಾನ್ ಗಳಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಫ್ರೀಡ್ಮನ್ ಮುಖಾಮುಖಿಯಾಗಿದ್ದರು.

ಇದನ್ನು ವಿಜಯ ಕರ್ನಾಟಕ ದ ಹಿರಿಯ ಪತ್ರಕರ್ತ ಕೆ ಕರಿಸ್ವಾಮಿ ಕಂಡ ರೀತಿ ಇಲ್ಲಿದೆ-

ವಿವರ ಲೇಖನಕ್ಕಾಗಿ ಭೇಟಿ ಕೊಡಿ- ಅವಧಿ baraka-1baraka

ಫೆಬ್ರವರಿ 26, 2009 Posted by odubazar | Uncategorized | | No Comments Yet

ಕಿ ರಂ ಬರೆದಿದ್ದಾರೆ

ಜೀವ ಚೈತನ್ಯದೆಡೆಗಿನ ಚಲನೆ
-ಕಿ. ರಂ. ನಾಗರಾಜ
    

1ಅಕ್ಷತಾ ಈಚಿನ ಸಮರ್ಥ ಕವಿಗಳಲ್ಲೊಬ್ಬಳು. ನನ್ನ ಗೆಳತಿ. ಕಾವ್ಯರಚನೆಯ ಕೌಶಲ್ಯವನ್ನು ತನ್ನ  ಮೊದಲ ಸಂಕಲನದಲ್ಲಿಯೇ ದಟ್ಟವಾಗಿ ಪ್ರಕಟಿಸಿದ್ದಾಳೆ. ಅವಳ ಕವನಗಳನ್ನು ಕುರಿತು ಕೆಲವು ಮಾತುಗಳನ್ನು ಬರೆಯುವುದು ನನಗೆ ಸಂತೋಷ ತಂದಿದೆ. ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಎಂಬ ಹೆಸರೇ ಒಂದು ರೂಪಕ. ಸ್ವಾತಂತ್ರ್ಯದ ಅಭೀಪ್ಸೆಯ ಬೇರೆ ಬೇರೆ ನೆಲೆಗಳನ್ನು ಈ ರೂಪಕ ಸಂಕೇತಿಸುತ್ತದೆ. ಸ್ವಾತಂತ್ರ್ಯ, ಮುಕ್ತ ಸ್ಥಿತಿ, ತನ್ನದೇ ಆದ ಲೋಕ ಕಲ್ಪನೆ ಇತ್ಯಾದಿಗಳು ಹಾಗೆಯೇ ದಕ್ಕಿ ಬಿಡುವುದಿಲ್ಲ. ಅದನ್ನು ಗಳಿಸಿಕೊಳ್ಳುವ ಪರಿಗಳನ್ನು ಇಲ್ಲಿಯ ಕವಿತೆಗಳು ಪರಿಶೀಲಿಸುತ್ತಿವೆ.

ಈ ಹೊತ್ತಿನ ಯುವ ಕವಿಗಳು ಕಾವ್ಯ ರಚನೆಯಲ್ಲಿ ತಮ್ಮದೇ ಆದ ದಾರಿಗಳನ್ನು ಹುಡುಕಿಕೊಳ್ಳುತಿದ್ದಾರೆ. ಕಾವ್ಯ ನಡೆದುಬಂದ ದಾರಿಯಲ್ಲಿ ಮುಂದೆ ಸಾಗಬೇಕೆಂಬ ಅಂಥ ನಿಷ್ಠೆಯ ಹಂಗಿಲ್ಲದೆ, ಕಾವ್ಯ ನಿಮರ್ಿತಿಗೆ ಈಗಾಗಲೇ ಸಿದ್ಧಗೊಂಡ ತತ್ವ-ಭ್ರಮೆಗಳಿಗೂ ಸಿಲುಕದೆ ಒಬ್ಬೊಬ್ಬ ಯುವ ಕವಿ-ಕವಿಯತ್ರಿಯರೂ ತಮ್ಮದೇ ಅಭಿವ್ಯಕ್ತಿ ಕ್ರಮವನ್ನು ಕಾವ್ಯ ವಸ್ತುವಿನ ಆಯ್ಕೆಯಲ್ಲಿ, ಅದರ ನಿರ್ವಹಣೆಯ ನೆಲೆಯಲ್ಲಿ ರೂಪಿಸುತ್ತಿದ್ದಾರೆ. ಇದು ಕನ್ನಡ ಕಾವ್ಯದ ಇಂದಿನ ದಾರಿ. ಹೀಗೆ ಹೇಳಿದ ಮಾತ್ರಕ್ಕೆ ಈ ಕವಿಗಳಿಗೆ ಕನ್ನಡ ಕಾವ್ಯದ ಹೆಜ್ಜೆ ಗುರುತುಗಳು, ವಸ್ತುವಿನ ಕಲ್ಪನೆ, ಅಭಿವ್ಯಕ್ತಿ ಕ್ರಮಗಳು ತಿಳಿದಿಲ್ಲವೆನ್ನುವಂತಿಲ್ಲ. ಅವೆಲ್ಲವನ್ನು ವಿಭಿನ್ನ ಮಟ್ಟದಲ್ಲಿ ಪರಿಶೀಲಿಸಿ ತಮ್ಮದೇ ಆದ ದನಿಯನ್ನು ಛಾಪಿಸುವ ನಿಷ್ಠೆಯಿಂದ ಅವರು ಎದುರಾಗುತಿದ್ದಾರೆ. ಸುತ್ತಣ ಸಾಂಸ್ಕೃತಿಕ ವಿದ್ಯಮಾನಗಳನ್ನು ತಮ್ಮ ಕೇಂದ್ರಕ್ಕೆ ತಂದುಕೊಂಡು ಕೇವಲ ಅರ್ಥನಿಷ್ಠ ಕವಿತೆಗಳ ಕಟ್ಟುಪಾಡುಗಳಿಗೆ ಬದ್ಧವಾಗದೇ ತಮ್ಮದೇ ಆದ ವಿಶಿಷ್ಠತೆಯನ್ನು ತೋರುವಲ್ಲಿ ಈ ಕವಿಗಳು ತಮ್ಮ ಪ್ರಯೋಗಭೂಮಿಕೆಯನ್ನು ಹದಗೊಳಿಸಿಕೊಳ್ಳುತಿದ್ದಾರೆ. ನವ್ಯ, ಬಂಡಾಯ, ಸ್ತ್ರೀ ಸಂವೇದನೆ, ದಲಿತ ಪ್ರಜ್ಞೆಯ ಮಾರ್ಗಗಳ ಅರಿವಿದ್ದೂ ಪ್ರಜ್ಞಾಪೂರ್ವಕವಾಗಿ ಇವುಗಳನ್ನು ಮೀರುವ ಗಂಭೀರ ಆಸಕ್ತಿ ಈ ಕಾಲದ ತರುಣಿ-ತರುಣರ ಕಾವ್ಯದ ಪ್ರಯೋಗಗಳಲ್ಲಿ ಕಾಣುತಿದ್ದೇವೆ. ಈ ಧೋರಣೆ ಒಂದು ರೀತಿಯಲ್ಲಿ ಸೂಕ್ಷ್ಮವೂ, ಗಂಭೀರವೂ ಆದ ಸಹಜ ಪ್ರತಿಭಟನೆಯ ಮಾರ್ಗ. ಎದ್ದು ಕಾಣುವ, ರಾಚುವ ಕ್ರಮಗಳನ್ನು ಬದಿಗಿಟ್ಟು ನಿಜಕ್ಕೂ ಈ ಹೊತ್ತು ಯೋಚಿಸುವಂತೆ ಮಾಡುವ, ನಮ್ಮ ಸುತ್ತ ಹಬ್ಬುತ್ತಿರುವ ಪ್ರಚಾರ ಮೋಡಿಯ ನೆಲೆಗಳನ್ನು ಬಿಗಿಯಾದ ದನಿಯಲ್ಲಿ ಪ್ರಶ್ನಿಸುತ್ತಿರುವ ನೆಲೆಯೊಂದು ಇಂದಿನ ತರುಣಿ-ತರುಣರ ಕಾವ್ಯದಲ್ಲಿ ಮೈ ಪಡೆಯುತ್ತಿದೆ ಎಂಬುದು ತುಂಬ ಆಸಕ್ತಿ-ನಿರೀಕ್ಷೆಗಳನ್ನು ಹುಟ್ಟಿಸುತ್ತದೆ.   ಇಷ್ಟೆಲ್ಲ ಮಾತುಗಳನ್ನು ನಾನು ಇತ್ತೀಚಿನ ಕಾವ್ಯದ ಈದಿನ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ ಹಾಗು ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಸಂಕಲನ ಬಗ್ಗೆ ಆಡುತ್ತಿರುವ ಮಾತುಗಳಿಗೆ ಈ ಹಿನ್ನೆಲೆಯಿದೆ.
 

ಈ ಟಿಪ್ಪಣಿ ಬರೆಯುತ್ತಿರುವ ನನಗೆ ಒಂದು ಮುಜುಗರ ಇದೆ. ಅದಕ್ಕೆ ಕಾರಣವನ್ನು ಮೊದಲಿಗೆ ಹೇಳಿಬಿಡುತ್ತೇನೆ. ಈ ಸಂಕಲನದಲ್ಲಿ ಕಿರಂ ನಿಮ್ಮ ನಗು ಎನ್ನುವ ಕವಿತೆಯೊಂದಿದೆ. ಇದು ಅಕ್ಷತಾ ಗಂಭೀರವಾಗಿ ಬರೆದಿರುವ ಕವಿತೆಯಾದರೂ ನನಗೂ ಅದಕ್ಕೂ ಸಂಬಂಧವಿಲ್ಲ. ಕವಯಿತ್ರಿ ಸಂಬಂಧಗಳನ್ನು ಪಲ್ಲಟಿಸಿ, ಹೇಗೆ ದಿಕ್ಕು ತಪ್ಪಿಸಬಲ್ಲಳೆಂಬುದಕ್ಕೆ, ಗಲಿಬಿಲಿ ಉಂಟು ಮಾಡಬಲ್ಲಳೆಂಬುದಕ್ಕೆ ಈ ಕವಿತೆ ಒಂದು ಉದಾಹರಣೆಯಾಗಬಲ್ಲದು ಮಾತ್ರ. ಸಾಮಾನ್ಯವಾಗಿ ವ್ಯಕ್ತಿ ನಿದರ್ೇಶಿತ ಬರಹಗಳಿಗೆ ಇರುವ, ಇರಬೇಕಾದ, ನಿರೀಕ್ಷಿಸುವ ಕ್ರಮಗಳನ್ನು ಈ ಕವಿತೆ ಮೀರಿದೆ. ಹೀಗಾಗಿ ನನ್ನ ಮುಜುಗರವೂ ಅಷ್ಟೇನೂ ಮುಖ್ಯವಲ್ಲ ಎನ್ನುವಂತೆ ಈ ಕವಿತೆ ಇದೆ. ಕವಿತೆಯನ್ನು ಸೂಕ್ಷ್ಮವಾಗಿ ಗ್ರಹಿಸುವವರಿಗೆ ಇವೆಲ್ಲ ಗೊತ್ತೇ ಆಗುತ್ತದೆ.

ಹೆಣ್ಣಿನ ಹಾಡು-ಪಾಡು ಯಾವ ಕವಿತೆಯಿಂದಲೂ ಮುಕ್ತಾಯ ಆಗುವುದಿಲ್ಲ. ಹಾಗೆ ಮುಕ್ತಾಯವಾಗಲೆಂದು ಅವಳು ಬಯಸುತ್ತಾಳಾದರೂ ಅದು ಕೇವಲ ನಿರೀಕ್ಷೆ, ಆಶಯ ಮಾತ್ರ. ಇದಕ್ಕೂ ಮಿಗಿಲಾಗಿ ಅವಳ ಗಟ್ಟಿ ಪ್ರಶ್ನೆಗಳು, ಸಮಸ್ಯೆಗಳಿಗೆ ಎದುರಾಗುವ ಛಲ, ಇವನ್ನೆಲ್ಲ ವೈಚಾರಿಕ ಪ್ರಶ್ನೆಗಳನ್ನಾಗಿ ಅವಸ್ಥಾಂತರಿಸುವ ದೃಶ್ಯ ಧೋರಣೆಗಳು ಸ್ತ್ರೀ ಸಂವೇದನೆಯ ಕವಿತೆ-ಕತೆ-ವಿಚಾರ ಇವುಗಳಲ್ಲಿ ದಟ್ಟವಾಗಿ ಕಾಣುತ್ತಿದ್ದೇವೆ.

ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಅಕ್ಷತಾಳ ಮೊದಲ ಸಂಕಲನ. ತನ್ನ ಅಂತರಂಗದ ಭಾವನೆಗಳನ್ನು ರೂಪಕಗೊಳಿಸುವ ಪ್ರಬುದ್ಧ ಹಾದಿಯಲ್ಲಿ ಅಕ್ಷತಾ ನಡೆದಿದ್ದಾಳೆ. ಹೀಗಾಗಿ ಇಲ್ಲಿನ ಕವಿತೆಗಳು ಏಕಾಕಾರದವುಗಳಲ್ಲ. ಒಂದೇ ಕವಿತೆಯನ್ನು ಒಮ್ಮೆ, ಮತ್ತೊಮ್ಮೆ ಓದಿದರೆ ಅನೇಕ ಸಾಧ್ಯತೆಗಳು, ಹೊಳಹುಗಳನ್ನು ಓದುಗನಲ್ಲಿ ಸ್ಫುರಿಸುವಷ್ಟು ಸಶಕ್ತವಾಗಿವೆ. ಕೇವಲ ಅರ್ಥಗ್ರಾಹಿ ಓದಿಗಿಂತ ಭಿನ್ನವಾಗಿ ಓದಬೇಕೆಂಬ ಅಪೇಕ್ಷೆಯನ್ನು ಇಲ್ಲಿನ ಕವನಗಳು ಹುಟ್ಟಿಸುತ್ತವೆ. ಸುತ್ತಣ ಸಂಗತಿಗಳನ್ನು ನೋಡುವ ಅದರ ವಿವರಗಳನ್ನು ಅವಲೋಕಿಸಿ, ಹೊಸಬಗೆಯಲ್ಲಿ ಕಾಣಿಸುವ ಸೂಕ್ಷ್ಮತೆ, ಪಾರದರ್ಶಕತೆಗಳು ಇಲ್ಲಿನ ಕವನಗಳ ವಿಶೇಷ. ಆಶ್ಚರ್ಯ ಹುಟ್ಟಿಸುವ ರೀತಿಯಲ್ಲಿ ಬೇರೆ ಬೇರೆ ಛಾಯೆಯ ಲಯ ಸಾಧ್ಯತೆಗಳನ್ನು ಅಕ್ಷತಾ ತನ್ನ ಕಾವ್ಯ ಪ್ರಯೋಗದಲ್ಲಿ ತೋರಿದ್ದಾಳೆ. ಅಲ್ಲಲ್ಲಿ ಲಂಕೇಶರ ಕವಿತೆಗಳ ಲಯ ಪ್ರತೀತಿಯ ನೆನಪು ಕೂಡಾ ಆಗುವುದುಂಟು.
ಬಂಧನದ ಇಕ್ಕಟ್ಟು, ಅದರಿಂದ ಬಿಡಿಸಿಕೊಳ್ಳಲು ನಡೆಯುವ ಎಲ್ಲ ತಳಮಳಗಳನ್ನು ಒಂದು ಬಗೆಯ ಸ್ವಗತದ ದಾಟಿಯಲ್ಲಿ ಪ್ರಕಟಗೊಂಡಿದೆ. ಎಲ್ಲ ಬಗೆಯ ಹತಾಶೆಯನ್ನು ಮೀರಿ ಚಲಿಸುವ ಮನಸ್ಸಿನ ಸ್ಥಿತಿಯನ್ನು ಇಲ್ಲಿನ ಎಲ್ಲ ಕವಿತೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣಬಹುದಾಗಿದೆ. ಇಲ್ಲಿನ ಕವಿತೆಗಳು ಆಪ್ತವಾಗುವುದಕ್ಕೆ, ವಿಷಾದಮಿಶ್ರಿತ ಅನುಭೂತಿ ಆಗುವುದಕ್ಕೆ ಸ್ವಗತದ ಕ್ರಮವೂ ಒಂದು ಕಾರಣ. ಯಾರನ್ನೋ ಉದ್ದೇಶಿಸಿ ಅಳಲನ್ನೋ, ಆಕ್ರೋಶವನ್ನೋ ತೋರುವ ಕವಿತೆಗಳನ್ನು ಸಾಕಷ್ಟು ಗಮನಿಸಿದ್ದೇನೆ. ಅಂಥ ಕವಿತೆಗಳು ಮಹತ್ವದ್ದೇ ಇದ್ದೀತು. ಆದರೆ ಸ್ವಂತವನ್ನು ನೇರವಾಗಿ, ಸಂಕೋಚಗಳಿಲ್ಲದೆ ಎದುರಾಗುವ ಕೆಚ್ಚಿನ ಅಭಿವ್ಯಕ್ತಿ ಕ್ರಮ ಮತ್ತೂ ಮಹತ್ವದ್ದಾಗಬಹುದೆಂಬುದನ್ನು ಇಲ್ಲಿನ ಕವಿತೆಗಳು ಹೇಳುತ್ತಿವೆ.

akaasha-coverಒಳಗಣ ಪ್ರಪಂಚ ಹೊರಗಣ ಪ್ರಪಂಚವನ್ನು ಸಮ ಬೆರೆಸುವ ಕಲ್ಪನೆ ಕವಿತೆಯಲ್ಲಿ ಯಾವಾಗಲೂ ಕುತೂಹಲಕಾರಿಯಾದದ್ದು  ಅಂಥ ಮಹತ್ವದ ಕವಿತೆ ಸರ್ಕಸ್ ಹುಡುಗಿ. ಗಂಡಿನ ಎಲ್ಲ ದರ್ಪ, ಅಹಂಕಾರಗಳಿಗೆ ಎದುರಾಗಿ ತನ್ನತನವನ್ನು ಒಪ್ಪಿಸಲೇಬೇಕಾದ ಹೆಣ್ಣುತನದ ಅನಿವಾರ್ಯತೆಯನ್ನು  ದಟ್ಟವಾಗಿ ಈ ಕವಿತೆ ಪರಿಶೀಲಿಸಿದೆ. ಬದುಕು, ಬದುಕಿನಾಚೆಯ ಲೋಕ ಮತ್ತು ಅದನ್ನು ಮೀರುವ ಎಲ್ಲ ಕಾಂಕ್ಷೆಗಳನ್ನು ಹೆಣ್ಣು ಲೋಕ ತನ್ನ ಅಂತರಂಗದಲ್ಲಿ  ಒಳಗೊಂಡಿದ್ದರೂ ಆ ಅವಳು ನಿದರ್ೇಶಿತ ಸೂತ್ರಗಳಿಗೆ ಅದೆಂಥ ಕೀಲುಗೊಂಬೆಯಾಗಿದ್ದಾಳೆಂಬುದನ್ನು ಈ ಕವಿತೆ ಪ್ರತಿಬಿಂಭಿಸುತ್ತದೆ.

ರಾತ್ರಿಯೆಲ್ಲ ಮಾಡಿ ತೋರಿಸಿದ್ದಾಳೆ
ತರತರದ ಚಾಕಚಕ್ಯತೆ
ರಿಂಗ್ ಮಾಸ್ಟರ್ನ ತಾಳಕ್ಕೆ
ತಕ್ಕಂತೆ ಕುಣಿದು ಗಳಿಸಿದ್ದಾಳೆ
ಪ್ರೇಕ್ಷಕ ಪ್ರಭುವಿನ ಮೆಚ್ಚುಗೆ

ಇಲ್ಲಿ ಧ್ವನಿಸುತ್ತಿರುವ ಕಲ್ಪನೆ ಕೇವಲ ಸರ್ಕಸ್ ಕಂಪೆನಿಯ ಕಲ್ಪನೆಯಾಗದೆ ಎಲ್ಲ ಬಗೆಯ ಗಂಡಿನ ಅಹಂಕಾರ, ಧರ್ಪಗಳ ರೂಪಕವಾಗಿದೆ. ಹೆಣ್ಣು ಗಂಡಿಗೆ ಕಸರತ್ತಿನ, ಸರ್ಕಸ್ಸಿನ ಉಪಾಧಿಯಾಗಿಸಿಕೊಂಡಿರುವ ಇಂಥ ಕಲ್ಪನೆ ಕನ್ನಡ ಕವಿತೆಯಲ್ಲಿ ಈವರೆವಿಗೆ ನನ್ನ ಗಮನಕ್ಕೆ ಬಂದಿಲ್ಲ.(ಗಂಡು ಹೆಣ್ಣನ್ನು ಸಂತೈಕೆಯ, ಕಾಮೋತ್ಸಾಹದ, ಉದ್ದೇಪಿತ ಸೂಕ್ಷ್ಮಗಳೊಂದಿಗೆ ಹರಿಸಿರುವ ಗಂಗಾಧರ ಚಿತ್ತಾಲರ ಕಾಮಸೂತ್ರ ಕವಿತೆ ನೆನಪಿಗೆ ಬರುತ್ತಿದೆ) ಗಂಡು ದರ್ಪದ ರೂಪಕಗಳ ಸರಮಾಲೆಯೇ ಈ ಕವಿತಯಲ್ಲಿ ವ್ಯಕ್ತಗೊಂಡಿದೆ. ಕವಿತೆ ತತ್ವವಾಗಬಾರದು. ಆದರೆ ರೂಪಕಗಳ ಮೂಲಕವೇ ಅಕ್ಷತಾ ಲೈಂಗಿಕ ಸೂಕ್ಷ್ಮಗಳು ಹಾಗು ಲೈಂಗಿಕ ಆಕ್ರಮಣಗಳನ್ನು ತನ್ನ ಕವಿತೆಯಲ್ಲಿ ರೂಪಕಗೊಳಿಸಿದ್ದಾಳೆ.

ಆನೆ, ಸಿಂಹ, ಹುಲಿ, ಕರಡಿ
ಬಾಯಿಗೆ ಕೈಯಿಟ್ಟು, ಹತ್ತಿಕೂತು
ತಿವಿದು ತಾನಿನ್ನೂ ಬದುಕಿದ್ದೇನಲ್ಲ
ಎನ್ನುವ ಅಚ್ಚರಿಯಲ್ಲಿ

ಕವಿತೆ ಲೈಂಗಿಕ ಪ್ರತೀಕಗಳನ್ನು, ಲೈಂಗಿಕ ಆಕ್ರಮಣಗಳನ್ನು ಈ ಪ್ರಾಣಿ ರೂಪಕಗಳ ಮೂಲಕ  ವ್ಯಕ್ತಗೊಳಿಸಿ ಮೇಲೆ ಹೇಳಿದ ಗಂಡು ದರ್ಪದ ಆಕ್ರಮಣವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಸರ್ಕಸ್ ಹುಡುಗಿಯಲ್ಲಿ ಬಳಕೆಗೊಂಡಿರುವ ಕ್ರಿಯಾ ಪದಗಳ ಬಳಕೆ, ಮಾಡಿ ತೋರಿಸಿದ್ದಾಳೆ. ನಿದ್ದೆ ಹೋಗಿದ್ದಾಳೆ ಇಂಥ ಮಾಮರ್ಿಕ ರೂಪಕ ಕಲ್ಪನೆ ಈ ಕವಿತೆಯ ಮತ್ತೊಂದು ಗಮನೀಯ ಅಂಶ.

ಮತ್ತೆ ಮತ್ತೆ ಓದಿದ ಹಾಗೂ ಅನೇಕ ಗ್ರಹಿಕೆಗಳಿಗೆ ತೆರೆದಿಡುವ ಈ ಕವಿತೆ ಈ ಕಾಲದ ಕವಿಯತ್ರಿಯೊಬ್ಬಳ ಮಹತ್ವದ ಸಾಧನೆ ಎಂದೇ ನನಗನ್ನಿಸುತ್ತದೆ.
ವಿದಾಯ ಕವಿತೆ ಪುತಿನ ಅವರ ಗೋಕುಲ ನಿರ್ಗಮನ ಗೀತರೂಪಕಕ್ಕೆ ಹಾಗೂ ಕೃಷ್ಣ ಮಥುರೆಗೆ ಹೊರಟ ಸಂದರ್ಭಕ್ಕೆ ಒಂದು ಸೂಕ್ಷ್ಮ ಪ್ರತಿಕ್ರಿಯೆ. ಕೃಷ್ಣನ ನಿರ್ಗಮನ ಗೋಕುಲದ ಹೆಣ್ಣು ಸಮುದಾಯಕ್ಕೆ ಹಾಗೆ ಆತಂಕ, ದುಃಖ-ದುಮ್ಮಾನಗಳನ್ನು ತರುತ್ತಿಲ್ಲ.

ಹೊರಟಿದ್ದೀಯ ಈಗ ಮಥುರೆಗೆ
ಬೇಸರವಿಲ್ಲ ನನಗೆ ಆದರೆ ಗೋಪಾಲ
ಒಮ್ಮೆ ಮಥುರೆಗೆ ಹೋದವ ನೀನು
ಅಲ್ಲೆ ಇರು ರಾಜನಾಗಿ ರಕ್ಷಕನಾಗಿ
ದೇವರಾಗಿ ಬೇಕಾದರೆ ಬೇಕಾದಷ್ಟು
ಅರಸಿಯರಿಗೆ ಗಂಡನಾಗಿ ಮತ್ತೆ
ಮರಳದಿರು ಎಂದೂ ಗೋಕುಲಕೆ

ಎನ್ನುತ್ತ ಗೋಕುಲೆ ಮತ್ತು ಮಥುರೆ ಗುಣ-ಅವಗುಣಗಳ ತಾಳೆ ಹಾಕಿ ಗಂಡುಗಳ ಲೋಕ ಹೆಣ್ಣುಗಳ ಲೋಕವನ್ನೇ ವಿಮಶರ್ೆಗೆ ಒಡ್ಡಿದೆ. 

ಗೋಕುಲದ ಪಾಲಿಗೆ

ಅದು ಹೆತ್ತ ನೂರಾರು

ಗೋಪಾಲಕರಲ್ಲಿ ಒಂದು ಹೆಸರು

ಎಂಬ ಹೆಣ್ಣು ಜಗತ್ತಿನ ಆತ್ಮವಿಶ್ವಾಸ ಪ್ರಕಟಗೊಳ್ಳುತ್ತದೆ.ಕೊನೆಗೆ

 ಸ್ವಲ್ಪ ಜಾಸ್ತಿ ಹಂಬಲಿಸಿದ ಹೆಸರು

 ಬಹು ಕಾಲ ವಿಸ್ಮೃತಿಗೆ ಜಾರದ ಚೇತನ

ಎಂಬ ಆತ್ಮೀಯತೆಯ ಸ್ಪರ್ಶ ಸೇರಿಕೊಳ್ಳುತ್ತದೆ.

ಈ ಕವಿಯತ್ರಿಗೆ ನಾವೆ ಹಿಡಿಯುವ ತುತರ್ು ಬಿದ್ದಿದೆ. ಅವಳು ನಾವೆಯನ್ನು ತಪ್ಪಿಸಿಕೊಂಡರೂ ಮತ್ತೆ ನಾವೆಯನ್ನು ಹಿಡಿಯುತ್ತಾಳೆ. 

ತಪ್ಪಿಸಿಕೊಂಡೆನೆ ಕೊನೆಯ ನಾವೆ

ಬಂದೆ ಬರುತ್ತಲ್ಲವೆ ಮೊದಲ ನಾವೆ

ಕೊನೆಯ ನಾವೆಯನ್ನು ತಪ್ಪಿಸಿಕೊಂಡರೂ ಮತ್ತೆ ನಾವೆಯನ್ನು ಹಿಡಿಯುವ ಛಲವನ್ನು ಅಕ್ಷತಾ ತನ್ನ ಕವಿತೆಯಲ್ಲಿ ತೋರಿದ್ದಾಳೆ.

ಮತ್ತೊಂದು ಕವಿತೆ ‘ದಣಪೆ’ ಜಡ ಸ್ಥಿತಿಯಿಂದ ಎಚ್ಚರದ ಸ್ಥಿತಿಗೆ ಜಿಗಿಯುವ ಧೋರಣೆಯನ್ನು ಸೂಕ್ಷ್ಮ ರೂಪಕಗಳ ಮೂಲಕ ಹೇಳುತ್ತಿದೆ.

ಲಯಬದ್ಧವಾಗಿರುವ

ನಿಮ್ಮ ಹೆಜ್ಜೆ ಗುರುತುಗಳ

ಎಣಿಕೆಯಲ್ಲೇ ಮೈ ಮರೆತು

ಹಾಯಬೇಡವೇ ಒಮ್ಮೆಯು

ಮನದೊಳಗಣ 

ರೂಪಕದ ಜಗಕೆ

ಲೋಕದ ಇತಿ ಮಿತಿಗಳ  ಬಗ್ಗೆ ಪ್ರಬುದ್ಧ ತಿಳುವಳಿಕೆ ಯೋಚನೆ ಗ್ರಹಿಕೆಯಾಗಿ ಈಕೆಯ ಕವಿತೆಗಳಲ್ಲಿ ವ್ಯಕ್ತವಾಗಿದೆ. ಯಾಕೆಂದರೆ ನಿರಂತರ ಹರಿಯುವ ನಿತ್ಯ ಸತ್ಯಗಳಿಗೆ ಪ್ರಾಮಾಣಿಕತೆಯೊಂದಿಗೆ, ಗೃಹೀತ ನಿಮರ್ಿತಿಗಳೊಂದಿಗೆ ಎದುರಾಗುವ ಕೆಚ್ಚು ಈ ಕವಿಯತ್ರಿಗಿದ್ದು ಇಲ್ಲಿನ ಎಲ್ಲ ಕವಿತೆಗಳಲ್ಲೂ ಓದುಗರು ಅದನ್ನು ಕಾಣಬಹುದು.

ಆತ್ಮವಿಶ್ವಾಸ, ಅನುರಕ್ತಿಗಳ ಸೂಕ್ಷ್ಮತೆಗಳಿಂದ ಕೂಡಿದ ಅಕ್ಷತಾಳ ರಚನೆಗಳು ಆಕ್ರೋಶ ವ್ಯಕ್ತವಾಗಬೇಕಾದ ಅನೇಕ ಮಾದರಿಗಳನ್ನು ಒಳಗೊಂಡಿವೆ. ‘ದಿನ ದೂರವಿಲ್ಲ’, ‘ಸೂಚನೆಯ ಪಾಲನೆ’, ‘ಬದುಕಿನ ಮೋಹದಲ್ಲಿ ಸತ್ತ ಲಂಕೇಶರನ್ನು ನೆನೆಯುತ್ತಾ’ ಇಂಥ ಕವಿತೆಗಳು ಒಳಲೋಕ, ಹೊರಲೋಕಗಳೊಂದಿಗೆ ಚಲಿಸುತ್ತ ಹೊಸ ಸಂಬಂಧಗಳ ಸಾಧ್ಯತೆಗಳನ್ನು ಶೋಧಿಸುವತ್ತ ನಡೆಸಿರುವ ಚಿಂತನಶೀಲ ಕಾವ್ಯ ನಿಮರ್ಿತಿಯತ್ತ ಮುಖ ಮಾಡಿದೆ. ಅಕ್ಷತಾ ಕಾವ್ಯ ಹೀಗೆ-ಇನ್ನೂ ಸಮೃದ್ಧಗೊಳ್ಳಲಿ.

March 1, 2009 Posted by odubazar | ಬುಕ್ ಬಜಾರ್ | | 3 ಅನಿಸಿಕೆಗಳು

ಕಲಬುರ್ಗಿಯಲ್ಲಿ ಹೊಸ ದನಿಗಳ ಹಬ್ಬ

ಕಲಬುರ್ಗಿಯಲ್ಲಿ ಸಂಗಮೇಶ್ವರ ಮಹಿಳಾ ಮಂಡಲ ಲೇಖಕಿಯರ ವೇದಿಕೆಯನ್ನು ಹುಟ್ಟುಹಾಕಿದೆ. ಸಂಧ್ಯಾ ಹೊನಗುಂಟಿಕರ್ ಅವರ ‘ಹರಿದ ಹಾಸಿಗೆ ಹಂಬಲ’ ಹಾಗೂ ಗವೀಶ ಹಿರೇಮಠ ಸಂಪಾದಿಸಿದ ಮಹಿಳೆ ಮತ್ತು ಆಧುನಿಕತೆ’ ಕೃತಿಗಳ ಬಿಡುಗಡೆ ಸಮಾರಂಭ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.

img_0085-1img_0077img_0076img_0182img_0184img_0058

March 6, 2009 Posted by odubazar | Uncategorized | | No Comments Yet

ಲಂಕೇಶ್ ಎಂಬ ಒಡನಾಡಿ

lankesh-anantha-murthy1lankesh-keram2lankesh-ramachandra-sharma11lankesh-krupakar-senanilankesh-ramadaslankesh-stafflankesh34lankesh-thirumalesh-ramadas-keramlankesh-ramachandra-sharma1

March 9, 2009 Posted by odubazar | ಕ್ಲಿಕ್.., ನೆನಪು | | No Comments Yet

ಕವಿತೆಯೆಂಬ ಬೆಳಕಿನ ಬೀಜ….

dsc00509

ಇವು ಕತ್ತಲ ದಿನಗಳು. ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು. ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿರುವ ದಿನಗಳು. ಮುಖ ಮುಖವೂ ಮುಖವಾಡವ ಹೊತ್ತು ನಿಂತ ಹಾಗಿರುವ ಕಾಲ. ಇಂತಹ ದಿನಗಳಲ್ಲಿ ಕವಿತೆಯೆಂಬ ಬೆಳಕಿನ ಬೀಜವನ್ನು ಹಿಡಿದು ನಿಂತಿರುವ ಹುಡುಗ-ಸಿದ್ಧು ದೇವರಮನಿ.

’ಕತ್ತಲ ಕೂಪದ ಮನೆಗಳೆದಿರು ನಿಂತಿರುವ, ಚಂದಿರನ ಬೆಳಕನ್ನು ಈವರೆಗೂ ಕಂಡಿಲ್ಲದ’ ಸಿದ್ಧು ಬರುವ ನಾಳೆಗಳ ಬಗ್ಗೆ ಚಿಂತಿಸುವ ಕವಿ. ಈತನ ಒಳಗಣ್ಣು ಸಂಚರಿಸುವ ದಾರಿಗಳನ್ನು ಕಂಡು ನಾನು ಬೆರಗಾಗಿದ್ದೇನೆ. 

cover-51

ಷರೀಫಜ್ಜನನ್ನು ಗೋರಿಯಿಂದೆಬ್ಬಿಸಿ ಯುದ್ಧ ಜಾರಿಯಲ್ಲಿರುವ ಊರಿಗೆ ಕರೆದೊಯ್ಯುವ ಛಾತಿ ಈ ಹುಡುಗನಿಗಿದೆ. ಯುದ್ಧವೇ ಕೊನೆಯ ನಿರ್ಧಾರ ಎನ್ನುವವರನ್ನು ಮನುಷ್ಯರನ್ನಾಗಿಸುವ ಕೆಲಸ ನನ್ನದು ಎಂದು ಈತ ಭಾವಿಸಿದ್ದಾನೆ. ಮನೆ ಮನೆಗೂ ಬಣ್ಣ ಬಳಿಯುವ ಪೇಂಟರ್‌ಗೇ, ಬದುಕು ಬಣ್ಣ ಬಳಿಯುತ್ತಾ ಕುಳಿತಿರುವುದು ಈತನಿಗೆ ಮಾತ್ರ ಕಾಣುತ್ತದೆ.

ಸಿದ್ಧು, ಕತ್ತಲ ದಾರಿಗಳಲ್ಲಿ ನಡೆಯುತ್ತಾ ಕಳೆದು ಹೋಗುವವನಲ್ಲ ಈತ ಕತ್ತಲ ಮಧ್ಯೆ ಬೆಳಕಿಗಾಗಿ ಹೊರಟ ಪಯಣಿಗ. 
ಕವಿತೆಯೆಂಬ ಬುಡ್ಡಿದೀಪ ತನ್ನ ಸುತ್ತಲಿನ ಕತ್ತಲನ್ನು ಒಂದಿಷ್ಟು ಕಾಲವಾದರೂ ಇಲ್ಲವಾಗಿಸುತ್ತದೆ ಎಂಬ ಭರವಸೆ ಹೊತ್ತ ಹುಡುಗ.

“ನನಗೀಗ ಬೆಳಕಿನದೇ ಧ್ಯಾನ…
ಕಟ್ಟಿಕೊಳ್ಳಬಹುದಾದ ’ಆಕಾಶ ಬುಟ್ಟಿ’ಗೆ 
ಆರದ ಬೆಳಕನ್ನು ಹುಡುಕುತ್ತಿದ್ದೇನೆ. 

ನಾನೂ ಬೆಳಕಾಗಬೇಕು”

ಎನ್ನುವ ಸಿದ್ಧು, ಬರುವ ನಾಳೆಗಳಿಗೆ… ಉಸಿರು ಹಚ್ಚುವ ಕವಿ.

-ಜಿ. ಎನ್. ಮೋಹನ್

(ಬೆನ್ನುಡಿಯಿಂದ)

March 12, 2009 Posted by odubazar | ಬುಕ್ ಬಜಾರ್ | | No Comments Yet

ಪತ್ರಕರ್ತರಿಗೆ ಪ್ರಶಸ್ತಿ

ammu_josephmailgooglecomಪತ್ರಕರ್ತರಾದ ಅಮ್ಮು ಜೋಸೆಫ್ ಹಾಗೂ ಡಿ ಯಶೋದಾ ರಾಜು ಅವರಿಗೆ ಆರ್ನವ್ women of substance ಪ್ರಶಸ್ತಿ ದೊರೆತಿದೆ. ಅಮ್ಮು ಮಾಧ್ಯಮ ಕ್ಷೇತ್ರವನ್ನು ತಮ್ಮ ವಿಮರ್ಶೆಯ ಮೂಲಕ ಒರೆಗೆ ಹಚ್ಚುತ್ತಿರುವವರು. ಯಶೋದಾ ರಾಜು ಕನ್ನಡಪ್ರಭದಲ್ಲಿ ಹಿರಿಯ ಉಪ ಸಂಪಾದಕಿ. ಇವರ ‘ಡೆಡ್ ಲೈನ್ ವೀರರ ಕಥೆಗಳು’ ಮಾಧ್ಯಮ ಕುರಿತ ವಿಭಿನ್ನ ರೀತಿಯ ಕೃತಿ. ಇಬ್ಬರಿಗೂ ಅಭಿನಂದನೆಗಳು

March 17, 2009 Posted by odubazar | Uncategorized | | No Comments Yet

ಅವರು ಹೆಜ್ಜೆ ಹಾಕಿದ್ದು ಜಲಿಯನ್ ವಾಲಾಬಾಗ್ ಕಡೆಗೆ

ದೆಹಲಿಯಲ್ಲಿ Tv9 ಚಾನಲ್ ನ ಮುಖ್ಯಸ್ಥರಾಗಿರುವ ಶಿವಪ್ರಸಾದ್ ಟಿ ಆರ್ ಅವರು ಸದಾ ತಮ್ಮೊಳಗಿನ ಬರಹಗಾರನನ್ನು ಜೀವಂತವಾಗಿಟ್ಟಿದ್ದಾರೆ. ಚಂದ್ರಯಾನದ ವರದಿ ಮಾಡಿದ ಬೆನ್ನಿಗೇ ಅದನ್ನು ಅಚ್ಚುಕಟ್ಟಾಗಿ ಪುಸ್ತಕ ರೂಪದಲ್ಲೂ ತಂದರು.

ನಂತರ ಅವರು ಹೆಜ್ಜೆ ಹಾಕಿದ್ದು ಜಲಿಯನ್ ವಾಲಾಬಾಗ್ ಕಡೆಗೆ. ಅದನ್ನು ದೃಶ್ಯ ಮಾಧ್ಯಮಕ್ಕೆ ತಂದ ಬೆನ್ನಲ್ಲೇ ಪುಸ್ತಕವಾಗಿಯೂ ರೂಪಿಸಿದ್ದಾರೆ. ಜಲಿಯನ್ ವಾಲಾಬಾಗ್ ದುರಂತಕ್ಕೆ ಈಗ ೯೦ ವರ್ಷ.

ಈ ಪುಸ್ತಕ ಆ ನೆನಪುಗಳನ್ನು ಹೊತ್ತು ಬೆಂಗಳೂರಿನಲ್ಲಿ ಎಪ್ರಿಲ್ ೧೩ ರಂದು ಬಿಡುಗಡೆಯಾಗುತ್ತಿದೆ.

jallianwala-bagh1jallianwala-bagh2

March 26, 2009 Posted by odubazar | ಬುಕ್ ಬಜಾರ್ | | 1 ಅನಿಸಿಕೆ